‘ಆಪರೇಷನ್​ ಕಮಲ, ರೆಸಾರ್ಟ್​ ರಾಜಕಾರಣ ಬಿಜೆಪಿ ಬಂಡವಾಳ’: ಬಿಎಸ್​ವೈ ವಿರುದ್ಧ ಸಿದ್ದು ಟ್ವೀಟ್​ವಾರ್​


Updated:August 10, 2018, 10:01 PM IST
‘ಆಪರೇಷನ್​ ಕಮಲ, ರೆಸಾರ್ಟ್​ ರಾಜಕಾರಣ ಬಿಜೆಪಿ ಬಂಡವಾಳ’: ಬಿಎಸ್​ವೈ ವಿರುದ್ಧ ಸಿದ್ದು ಟ್ವೀಟ್​ವಾರ್​

Updated: August 10, 2018, 10:01 PM IST
ನ್ಯೂಸ್​-18 ಕನ್ನಡ

ಬೆಂಗಳೂರು(ಆಗಸ್ಟ್​.10): ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​. ಯಡಿಯೂರಪ್ಪ ಅವರು ನಾವು ಆಪರೇಷನ್​ ಕಮಲ ನಡೆಸುತ್ತಿಲ್ಲ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಮಾಜಿ ಸಿಎ ಸಿದ್ದರಾಮಯ್ಯ ಆಪರೇಷನ್​ ಕಮಲ ಶುರು ಮಾಡಿದ್ದು ಬಿಜೆಪಿಯವರೇ, ನಾವಲ್ಲ ಎನ್ನುವ ಮೂಲಕ ಬಿಎಸ್​ವೈ ಕಾಲೆಳೆದಿದ್ದಾರೆ.

ಈ ಸಂಬಂಧ ಟ್ವೀಟ್​ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ತಮ್ಮ ಖಾತೆಯಿಂದ ಆಪರೇಷನ್‌ ಕಮಲ‌, ರೆಸಾರ್ಟ್ ರಾಜಕೀಯ, ಕುದುರೆ ವ್ಯಾಪಾರ‌ ಪ್ರಾರಂಭಿಸಿದ್ದು ಬಿಜೆಪಿ. ಅಂತಹ ರಾಜಕೀಯ ನಾವು ಮಾಡುವುದಿಲ್ಲ, ನಮಗೆ ಅಗತ್ಯವೂ ಇಲ್ಲ ಎಂದು ಪರೋಕ್ಷವಾಗಿ ಬಿಎಸ್​ವೈ ಹೇಳಿಕೆಗೆ ತಿರುಗೇಟು ನೀಡಿದ್ಧಾರೆ ಎನ್ನಲಾಗಿದೆ.

ರಾಯಚೂರಿನಲ್ಲಿ ಬಿಎಸ್​ವೈ ಇಂದು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ನಾವು ಆಪರೇಷನ್​ ಕಮಲ ಮಾಡುತ್ತಿಲ್ಲ. ಬಾದಾಮಿಗೆ ತೆರಳಿ ನಾನು ಶ್ರೀರಾಮುಲು ಪರ ಅರ್ಧ ದಿನ ಪ್ರಚಾರ ಮಾಡಿದ್ದರೆ, ಮಾಜಿ ಸಿಎಂ ಸಿದ್ದರಾಮಯ್ಯ ಅಲ್ಲಿಯೂ ಗೆಲ್ಲುತ್ತಿರಲಿಲ್ಲ. ಎರಡು ಕಡೆಯಲ್ಲು ಹೀನಾಯವಾಗಿ ಸೋಲುತ್ತಿದ್ದರು ಎಂದು ಕಾಲೆಳೆದಿದ್ದರು.
Loading...

ಇದೆ ವೇಳೆ ಟ್ವೀಟ್​ ಮಾಡಿರುವ ಮಾಜಿ ಸಿಎಂ, ಬಾದಾಮಿ ಶಾಸಕ ಸಿದ್ದರಾಮಯ್ಯ ಅವರು ರೆಸಾರ್ಟ್​ ರಾಜಕಾರಣ, ಆಪರೇಷನ್​ ಕಮಲದಂತಹ ನೀಚ ರಾಜಕಾರಣ ಶುರುಮಾಡಿದ್ದು ಬಿಜೆಪಿಯವರು ನಾವಲ್ಲ. ನಮಗೆ ಅಗತ್ಯವೂ ಇಲ್ಲ ಎನ್ನುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ರಾಜ್ಯ ವಿರೋಧ ಪಕ್ಷದ ನಾಯಕ ಬಿಎಸ್​. ಯಡಿಯೂರಪ್ಪ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ಧಾರೆ.

ಇನ್ನು ಮೈತ್ರಿ ಸರ್ಕಾರದ ನಂತರದಲ್ಲಿ ಮಾಜಿ ಸಿಎಂಗಳ ನಡುವೆ ಪರಸ್ಪರ ಕೆಸರೆರಚಾಟ ಹೊಸತೇನಲ್ಲ. ಶಾಸಕರನ್ನು ಖರೀದಿ ಮಾಡಿ ಸರ್ಕಾರ ರಚಿಸಿದ್ದೀರಿ ಎಂಬ ಬಿಎಸ್​ವೈ ಹೇಳಿಕೆಗೆ ತಿರುಗೇಟು ನೀಡಿರುವ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಶಾಸಕರನ್ನು ಖರೀದಿಸಿ ಮೊದಲು ಅನೈತಿಕ ರಾಜಕಾರಣ ಮಾಡಿದ್ದು ಯಡಿಯೂರಪ್ಪ ಎಂದು ಹರಿಹಾಯ್ದಿದ್ದಾರೆ.

ವಿಜಯಪುರದಲ್ಲಿ ಮಾತಾಡಿದ ಅವರು, ಆಪರೇಷನ್ ಕಮಲ ಅಂದ್ರೆ ಏನು? ಎಂದು ಪ್ರಶ್ನಿಸಿದರು. ಇದೆ ವೇಳೆ ಆಪರೇಷನ್ ಕಮಲದ ಹೆಸರಿನಲ್ಲಿ ಕುರಿ, ದನಾ, ಎಮ್ಮೆ ಥರಾ ಮಾರಾಟದ ವಸ್ತುಗಳನ್ನು ಕೊಂಡುಕೊಳ್ಳುವಂತೆಯೇ 20, 25 ಕೋಟಿ ಕೊಟ್ಟು ಶಾಸಕರುಗಳನ್ನು ಖರೀದಿಸುವ ಕೆಲಸವನ್ನು ಯಡಿಯೂರಪ್ಪ ಅವರದ್ದು ಎಂದು ವಾಗ್ಧಾಳಿ ನಡೆಸಿದ್ಧಾರೆ.

ತಮ್ಮ ಅಧಿಕಾರಕ್ಕಾಗಿ ಬಿಎಸ್​ವೈ 8 ಶಾಸಕರನ್ನು ಖರೀದಿಸಿ ಅಧಿಕಾರ ಹಿಡಿದಿದ್ದರು. ಖರೀದಿಸುವ ಮೂಲಕ ಮೊದಲು ಅನೈತಿಕ ರಾಜಕಾರಣ ಮಾಡಿದ್ದಾರೆ ಎಂದು ಬಿಎಸ್​ವೈ ವಿರುದ್ಧ ಮಾಜಿ ಸಿಎಂ ಗಂಭೀರವಾಗಿ ಆರೋಪಿಸಿದರು. ಇನ್ನು ಈಗಲೂ ಸಹ ಬಿಜೆಪಿಯ ಸಾಕಷ್ಟು ಜನ ಕಾಂಗ್ರೆಸ್ ಗೆ ಬರುತ್ತೇವೆ ಎನ್ನುತ್ತಿದ್ದಾರೆ, ಆದರೆ ನಾವೇ ಬೇಡಪ್ಪ ನೀವು ಅಲ್ಲೆ ಇರಿ ಎಂದು ಹೇಳಿದ್ದೇವೆ ಎಂದರು.
First published:August 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...