ನಾಳೆ ಅಧಿವೇಶನ ಪ್ರಾರಂಭ; ವಿಪ್ ಸ್ವೀಕರಿಸಿದೇ ಮುಂಬೈಗೆ ಹೊರಟ ಅತೃಪ್ತರು ಅಧಿವೇಶನಕ್ಕೆ ಹಾಜರಾಗ್ತಾರಾ?

ಅಧಿವೇಶನದೊಳಗೆ ಸರಕಾರ ಉರುಳಿಸಲು ಯೋಜಿಸಿದ್ದ ಅತೃಪ್ತರ ಮುಂದಿನ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ. ನಾಳೆ ಅವರು ಮತ್ತೊಮ್ಮೆ ಸುಪ್ರೀಂ ಕೋರ್ಟ್ ಮೊರೆ ಹೋಗಿ ಅದರ ಮೂಲಕ ಸ್ಪೀಕರ್ ಮೇಲೆ ಒತ್ತಡ ಹಾಕಬಹುದು.

news18
Updated:July 11, 2019, 8:28 PM IST
ನಾಳೆ ಅಧಿವೇಶನ ಪ್ರಾರಂಭ; ವಿಪ್ ಸ್ವೀಕರಿಸಿದೇ ಮುಂಬೈಗೆ ಹೊರಟ ಅತೃಪ್ತರು ಅಧಿವೇಶನಕ್ಕೆ ಹಾಜರಾಗ್ತಾರಾ?
ರಮೇಶ್ ಜಾರಕಿಹೊಳಿ
news18
Updated: July 11, 2019, 8:28 PM IST
ಬೆಂಗಳೂರು(ಜುಲೈ 11): ಸ್ಪೀಕರ್ ಸೂಚನೆಯಂತೆ ಇವತ್ತು ಕೆಲ ಶಾಸಕರು ಮತ್ತೊಮ್ಮೆ ಕ್ರಮಬದ್ಧವಾಗಿ ರಾಜೀನಾಮೆ ಸಲ್ಲಿಸಿದ್ಧಾರೆ. ಸುಪ್ರೀಂ ಕೋರ್ಟ್ ಸೂಚನೆಯಂತೆ ಸಂಜೆ 6ಗಂಟೆಗೆ ರಮೇಶ್ ಜಾರಕಿಹೊಳಿ, ಹೆಚ್. ವಿಶ್ವನಾಥ್, ಎಸ್.ಟಿ. ಸೋಮಶೇಖರ್, ಭೈರತಿ ಬಸವರಾಜು, ಬಿ.ಸಿ. ಪಾಟೀಲ್ ಸೇರಿದಂತೆ 10 ಕಾಂಗ್ರೆಸ್-ಜೆಡಿಎಸ್ ಶಾಸಕರು ಸಲ್ಲಿಸಿದ ರಾಜೀನಾಮೆಯನ್ನು ಸ್ಪೀಕರ್ ರಮೇಶ್ ಕುಮಾರ್ ಸ್ವೀಕರಿಸಿದ್ದಾರೆ. ಎಲ್ಲಾ ರಾಜೀನಾಮೆ ಪತ್ರಗಳು ಕ್ರಮಬದ್ಧವಾಗಿವೆ ಎಂದು ತಿಳಿಸಿರುವ ಸ್ಪೀಕರ್, ಈ ರಾಜೀನಾಮೆಯನ್ನು ಈಗಲೇ ಅಂಗೀಕರಿಸಲು ಸಾಧ್ಯವಿಲ್ಲ. ಪರಿಶೀಲಿಸಲು ಸ್ವಲ್ಪ ಸಮಯ ಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

ವಿಧಾನಸಭಾ ಅಧ್ಯಕ್ಷರು ನಾಳೆ ಸುಪ್ರೀಂ ಕೋರ್ಟ್​ನಲ್ಲಿ ರಾಜೀನಾಮೆ ವಿಚಾರಣೆಗೆ ಕಾಲಾವಕಾಶ ಕೋರುವ ಸಾಧ್ಯತೆ ಇದೆ. ಶಾಸಕರ ರಾಜೀನಾಮೆ ಸ್ವೀಕರಿಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ರಮೇಶ್ ಕುಮಾರ್, ರಾಜೀನಾಮೆ ಪ್ರಕ್ರಿಯೆಯ ವಿಡಿಯೋ ರೆಕಾರ್ಡ್ ಮಾಡಲಾಗಿದ್ದು, ಅದನ್ನು ಕೋರ್ಟ್​ಗೆ ಕೊಡಲಾಗುತ್ತದೆ ಎಂಬ ಮಾಹಿತಿ ನೀಡಿದ್ಧಾರೆ.

ಇದನ್ನೂ ಓದಿ: ಸರ್ಕಾರ ಸದ್ಯಕ್ಕೆ ಸೇಫ್​, ಈಗಿಂದೀಗಲೇ ರಾಜೀನಾಮೆ ಅಂಗೀಕಾರ ಅಸಾಧ್ಯ ಎಂದ ರಮೇಶ್​ ಕುಮಾರ್​

ಇನ್ನು, ಸ್ಪೀಕರ್ ಅವರ ಕೈಗೆ ಖುದ್ದಾಗಿ ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಅತೃಪ್ತರು ಮತ್ತೆ ಮುಂಬೈಗೆ ವಾಪಸ್ಸಾಗಿದ್ದಾರೆ. ಆದರೆ, ನಾಳೆ ವಿಧಾನಸಭೆಯಲ್ಲಿ ಅಧಿವೇಶನ ಪ್ರಾರಂಭವಾಗುತ್ತಿದೆ. ಈ ಅಧಿವೇಶನದಲ್ಲಿ ಪ್ರಮುಖವಾಗಿರುವ ಹಣಕಾಸು ಮಸೂದೆಯ ಮಂಡನೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಎಲ್ಲಾ ಶಾಸಕರು ತಪ್ಪದೇ ಹಾಜರಾಗಬೇಕೆಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ವಿಪ್ ಹೊರಡಿಸಿವೆ. ಆದರೆ, ರಾಜೀನಾಮೆ ನೀಡಿದ ಶಾಸಕರು ಸಚೇತಕರ ಕೈಗೆ ಸಿಕ್ಕದೆ ತಪ್ಪಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ಧಾರೆ. ಅವರ ಕೈಗೆ ವಿಪ್ ಪತ್ರ ಸಿಕ್ಕಿಲ್ಲ. ಹೀಗಾಗಿ ಅವರು ಅಧಿವೇಶನಕ್ಕೆ ಬಂದರೆ ಬರಬಹುದು, ಇಲ್ಲದಿದ್ದರೆ ಇಲ್ಲ ಎಂಬಂತಹ ಸ್ಥಿತಿ ಇದೆ.

ಒಂದು ವೇಳೆ, ಅವರು ವಿಪ್ ಕೈಗೆ ಪಡೆದಿದ್ದರೆ ಅಧಿವೇಶನಕ್ಕೆ ಹಾಜರಾಗುವುದು ಅನಿವಾರ್ಯವಾಗುತ್ತಿತ್ತು. ಹಾಜರಾಗದಿದ್ದರೆ ಶಾಸಕ ಸ್ಥಾನದಿಂದಲೇ ಅನರ್ಹಗೊಳ್ಳಬೇಕಿತ್ತು.

ಅಧಿವೇಶನದೊಳಗೆ ಸರಕಾರ ಉರುಳಿಸಲು ಯೋಜಿಸಿದ್ದ ಅತೃಪ್ತರ ಮುಂದಿನ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ. ನಾಳೆ ಅವರು ಮತ್ತೊಮ್ಮೆ ಸುಪ್ರೀಂ ಕೋರ್ಟ್ ಮೊರೆ ಹೋಗಿ ಅದರ ಮೂಲಕ ಸ್ಪೀಕರ್ ಮೇಲೆ ಒತ್ತಡ ಹಾಕಬಹುದು.

ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್​​ನಲ್ಲೂ ಹಿಂಬಾಲಿಸಿ
Loading...

First published:July 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...