• Home
  • »
  • News
  • »
  • state
  • »
  • Bengaluru: ವ್ಯಾಪಾರ ಕೇಂದ್ರಗಳಾಗಿ ಬದಲಾದ ವಸತಿ ಪ್ರದೇಶಗಳು; ಬಿಬಿಎಂಪಿ ವಿರುದ್ಧ ಸ್ಥಳೀಯರ ಆಕ್ರೋಶ

Bengaluru: ವ್ಯಾಪಾರ ಕೇಂದ್ರಗಳಾಗಿ ಬದಲಾದ ವಸತಿ ಪ್ರದೇಶಗಳು; ಬಿಬಿಎಂಪಿ ವಿರುದ್ಧ ಸ್ಥಳೀಯರ ಆಕ್ರೋಶ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

"ನಾನು ಈಗಾಗಲೇ ಹೂವಿನ ವ್ಯಾಪಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಅವರು ತಮ್ಮ ಸ್ಟಾಕ್ ಕ್ಲಿಯರ್ ಮಾಡಿಕೊಳ್ಳಲು ಸ್ವಲ್ಪ ಸಮಯ ಕೇಳಿದ್ದಾರೆ. ಈ ನಡುವೆ ನಾನು ಬಿಬಿಎಂಪಿಗೆ ಕಾನೂನುಬದ್ಧವಾಗಿ ತಗೆದುಕೊಳ್ಳಬೇಕಾದ ಕ್ರಮವನ್ನು ತೆಗೆದುಕೊಳ್ಳುವಂತೆ ಹೇಳಿದ್ದೇನೆ" ಎಂದಿದ್ದಾರೆ.

  • Share this:

ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ (Residency Area) ವಸತಿ ಪ್ರದೇಶಗಳಲ್ಲಿ ಇರುವ ಒಂದು ಕೋಣೆಯ, ಎರಡು ಕೋಣೆಯ ಮನೆಗಳು (1 BHK, 2 BHK House) ಕುಟುಂಬಗಳ ವಾಸಕ್ಕೆಂದೇ ಮೀಸಲಾಗಿರುತ್ತವೆ. ಆದರೆ, ಈ ರೀತಿಯ ಮನೆಗಳೇ ವ್ಯಾಪಾರ ಕೇಂದ್ರಗಳಾಗಿ (Commercial Centre) ಪರಿವರ್ತನೆಯಾದರೆ? ಹೌದು, ಇಂತಹ ಒಂದು ನೋಟ ನಿಮಗೆ ಕಾಣಸಿಗುವುದು ಬೆಂಗಳೂರಿನ ವಿಲ್ಸನ್ ಗಾರ್ಡನ್ ಬಡಾವಣೆಯ ಕೆಲ ಪ್ರದೇಶಗಳಲ್ಲಿ ಅಂದರೆ ತಪ್ಪಾಗದು. ಸುಮಾರು 150 ಮನೆಗಳ ಮಾಲೀಕರು ತಮ್ಮ ವಸತಿಯೋಗ್ಯ ಮನೆಗಳನ್ನು ಹೂವಿನ ವ್ಯಾಪಾರ ಅಂಗಡಿಗಳಿಗೆ, ಕೇಂದ್ರಗಳಿಗೆ ಬಾಡಿಗೆ ಹಾಗೂ ಭೋಗ್ಯಕ್ಕೆ (Rent) ನೀಡಿದ್ದಾರೆ ಎನ್ನಲಾಗಿದೆ.


ಇದು ವಲಯ ನಿಯಮಾವಳಿಗಳ ಉಲ್ಲಂಘನೆಯಾಗಿರುವುದನ್ನು ಎತ್ತಿ ತೋರಿಸುತ್ತದೆ ಎಂತಲೂ ಹೇಳಬಹುದಾಗಿದೆ.


ಸಂಬಂಧಿಸಿದ ಪ್ರಾಧಿಕಾರಗಳ ಅನುಮತಿಯೊಂದಿಗೆ ಮನೆಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವುದು ಸಾಮಾನ್ಯ ವಿಷಯವೇನೋ ಸರಿ. ಆದರೆ, ದಕ್ಷಿಣ ಬೆಂಗಳೂರಿನ ವಿಲ್ಸನ್ ಗಾರ್ಡನ್ ಬಡಾವಣೆಯಲ್ಲಿ (ಒಂದರಿಂದ ಹದಿನೈದನೇ ಕ್ರಾಸ್ ವರೆಗೂ) ಕಾಣಸಿಗುವ ವಸತಿಯೋಗ್ಯ ಮನೆಗಳಲ್ಲಿ ವ್ಹೋಲ್ ಸೇಲ್ ಹೂವಿನ ವ್ಯಾಪಾರಿಗಳು ವ್ಯವಹಾರ ನಡೆಸುತ್ತಿರುವುದನ್ನು ಕಾಣಬಹುದು.


ಇಲ್ಲಿ ಬಾಡಿಗೆ, ವಿದ್ಯುತ್ ಶುಲ್ಕ ಅಗ್ಗ


ವಿಶೇಷವೆಂದರೆ ಹಲವರು ತಮ್ಮ ನೆಲ ಮಹಡಿಯ ಮನೆಯನ್ನು ಹೂವಿನ ವ್ಯಾಪಾರಕ್ಕೆ ಬಾಡಿಗೆ ನೀಡಿದ್ದರೆ ಮೊದಲ ಹಾಗೂ ಎರಡನೇ ಮಹಡಿಯ ಮನೆಗಳನ್ನು ಕುಟುಂಬಗಳ ವಾಸಕ್ಕೆ ಬಾಡಿಗೆ ನೀಡಿದ್ದಾರೆ.


ಇಲ್ಲಿ ಗಮನಿಸಬೇಕಾದ ಒಂದು ವಿಷಯವೆಂದರೆ ವಸತಿ ಪ್ರದೇಶಗಳಲ್ಲಿ ನೀರು ಹಾಗೂ ವಿದ್ಯುತ್ ಶುಲ್ಕಗಳು ವಾಣಿಜ್ಯ ಪ್ರದೇಶಗಳಿಗೆ ಹೋಲಿಸಿದರೆ ಬಲು ಅಗ್ಗವಾಗಿರುತ್ತವೆ. ಹಾಗಾಗಿ ವಸತಿ ಗೃಹಗಳ ತೆರಿಗೆಗಳಲ್ಲಿ ಇಲ್ಲಿ ವಾಣಿಜ್ಯ ವ್ಯವಹಾರಗಳು ನಡೆಯುತ್ತಿರುವುದು ಸಾಮಾನ್ಯವಾಗಿದೆ.


ಬಿಬಿಎಂಪಿ ನಿರ್ಲಕ್ಷ್ಯ


ಈ ನಡುವೆ ವಿಲ್ಸನ್ ಗಾರ್ಡನ್ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ವಸತಿ ಪ್ರದೇಶಗಳಲ್ಲಿ ನಡೆಯುತ್ತಿರುವ ವಾಣಿಜ್ಯ ಚಟುವಟಿಕೆಗಳನ್ನು ವಿರೋಧಿಸಿ ಹೈಕೋರ್ಟ್ ಮೆಟ್ಟಿಲನ್ನು ಏರಿದ್ದರೂ ಸಹ ಅವರು ಹೇಳುವಂತೆ ನ್ಯಾಯಾಲಯದ ನಿರ್ದೇಶನಗಳಿದ್ದರೂ ಬಿಬಿಎಂಪಿ ಈ ರೀತಿಯ ವ್ಯವಹಾರಗಳನ್ನು ಕೊನೆಗಾಣಿಸಲು ಯಾವುದೇ ಗಮನಾರ್ಹ ಪ್ರಯತ್ನ ಮಾಡಿಲ್ಲ.


ವಿಲ್ಸನ್ ಗಾರ್ಡನ್ ನಾಗರಿಕರ ಸಂಘವು ಈ ಸಂಬಂಧ ಈ ರೀತಿ ಹೇಳುತ್ತದೆ, "ನಾವು ವ್ಯಾಪಾರಿಗಳ ವಿರುದ್ಧವೇನೂ ಇಲ್ಲ, ಆದರೆ ಇದು ವಸತಿ ಪ್ರದೇಶವಾಗಿದೆ, ಒಂದೊಮ್ಮೆ ವ್ಯಾಪಾರಿಗಳು ತಮ್ಮ ವ್ಯಾಪಾರ ಚಟುವಟಿಕೆ ಪ್ರಾರಂಭಿಸಿದ ಮೇಲೆ ಇಲ್ಲಿ ಸಾಕಷ್ಟು ಸದ್ದು ಹಾಗೂ ಗೋಜಲುಗಳ ವಾತಾವರಣ ನಿರ್ಮಾಣವಾಗುತ್ತದೆ ಎಂದು ಬೇಸರ ಹೊರ ಹಾಕಿದ್ದಾರೆ.


ಅಂಗಡಿಗಳಿಂದ ಜನ ವಸತಿ ಪ್ರದೇಶದಲ್ಲಿ ಟ್ರಾಫಿಕ್ 


ಈ ಸಂದರ್ಭದಲ್ಲಿ ಸಂಘವು ತನ್ನ ಅಸಮಾಧಾನ ವ್ಯಕ್ತಪಡಿಸುತ್ತ, ಇದು 40 ಅಡಿಗಳಷ್ಟು ಅಗಲವಾದ ರಸ್ತೆಯಾಗಿದ್ದು ಹೂವುಗಳನ್ನು ಲೋಡ್ ಹಾಗೂ ಅನ್ಲೋಡ್ ರಸ್ತೆಯ ಮಧ್ಯದಲ್ಲಿಯೇ ಮಾಡಲಾಗುತ್ತದೆ. ಅಲ್ಲದೆ ಇಲ್ಲಿ ಟ್ರಾಫಿಕ್ ದಟ್ಟಣೆಯು ಇರುವುದರಿಂದ ಹೋಗು ಬರುವವರಿಗೆ ಸಾಕಷ್ಟು ಕಿರಿಕಿರಿ ಉಂಟಾಗುತ್ತದೆ ಎಂದಿದೆ.


ಇನ್ನು ಇಲ್ಲಾಗುವ ಜನ ದಟ್ಟಣೆ, ತ್ಯಾಜ್ಯ ಸಂಗ್ರಹಣೆ ಹಾಗೂ ಪಾದಚಾರಿ ಮಾರ್ಗಗಳಲ್ಲೂ ಸ್ಥಳ ಆವರಿಸುವ ವ್ಯಾಪಾರಿಗಳಿಂದ ಇಲ್ಲಿನ ಜನರು ಪರದಾಡುವಂತಾಗಿದೆ ಎಂದು ವಸತಿ ಪ್ರದೇಶದ ನಾಗರಿಕರೊಬ್ಬರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಾರೆ.


ಇದನ್ನೂ ಓದಿ:  Udupi: ಹೆಸರು ಬದಲಾವಣೆ ಪರ್ವ ಶುರು; ಈ 6 ಸರ್ಕಲ್​ಗಳಿಗೆ ಮರು ನಾಮಕರಣ


ಶಾಸಕ ಉದಯ್ ಗರುಡಾಚಾರ್ ಹೇಳಿದ್ದೇನು?


ಈ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸುತ್ತ ಸ್ಥಳೀಯ ಶಾಸಕರಾದ ಉದಯ್ ಗರುಡಾಚಾರ್ ಅವರು, ನಾವು ಈಗಾಗಲೇ ಪರವಾನಗಿ ಇಲ್ಲದ ಹೂವಿನ ವ್ಯಾಪಾರಿಗಳಿಗೆ ಈ ಪ್ರದೇಶವನ್ನು ತೆರವುಗೊಳಿಸುವಂತೆ ಹೇಳಿರುವುದಾಗಿ ಎಂದು ತಿಳಿಸಿದರು.


"ನಾನು ಈಗಾಗಲೇ ಹೂವಿನ ವ್ಯಾಪಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಅವರು ತಮ್ಮ ಸ್ಟಾಕ್ ಕ್ಲಿಯರ್ ಮಾಡಿಕೊಳ್ಳಲು ಸ್ವಲ್ಪ ಸಮಯ ಕೇಳಿದ್ದಾರೆ. ಈ ನಡುವೆ ನಾನು ಬಿಬಿಎಂಪಿಗೆ ಕಾನೂನುಬದ್ಧವಾಗಿ ತಗೆದುಕೊಳ್ಳಬೇಕಾದ ಕ್ರಮವನ್ನು ತೆಗೆದುಕೊಳ್ಳುವಂತೆ ಹೇಳಿದ್ದೇನೆ" ಎಂದಿದ್ದಾರೆ.


ಪ್ರತಿಕ್ರಿಯೆ ನೀಡದ ಹೂವಿನ ವ್ಯಾಪಾರಸ್ಥರು


ಇನ್ನು, ಬಿಬಿಎಂಪಿಯನ್ನು ಈ ಬಗ್ಗೆ ಕೇಳಿದಾಗ ಅಧಿಕಾರಿಯೊಬ್ಬರು ಈ ಸಂಬಂಧ ಸಿವಿಕ್ ಬಾಡಿಯು ತನ್ನ ವರದಿಯನ್ನು ಹೈಕೋರ್ಟಿಗೆ ಸಲ್ಲಿಸಲಿದೆ ಹಾಗೂ ಅದರ ವಿಚಾರಣೆಯು ನವೆಂಬರ್ 9 ರಂದು ನಡೆಯುವುದಾಗಿ ತಿಳಿಸಿದ್ದಾರೆ.


ಇದನ್ನೂ ಓದಿ:  Mangaluru Blast: ಐಸಿಸ್​ ಸೇರಲು ಶಾರೀಕ್​​ ಯತ್ನ? ಬೆಂಗಳೂರಿನ ಅತ್ತೆ ಮನೆಯಲ್ಲಿ ವಾಸವಾಗಿದ್ನಾ ಉಗ್ರ?


ಇದಕ್ಕೆ ಸಂಬಂಧಿಸಿದಂತೆ ಹೂ ಮಾರಾಟಗಾರರ ಅಸೋಸಿಯೇಷನ್ ಅನ್ನು ಸಂಪರ್ಕಿಸಿದಾಗ ಅದು ವಿಚಾರಣೆ ಮುಗಿಯುವವರೆಗೂ ಯಾವ ಹೇಳಿಕೆಯನ್ನೂ ನೀಡದು ಎಂದು ಸ್ಪಷ್ಟಪಡಿಸಿದೆ.


ಒಟ್ಟಾರೆಯಾಗಿ ಇಂದು ಈ ಸಂಬಂಧ ವಿಚಾರಣೆ ನಡೆಯಲಿದ್ದು ಕೋರ್ಟ್ ಏನು ನಿರ್ದೇಶಿಸುತ್ತದೆ ಎಂಬುದರ ಮೇಲೆ ಹೂ ಮಾರಾಟಗಾರರ ಹಾಗೂ ವಿಲ್ಸನ್ ಗಾರ್ಡನ್ ಜನರ ಕಣ್ಣು ನೆಟ್ಟು ನಿಂತಿದೆ.

Published by:Mahmadrafik K
First published: