ಇನ್ನೂ ಹೆಚ್ಚು ಅವಮಾನಕ್ಕೊಳಗಾಗುವ ಮುನ್ನ ರಾಜೀನಾಮೆ ಕೊಟ್ಟುಬಿಡಿ ಸಿಎಂ; ಸಿ.ಟಿ. ರವಿ ಕಿವಿಮಾತು!

ಈ ಸರ್ಕಾರ ಕೆಲವು ದಿನಗಳಲ್ಲ, ಕೆಲವು ಗಂಟೆಗಳೂ ಉಳಿಯುವುದಿಲ್ಲ. ಹೀಗಾಗಿ ಸಿಎಂ ಮುಂದೆ ಇರುವ ಏಕೈಕ ರಾಜಮಾರ್ಗ ಎಂದರೆ, ಇನ್ನಷ್ಟು ಅಪಮಾನಗಳನ್ನು ಅನುಭವಿಸುವ ಮುನ್ನ ರಾಜೀನಾಮೆ ಕೊಟ್ಟು ಮರ್ಯಾದೆಯನ್ನು ಉಳಿಸಿಕೊಳ್ಳುವುದು ಎಂದು ಬಿಜೆಪಿ ಹಿರಿಯ ನಾಯಕ ಸಿ.ಟಿ. ರವಿ ಸಲಹೆ ನೀಡಿದ್ದಾರೆ.

MAshok Kumar | news18
Updated:July 14, 2019, 2:02 PM IST
ಇನ್ನೂ ಹೆಚ್ಚು ಅವಮಾನಕ್ಕೊಳಗಾಗುವ ಮುನ್ನ ರಾಜೀನಾಮೆ ಕೊಟ್ಟುಬಿಡಿ ಸಿಎಂ; ಸಿ.ಟಿ. ರವಿ ಕಿವಿಮಾತು!
ಸಿ.ಟಿ. ರವಿ
  • News18
  • Last Updated: July 14, 2019, 2:02 PM IST
  • Share this:
ಬೆಂಗಳೂರು (ಜುಲೈ.14); 'ಇನ್ನೂ ಹೆಚ್ಚು ಅವಮಾನಕ್ಕೆ ಒಳಗಾಗಿ ರಾಜೀನಾಮೆ ನೀಡುವುದಕ್ಕಿಂತ ಈಗಲೇ ರಾಜೀನಾಮೆ ಕೊಟ್ಟಬಿಡಿ ಕುಮಾರಸ್ವಾಮಿಯವರೇ' ಎಂದು ಬಿಜೆಪಿ ಹಿರಿಯ ನಾಯಕ ಮಾಜಿ ಸಚಿವ ಸಿ.ಟಿ. ರವಿ ಕಿವಿಮಾತು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ ಅವರು, "ಸಚಿವ ಎಂಟಿಬಿ ನಾಗರಾಜ್ ಅವರನ್ನು ಕರೆದುಕೊಂಡು ಬಂದು‌ ಏನೆ ಮಾಡಿದ್ರೂ ಅದು ಸಕ್ಸಸ್ ಆಗಲ್ಲ ಅಂತ ನಾನು ಮೊದಲೇ ಹೇಳಿದ್ದೇ. ಈಗ ಅದು ಸಕ್ಸಸ್ ಆಗಲಿಲ್ಲ, ಬದಲಾಗಿ ಸರ್ಕಸ್ ಆಯ್ತು. ಈ ಸರ್ಕಾರ ಕೆಲವು ದಿನಗಳಲ್ಲ, ಕೆಲವು ಗಂಟೆಗಳೂ ಉಳಿಯುವುದಿಲ್ಲ. ಹೀಗಾಗಿ ಸಿಎಂ ಮುಂದೆ ಇರುವ ಏಕೈಕ ರಾಜಮಾರ್ಗ ಎಂದರೆ, ಇನ್ನಷ್ಟು ಅಪಮಾನಗಳನ್ನು ಅನುಭವಿಸುವ ಮುನ್ನ ರಾಜೀನಾಮೆ ಕೊಟ್ಟು ಮರ್ಯಾದೆಯನ್ನು ಉಳಿಸಿಕೊಳ್ಳುವುದು"  ಎಂದು ಸಲಹೆ ನೀಡಿದ್ದಾರೆ.

ಪ್ರಸ್ತುತ ರಾಜಕೀಯ ಪರಿಸ್ಥಿತಿ ಕುರಿತು ಮಾತನಾಡಿದ ಅವರು, "ರಾಜ್ಯ ರಾಜಕಾರಣದಲ್ಲಿ ಮಗುವನ್ನು ಚಿಗುಟುತ್ತಿರುವವರು ಯಾರು? ತೊಟ್ಟಿಲು ತೂಗುತ್ತಿರುವವರು ಯಾರು? ಎಂಬುದು ರಾಜಕೀಯ ತಜ್ಱರಿಗೆ ಅರ್ಥವಾಗುತ್ತಿದೆ. ಅಲ್ಲದೆ, ಮುಂದಿನ ಬಿಜೆಪಿ ನಡೆಯನ್ನು ಶಾಸಕಾಂಗ ಸಭೆಯಲ್ಲಿ ಪಕ್ಷದ ಅಧ್ಯಕ್ಷರ ಜೊತೆಗೆ ಚರ್ಚಿಸಿ ತೀರ್ಮಾನಿಸಲಾಗುವುದು" ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕುಮಾರಸ್ವಾಮಿ ನಾಳೆಯೇ ವಿಶ್ವಾಸಮತ ಯಾಚಿಸಲಿ, ಇಲ್ಲದಿದ್ದರೆ ರಾಜೀನಾಮೆ ನೀಡಲಿ; ಬಿ.ಎಸ್. ಯಡಿಯೂರಪ್ಪ

First published:July 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ