• Home
  • »
  • News
  • »
  • state
  • »
  • Resort Politics: ವಿಮಾನದಲ್ಲಿ ಬಂದ ಗ್ರಾಮ ಪಂಚಾಯ್ತಿ ಸದಸ್ಯರು; ಹಳ್ಳಿಗೂ ಕಾಲಿಟ್ಟ ರೆಸಾರ್ಟ್ ರಾಜಕೀಯ

Resort Politics: ವಿಮಾನದಲ್ಲಿ ಬಂದ ಗ್ರಾಮ ಪಂಚಾಯ್ತಿ ಸದಸ್ಯರು; ಹಳ್ಳಿಗೂ ಕಾಲಿಟ್ಟ ರೆಸಾರ್ಟ್ ರಾಜಕೀಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

40 ದಿನಗಳ ತೆರೆಮರೆಯ ಆಟಕ್ಕೆ ಇದೀಗ ತೆರೆ ಬಿದ್ದಿದೆ. ಬೆಂಗಳೂರಿನಿಂದ ವಿಮಾನದಲ್ಲಿ ಬಂದ ಗ್ರಾಮ ಪಂಚಾಯ್ತಿ ಸದಸ್ಯರು ಹಾವೇರಿ ಉಪ ವಿಭಾಗಧಿಕಾರಿ ಶಿವಾನಂದ್ ಉಳ್ಳಾಗಡ್ಡ್ಡಿ ಮುಂದೆ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿದ್ದಾರೆ.

  • Share this:

ಚುನಾವಣೆ (Election) ಬಂದ್ರೆ ಅಥವಾ ಅಧಿಕಾರದ ಗದ್ದುಗೆ ಹಿಡಿಯಬೇಕಾದ್ರೆ ರೆಸಾರ್ಟ್​ ರಾಜಕೀಯ (Resort Politics) ಮಾಡೋದು ಸಾಮಾನ್ಯ. ತಮ್ಮ ಶಾಸಕರು (MLA) ಅಥವಾ ನಾಯಕರನ್ನು (Leaders) ಹಿಡಿದಿಟ್ಟುಕೊಳ್ಳಲು ತಮ್ಮ ಎಲ್ಲಾ ಸದಸ್ಯರನ್ನು ರೆಸಾರ್ಟ್​ನಲ್ಲಿರಿಸುತ್ತಾರೆ. ನಂತರ ಅಧಿಕಾರದ ಚುಕ್ಕಾಣಿ ಹಿಡಿಯುವ ದಿನವೂ ಎಲ್ಲರನ್ನೂ ಒಂದೇ ಬಸ್​ನಲ್ಲಿನ ಕರೆತರಲಾಗುತ್ತದೆ. ಕರ್ನಾಟಕ ರಾಜಕಾರಣದಲ್ಲಿ (Karnataka Politics) ರೆಸಾರ್ಟ್​ ರಾಜಕೀಯ ಹೊಸತೇನಲ್ಲ. ಇನ್ನು 2018ರ ವಿಧಾನಸಭಾ ಚುನಾವಣೆ ಫಲಿತಾಂಶದ (Election Result) ನಂತರ ಕಾಂಗ್ರೆಸ್ ತನ್ನ ಎಲ್ಲಾ ಶಾಸಕರನ್ನು ಹೈದರಾಬಾದ್​​ಗೆ ಶಿಫ್ಟ್ ಮಾಡಿತ್ತು. ಮೈತ್ರಿ ಸರ್ಕಾರ ಪತನದ ವೇಳೆ ಬಂಡಾಯ ಶಾಸಕರೆಲ್ಲ ಮುಂಬೈ ಸೇರಿದ್ದರು. ಕಾಂಗ್ರೆಸ್ ಶಾಸಕರು ಈಗಲ್​ಟೆನ್​ ರೆಸಾರ್ಟ್​ ಸೇರಿದ್ದರು.


ಹೀಗೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಉದ್ದೇಶದಿಂದ ಶಾಸಕರನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯ ಕಳುಹಿಸಿ ಅಲ್ಲಿಯ ರೆಸಾರ್ಟ್​ನಲ್ಲಿ ಇರಿಸುತ್ತಾರೆ. ಆದ್ರೆ ಕರ್ನಾಟಕ ರಾಜಕಾರಣದಲ್ಲಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿಯೂ ರೆಸಾರ್ಟ್ ರಾಜಕಾರಣ ನಡೆದಿದೆ. ವಿಮಾನದಲ್ಲಿ ಬಂದ ಗ್ರಾಮ ಪಂಚಾಯ್ತಿ ಸದಸ್ಯರು ಅವಿಶ್ವಾಸ ಗೊತ್ತುವಳಿಯಲ್ಲಿ ಭಾಗಿಯಾಗಿ ಮತ ಚಲಾಯಿಸಿದ್ದಾರೆ.


40 ದಿನಗಳ ರೆಸಾರ್ಟ್​ ರಾಜಕೀಯದ ಆಟ


ಹೌದು, ಈ ಘಟನೆ ನಡೆದಿದ್ದು ಸಿಎಂ ಬಸವರಾಜ್ ಬೊಮ್ಮಾಯಿ ಅವರ ತವರು ಜಿಲ್ಲೆಯಲ್ಲಿ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮ ಪಂಚಾಯ್ತಿಯ ಅಧ್ಯಕ್ಷರ ಬದಲಾವಣೆಗಾಗಿ ರೆಸಾರ್ಟ್​ ರಾಜಕೀಯ ನಡೆದಿದೆ. ಕಳೆದ 40 ದಿನಗಳಿಂದ ರೆಸಾರ್ಟ್​ ರಾಜಕೀಯ ನಡೆದಿದೆ.


ಗ್ರಾಮ ಪಂಚಾಯ್ತಿಯ ಒಟ್ಟು 13 ಸದಸ್ಯರಲ್ಲಿ 9 ಜನ ಸಂತೋಷ್ ಭಟ್ ಬಣದವರಾಗಿದ್ರೆ, ನಾಲ್ವರು ಬಜೆಪಿ ಸದಸ್ಯರಾಗಿದ್ದರು. ಈ ನಾಲ್ವರು ಮಾಲತೇಶ್ ದುರಗಪ್ಪ ನಾಯರ್ ಬಣದವರು. ಈ ಎರಡೂ ಬಣಗಳ ನಡುವೆ 15 ತಿಂಗಳಂತೆ ಅಧಿಕಾರದ ಹಂಚಿಕೆಯ ಕುರಿತು ಒಪ್ಪಂದ ಆಗಿತ್ತು.


ಈ ಒಪ್ಪಂದದಂತೆ ಮಾಲತೇಶ್ ಗ್ರಾಮ ಪಂಚಾಯ್ತಿಯ ಅಧ್ಯಕ್ಷರಾಗಿದ್ದರು. ಅವಧಿ ಮುಗಿದ ನಂತರ ಮಾಲತೇಶ್ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ಒಪ್ಪಿರಲಿಲ್ಲ. ಇದರಿಂದ ಎರಡೂ ಬಣಗಳ ನಡುವೆ ಕಿತ್ತಾಟ ಶುರುವಾಗಿತ್ತು. ಬೆಂಬಲಿತ ಸದಸ್ಯರನ್ನು ಮಾಲತೇಶ್ ಸೆಳೆಯಬಹುದು ಎಂಬ ಅನುಮಾನದಿಂದ ಸಂತೋಷ್ ಭಟ್ ತನ್ನ ಬೆಂಬಲಿತರನ್ನು ಬೆಂಗಳೂರಿನ ರೆಸಾರ್ಟ್​​ನಲ್ಲಿ ಇರಿಸಿದ್ದರು.


ಇದನ್ನೂ ಓದಿ: Belagavi Dispute: ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ; ಬೆಳಗಾವಿ, ಮಹಾರಾಷ್ಟ್ರ ನಡುವೆ ಬಸ್​ ಸಂಚಾರ ಬಂದ್​​!


ವಿಮಾನದಲ್ಲಿ ಬಂದ ಗ್ರಾಮ ಪಂಚಾಯ್ತಿ ಸದಸ್ಯರು


40 ದಿನಗಳ ತೆರೆಮರೆಯ ಆಟಕ್ಕೆ ಇದೀಗ ತೆರೆ ಬಿದ್ದಿದೆ. ಬೆಂಗಳೂರಿನಿಂದ ವಿಮಾನದಲ್ಲಿ ಬಂದ ಗ್ರಾಮ ಪಂಚಾಯ್ತಿ ಸದಸ್ಯರು ಹಾವೇರಿ ಉಪ ವಿಭಾಗಧಿಕಾರಿ ಶಿವಾನಂದ್ ಉಳ್ಳಾಗಡ್ಡ್ಡಿ ಮುಂದೆ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿದ್ದಾರೆ.


ವಿಮಾನದಲ್ಲಿ ಬಂದ ಗ್ರಾಮ ಪಂಚಾಯ್ತಿ ಸದಸ್ಯರನ್ನು ನೋಡಿದ ಜನರು ಒಂದು ಕ್ಷಣ ಶಾಕ್ ಆಗಿದ್ದರು. ಇದೀಗ ಗ್ರಾಮ ಪಂಚಾಯ್ತಿ ಮಟ್ಟಕ್ಕೂ ರೆಸಾರ್ಟ್​ ರಾಜಕೀಯ ಕಾಲಿಟ್ಟಂತಾಗಿದೆ.


ಇದನ್ನೂ ಓದಿ:  Karnataka Politics: ರೌಡಿ ರಾಜಕೀಯ ಟೀಕೆಗೆ ಬಿಜೆಪಿ ತಿರುಗೇಟು; ಕಾಂಗ್ರೆಸ್​ಗೆ​ 16 ಪ್ರಶ್ನೆ ಕೇಳಿದ ಕೇಸರಿ ಪಡೆ


ಪಿಎಲ್​ಡಿ ಬ್ಯಾಂಕ್ ಚುನಾವಣೆ


ಬೆಳಗಾವಿ ರಾಜಕಾರಣದಲ್ಲಿ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಪಿಎಲ್​ಡಿ ಬ್ಯಾಂಕ್ ಚುನಾವಣೆ (PLD Bank Election) ವೇಳೆಯೂ ರೆಸಾರ್ಟ್​ ರಾಜಕೀಯ ನಡೆದಿತ್ತು. ಅಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಡುವೆ ಶೀತಲ ಸಮರವೇ ಏರ್ಪಟ್ಟಿತ್ತು. ಈ ಚುನಾವಣೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಎಲ್ಲಾ ಬೆಂಬಲಿತ ಸದಸ್ಯರನ್ನು ರೆಸಾರ್ಟ್​​ನಲ್ಲಿ ಇರಿಸಿದ್ದರು. ಈ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಅವರಿಗೆ ಹಿನ್ನಡೆ ಆಗಿತ್ತು.


ಅಂದಿನಿಂದ ಇಬ್ಬರ ನಡುವೆ ಏಟು-ಏದಿರೇಟು ಎಂಬ ಮಾದರಿಯಲ್ಲಿ ರಾಜಕೀಯ ನಡೆಯುತ್ತಿದೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಸೋಲಿಸಲು ರಮೇಶ್ ಜಾರಕಿಹೊಳಿ ಪಣ ತೊಟ್ಟಿದ್ದಂತೆ ಕಾಣಿಸುತ್ತಿದೆ

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು