HOME » NEWS » State » RESERVED 8772 CRORE RUPEES FOR BENGALURU DEVELOPMENT IN KARNATAKA BUDGET 2020 HIGHLIGHTS LATEST NEWS UPDATES MAK

Karnataka Budget Updates: ಬೆಂಗಳೂರು ನಗರ ಅಭಿವೃದ್ಧಿಗೆ 8,772 ಕೋಟಿ, ಮೂಲಭೂತ ಸೌಲಭ್ಯಗಳ ಅಬಿವೃದ್ಧಿಗೆ ಒತ್ತು

Karnataka Budget Highlights : ಈ ಒಂದು ವರ್ಷದ ಬೆಂಗಳೂರು ನಗರಾಭಿವೃದ್ದಿಗೆ ರಾಜ್ಯ ಸರ್ಕಾರ ಬಜೆಟ್​ನಲ್ಲಿ ಒಟ್ಟಾರೆ 8,772 ಕೋಟಿ ಹಣವನ್ನು ಅನುದಾನವಾಗಿ ನೀಡಿದೆ ಹಾಗೂ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ ಅನುಷ್ಠಾನಕ್ಕೂ ಮನಸ್ಸು ಮಾಡಿರುವುದು ವಿಶೇಷ.

MAshok Kumar | news18-kannada
Updated:March 5, 2020, 12:52 PM IST
Karnataka Budget Updates: ಬೆಂಗಳೂರು ನಗರ ಅಭಿವೃದ್ಧಿಗೆ 8,772 ಕೋಟಿ, ಮೂಲಭೂತ ಸೌಲಭ್ಯಗಳ ಅಬಿವೃದ್ಧಿಗೆ ಒತ್ತು
ಬಿ.ಎಸ್.​ ಯಡಿಯೂರಪ್ಪ
  • Share this:
ಬೆಂಗಳೂರು (ಮಾರ್ಚ್ 05); ರಾಜ್ಯ ರಾಜಧಾನಿ ಬೆಂಗಳೂರಿನ ಸರ್ವತೋಮುಖ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ 2020-21 ರಾಜ್ಯ ಬಜೆಟ್​ನಲ್ಲಿ ಸುಮಾರು 8,772 ಕೋಟಿ ಹಣವನ್ನು ಮೀಸಲಿಡಲಾಗಿದೆ. ಅಲ್ಲದೆ, ನಗರದ ಸಮಗ್ರ ಅಭಿವೃದ್ಧಿಗೆ “ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ” ಅನುಷ್ಠಾನಕ್ಕೆ ತರಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ರಾಜ್ಯ ವಿಧಾನ ಮಂಡಲ ಅಧಿವೇಶನದಲ್ಲಿ ಇಂದು ಬಜೆಟ್ ಮಂಡಿಸಿ ಬೆಂಗಳೂರು ಅಭಿವೃದ್ದಿ ಕುರಿತ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯನ್ನು ವಿವರಿಸಿದ ಅವರು, ”ಮಹಾನಗರ ಬೆಂಗಳೂರು ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಬದ್ಧವಾಗಿದೆ. ನಗರದ ಮೂಲಭೂತ ಸೌಲಭ್ಯವನ್ನು ಹೆಚ್ಚಿಸಲು ಈ ಬಾರಿಯ ಬಜೆಟ್​ನಲ್ಲಿ ಹೆಚ್ಚಿನ ಗಮನ ನೀಡಲಾಗಿದೆ. ಪ್ರತಿ ಮನೆ ಮನೆಗೂ ಕುಡಿಯುವ ನೀರನ್ನು ತಲುಪಿಸುವುದು ನಮ್ಮ ಸರ್ಕಾರದ ಗುರಿ.

ಅಲ್ಪ ಸಂಖ್ಯಾತರು ಹೆಚ್ಚಾಗಿ ವಾಸವಿರುವ ಕೊಳಗೇರಿ ಪ್ರದೇಶಗಳ ಅಭಿವೃದ್ಧಿಗೆ 200 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗುವುದು. ಇದಲ್ಲದೆ, ನಗರದಲ್ಲಿ ದಿನೇ ದಿನೇ ಅಧಿಕವಾಗುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸಬ್ ಅರ್ಬನ್ ರೈಲು ಮಾರ್ಗವನ್ನು ರಾಜ್ಯಕ್ಕೆ ತರಲು ಕೇಂದ್ರ ಸರ್ಕಾರದ ಜೊತೆಗೆ ಮಾತುಕತೆ ನಡೆಸಲಾಗುತ್ತಿದೆ. ಮತ್ತು ವೈಟ್ ಫಿಲ್ಡ್​ನಲ್ಲಿ ಸಂಚಾರ ಉಪ ವಿಭಾಗವನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಒಟ್ಟಾರೆ ಈ ಒಂದು ವರ್ಷದ ಬೆಂಗಳೂರು ನಗರಾಭಿವೃದ್ದಿಗೆ ರಾಜ್ಯ ಸರ್ಕಾರ ಬಜೆಟ್​ನಲ್ಲಿ ಒಟ್ಟಾರೆ 8,772 ಕೋಟಿ ಹಣವನ್ನು ಅನುದಾನವಾಗಿ ನೀಡಿದೆ ಹಾಗೂ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ ಅನುಷ್ಠಾನಕ್ಕೂ ಮನಸ್ಸು ಮಾಡಿರುವುದು ವಿಶೇಷ.

ಇದನ್ನೂ ಓದಿ : Karnataka Budget Updates: ಮಾತು ತಪ್ಪಿದ ಸಿಎಂ ಯಡಿಯೂರಪ್ಪ, ರೈತರ ಬೆಳೆ ಸಾಲಮನ್ನಾ ಮಾಡದ ಸರ್ಕಾರ
Youtube Video
First published: March 5, 2020, 12:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories