ಅಧಿಕಾರಿಗಳ ವರ್ಗಾವಣೆಗೆ ಆಗ್ರಹಿಸಿ : ಚುನಾವಣೆ ಆಯೋಗಕ್ಕೆ ರಕ್ತದ ಮೂಲಕ ಸಹಿ ಸಂಗ್ರಹ

news18
Updated:April 8, 2018, 7:06 PM IST
ಅಧಿಕಾರಿಗಳ ವರ್ಗಾವಣೆಗೆ ಆಗ್ರಹಿಸಿ : ಚುನಾವಣೆ ಆಯೋಗಕ್ಕೆ ರಕ್ತದ ಮೂಲಕ ಸಹಿ ಸಂಗ್ರಹ
news18
Updated: April 8, 2018, 7:06 PM IST
- ಸಂತೋಷ ಕೊಣ್ಣೂರ, ನ್ಯೂಸ್ 18 ಕನ್ನಡ

ಗದಗ ( ಏ.08) :  ಭಗ್ನ ಪ್ರೇಮಿಗಳು ಸ್ಟಾರ್​ ಅಭಿಮಾನಿಗಳು ರಕ್ತದಲ್ಲಿ ಪತ್ರ ಬರೆಯುವುದನ್ನ ನಾವು ನೋಡಿದೆವೆ. ಆದ್ರೆ ಗದಗ ಡಿಸಿ, ಡಿವೈಎಸ್‌ಪಿ, ಜಿಮ್ಸ್ ವೈದ್ಯಕೀಯ ನಿರ್ದೇಶಕರಿಗೆ ವರ್ಗಾವಾಣೆ ಭಾಗ್ಯ ನೀಡಬೇಕೆಂದು ಚುನಾವಣೆ ಆಯೋಗಕ್ಕೆ ಬರೆದ ಪತ್ರಕ್ಕೆ ರಕ್ತದ ಮೂಲಕ ಸಹಿ ಮಾಡಿದ್ದಾರೆ. ಜಿಲ್ಲಾಮಟ್ಟದ ಅಧಿಕಾರಿಗಳು ಕಾಂಗ್ರೆಸ್‌ನ ಏಜೆಂಟರೆಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ವಿನೂತನ ಪ್ರತಿಭಟನೆ ಮಾಡಿದರು.

ಗದಗ ಜಿಲ್ಲೆನಲ್ಲಿ ಪಾರದರ್ಶಕ ಚುನಾವಣೆಗಾಗಿ ಆಗ್ರಹಿಸಿ. ಬಿಜೆಪಿ ಆಕಾಂಕ್ಷಿ ಅಭ್ಯರ್ಥಿ ಅನೀಲ್ ಮೇಣಸಿನಕಾಯಿ ಜನ ಸಂಪರ್ಕ ಕಾರ್ಯಾಲಯದ ಬಳಿ ನೂರಾರು ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಡಿಸಿ, ಡಿವೈಎಸ್‌ಪಿ, ಜಿಮ್ಸ್ ನಿರ್ದೇಶಕರನ್ನ ವರ್ಗಾವಣೆ ಭಾಗ್ಯ ನೀಡಬೇಕೆಂದು ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಲಾಯಿತು. ಈ ದೂರಿನ ಪತ್ರಕ್ಕೆ ರಕ್ತದ ಮೂಲಕ ಸಹಿ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ಮಾಡಿದರು.

ರಾಜ್ಯದೆಲ್ಲೆಡೆ ದಿನದಿಂದ ದಿನಕ್ಕೆ ಚುನಾವಣೆ ಕಾವು ರಂಗೆರುತ್ತಿದೆ. ಆದ್ರೆ ಗದಗ ನಗರದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳನ್ನ ವರ್ಗಾವಣೆ ಮಾಡಬೇಕೆಂಬ ಹಠ ಜೋರಾಗಿದೆ. ಡಿ.ಸಿ ಮನೋಜ್ ಜೈನ್, ಡಿ.ವೈ.ಎಸ್.ಪಿ ವಿಜಯಕುಮಾರ ತಳವಾರ, ಜಿಮ್ಸ್ ಆಸ್ಪತ್ರೆ ಹಾಗೂ ವೈದ್ಯಕೀಯ ಮಹಾವಿದ್ಯಾಲಯ ನಿರ್ದೇಶಕರು ಭೂಸರೆಡ್ಡಿ ವಿರುದ್ಧ ಪ್ರತಿಭಟನೆ ಮಾಡಲಾಯಿತು.

ಗದಗ ಮತಕ್ಷೇತ್ರ ಹುಲಕೋಟಿ, ಕುರ್ತಕೋಟಿ, ಅಸುಂಡಿ, ಬಿಂಕದಕಟ್ಟಿ ಗ್ರಾಮದಲ್ಲಿ ಚುನಾವಣೆ ವೇಳೆ ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಪ್ರತಿಭರಿಯೂ ನಡೆಯುತ್ತೆ. ಆದ್ದರಿಂದ ಈ ಗ್ರಾಮಗಳಲ್ಲಿ ಪ್ಯಾರಾ ಮಿಲಿಟರಿ ಪಡೆ ನಿಯೋಜಿಸಬೇಕೆಂದು ಆಗ್ರಹಿಸಿದರು. ಕೇಂದ್ರ ಹಾಗೂ ರಾಜ್ಯ ಚುನಾವಣೆ ಆಯೋಗ ಈ ಅಧಿಕಾರಿಗಳನ್ನ ವರ್ಗಾವಣೆ ಮಾಡದೇ ಹೊದ್ರೆ ಮುಂದಿನ ದಿನಮಾನಗಳಲ್ಲಿ ಬೆಂಗಳೂರ ಚುನಾವಣೆ ಆಯೋಗದ ಕಚೇರಿ ಎದಿರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಗದಗ ಡಿಸಿ, ಡಿವೈಎಸ್‌ಪಿ, ಹಾಗೂ ಜಿಮ್ಸ್ ನಿರ್ದೇಶಕರು ಗದಗ ಕ್ಷೇತ್ರದ ಹಾಲಿ ಶಾಸಕ ಸಚಿವ ಎಚ್.ಕೆ ಪಾಟೀಲ್ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ನೂರಾರು ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಚುನಾವಣೆ ಆಯೋಗಕ್ಕೆ ಪತ್ರ ಬರೆದು ಅದಕ್ಕೆ ರಕ್ತದ ಮೂಲಕ ಸಹಿ ಮಾಡಿದ್ದಾರೆ. ಚುನಾವಣಾ ಆಯೋಗ ಅಧಿಕಾರಿಗಳ ಮೇಲೆ ಯಾವ ಕ್ರಮ ಕೈಗೊಳ್ಳುತ್ತೆ ಎಂಬುದನ್ನ ಕಾದು ನೋಡಬೇಕಿದೆ.
First published:April 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ