• Home
  • »
  • News
  • »
  • state
  • »
  • Bengaluru Hotels: 24 ಗಂಟೆ ಹೋಟೆಲ್ ತೆರೆಯಲು ಪೊಲೀಸರು ಕೊಡ್ತಿಲ್ಲ ಗ್ರೀನ್ ಸಿಗ್ನಲ್; ಅನುಮತಿಗಾಗಿ ಮಾಲೀಕರ ಮನವಿ

Bengaluru Hotels: 24 ಗಂಟೆ ಹೋಟೆಲ್ ತೆರೆಯಲು ಪೊಲೀಸರು ಕೊಡ್ತಿಲ್ಲ ಗ್ರೀನ್ ಸಿಗ್ನಲ್; ಅನುಮತಿಗಾಗಿ ಮಾಲೀಕರ ಮನವಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾತ್ರಿಯಾದ್ರೆ ಕಳ್ಳ ರೌಡಿಗಳ ಹಾವಳಿ ಶುರುವಾಗುತ್ತೆ. ಇಂತಹ ಸಮಯದಲ್ಲಿ ಹೋಟೆಲ್ ಗಳನ್ನ ನಡೆಸಬೇಕೆಂದ್ರೆ  ಪೊಲೀಸರಿಂದ ಸೂಕ್ತ ಭದ್ರತಾ ವ್ಯವಸ್ಥೆಬೇಕು ಎಂದು ಹೋಟೆಲ್ ಮಾಲೀಕರ ಸಂಘದಿಂದ  ಬೆಂಗಳೂರು ನಗರ ಪೊಲೀಸ್ ಆಯುಕ್ತರ ಭೇಟಿ ಮಾಡಿ ಮನವಿ ಸಹ  ಮಾಡಲಾಗಿದೆ.

  • Share this:

    ಕೊರೊನಾ (Corona) ಆರಂಭವಾಗಿದ್ದೆ ಆಗಿದ್ದು ಹೋಟೆಲ್ ಉದ್ಯಮ (Hotel Industry) ನೆಲಕಚ್ಚಿದೆ. ಎಲ್ಲವೂ ಸರಿ ಹೋಯ್ತು ಅನ್ನುವ ಹೊತ್ತಲ್ಲೇ ಮತ್ತೆ ನಾಲ್ಕನೇ ಅಲೆ ಅಪ್ಪಳಿಸಲು ಸಿದ್ಧವಾಗಿದೆ. ಈ ನಡುವೆ ಹೋಟೆಲ್ ಉದ್ಯಮಕ್ಕೆ 24 ಗಂಟೆಯೂ ತೆರೆದಿರಲು ಅವಕಾಶ ಕಲ್ಪಿಸಿ ಆದೇಶ (Order) ಹೊರಡಿಸಿತ್ತು. ಆದರೆ ಈಗ ಬೆಂಗಳೂರು ಹೋಟೆಲ್  ಮಾಲೀಕರು (Owner) ಹೋಟೆಲ್ ತೆರೆಯಲು ಪೊಲೀಸ್ ಇಲಾಖೆಯ  (Police Department) ಮೊರೆ ಹೋದ್ರು ಪ್ರಯೋಜನವಾಗ್ತಿಲ್ಲ.


    ಹೋಟೆಲ್​ ತೆರೆದರೆ ರಾತ್ರಿ ಪಾಳಿ ಜನರಿಗೆ ಅನುಕೂಲ


    ಬೆಂಗಳೂರು ಹೇಳಿ ಕೇಳಿ ರಾಜ್ಯ ರಾಜಧಾನಿ ಹಾಗೂ ವಿಶ್ವದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ನಗರ, ಇಂತಹ ನಗರಕ್ಕೆ ನಿತ್ಯ ಲಕ್ಷಾಂತರ ಜನರು ಬಂದು ಹೋಗ್ತಾನೇ ಇರ್ತಾರೆ. ಅದರಲ್ಲೂ ಹಗಲು ರಾತ್ರಿ ಎನ್ನದೇ ದುಡಿಯುವ ವರ್ಗವೇ ಇದೆ. ಹೀಗಿರುವಾಗ ರಾತ್ರಿ ಪಾಳಿ ಜನರಿಗೆ ರಾತ್ರಿ  11 ಆದ್ರೆ ಸಾಕು, ಹಸಿದ ಹೊಟ್ಟೆ ತುಂಬಿಸಿ ಕೊಳ್ಳುವುದೇ ಒಂದು ಸವಾಲಿನ ಕೆಲಸವಾಗಿದೆ. ಹೋಟೆಲ್ ಓಪನ್ ಅನುಮತಿ ನೀಡದಿದ್ದರೆ ಗೃಹ ಮಂತ್ರಿಗಳ ಭೇಟಿ ಮಾಡಿ ಹೋಟೆಲ್ ಉದ್ಯಮದ ಮನವಿಗೆ ಸ್ಪಂದಿಸುವಂತೆ  ಕೇಳಿಕೊಳ್ಳಲು ಹೋಟೆಲ್ ಮಾಲೀಕರು ತಯಾರಾಗಿದ್ದಾರೆ.


    Karnataka Politics: ಬಿಜೆಪಿ ಮುಖ್ಯಮಂತ್ರಿ ಸ್ಥಾನ 'ಪೇಮೆಂಟ್ ಸೀಟಾ?'- ಸಿದ್ದರಾಮಯ್ಯ ಪ್ರಶ್ನೆ


    ಸರ್ಕಾರ ಅನುಮತಿ ನೀಡಿದೆ, ನೀವು ಅನುಮತಿ ಕೊಡಿ


    ಯಾಕಂದ್ರೇ ರಾತ್ರಿ 11ರ ನಂತರ ಯಾವುದೇ ಹೋಟೆಲ್ ಗಳು ತೆರೆದಿರುವುದಿಲ್ಲ. ಇದನ್ನ ಅರಿತ ರಾಜ್ಯ ಸರ್ಕಾರ ರಾತ್ರಿ ವೇಳೆಯೂ ಅಂದರೆ ದಿನದ 24 ಗಂಟೆಯೂ ರಾಜಧಾನಿ ಬೆಂಗಳೂರಿನಲ್ಲಿ ಹೋಟೆಲ್ ತೆರೆಯಲು ಅನುಮತಿ ನೀಡಿದೆ. ಆದರೆ ಹೋಟೆಲ್ ತೆರೆಯಲು ಮಾಲೀಕರಿಗೆ ಸಾಧ್ಯವಾಗುತ್ತಿಲ್ಲ ಕಾರಣ ಭದ್ರತಾ ವ್ಯವಸ್ಥೆ.  ಬೆಂಗಳೂರಿನಲ್ಲಿ ರಾತ್ರಿ ಆದ್ರೆ ಸಾಕು ಕುಡುಕರ ಹಾವಳಿ, ಗಾಂಜಾ ಗಿರಾಕಿಗಳ ಜೊತೆ ಕಳ್ಳ-ರೌಡಿಗಳ ಹಾವಳಿ ಶುರುವಾಗುತ್ತೆ. ಇಂತಹ ಸಮಯದಲ್ಲಿ ಹೋಟೆಲ್ ಗಳನ್ನ ನಡೆಸಬೇಕೆಂದ್ರೆ  ಪೊಲೀಸರಿಂದ ಸೂಕ್ತ ಭದ್ರತಾ ವ್ಯವಸ್ಥೆಬೇಕು ಎಂದು ಹೋಟೆಲ್ ಮಾಲೀಕರ ಸಂಘದಿಂದ  ಬೆಂಗಳೂರು ನಗರ ಪೊಲೀಸ್ ಆಯುಕ್ತರ ಭೇಟಿ ಮಾಡಿ ಮನವಿ ಸಹ  ಮಾಡಲಾಗಿದೆ.


    ಪೊಲೀಸ್ ಇಲಾಖೆಯಿಂದ ಗ್ರೀನ್ ಸಿಗ್ನಲ್ ಸಿಕಿಲ್ಲ


    ಆದ್ರೆ ಕಳೆದ ವರ್ಷವೇ ಸರ್ಕಾರ ಅನುಮತಿ ನೀಡಿದ್ರೂ ಸಹ  ಪೊಲೀಸ್ ಇಲಾಖೆಯಿಂದ ಗ್ರೀನ್ ಸಿಗ್ನಲ್ ಸಿಕಿಲ್ಲ. ಮನವಿ ಸಲ್ಲಿಸಿ ದಿನಗಳೆ ಕಳೆದಿವೆ, ಆದರೂ  ಮತ್ತೊಮ್ಮೆ ಮನವಿ ಪತ್ರ ನೀಡಿದ ಹೊಟೇಲ್ ಉದ್ಯಮ,  ಮೇ 10ರವರೆಗೆ ಪೊಲೀಸ್ ಇಲಾಖೆ‌ ಡೆಡ್ ಲೈನ್ ನೀಡಿದ್ದು, ಬಳಿಕ 24×7 ಹೋಟೆಲ್ ಓಪನ್ ಅನುಮತಿ ನೀಡದಿದ್ದರೆ ಗೃಹ ಮಂತ್ರಿಗಳ ಭೇಟಿ ಮಾಡಿ ಹೋಟೆಲ್ ಉದ್ಯಮದ ಮನವಿಗೆ ಸ್ಪಂದಿಸುವಂತೆ  ಕೇಳಿಕೊಳ್ಳಲು ಹೋಟೆಲ್ ಮಾಲೀಕರು ತಯಾರಾಗಿದ್ದಾರೆ.


    ಇದನ್ನೂ ಓದಿ: DK Shivakumar: "ಯತ್ನಾಳ್ ಏನು ಮೆಂಟಲ್ಲಾ? ಅವರನ್ನು ಮೊದಲು ವಿಚಾರಣೆ ಮಾಡಿ" - ಸರ್ಕಾರಕ್ಕೆ ಡಿಕೆಶಿ ಆಗ್ರಹ


    ಭದ್ರತೆಗೆ ಸಹಕರಿಸುವಂತೆ ಮನವಿ


    ದಿವಿಡಿ ದುಡಿದು, ರಾತ್ರಿಯಾದ್ರೆ ಸಾಕು ಬೆಂಗಳೂರಿನಲ್ಲಿ ಊಟಕ್ಕಾಗಿ ಇಡೀ ನಗರವನ್ನೇ ಸುತ್ತು ಹೊಡೆಯುವ ಸಾಕಷ್ಟು ಜನರು ಕಾಣಸಿಗುತ್ತಾರೆ. ಹಸಿದ ಹೊಟ್ಟೆ ತುಂಬಿಸಲು ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಸರಿ ಇದೆ. ಆದರೆ ಅದೇ ರೀತಿ ಹೋಟೆಲ್ ಮಾಲೀಕರ ಸಮಸ್ಯೆಯನ್ನು ಅರಿತುಕೊಂಡು, ಅವರ ಭದ್ರತೆಗೆ ಸಹಕಾರಿ ಯಾಗುವಂತೆ ಪೊಲೀಸ್ ವ್ಯವಸ್ಥೆಯನ್ನು ಕಲ್ಪಿಸುವ ಜವಾಬ್ದಾರಿ ಕೂಡ ಸರ್ಕಾರದ ಮೇಲಿದೆ. ಮೇ 10 ನಂತರ ಸರ್ಕಾರ ಮತ್ತು ಹೋಟೆಲ್ ಮಾಲೀಕರ ಸಂಘ ಯಾವ ನಿರ್ಣಯಕ್ಕೆ ಬರುತ್ತೆ ಎಂದು ಕಾದು ನೋಡಬೇಕು.


    ವರದಿ: ಸವಿತಾ ರಾಮಚಂದ್ರ

    Published by:ಪಾವನ ಎಚ್ ಎಸ್
    First published: