ಅಧಿಕಾರಿಯಾಗಿ ಸರ್ಕಾರದ ಕಾನೂನು ವಿರೋಧಿಸುವುದು ತಪ್ಪಾಗಿತ್ತು; ಅದಕ್ಕೆ ಹೊರಬಂದೆ: ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ ಸೆಂಥಿಲ್ ಹೇಳಿಕೆ

ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ರಾಷ್ಟ್ರೀಯ ಶಿಕ್ಷಣ ನೀತಿಯು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತದೆ. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುವುದಕ್ಕೆ ಒತ್ತು ಕೊಟ್ಟಿಲ್ಲ. ಇದರ ಆಯೋಗವು ಪ್ರಧಾನಿಗಳ ಕೈಯಲ್ಲಿರುವುದು ಸರಿಯಲ್ಲ ಎಂದು ಮಾಜಿ ಐಎಎಸ್ ಅಧಿಕಾರಿ ಟೀಕಿಸಿದ್ದಾರೆ.

news18
Updated:November 28, 2019, 8:57 PM IST
ಅಧಿಕಾರಿಯಾಗಿ ಸರ್ಕಾರದ ಕಾನೂನು ವಿರೋಧಿಸುವುದು ತಪ್ಪಾಗಿತ್ತು; ಅದಕ್ಕೆ ಹೊರಬಂದೆ: ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ ಸೆಂಥಿಲ್ ಹೇಳಿಕೆ
ಸಸಿಕಾಂತ್ ಸೆಂಥಿಲ್
  • News18
  • Last Updated: November 28, 2019, 8:57 PM IST
  • Share this:
ರಾಯಚೂರು(ನ. 27): ದೇಶದಲ್ಲಿ ವಾತಾವರಣ ಸರಿಯಿಲ್ಲ ಎಂದು ಬೇಸರ ವ್ಯಕ್ತಪಡಿಸಿ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ ಮಾಜಿ ಮಂಗಳೂರು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಕೇಂದ್ರ ಸರ್ಕಾರದ ಹಿಡನ್ ಅಜೆಂಡಾ ಬಯಲಿಗೆಳೆಯುವ ಸಂಕಲ್ಪ ತೊಟ್ಟಿದ್ದಾರೆ. ಮಾಜಿ ನಕ್ಸಲ್ ಎಂಬ ಆರೋಪದ ಮೇಲೆ ಬಂಧಿತರಾಗಿರುವ ಸ್ವರಾಜ್ ಇಂಡಿಯಾ​​​ ಪಕ್ಷದ ರಾಜ್ಯ ಕಾರ್ಯದರ್ಶಿ ನರಸಿಂಹ ಮೂರ್ತಿ ಅವರನ್ನು ಭೇಟಿಯಾಗಲು ಇಲ್ಲಿಗೆ ಬಂದಿರುವ ಸೆಂಥಿಲ್ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ವಿವಿಧ ವಿಚಾರಗಳನ್ನು ಹಂಚಿಕೊಂಡರು.

ದೇಶದಲ್ಲಿ ಈಗ ನಡೆಯುತ್ತಿರುವ ಬೆಳವಣಿಗೆಯು 70 ವರ್ಷದ ಇತಿಹಾಸವನ್ನು ಹಾಳು ಮಾಡುವಂತೆ ಇದೆ. ಸಾಂವಿಧಾನಿಕ ಸಂಸ್ಥೆಗಳನ್ನು ನಾಶ ಮಾಡುತ್ತಿದ್ದಾರೆ. ಆರ್ಥಿಕ ಮುಗ್ಗಟ್ಟಿನ ಸಮಸ್ಯೆಗೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ಚರ್ಚೆಗಳಾಗುತ್ತಿದ್ದರೂ ಕೇಂದ್ರ ಸರ್ಕಾರ ತಲೆ ಕೆಡಿಸಿಕೊಂಡಂತಿಲ್ಲ ಎಂದು ಸಸಿಕಾಂತ್ ಸೆಂಥಿಲ್ ಟೀಕಿಸಿದರು.

ಇದನ್ನೂ ಓದಿ: ವೇದಿಕೆಯಲ್ಲೇ ಗಳಗಳನೆ ಅತ್ತ ಕುಮಾರಸ್ವಾಮಿ; ನನಗೆ ನಿಮ್ಮ ಪ್ರೀತಿ ಸಾಕು, ಯಾವ ಸಿಎಂ ಹುದ್ದೆಯೂ ಬೇಡ ಎಂದ ದಳಪತಿ

ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ರಾಷ್ಟ್ರೀಯ ಶಿಕ್ಷಣ ನೀತಿಯು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತದೆ. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುವುದಕ್ಕೆ ಒತ್ತು ಕೊಟ್ಟಿಲ್ಲ. ಇದರ ಆಯೋಗವು ಪ್ರಧಾನಿಗಳ ಕೈಯಲ್ಲಿರುವುದು ಸರಿಯಲ್ಲ. ಸರ್ಕಾರಗಳು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಸಲಹೆ ನೀಡಿದರು.

ಒಬ್ಬ ಸರ್ಕಾರಿ ಅಧಿಕಾರಿಯಾಗಿ ಸರ್ಕಾರದ ಕಾನೂನು ವಿರೋಧಿಸುವುದು ತಪ್ಪಾಗುತ್ತದೆ. ಹೀಗಾಗಿ ನಾನು ಅಧಿಕಾರದಿಂದ ಹೊರಬಂದಿದ್ದೇನೆ. ಕರ್ನಾಟಕದಲ್ಲಿ ಪರಿಸ್ಥಿತಿ ಹದಗೆಟ್ಟಿಲ್ಲ. ದೇಶದಲ್ಲಿ ಒಟ್ಟಾರೆಯಾಗಿ ಪರಿಸ್ಥಿತಿ ಸರಿಯಾಗಿಲ್ಲ ಎಂಬ ನೋವಿನಲ್ಲಿ ರಾಜೀನಾಮೆ ನೀಡಿದ್ದೇನೆ. ನನ್ನ ರಾಜೀನಾಮೆ ಅಂಗೀಕರಿಸುವುದು ಬಿಡುವುದು ಸರ್ಕಾರದ ನಿರ್ಧಾರ. ನಾನು ಮಾತ್ರ ಮತ್ತೆ ಕೆಲಸಕ್ಕೆ ಬರುವುದಿಲ್ಲ. ರಾಜೀನಾಮೆ ವಾಪಸ್ ತೆಗೆದುಕೊಳ್ಳುವ ಕುರಿತು ಯಾವುದೇ ಮಾತುಕತೆಯೂ ಆಗಿಲ್ಲ ಎಂದು ದಕ್ಷಿಣ ಕನ್ನಡದ ಮಾಜಿ ಡಿಸಿ ಸೆಂಥಿಲ್ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ‘ನಾವ್ಯಾರೂ ಅಣಬೆಗಳ ರೀತಿ ಬೆಳೆದವರಲ್ಲ’ - ಕುಮಾರಸ್ವಾಮಿಗೆ ಆರ್. ಅಶೋಕ್ ತಿರುಗೇಟು

ಇನ್ನು, ನರಸಿಂಹಮೂರ್ತಿ ಅವರು ಪೊಲೀಸರಿಂದ ಬಂಧಿತರಾಗಿರುವ ಬಗ್ಗೆ ಸೆಂಥಿಲ್ ವಿಷಾದ ವ್ಯಕ್ತಪಡಿಸಿದರು. “ನರಸಿಂಹಮೂರ್ತಿ ನನ್ನ ಆಪ್ತ ಸ್ನೇಹಿತ. 20 ವರ್ಷಗಳಿಂದ ಲಂಕೇಶ್ ಪತ್ರಿಕೆಯಲ್ಲಿ ಕೆಲಸ ಮಾಡಿದ್ದಾರೆ. ತಪ್ಪು ಗ್ರಹಿಕೆಯಲ್ಲಿ ಅವರ ಬಂಧನವಾಗಿದೆ. ನಾನು ಅವರ ಜೊತೆ ನಿಲ್ಲುತ್ತೇನೆ. ಸರ್ಕಾರದ ಹಿಡನ್ ಅಜೆಂಡಾ ಬಗ್ಗೆ ಜನರಿಗೆ ಮಾಹಿತಿ ನೀಡುತ್ತೇನೆ. ನಾನು ಅಧಿಕಾರದಲ್ಲಿದ್ದಾಗ ಹಲವು ನಕ್ಸಲರನ್ನು ಹೊರಗೆ ತರುವ ಕೆಲಸ ಮಾಡಿದ್ದೇನೆ. ನಕ್ಸಲರು ಬಡವರ ಪರವಾಗಿ ಕೆಲಸ ಮಾಡಿರುವವರು. ಇವತ್ತೂ ಕೂಡ ಅವರು ಜನರ ಸಮಸ್ಯೆಗಳಿಗಾಗಿ ಕೆಲಸ ಮಾಡುತ್ತಿದ್ದಾರೆ. ಬಹಳ ನಕ್ಸಲರಿಗೆ ಸ್ವಂತ ಕುಟುಂಬವೂ ಇಲ್ಲ. ತಳಮಟ್ಟದಿಂದ ಕೆಲಸ ಮಾಡುವವರಿಗೆ ನನ್ನ ಬೆಂಬಲ ಇರುತ್ತದೆ. ನರಸಿಂಹ ಮೂರ್ತಿ ಇವತ್ತಲ್ಲ ನಾಳೆ ಹೊರಗೆ ಬರುತ್ತಾರೆ” ಎಂದು ಸಸಿಕಾಂತ್ ಸೆಂಥಿಲ್ ವಿಶ್ವಾಸ ವ್ಯಕ್ತಪಡಿಸಿದರು.ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: November 27, 2019, 2:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading