ಟ್ವಿಟ್​ ಮೂಲಕ ಮುಸ್ಲಿಂ ಮಹಿಳೆಯರನ್ನು ಅಪಹಾಸ್ಯ ಮಾಡಿದ ರಾಜ್ಯ ಬಿಜೆಪಿ ಘಟಕ; ಚಳಿ ಬಿಡಿಸಿದ ನೆಟ್ಟಿಗರು!

ಕೇಂದ್ರ ಸರ್ಕಾರದ ಈ ನಿರ್ಧಾರದ ವಿರುದ್ಧ ಇಡೀ ದೇಶ ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಹೋರಾಡುತ್ತಲೇ ಇದೆ. ಈ ಹೋರಾಟಕ್ಕೆ ಮಣಿದಿದ್ದ ಕೇಂದ್ರ ಸರ್ಕಾರ ಸದ್ಯಕ್ಕೆ ಎನ್​ಸಿಆರ್​ ಇಡೀ ರಾಷ್ಟ್ರದಾದ್ಯಂತ ಜಾರಿ ಮಾಡುವುದಿಲ್ಲ ಎಂದು ಹೇಳಿತ್ತು. ಆದರೆ, ರಾಜ್ಯ ಬಿಜೆಪಿ ಘಟಕ ಮಾಡಿರುವ ಟ್ವಿಟ್ ಇದೀಗ ಎಲ್ಲರನ್ನೂ ಗೊಂದಲಕ್ಕೀಡುಮಾಡಿದೆ.

MAshok Kumar | news18-kannada
Updated:February 8, 2020, 5:24 PM IST
ಟ್ವಿಟ್​ ಮೂಲಕ ಮುಸ್ಲಿಂ ಮಹಿಳೆಯರನ್ನು ಅಪಹಾಸ್ಯ ಮಾಡಿದ ರಾಜ್ಯ ಬಿಜೆಪಿ ಘಟಕ; ಚಳಿ ಬಿಡಿಸಿದ ನೆಟ್ಟಿಗರು!
ರಾಜ್ಯ ಬಿಜೆಪಿ ಘಟಕ ಮಾಡಿರುವ ಟ್ವಿಟ್.
  • Share this:
ಬೆಂಗಳೂರು (ಫೆಬ್ರವರಿ 08) ಸದಾ ಒಂದಿಲ್ಲೊಂದು ವಿವಾದಲ್ಲಿ ತಾನಾಗಿಯೇ ಸಿಲುಕಿಕೊಳ್ಳುವ ರಾಜ್ಯ ಬಿಜೆಪಿ ಘಟಕ ಇಂದು ತಾನು ಮಾಡಿರುವ ಒಂದು ಟ್ವಿಟ್​ನಿಂದಾಗಿ ಇದೀಗ ರಾಷ್ಟ್ರಮಟ್ಟದಲ್ಲಿ ಸುದ್ದಿಯ ಕೇಂದ್ರದಲ್ಲಿದೆ. ಅಲ್ಲದೆ, ತನ್ನ ಕೋಮುವಾದಿ ಮುಖವಾಡವನ್ನು ಮತ್ತೊಮ್ಮೆ ಜಹಜ್ಜಾಹೀರು ಮಾಡುವ ಮೂಲಕ ನೆಟ್ಟಿಗರಿಂದ ಪೇಚಿಗೆ ಸಿಲುಕಿದೆ.

ಇಂದು ದೆಹಲಿ ವಿಧಾನಸಭಾ ಚುನಾವಣೆ ನಿಮಿತ್ತ ಜನ ಸಾಲುಗಟ್ಟಿ ಮತ ಚಲಾಯಿಸಿದ್ದಾರೆ. ಆದರೆ, ಈ ಪೈಕಿ ಮುಸ್ಲಿಂ ಮಹಿಳೆಯರು ಮತ ಚಲಾಯಿಸುವ ವಿಡಿಯೋವನ್ನು ತನ್ನ ಖಾಸಗಿ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ರಾಜ್ಯ ಬಿಜೆಪಿ ಘಟಕ ಅದಕ್ಕೆ ವ್ಯಂಗ್ಯವಾಗಿ,“ದಾಖಲೆಗಳನ್ನು ತೋರ್ಸಲ್ಲ ಎಂದು ಹೇಳಿದವರೇ, ಇದೀಗ ನಿಮ್ಮ ಡಾಕ್ಯುಮೆಂಟ್ಗಳನ್ನು ಸುರಕ್ಷಿತವಾಗಿಡಿ. #NPR ದಾಖಲಾತಿ ಸಮಯದಲ್ಲಿ ನೀವು ಅವುಗಳನ್ನು ಮತ್ತೆ ತೋರಿಸಬೇಕಾಗುತ್ತದೆ” ಎಂದು ಕುಹಕವಾದ ಅಡಿ ಬರಹ ಬರೆದಿದೆ.

ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ಅಡಿಯಲ್ಲಿ ನೆರೆಯ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮವಾಗಿ ವಲಸೆ ಬಂದಿರುವ ಹಿಂದುಗಳಿಗೆ ಪೌರತ್ವ ನೀಡುತ್ತದೆ. ಆದರೆ, ಮುಸ್ಲಿಮರನ್ನು ಇದರಲ್ಲಿ ಪರಿಗಣಿಸಲಾಗಿಲ್ಲ. ಇನ್ನೂ ಎನ್​ಸಿಆರ್​ ಅಡಿಯಲ್ಲಿ ದೇಶದಲ್ಲಿರುವವರು ತಮ್ಮ ಪೌರತ್ವವನ್ನು ಸಾಬೀತುಪಡಿಸುವ ದಾಖಲೆಗಳನ್ನು ನೀಡದಿದ್ದಲ್ಲಿ ಅವರನ್ನು ಈ ದೇಶದ ಪ್ರಜೆ ಅಲ್ಲ ಎಂದು ನಿರ್ಧರಿಸಲಾಗುತ್ತದೆ. ಅಲ್ಲದೆ ಡಿಟೆನ್ಷನ್ ಸೆಂಟರ್​ಗಳಲ್ಲಿ ಅವರನ್ನು ಬಂಧಿಸಿ ಇಡಲಾಗುತ್ತದೆ.

ಕೇಂದ್ರ ಸರ್ಕಾರದ ಈ ನಿರ್ಧಾರದ ವಿರುದ್ಧ ಇಡೀ ದೇಶ ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಹೋರಾಡುತ್ತಲೇ ಇದೆ. ಈ ಹೋರಾಟಕ್ಕೆ ಮಣಿದಿದ್ದ ಕೇಂದ್ರ ಸರ್ಕಾರ ಸದ್ಯಕ್ಕೆ ಎನ್​ಸಿಆರ್​ ಇಡೀ ರಾಷ್ಟ್ರದಾದ್ಯಂತ ಜಾರಿ ಮಾಡುವುದಿಲ್ಲ ಎಂದು ಹೇಳಿತ್ತು. ಆದರೆ, ರಾಜ್ಯ ಬಿಜೆಪಿ ಘಟಕ ಮಾಡಿರುವ ಟ್ವಿಟ್ ಇದೀಗ ಎಲ್ಲರನ್ನೂ ಗೊಂದಲಕ್ಕೀಡುಮಾಡಿದೆ.

ಬಿಜೆಪಿ ಟ್ವಿಟ್​ ಅನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಟೀಕಿಸಿರುವ ಅನೇಕರು ರಾಜ್ಯ ಬಿಜೆಪಿ ಮುಸ್ಲಿಂ ಮಹಿಳೆಯರಲ್ಲಿ ಭೀತಿಯನ್ನು ಹುಟ್ಟಿಸುತ್ತಿದೆ ಎಂದು ಹರಿಹಾಯ್ದಿದ್ದಾರೆ. ಅಲ್ಲದೆ, ಬಿಜೆಪಿ ಕೋಮುವಾದಿ ಪಕ್ಷ ಎಂದು ಮತ್ತೊಮ್ಮೆ ಹೀಗೆಳೆದಿದ್ದಾರೆ. ಕಾಂಗ್ರೆಸ್​ ಹಾಗೂ ಚಿತ್ರನಟ ಪ್ರಕಾಶ್ ರಾಜ್​ ಸಹ ಬಿಜೆಪಿ ಘಟಕದ ಟ್ವಿಟ್​ಗೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.  ಪರಿಣಾಮ ಬಿಜೆಪಿ ಐಟಿ ಸೆಲ್ ಪೇಚಿಗೆ ಸಿಲುಕುವಂತಾಗಿದೆ.

ಇದನ್ನೂ ಓದಿ : Delhi Elections LIVE: ಮತ ಹಾಕಿದ 94 ವರ್ಷದ ವೃದ್ಧೆ; 4.45ರ ವೇಳೆಗೆ ಶೇ.43.66ರಷ್ಟು ಮತದಾನ
First published:February 8, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ