Asha workers: ಕೊರೋನಾ ವಾರಿಯರ್ಸ್​​​ಗೆ ವಿಶೇಷ ನಮನ : ಆಶಾ ಕಾರ್ಯಕರ್ತೆಯರ ಪಾದಪೂಜೆ ಮಾಡುವ ಮೂಲಕ ಗೌರವ

ಸಾಮಾನ್ಯವಾಗಿ ದೇವರ ಪಾದಕ್ಕೆ, ಮುನಿಗಳ ಪಾದಕ್ಕೆ ಪಾದ ಪೂಜೆಯನ್ನು ನೆರವೇರಿಸಲಾಗುತ್ತದೆ. ಆದರೆ ಮರ್ದಾಳದಲ್ಲಿ ಮಾತ್ರ ಆಶಾ ಕಾರ್ಯಕರ್ತೆಯರ ಪಾದಪೂಜೆ ಮಾಡಲಾಗಿದೆ.

ಆಶಾ ಕಾರ್ಯಕರ್ತೆಯರಿಗೆ ಪಾದ ಪೂಜೆ ಮಾಡಿದ ಯುವಕ

ಆಶಾ ಕಾರ್ಯಕರ್ತೆಯರಿಗೆ ಪಾದ ಪೂಜೆ ಮಾಡಿದ ಯುವಕ

  • Share this:
ಪುತ್ತೂರು(ಡಿಸೆಂಬರ್. 22):​ ದೇಶಕ್ಕೆ ಕೊರೋನಾ ಮಹಾ ಮಾರಿ ಒಕ್ಕರಿಸಿದ ಬಳಿಕ ದೇಶದೆಲ್ಲೆಡೆ ಲಾಕ್ ಡೌನ್ ಕೂಡಾ ಜಾರಿಗೆ ಬಂದಿತ್ತು. ಸುಮಾರು ನಾಲ್ಕು ತಿಂಗಳ ಕಾಲ ದೇಶ ಲಾಕ್ ಡೌನ್ ನಲ್ಲೇ ಕಳೆಯುವಂತಾಗಿತ್ತು. ದೇಶದ ಜನರನ್ನು ಕೊರೋನಾದಿಂದ ಸಂರಕ್ಷಿಸುವ ಕಾರ್ಯವೂ ಭರದಿಂದ ಸಾಗಿತ್ತು. ಈ ಎಲ್ಲಾ ಕಾರ್ಯಗಳಿಗೆ ಜತೆಯಾಗಿ ನಿಂತವರು ಆಶಾ ಕಾರ್ಯಕರ್ತೆಯರು. ಲಾಕ್ ಡೌನ್ ಸಮಯದಲ್ಲಿ ರಸ್ತೆಯಲ್ಲಿ ಅಲ್ಲಲ್ಲಿ ಕೆಲವು ಪೊಲೀಸರು, ಬೀದಿ ನಾಯಿಗಳನ್ನು ಬಿಟ್ಟರೆ ರಸ್ತೆಯಲ್ಲಿ ಓಡಾಟ ನಡೆಸುತ್ತಿದ್ದವರು ಇದೇ ಆಶಾ ಕಾರ್ಯಕರ್ತೆಯರು. ಹೀಗೆ ಕೊರೋನಾದ ಭಯದಲ್ಲೂ ಜನರ ಆರೋಗ್ಯವನ್ನು ಕಾಪಾಡುವ ಜವಾಬ್ದಾರಿಯನ್ನು ಹೊತ್ತ ಆಶಾ ಕಾರ್ಯಕರ್ತರನ್ನು ವಿಶಿಷ್ಟವಾಗಿ ಸನ್ಮಾನಿಸಿದ ಕಾರ್ಯಕ್ರಮವೊಂದು‌ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮರ್ದಾಳ ಎಂಬಲ್ಲಿ ನಡೆಯಿತು. ಸಾಮಾನ್ಯವಾಗಿ ದೇವರ ಪಾದಕ್ಕೆ, ಮುನಿಗಳ ಪಾದಕ್ಕೆ ಪಾದ ಪೂಜೆಯನ್ನು ನೆರವೇರಿಸಲಾಗುತ್ತದೆ. ಆದರೆ ಮರ್ದಾಳದಲ್ಲಿ ಮಾತ್ರ ಆಶಾ ಕಾರ್ಯಕರ್ತೆಯರ ಪಾದಪೂಜೆ ಮಾಡಲಾಗಿದೆ.

ಕೊರೋನಾ ಒಕ್ಕರಿಸಿದ ಬಳಿಕ ಮರ್ದಾಳದಂತಹ ಕುಗ್ರಾಮಗಳ ಮನೆ ಮನೆಗೆ ಕಿಲೋಮೀಟರ್ ಗಟ್ಟಲೆ ನಡೆದೇ ಹೋಗಿ ಆರೋಗ್ಯ ವಿಚಾರಿಸುತ್ತಿದ್ದ ಆಶಾ ಕಾರ್ಯಕರ್ತರನ್ನು ಮರ್ದಾಳದ ಯುವ ಬ್ರಿಗೇಡ್ ತಂಡ ಈ ರೀತಿಯಾಗಿ ಗೌರವಿಸುವ ಮೂಲಕ ಮಾದರಿಯಾಗಿದೆ.

ಆಶಾ ಕಾರ್ಯಕರ್ತೆಯರು


ಕೊರೋನಾ ವಾರಿಯರ್ಸ್ ಗಳಾಗಿರುವರಿಗೆ ದೇಶದ ಪ್ರಧಾನಿಯಾದಿಯಾಗಿ ಎಲ್ಲರೂ ಅವರವರ ಅನುಕೂಲಕ್ಕೆ ತಕ್ಕಂತೆ ಗೌರವಿಸಿದ್ದಾರೆ. ಇಡೀ ದೇಶದ ಜನ ದೀಪ ಬೆಳಗಿ ಕೊರೋನಾ ವಾರಿಯರ್ಸ್ ಗಳಿಗಾಗಿ ಪ್ರಾರ್ಥಿಸಿದೆ. ಇದೀಗ ಮರ್ದಾಳದ ಯುವ ತಂಡ ಪಾದಪೂಜೆ ಮಾಡುವ ಮೂಲಕ ದೇವರಂತೆ ಗೌರವಿಸಿದೆ.

ಇದನ್ನೂ ಓದಿ : ಬಟನ್ ಇಲ್ಲ ಎಲ್ಲಿ ಒತ್ತಲಿ ಸಾಹೇಬ್ರೆ ಎಂದ ವೃದ್ಧೆ; ಒಟ್ಟಿಗೆ ಸೇರಿ ಮತದಾನದ ಗೌಪ್ಯತೆ ಉಲ್ಲಂಘಿಸಿದ ಮೂರು ಜನ ಮಹಿಳೆಯರು

ಕೊರೋನಾ ಬಂದ ಮೊದಲ ದಿನಗಳಲ್ಲಿ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಕರ್ತವ್ಯಕ್ಕೆ ಹಾಜರಾಗಿದ್ದೇವು. ಮನಸ್ಸಿನಲ್ಲಿ ಕೊರೋನಾದ ಭಯ ಪ್ರತೀ ಕ್ಷಣವೂ ಕಾಡುತ್ತಿತ್ತು. ಕರ್ತವ್ಯದ ಜವಾಬ್ದಾರಿ ಹೆಗಲ‌ ಮೇಲೆ ಇದ್ದ ಕಾರಣ ಕೊರೋನಾದ ಭಯದಲ್ಲೇ ಕೆಲಸ ಮಾಡಿದ್ದೇವೆ. ಆ ದಿನಗಳಲ್ಲಿ ಸರಿಯಾದ ಮಾಸ್ಕ್ ಸಿಗುತ್ತಿರಲಿಲ್ಲ, ಸ್ಯಾನಿಟೈಸರ್ ಗಳೂ ಇರಲಿಲ್ಲ. ಆದರೆ ಎಲ್ಲಾ ಸಮಸ್ಯೆಗಳನ್ನು ಬದಿಗೊತ್ತಿ ನಿಸ್ವಾರ್ಥದಿಂದ ಜನರ ಸೇವೆ ಮಾಡಿದ್ದೇವೆ ಎಂದು ಪಾದಪೂಜೆ ಸ್ವೀಕರಿಸಿದ ಆಶಾ ಕಾರ್ಯಕರ್ತೆ ಕೊರೋನಾದ ದಿನಗಳನ್ನು ನೆನಪಿಸಿಕೊಂಡಿದ್ದರು.

ಲಾಕ್ ಡೌನ್ ಸಮಯದಲ್ಲಿ ರಸ್ತೆಯಲ್ಲಿ ಪೋಲೀಸರು, ಬೀದಿ ನಾಯಿಗಳನ್ನು ಬಿಟ್ಟರೆ ಇದ್ದಿದ್ದು ನಾವೇ ಎಂದು ಆ ದಿನಗಳ ಚಿತ್ರಣವನ್ನು ಮುಂದಿಟ್ಟಿದ್ದಾರೆ.
Published by:G Hareeshkumar
First published: