ಸಿನಿ ದಿಗ್ಗಜರ ಪ್ರತಿಮೆ ತೆರವು: ಪ್ರತಿಭಟನೆಯ ಎಚ್ಚರಿಕೆ ಕೊಟ್ಟ ವಾಟಾಳ್​ ನಾಗರಾಜ್​..!

ಪ್ರತಿಮೆಗಳ ತೆರವು ವಿಚಾರವಾಗಿ ಕನ್ನಡಪರ ಸಂಘಟನೆಗಳು ಹಾಗೂ ಅಭಿಮಾನಿ ಸಂಘಗಳ ಜತೆ ಚರ್ಚೆ ನಡೆಸಿ ಮುಂದಿನ ವಾರ ಹೋರಾಟಕ್ಕಿಳಿಯುವ ಎಚ್ಚರಿಕೆ ನೀಡಿದ್ದಾರೆ ವಾಟಾಳ್​ ನಾಗರಾಜ್​. 

ಸಿನಿ ದಿಗ್ಗಜರ ಪ್ರತಿಮೆ ತೆರವು ವಿಚಾರ

ಸಿನಿ ದಿಗ್ಗಜರ ಪ್ರತಿಮೆ ತೆರವು ವಿಚಾರ

  • Share this:
ಪ್ರತಿಮೆಗಳನ್ನು ತೆರವು ಮಾಡಲು ಮುಂದಾಗಿರುವ ಬಿಬಿಎಂಪಿ ಕ್ರಮವನ್ನು ಕನ್ನಡ ಚಳುವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಅವರು ಖಂಡಿಸಿದ್ದಾರೆ. ಡಾಕ್ಟರ್ ರಾಜಕುಮಾರ್ ವಿಷ್ಣುವರ್ಧನ್ ಅಂಬರೀಶ್ ಹಾಗೂ ಶಂಕರ್ ನಾಗ್ ಪ್ರತಿಮೆಗಳನ್ನು ತೆರವು ಮಾಡಲು ಹೊರಟಿರುವುದು ಅಕ್ಷಮ್ಯ ಅಪರಾಧ. ಇದರ ಹಿಂದೆ ಭಾರಿ ದೊಡ್ಡ ಪಿತೂರಿ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಪ್ರತಿಮೆಗಳನ್ನು ತೆರವುಗೊಳಿಸ ಬಾರದು. ಮುಂದಿನ ವಾರ ರಾಜ್ಯಾದ್ಯಂತ ಹೋರಾಟ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸರ್ಕಾರ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ, ಮನವರಿಕೆ ಮಾಡಿಕೊಡಲಿ. ತಿರುವಳ್ಳುವರ್ ಪ್ರತಿಮೆಗೆ ಅವಕಾಶವಿದೆ, ಆದರೆ ಕನ್ನಡದ ಸಾಧಕರ ಪ್ರತಿಮೆಗಳಿಗೆ ಅವಕಾಶ ಇಲ್ವಾ..? ಬೆಂಗಳೂರಿನಲ್ಲಿ ಕನ್ನಡಿಗರಿಗಿಂತ ಅನ್ಯಭಾಷಿಕರ ಮೇಲುಗೈ ಆಗುತ್ತಿದೆ. ಈ ರೀತಿ ಪಿತೂರಿ ಆಗಬಾರದು ಎಂದು ಅವರು ಆಕ್ರೋಶ ವಯಕ್ತಪಡಿಸಿದ್ದಾರೆ. 

ಪ್ರತಿಮೆಗಳ ತೆರವು ವಿಚಾರವಾಗಿ ಕನ್ನಡಪರ ಸಂಘಟನೆಗಳು ಹಾಗೂ ಅಭಿಮಾನಿ ಸಂಘಗಳ ಜತೆ ಚರ್ಚೆ ನಡೆಸಿ ಮುಂದಿನ ವಾರ ಹೋರಾಟಕ್ಕಿಳಿಯುವ ಎಚ್ಚರಿಕೆ ನೀಡಿದ್ದಾರೆ ವಾಟಾಳ್​ ನಾಗರಾಜ್​.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಧಿಕೃತವಾಗಿ ಅನುಮತಿ ಇಲ್ಲದೆ ರಸ್ತೆಗಳ ನಡುವೆ ನಿರ್ಮಿಸಲಾಗಿರುವ ಡಾ.ರಾಜ್ ಕುಮಾರ್, ಡಾ. ವಿಷ್ಣವರ್ಧನ್ ಮತ್ತು ಶಂಕರ್​ನಾಗ್ ಸೇರಿದಂತೆ ಹಲವರ ಪುತ್ಥಳಿಗಳನ್ನು ತೆರವುಗೊಳಿಸಲು ಕೋರ್ಟ್​ ಆದೇಶ ನೀಡಿದ್ದು, ಪಾಲಿಕೆ ಇದೀಗ ಅನಧಿಕೃತ ಪುತ್ಥಳಿಗಳನ್ನು ಗುರುತು ಮಾಡುವ ಕೆಲಸದಲ್ಲಿದೆ.

ಇದನ್ನೂ ಓದಿ: Happy Birthday Anant Nag: ಅನಂತ್​ ನಾಗ್​ ಬಗ್ಗೆ ತಿಳಿಯಲೇಬೇಕಾದ ಆಸಕ್ತಿಕರ ವಿಷಯಗಳಿವು..!

ಶೀಘ್ರದಲ್ಲೇ ಅನೇಕ ಪುತ್ಥಳಿಗಳನ್ನು ತೆರವುಗೊಳಿಸಲಾಗುವುದು ಎಂದು ತಿಳಿದು ಬಂದಿದೆ. ಅನಧಿಕೃತ ಪುತ್ಥಳಿಗಳು ನಗರ ಸಂಚಾರಕ್ಕೆ ಸಮಸ್ಯೆಯಾಗಿರುವ ಸಂಬಂಧ ಕೆ.ಎಸ್. ಸುರೇಶ್ ಎಂಬವರು ಜುಲೈ.30 ರಂದು ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಗರ್ಲ್​ಫ್ರೆಂಡ್ಸ್​​ಗೆ ಸಹೋದರಿಯ ಬಟ್ಟೆಯನ್ನು ಉಡುಗೊರೆಯಾಗಿ ಕೊಡುತ್ತಿದ್ದ Ranbir Kapoor..!

ಈ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾಲ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಅರ್ಜಿಯ ಭಾವಚಿತ್ರದಲ್ಲಿ ತೋರಿಸಲಾಗಿರುವ ಸ್ಥಳಗಳಲ್ಲಿ ಪೊಲೀಸ್ ಇಲಾಖೆ ಸಂಚಾರಿ ವಿಭಾಗದ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ. ಸಾರ್ವಜನಿಕ ಸ್ಥಳಗಳಲ್ಲಿ, ಪಾದಚಾರಿ ಮಾರ್ಗ ಮತ್ತು ರಸ್ತೆಗಳಲ್ಲಿ ಅನಿಧಿಕೃತವಾಗಿ ಅನುಮತಿ ಇಲ್ಲದೆ ನಿರ್ಮಿಸಲಾಗಿರುವ ಬಾವುಟ ಮತ್ತು ಪುತ್ಥಳಿಗಳನ್ನು ಗುರುತಿಸಿ ವರದಿ ನೀಡುವಂತೆ ಕೇಳಿತ್ತು.

ಅದರಂತೆ ಸಂಚಾರಿ ವಿಭಾದ ಪೊಲೀಸ್ ಅಧಿಕಾರಿಗಳು ಬಿಬಿಎಂಪಿ ಅಧಿಕಾರಿಗಳ ಜೊತೆಗೆ ಜಂಟಿಯಾಗಿ ಅನಧಿಕೃತ ಪುತ್ಥಳಿಗಳನ್ನು ಗುರುತಿಸಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಆಕ್ಷೇಪಣಾ ವರದಿ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಶೀಘ್ರದಲ್ಲೇ ನಗರದಲ್ಲಿರುವ ಅನಧಿಕೃತ ರಾಜ್ ಕುಮಾರ್, ಶಂಕರ್ ನಾಗ್,ವಿಷ್ಣುವರ್ಧನ್, ಬಸವಣ್ಣನವರ ಪುತ್ಥಳಿ ತೆರವಾಗಲಿದೆ ಎನ್ನಲಾಗಿದೆ.

ಇದನ್ನೂ ಓದಿ: Thalaivii Release: ದಿ ಜಯಲಲಿತಾರ ಸ್ಮಾರಕಕ್ಕೆ ಭೇಟಿ ಕೊಟ್ಟ ನಟಿ Kangana Ranaut

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Anitha E
First published: