ಮೈತ್ರಿ ಸರ್ಕಾರ ಬೀಳಿಸಲು ಬಿಜೆಪಿ ಯತ್ನ: ಕಾಂಗ್ರೆಸ್​​ ‘ರೆಸಾರ್ಟ್​ ರಾಜಕೀಯ ತಪ್ಪು’ ಎಂದ ಸಿಎಂ ಎಚ್​​ಡಿಕೆ!

ಜೆಡಿಎಸ್​​ಗೆ ರೆಸಾರ್ಟ್​ ರಾಜಕಾರಣದ ಅವಶ್ಯಕತೆಯಿಲ್ಲ. ಬಿಜೆಪಿ ಸದಾ ಸರ್ಕಾರವನ್ನ ಬೀಳಿಸುವ ಕನಸು ಕಾಣುತ್ತಿದೆ. ಅದಕ್ಕಾಗಿಯೇ ಇಲ್ಲದ ಕಸರತ್ತನ್ನು ಮಾಡುತ್ತಿದ್ದಾರೆ. ಆದರೆ, ಇಲ್ಲಿ ಯಾವುದು ಫಲ ಕೊಡುತ್ತಿಲ್ಲ- ಸಿಎಂ

ಸಿದ್ದರಾಮಯ್ಯ, ಕುಮಾರಸ್ವಾಮಿ

ಸಿದ್ದರಾಮಯ್ಯ, ಕುಮಾರಸ್ವಾಮಿ

  • News18
  • Last Updated :
  • Share this:
ಬೆಂಗಳೂರು(ಜ.19): ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿ ಸರ್ಕಾರವನ್ನು ಬೀಳಿಸಲು ಬಿಜೆಪಿ ಯತ್ನಿಸುತ್ತಿದೆ. ಕಾಂಗ್ರೆಸ್​​ ರೆಸಾರ್ಟ್​ ರಾಜಕಾರಣದ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜೆಡಿಎಸ್​​ಗೆ ರೆಸಾರ್ಟ್​ಗೆ ಹೋಗುವುದೇನು? ಅನಿವಾರ್ಯವಲ್ಲ. ಬಿಜೆಪಿ ಸೃಷ್ಟಿಸಿದ ಗೊಂದಲದಿಂದಾಗಿ ಶಾಸಕರ ಜೊತೆಗೆ ಮಾತುಕತೆ ನಡೆಸಲು ಕಾಂಗ್ರೆಸ್​​ ಶಾಸಕರು ರೆಸಾರ್ಟ್​​ಗೆ ತೆರಳಿದ್ದಾರೆ. ಇಂದಿನ ಬೆಳವಣಿಗೆ ಏನೇ ಆಗಲಿ, ರೆಸಾರ್ಟ್​​ ರಾಜಕೀಯ ತಪ್ಪು ಎಂದು ಸಿಎಂ ಎಚ್​​.ಡಿ ಕುಮಾರಸ್ವಾಮಿಯವರು ತಿಳಿಸಿದ್ದಾರೆ.

ಎರಡು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಯಿಂದ ಸಿಎಂ ಎಚ್​​.ಡಿ ಕುಮಾರಸ್ವಾಮಿಯವರು ಬೇಸತ್ತಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ರೆಸಾರ್ಟ್​ ರಾಜಕೀಯ ತಪ್ಪು. ಜನ ಇತ್ತೀಚೆಗಿನ ರಾಜಕೀಯ ನೋಡಿ ಬೇಸರಗೊಂಡಿದ್ದಾರೆ. ನಮಗೆ ರೆಸಾರ್ಟ್​ ರಾಜಕೀಯ ಅನಿವಾರ್ತೆ ಇಲ್ಲ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಬಿಜೆಪಿಯೇ ಸುಖಾಸುಮ್ಮನೇ ಗೊಂದಲ ಸೃಷ್ಟಿಸಿ ಸರ್ಕಾರ ಅಸ್ಥಿರಗೊಳಿಸಲು ಮುಂದಾಗಿದೆ. ಹೀಗಾಗಿ ಕಾಂಗ್ರೆಸ್​​ನವರು ತಮ್ಮ ಶಾಸಕರ ಜತೆಗೆ ಮಾತುಕತೆ ನಡೆಸಲು ರೆಸಾರ್ಟ್​​ಗೆ ಹೋಗಿದ್ದಾರೆ ಎಂದರು.

ಇನ್ನು ಬಿಜೆಪಿಯ ಯಾವ ಶಾಸಕರನ್ನು ನಾವು ಅಪರೇಷನ್​​ಗೆ ಒಳಪಡಿಸಿಲ್ಲ. ಆಪರೇಷನ್​​ ಮಾಡಲೇಬೇಕೆಂಬ ನಿರೀಕ್ಷೆಯಿದ್ದರೇ ನಮಗೆ ಬಿಜೆಪಿಯವರು ಹೇಳಲಿ. ಆಗ ಬೇಕಾದರೇ ಮುಂದೆ ಆಪರೇಷನ್​​ ಬಗ್ಗೆ ಯೋಚಿಸುತ್ತೇವೆ. ಈಗಾಗಲೇ ಮೈತ್ರಿ ಸರ್ಕಾರ ರಚನೆಯಾಗಿ ಯಾವುದೇ ಗೊಂದಲ ಇಲ್ಲದಂತೆ ನಡೆಯುತ್ತಿದೆ. ಈಗಲೂ ಆಪರೇಷನ್​​ ಕಮಲಕ್ಕೆ ಬಿ.ಎಸ್​​ ಯಡಿಯೂರಪ್ಪನವರು ಮುಂದಾಗಿದ್ದಾರೆ. ನಾವು ಅಂತಹ ನೀಚ ಕೆಲಸಕ್ಕೆ ಮುಂದಾಗುವುದಿಲ್ಲ ಎಂದು ಸಿಎಂ ಕಿಡಿಕಾರಿದರು.

ಇದನ್ನೂ ಓದಿ: ಈಗಲ್​ಟನ್​ ರೆಸಾರ್ಟ್​ನಲ್ಲಿ ಕಾಂಗ್ರೆಸ್​ ಶಾಸಕರ ಸಭೆ ಆರಂಭ; ಎಲ್ಲ ಶಾಸಕರಿಂದಲೂ ಅಭಿಪ್ರಾಯ ಸಂಗ್ರಹ

ಜೆಡಿಎಸ್​​ಗೆ ರೆಸಾರ್ಟ್​ ರಾಜಕಾರಣದ ಅವಶ್ಯಕತೆಯಿಲ್ಲ. ಬಿಜೆಪಿ ಸದಾ ಸರ್ಕಾರವನ್ನ ಬೀಳಿಸುವ ಕನಸು ಕಾಣುತ್ತಿದೆ. ಅದಕ್ಕಾಗಿಯೇ ಇಲ್ಲದ ಕಸರತ್ತನ್ನು ಮಾಡುತ್ತಿದ್ದಾರೆ. ಆದರೆ, ಇಲ್ಲಿ ಯಾವುದು ಫಲ ಕೊಡುತ್ತಿಲ್ಲ. ನನ್ನನ್ನ ಮತ್ತು ಸರ್ಕಾರವನ್ನ ಚಾಮುಂಡಿ ತಾಯಿ ರಕ್ಷಿಸುತ್ತಿದ್ದಾಳೆ. ನಮ್ಮನ್ನು ರಕ್ಷಿಸುತ್ತಿರುವ ಚಾಮುಂಡಿ ದೇವಿಯೆ ಬಿಜೆಪಿಯವರಿಗೆ ಒಳ್ಳೆಯ ಬುದ್ದಿ ಕೊಡಲಿ ಎಂದು ಕಿವಿಮಾತು ಹೇಳಿದರು.

ಕಾಂಗ್ರೆಸ್​ನ ಅತೃಪ್ತರಿಗೆ ಗಾಳ ಹಾಕುತ್ತಲೇ ಇದ್ದ ಭಾರತೀಯ ಜನತಾ ಪಕ್ಷಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯು ನಿನ್ನೆ ಅನಿರೀಕ್ಷಿತ ಶಾಕ್ ಕೊಟ್ಟಿದೆ. ಮಾಜಿ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್​ನ ಸಿಎಲ್​ಪಿ ಸಭೆ ನಡೆಯಿತು. ಅಲ್ಲದೇ ಹಾಜರಾಗದ ಶಾಸಕರಿಗೆ ವಿಪ್ ಕೂಡ ಜಾರಿ ಮಾಡಲಾಗಿತ್ತು. ಬಿಜೆಪಿಯ ಗಾಯದ ಮೇಲೆ ಬರೆ ಎಳೆಯುವಂತೆ ಕಾಂಗ್ರೆಸ್ ಪಕ್ಷವು ಸಿಎಲ್​ಪಿ ಸಭೆಯಿಂದ ನೇರವಾಗಿ ಎಲ್ಲಾ ಶಾಸಕರನ್ನೂ ರೆಸಾರ್ಟ್​ಗೆ ಕರೆದೊಯ್ದಿದೆ. ಈ ಮೂಲಕ ಆಪರೇಷನ್ ಕಮಲದ ಕೊನೆಯ ಪ್ರಯತ್ನ ಮಾಡುತ್ತಿರುವ ಬಿಜೆಪಿಗೆ ಕಾಂಗ್ರೆಸ್​​ ಆಘಾತ ನೀಡಿದೆ.

ಇದನ್ನೂ ಓದಿ: ನಾನು ಶಂಕುಸ್ಥಾಪನೆ ಮಾಡಿದ್ದ ಯೋಜನೆಗಳನ್ನು ಮೋದಿ ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ; ದೇವೇಗೌಡ ವಾಗ್ದಾಳಿ

ವಿಪ್ ಹೊರಡಿಸಿ ಸಿಎಲ್​ಪಿ ಸಭೆ ಕರೆಯುವುದು, ಬಂದವರನ್ನು ಅನಾಮತ್ತಾಗಿ ರೆಸಾರ್ಟ್​ಗೆ ಕರೆದೊಯ್ಯುವುದು ಪೂರ್ವಯೋಜಿತ ಪ್ಲಾನ್ ಆಗಿತ್ತು. ನಿನ್ನೆ ಸಿಎಲ್​ಪಿ ಸಭೆ ನಡೆಯುವ ಮುನ್ನವೇ ನ್ಯಾಷನಲ್ ಟ್ರಾವೆಲ್ಸ್ ಬಸ್ಸುಗಳು ವಿಧಾನಸೌಧದ ಬಳಿ ಬಂದಿದ್ದವು. ವಿಪ್ ಹೊರಡಿಸಿದರೆ ಶಾಸಕರು ಶತಾಯಗತಾಯ ಹಾಜರಾಗುತ್ತಾರೆ. ಹಾಗೆ ಬಂದವರನ್ನು ವಾಪಸ್ ಹೋಗದಂತೆ ಸೀದಾ ರೆಸಾರ್ಟ್​ಗೆ ಕರೆದೊಯ್ದರೆ ಆಪರೇಷನ್ ಕಮಲವನ್ನು ಸಂಪೂರ್ಣವಾಗಿ ವಿಫಲಗೊಳಿಸಬಹುದು ಎಂಬುದು ಕೈಪಾಳಯದ ಲೆಕ್ಕಚಾರವಾಗಿತ್ತು.

-----------------
ಸಿದ್ದಗಂಗಾ ಶ್ರೀಗಳ ಆರೋಗ್ಯ ಚೇತರಿಕೆ: ವಿ.ಸೋಮಣ್ಣ
First published: