• Home
  • »
  • News
  • »
  • state
  • »
  • ಸಚಿವ ಸಂಪುಟ ಪುನಾರಚಿಸಿ, 6 ಬಾರಿ ಶಾಸಕನಾಗಿರುವ ನನಗೆ ಅವಕಾಶ ನೀಡಿ; ಚಿತ್ರದುರ್ಗ ಎಂಎಲ್​ಎ ತಿಪ್ಪಾರೆಡ್ಡಿ

ಸಚಿವ ಸಂಪುಟ ಪುನಾರಚಿಸಿ, 6 ಬಾರಿ ಶಾಸಕನಾಗಿರುವ ನನಗೆ ಅವಕಾಶ ನೀಡಿ; ಚಿತ್ರದುರ್ಗ ಎಂಎಲ್​ಎ ತಿಪ್ಪಾರೆಡ್ಡಿ

ಜಿ.ಹೆಚ್. ತಿಪ್ಪಾರೆಡ್ಡಿ

ಜಿ.ಹೆಚ್. ತಿಪ್ಪಾರೆಡ್ಡಿ

ಸಿಡಿ ಮೂಲಕ ಸಿಎಂಗೆ ಬ್ಲಾಕ್ ಮೇಲ್ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ತಿಪ್ಪಾರೆಡ್ಡಿ, ಅಯ್ಯೋ.. ಆ ಸಿಡಿ ಏನು ಅನ್ನೋದೆ ನನಗೆ ಗೊತ್ತಿಲ್ಲ. ಸಿಡಿಯನ್ನು ಹೇಗೆ ಪ್ಲೇ ಮಾಡಬೇಕು ಅನ್ನೋದೆ ತಿಳಿದಿಲ್ಲ. ನಾವು ಚಿತ್ರದುರ್ಗದವರು, ಸಿಡಿ ಬಗ್ಗೆಯಲ್ಲಾ ಗೊತ್ತಿಲ್ಲ. ಯಾರು ಬ್ಲಾಕ್ ಮೇಲ್ ಮಾಡಿ ಸಚಿವ ಸ್ಥಾನ ಪಡೆದಿದ್ದಾರೆ ಎಂಬ ಮಾಹಿತಿ ಇಲ್ಲ. ನನಗಂತೂ ಸಿಡಿ ಬ್ಲಾಕ್ ಮೇಲ್ ಮಾಡಿ ಸಚಿವ ಸ್ಥಾನ‌ ಪಡೆಯುವ ಸನ್ನಿವೇಶ ಬಂದಿಲ್ಲ ಎಂದು ಹೇಳಿದರು.

ಮುಂದೆ ಓದಿ ...
  • Share this:

    ಬೆಂಗಳೂರು; ಸಂಪುಟ ವಿಸ್ತರಣೆಯಲ್ಲಿ ಅವಕಾಶ ಸಿಗದ ಹಿನ್ನಲೆಯಲ್ಲಿ ಅಸಮಾಧಾನಗೊಂಡಿರುವ ಬಿಜೆಪಿ ಶಾಸಕರ ಪಟ್ಟಿ ದಿನೇದಿನೆ ಬೆಳೆಯುತ್ತಿದೆ. ಅದರಲ್ಲಿ ಈಗ ಬಿಜೆಪಿ ಹಿರಿಯ ಶಾಸಕ ತಿಪ್ಪಾರೆಡ್ಡಿ ಸೇರಿಕೊಂಡಿದ್ದಾರೆ. ಈ ಸಂಬಂಧ ಇಂದು ಬಹಿರಂಗವಾಗಿ ಅವರು ಸಿಎಂ ಬಿಎಸ್​ವೈ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.  ಸಂಪುಟ ಪುನಾರಚನೆ ಮಾಡುವುದು ಒಳ್ಳೆಯದು. ಹಳಬರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕು. ಆಗ ಮುಂದೆ 150 ಸೀಟು ಬರೋಕೆ ಸಾಧ್ಯ. ಈಗಾಗಲೇ ಸಚಿವರಾದವರು ಪದೇ ಪದೇ ಸಚಿವರಾಗಿದ್ದಾರೆ.  ಅಂತಹವರನ್ನು ಬಿಟ್ಟು ಹೊಸಬರಿಗೆ ಅವಕಾಶ ಕೊಡಲಿ. ಆಗ ಸರ್ಕಾರವೂ ಉತ್ತಮವಾಗಿ ನಡೆಯುತ್ತೆ ಎಂದು ಹೇಳುವ ಮೂಲಕ ಸಂಪುಟ ಪುನಾರಚನೆಗೆ ಶಾಸಕ ತಿಪ್ಪಾರೆಡ್ಡಿ ಆಗ್ರಹಿಸಿದ್ದಾರೆ.


    ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತಿಪ್ಪಾರೆಡ್ಡಿ, ಈಗ ಸಂಪುಟ ವಿಸ್ತರಣೆ ಆಗಿಹೋಗಿದೆ. ನಾನು 61ರಲ್ಲೇ ರಾಜಕೀಯಕ್ಕೆ ಬಂದವನು. ಆರು ಬಾರಿ ಶಾಸಕನಾದವನು. ನಾನು ಸಿಎಂ, ವರಿಷ್ಠರಿಗೆ ಅವಕಾಶ ಕೇಳಿದ್ದೆ. ನಾನು ಅನುಭವಿ ಆಗಿರುವುದರಿಂದ ಇದೆಲ್ಲಾ ಸಹಜ. ಆದರೆ ನನಗೆ ಅವಕಾಶ ಸಿಗಲಿಲ್ಲ ಎಂದು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ತಿಪ್ಪಾರೆಡ್ಡಿ ಹೇಳಿಕೆ ನೀಡಿದ್ದಾರೆ.


    ನಾನು ಕೇಳೋದು ಇಷ್ಟೇ. ಚಿತ್ರದುರ್ಗ ಹಿಂದುಳಿದ ಜಿಲ್ಲೆ. ಆಗ 20/20 ಸರ್ಕಾರ ಬಂತು, 2008ರಲ್ಲಿ ಬಂತು. ಆದರು ನಮ್ಮ ಜಿಲ್ಲೆಗೆ ಉಸ್ತುವಾರಿ ಬೇರೆ ಜಿಲ್ಲೆಯವರೇ ಇದ್ದಾರೆ.  ಇದರಿಂದ ನಮ್ಮ ಜಿಲ್ಲೆ ಬೆಳವಣಿಗೆ ಕುಂಠಿತವಾಗಿದೆ. ಹೊರಗಿನಿಂದ ಬಂದವರು ಸರ್ಕಾರಿ ಕಾರ್ಯಕ್ರಮ ಅಷ್ಟೇ ಅಟೆಂಡ್ ಮಾಡ್ತಾರೆ. ಬೇರೆ ಕಾರ್ಯಕ್ರಮದಲ್ಲಿ ಮುತುವರ್ಜಿ ವಹಿಸ್ತಿಲ್ಲ. ಅವರಿಗೆ ಬಳ್ಳಾರಿ ಬಗ್ಗೆ ಆಸಕ್ತಿಯಿದೆ. ಅವರು ನಮ್ಮ ಉತ್ತಮ ಸ್ನೇಹಿತರೇ. ಆದರೆ ಅವರು ಬಳ್ಳಾರಿ ಕಡೆ ಆಸಕ್ತಿ ಹೊಂದಿದ್ದಾರೆ ಎಂದು ಉಸ್ತುವಾರಿ ಸಚಿವ ಶ್ರೀರಾಮುಲು ವಿರುದ್ಧ ತಿಪ್ಪಾರೆಡ್ಡಿ ಅಸಮಾಧಾನ ಹೊರಹಾಕಿದರು.


    ರೇಣುಕಾಚಾರ್ಯ ಪ್ರತ್ಯೇಕ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿದ ತಿಪ್ಪಾರೆಡ್ಡಿ ಅವರಿ, ಮಾಜಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಬಂದಿದ್ದರು. ಕೋರ್ ಕಮಿಟಿಯಲ್ಲಿ ಭೇಟಿ ಮಾಡಿ ಮಾತನಾಡಿದ್ದಾರೆ. ಯಾವುದೇ ಹೇಳಿಕೆ ಕೊಡದಂತೆ ಸೂಚನೆ ಕೊಟ್ಟಿದ್ದಾರೆ. ಹಾಗಾಗಿ ನಾವು ಏನೂ ಮಾತನಾಡುವಂತಿಲ್ಲ. ಪಕ್ಷದ ಆದೇಶ ಮೀರಿ ಕೆಲಸ ಮಾಡುವವನಲ್ಲ ಎಂದು ಹೇಳಿದರು.


    ಇದನ್ನು ಓದಿ: ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಗಾದಿಗೆ ಇದೇ ಮೀಸಲಾಗಿ ನಿಗದಿ ಮಾಡುವಂತೆ ಶಾಸಕ ಶ್ರೀನಿವಾಸಗೌಡ ಕೋರಿಕೆಯ ಪತ್ರ ವೈರಲ್


    ರಾಜ್ಯದಲ್ಲಿ ಮೂರು ಬಾರಿ ಬಿಜೆಪಿ ಸರ್ಕಾರ ಬಂದಿದೆ. ಆದರೆ, ಪ್ರತಿ ಬಾರಿಯೂ ಸಚಿವರು ಆಗೋರೆ ಆಗುತ್ತಿದ್ದಾರೆ. ಖಾತೆ ನಿಭಾಯಿಸುವ ಶಕ್ತಿ ಇರುವಂತಹವರಿಗೆ ಅವಕಾಶ ಕೊಡುತ್ತಿಲ್ಲ. ಮತ್ತೆ ಸಂಪುಟ ಪುನಾರಚನೆ ಮಾಡಿದಾಗ ಅವಕಾಶ ಕಲ್ಪಿಸಬೇಕು. ಹಾಗೆ ಮಾಡಿದ್ದೇ ಆದಲ್ಲಿ 2023ರಲ್ಲಿ ಪಕ್ಷ, ಸರ್ಕಾರಕ್ಕೆ ಹೆಚ್ಚಿನ ವರ್ಚಸ್ಸು ಬರಲಿದೆ. ಈ ಮೂಲಕ 150 ಕ್ಷೇತ್ರಗಳನ್ನು ಗೆಲ್ಲಲು ಅನುಕೂಲವಾಗಲಿದೆ ಎಂದರು.


    ಸಿಡಿ ಮೂಲಕ ಸಿಎಂಗೆ ಬ್ಲಾಕ್ ಮೇಲ್ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ತಿಪ್ಪಾರೆಡ್ಡಿ, ಅಯ್ಯೋ.. ಆ ಸಿಡಿ ಏನು ಅನ್ನೋದೆ ನನಗೆ ಗೊತ್ತಿಲ್ಲ. ಸಿಡಿಯನ್ನು ಹೇಗೆ ಪ್ಲೇ ಮಾಡಬೇಕು ಅನ್ನೋದೆ ತಿಳಿದಿಲ್ಲ. ನಾವು ಚಿತ್ರದುರ್ಗದವರು, ಸಿಡಿ ಬಗ್ಗೆಯಲ್ಲಾ ಗೊತ್ತಿಲ್ಲ. ಯಾರು ಬ್ಲಾಕ್ ಮೇಲ್ ಮಾಡಿ ಸಚಿವ ಸ್ಥಾನ ಪಡೆದಿದ್ದಾರೆ ಎಂಬ ಮಾಹಿತಿ ಇಲ್ಲ. ನನಗಂತೂ ಸಿಡಿ ಬ್ಲಾಕ್ ಮೇಲ್ ಮಾಡಿ ಸಚಿವ ಸ್ಥಾನ‌ ಪಡೆಯುವ ಸನ್ನಿವೇಶ ಬಂದಿಲ್ಲ ಎಂದು ಹೇಳಿದರು.

    Published by:HR Ramesh
    First published: