• Home
  • »
  • News
  • »
  • state
  • »
  • Reservation: ಮುಸ್ಲಿಮರ ಮೀಸಲಾತಿ ತೆಗೆಯುವ ಚರ್ಚೆ ಅಂದ್ರು ಬೆಲ್ಲದ್, ಯತ್ನಾಳ್; ಇಬ್ಬರ ಹೇಳಿಕೆಗೆ ಸಿದ್ದರಾಮಯ್ಯ ಹೇಳಿದ್ದೇನು?

Reservation: ಮುಸ್ಲಿಮರ ಮೀಸಲಾತಿ ತೆಗೆಯುವ ಚರ್ಚೆ ಅಂದ್ರು ಬೆಲ್ಲದ್, ಯತ್ನಾಳ್; ಇಬ್ಬರ ಹೇಳಿಕೆಗೆ ಸಿದ್ದರಾಮಯ್ಯ ಹೇಳಿದ್ದೇನು?

ಮೀಸಲಾತಿ ರಾಜಕೀಯ

ಮೀಸಲಾತಿ ರಾಜಕೀಯ

ನಾವು ಕೂಡ ಪುನರ್ ಪರಿಶೀಲನೆ ಮಾಡುವಂತೆ  ಸಿಎಂ ಅವರಿಗೆ ಹೇಳಿದ್ದೇವೆ. ಎರಡು ಕಡೆ ಲಾಭ ಪಡೆಯುತ್ತಿರೋದನ್ನ ತೆಗೆದು ಉಳಿದ ಹಿಂದುಳಿದವರಿಗೆ ಮೀಸಲಾತಿ ಹೆಚ್ಚಿಸಬೇಕು ಎಂದು ಶಾಸಕ ಯತ್ನಾಳ್ ಆಗ್ರಹಿಸಿದರು.

  • Share this:

    ಮುಸ್ಲಿಮರ 2ಎ ಮೀಸಲಾತಿ (2A Reservation) ತೆಗೆಯುವ ಬಗ್ಗೆ‌ ಚರ್ಚೆ ನಡೆಯುತ್ತಿದೆ ಎಂದು ಬಿಜೆಪಿ ಶಾಸಕ ಅರವಿಂದ್​ ಬೆಲ್ಲದ್ (BJP MLA Aravind Bellad) ಹಾಗೂ  ಬಸನಗೌಡ ಪಾಟೀಲ್ ಯತ್ನಾಳ್ (BJP MLA Basanagowda Patil Yatnal) ಹೇಳಿಕೆ ನೀಡಿದ್ದಾರೆ. ಮುಸ್ಲಿಮರು ಅಲ್ಪಸಂಖ್ಯಾತ (Minority) ಹಾಗೂ 2ಎ ಎರಡೆರೆಡು ಮೀಸಲಾತಿ ಲಾಭ ಪಡೆಯುತ್ತಿದ್ದಾರೆ. ಆದ್ದರಿಂದ 2ಎ ಮೀಸಲಾತಿಯಿಂದ ತೆಗೆದು ಹಾಕಲು ತಯಾರಿ ನಡೆದಿದೆ ಎಂದು ಅರವಿಂದ್ ಬೆಲ್ಲದ್ ಹೇಳಿದ್ದಾರೆ. ಅಲ್ಪಸಂಖ್ಯಾತ ಮತ್ತು ಕೆಲ ಮುಸ್ಲಿಂ ಒಳಪಂಗಡಗಳು 2ಎ ಮೀಸಲಾತಿಯ ಲಾಭ ಸಹ ಪಡೆಯುತ್ತಿವೆ ಎಂದು ಬೆಲ್ಲದ್ ಹೇಳಿದರು. ಇತ್ತ ಬಸನಗೌಡ ಪಾಟೀಲ್ ಯತ್ನಾಳ್ ಸಹ ಬ್ರಾಹ್ಮಣರು ನಿಜವಾದ ಅಲ್ಪಸಂಖ್ಯಾತರು ಎಂದರು.


    ಮುಸ್ಲಿಮರಿಗೆ ನೀಡಲಾಗಿರುವ 2ಎ ಮೀಸಲಾತಿ ತೆಗೆಯುವ ಕುರಿತು  ಸರ್ಕಾರ ಮಟ್ಟದಲ್ಲಿ ಗಂಭೀರ ಚರ್ಚೆ ನಡೆಯುತ್ತಿವೆ. ನಾವು ಕೂಡ ಪುನರ್ ಪರಿಶೀಲನೆ ಮಾಡುವಂತೆ  ಸಿಎಂ ಅವರಿಗೆ ಹೇಳಿದ್ದೇವೆ. ಎರಡು ಕಡೆ ಲಾಭ ಪಡೆಯುತ್ತಿರೋದನ್ನ ತೆಗೆದು ಉಳಿದ ಹಿಂದುಳಿದವರಿಗೆ ಮೀಸಲಾತಿ ಹೆಚ್ಚಿಸಬೇಕು ಎಂದು ಶಾಸಕ ಯತ್ನಾಳ್ ಆಗ್ರಹಿಸಿದರು.


    ಎರಡು ಕಡೆ ಲಾಭ ಪಡೆಯುತ್ತಾರೆ


    ಈ ಸಂಬಂಧ ಸಿಎಂ ಜೊತೆಗೆ ಚರ್ಚೆಯಾಗಿದೆ,  ಪರಿವಾರದಿಂದಲು ಚರ್ಚೆ ಆಗಿದೆ. ಒಂದು ಸಮುದಾಯ ಎರಡು ಕಡೆಗಳಲ್ಲಿ ಲಾಭ ಪಡೆಯೋದನ್ನ ತಡೆಯಬೇಕು. ದೇಶ ವಿರೋಧಿ ಚಟುವಟಿಕೆ ಮಾಡ್ತಾರೆ, ಎರಡು ಕಡೆ ಲಾಭ ಪಡೆಯುತ್ತಾರೆ. ಅಂತವರ ಎಲ್ಲ ಮೀಸಲಾತಿ ಸೌಲಭ್ಯ ರದ್ದುಪಡಿಸಬೇಕು. ಆದಷ್ಟು ಬೇಗನೆ ಸರ್ಕಾರ ಕ್ರಮ ವಹಿಸಲಿದೆ ಎಂದು ಯತ್ನಾಳ್ ಮಾಹಿತಿ ನೀಡಿದರು.


    ಬ್ರಾಹ್ಮಣರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಸಿಗಬೇಕು. ಬ್ರಾಹ್ಮಣರು ಕೇವಲ ಶೇಕಡಾ 2 ರಿಂದ3 ರಷ್ಟಿದ್ದಾರೆ. ನಿಜವಾದ ಅಲ್ಪಸಂಖ್ಯಾತರು ಬ್ರಾಹ್ಮಣರು. ಅಲ್ಪಸಂಖ್ಯಾತ ಪಟ್ಟಿಯಲ್ಲಿ ಬ್ರಾಹ್ಮಣರನ್ನ ಸೇರಿಸಬೇಕು. ಇದು ನನ್ನ ವಾದ ಎಂದರು.


    ಬಹಳ ಸೌಲಭ್ಯ ಬೇಕಾದ್ರೆ ಪಾಕಿಸ್ತಾನಕ್ಕೆ ಹೋಗಲಿ


    ಒಂದು ಜನಾಂಗದಷ್ಟಿರುವ ಮುಸ್ಲಿಮರು ಹೇಗೆ ಅಲ್ಪಸಂಖ್ಯಾತರಾಗ್ತಾರೆ? ದೇಶದ್ರೋಹಿ ಕೆಲಸ ಮಾಡೋದು, ಪಾಕಿಸ್ತಾನದ ಪರ ಮಾತನಾಡೋದು ಈಗ ಮೀಸಲಾತಿ ಬೇಕು ಅಂದ್ರೆ ಹೇಗೆ? ಬಹಳ ಸೌಲಭ್ಯ ಬೇಕಿದ್ದರೆ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ ಎಂದು ಹೇಳಿದರು.


    ಇದನ್ನೂ ಓದಿ: SC-ST ಸಮುದಾಯವನ್ನು BJP ತಪ್ಪು ದಾರಿಗೆಳೆಯುತ್ತಿದೆ; ಮೀಸಲಾತಿ ಹೆಚ್ಚಳ ಬಗ್ಗೆ ಸ್ಪಷ್ಟನೆ ಕೇಳಿದ ಸಿದ್ದರಾಮಯ್ಯ!


    ಬಿಎಲ್ ಸಂತೋಷ್ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು


    ಮಹಾತ್ಮ ಗಾಂಧಿ ಒಬ್ಬರೆ ಅಲ್ಲ ಬಹಳಷ್ಟು ಜನ ಹೋರಾಟ ಮಾಡಿದ್ದಾರೆ ಎಂದಿದ್ದ ಬಿ.ಎಲ್​ ಸಂತೋಷ್ (BL Santosh)​ ಮಾತಿಗೆ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಕೊಪ್ಪಳದಲ್ಲಿ ತಿರುಗೇಟು ನೀಡಿದ್ರು. ಹಾಗಾದ್ರೆ ಸಂತೋಷ್​ ಹೋರಾಟ ಮಾಡಿದ್ದಾರಾ? ಎಂದು ಟಾಂಗ್​ ಕೊಟ್ಟಿದ್ದಾರೆ.

    ಮೀಸಲಾತಿ ತೆಗೆಯಲು ಸಾಧ್ಯವಿಲ್ಲ

    ಇನ್ನೂ ಭಾರತ್​ ಜೋಡೊ ಯಾತ್ರೆ ಆರೋಗ್ಯ ಸುಧಾರಣೆಗಾಗಿ ಮಾಡ್ತಿದ್ದಾರೆ ಎಂದಿದ್ದ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಅವರಿಗೆ ಟಾಂಟ್​ ಕೊಟ್ಟಿರುವ ಸಿದ್ದು, ಇಂದಿನಿಂದ ಶುರುವಾಗುವ ಬಿಜೆಪಿ ಯಾತ್ರೆಗೆ ಏನ್​ ಹೇಳಬೇಕು ಎಂದಿದ್ದಾರೆ. ಇನ್ನು ಅಲ್ಪಸಂಖ್ಯಾತರ ಮೀಸಲಾತಿ ತೆಗೆಯುವುದಕ್ಕೆ ಸಾಧ್ಯವಿಲ್ಲ ಎಂದು ಇದೇ ವೇಳೆ ತಿಳಿಸಿದ್ದಾರೆ.


    ಇದನ್ನೂ ಓದಿ:  Veer Savarkarಗೆ ಅಪಮಾನ ಮಾಡೋರು ರೌರವ ನರಕಕ್ಕೆ ಹೋಗ್ತಾರೆ: ಬಿ ಎಲ್ ಸಂತೋಷ್


    ಹೌದು ಹುಲಿಯಾ ಘೋಷಣೆ


    ಕೊಪ್ಪಳದಲ್ಲಿ ಸಿದ್ದರಾಮಯ್ಯ ಪರ ಮತ್ತೆ ಹೌದ ಹುಲಿಯಾ ಘೋಷಣೆ ಮೊಳಗಿದೆ. ಕೊಪ್ಪಳಕ್ಕೆ ಬಂದಾಗ ನಮ್ಮೂರಿಗೆ ಬಂದಂತಾಗುತ್ತದೆ. ಕೊಪ್ಪಳ ಜಿಲ್ಲೆಯ ಜನ ನನ್ನ ಮೇಲೆ ಪ್ರೀತಿ ತೋರಿದ್ದಾರೆ. 1991 ರಲ್ಲಿ ನಾನು ನಿಂತಾಗ ವೋಟು ಹಾಕಿದ್ದೀರಿ. ನಿಮ್ಮ ಋಣವಿದೆ. ಬಳ್ಳಾರಿ ಸಮಾವೇಶಕ್ಕೆ ಕೊಪ್ಪಳ ಜಿಲ್ಲೆಯಿಂದ 50 ಸಾವಿರ ಜನ ಪಾಲ್ಗೊಳ್ಳಬೇಕು ಎಂದರರು.

    Published by:Mahmadrafik K
    First published: