Ayodhya Verdict: ತೀರ್ಪು ಏನೇ ಬಂದರೂ ಗದ್ದಲ ಬೇಡ: ಕಾರ್ಯಕರ್ತರಿಗೆ ಮತ್ತು ಸಮುದಾಯದ ಜನರಿಗೆ ಆರೆಸ್ಸೆಸ್, ಧರ್ಮಗುರುಗಳಿಂದ ಮನವಿ

ಸುಪ್ರೀಂ ಕೋರ್ಟ್ ಯಾವುದೇ ತೀರ್ಪು ನೀಡಿದರೂ ಎರಡೂ ಸಮುದಾಯಗಳು ಗೌರವದಿಂದ ಸ್ವೀಕರಿಸಿ. ಯಾವುದೇ ವಿಜಯೋತ್ಸವ ಆಚರಿಸದಿರಿ. ಪ್ರಚೋದನಕಾರಿ ಹೇಳಿಕೆ, ಸಂದೇಶ ರವಾನಿಸದಿರಿ. ಎರಡೂ ಸಮುದಾಯಗಳು ಪ್ರೀತಿ, ಸೌಹಾರ್ದತೆ ಕಾಪಾಡಿ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಶಾಂತಿ ಸಂದೇಶ ರವಾನಿಸಿದ್ದಾರೆ.

Vijayasarthy SN | news18
Updated:November 9, 2019, 10:10 AM IST
Ayodhya Verdict: ತೀರ್ಪು ಏನೇ ಬಂದರೂ ಗದ್ದಲ ಬೇಡ: ಕಾರ್ಯಕರ್ತರಿಗೆ ಮತ್ತು ಸಮುದಾಯದ ಜನರಿಗೆ ಆರೆಸ್ಸೆಸ್, ಧರ್ಮಗುರುಗಳಿಂದ ಮನವಿ
ಮುರುಘಾ ಶ್ರೀಗಳು
  • News18
  • Last Updated: November 9, 2019, 10:10 AM IST
  • Share this:
ಬೆಂಗಳೂರು(ನ. 09): ಅಯೋಧ್ಯೆ ವಿವಾದದಲ್ಲಿ ಸುಪ್ರೀಂ ಕೋರ್ಟ್ ಇಂದು ಏನೇ ತೀರ್ಪು ನೀಡಿದರೂ ಸಮಾಧಾನ ಮತ್ತು ಸಮಚಿತ್ತದಿಂದ ಸ್ವೀಕರಿಸುವಂತೆ ಹಿಂದೂ ಮತ್ತು ಮುಸ್ಲಿಮ್ ಸಮುದಾಯದ ಮುಖಂಡರು ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ. ಬಿಜೆಪಿ ಮತ್ತು ಆರೆಸ್ಸೆಸ್ ಸಂಘಟನೆಗಳು ತನ್ನ ಕಾರ್ಯಕರ್ತರಿಗೆ ಯಾವುದೇ ವಿಜಯೋತ್ಸವ ಅಥವಾ ಪ್ರತಿಭಟನೆಗಳನ್ನು ನಡೆಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿವೆ. ಧರ್ಮಗುರುಗಳೂ ಕೂಡ ಶಾಂತಿ ಪರಿಪಾಲನೆ ಮಾಡುವಂತೆ ತಮ್ಮ ಸಮುದಾಯಗಳನ್ನು ಕೋರಿಕೊಂಡಿದ್ದಾರೆ.

ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮಧ್ಯಾಹ್ನ 1ಗಂಟೆಗೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ಧಾರೆ. ಅಲ್ಲಿಯವರೆಗೆ ಸುಪ್ರೀಂ ಕೋರ್ಟ್ ತೀರ್ಪು ಏನೇ ಬಂದರೂ ಯಾರೂ ಏನೂ ಮಾತನಾಡಬಾರದು ಎಂದು ಸಂಘ ಪರಿವಾರದ ಮುಖ್ಯಸ್ಥರು ಕಾರ್ಯಕರ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ತೀರ್ಪು ತೃಪ್ತಿದಾಯಕವಾಗಿದ್ದರೆ ತಮ್ಮ ತಮ್ಮ ಮನೆಗಳಲ್ಲಿ ತುಪ್ಪದ ದೀಪ ಹಚ್ಚಿ ಭಜನೆ ಮಾಡಿ. ಯಾವುದೇ ವಿಜಯೋತ್ಸವ ಆಚರಣೆ ಬೇಡ, ಪಟಾಕಿ ಹೊಡೆಯುವುದು ಬೇಡ. ಒಂದು ವೇಳೆ ತೀರ್ಪು ವ್ಯತಿರಿಕ್ತವಾಗಿ ಬಂದರೆ ಪ್ರತಿಭಟನೆ ಅಥವಾ ಧರಣಿ ಮಾಡಬೇಡಿ. ಮೋಹನ್ ಭಾಗವತ್ ಪ್ರತಿಕ್ರಿಯಿಸುವವರೆಗೂ ಸುಪ್ರೀಂ ತೀರ್ಪಿನ ಬಗ್ಗೆ ಯಾರೂ ಮಾತನಾಡಬಾರದು. ಪ್ರಧಾನಿ ಮೋದಿ ಕೂಡ ಪ್ರತಿಕ್ರಿಯಿಸುವುದಿಲ್ಲ ಎಂದು ಆರೆಸ್ಸೆಸ್​ನ ಕಾರ್ಯಕರ್ತರಿಗೆ ಹಿರಿಯರಿಂದ ಕಟ್ಟಪ್ಪಣೆ ಬಂದಿದೆ ಎಂದು ಮೂಲಗಳು ನ್ಯೂಸ್18 ಕನ್ನಡಕ್ಕೆ ತಿಳಿಸಿವೆ.

 ಇದನ್ನೂ ಓದಿ: Ayodhya Verdict: ಅಯೋಧ್ಯೆ ತೀರ್ಪು ಯಾರೋಬ್ಬರ ಸೋಲು-ಗೆಲುವಿನ ಪ್ರಶ್ನೆಯಲ್ಲ; ಶಾಂತಿ ಸುವ್ಯಸವ್ಥೆ ಕಾಪಾಡಿ - ಪ್ರಧಾನಿ ಮೋದಿ

ಮುಸ್ಲಿಮ್ ಧರ್ಮಗುರುಗಳ ಕರೆ:

ರಾಯಚೂರಿನ ಅಂದ್ರೂನ್ ಕಿಲ್ಲಾದ ಜಮೀಯ ಮಸೀದಿಯ ಮೌಲಾನ ಮೊಹಮ್ಮದ್ ರಫಿ ಅಹ್ಮದ್ ಅವರು ಶಾಂತಿ ಪಾಲಿಸುವಂತೆ ಕರೆ ನೀಡಿದ್ಧಾರೆ. ಹಿಂದೂಸ್ಥಾನ ಒಂದು ಸುಂದರವಾದ ಹೂವಿದ್ದಂತೆ. ಎಲ್ಲರೂ ಒಂದಾಗಿ ಬಾಳುವೆ ಮಾಡುವ ದೇಶ. ವೈರಿ ಬಂದರೂ ಅವರಿಗೆ ಗೌರವ ಕೊಡುತ್ತೇವೆ. ಸುಪ್ರೀಂ ತೀರ್ಪು ಏನೇ ಬಂದರೂ ಸ್ವಾಗತಿಸೋಣ. ಯಾವುದೇ ಉದ್ವೇಗಕ್ಕೆ ಒಳಗಾಗದೆ ಕುರಾನ್ ಆಶಯದಂತೆ ಶಾಂತಿ ಸೌಹಾರ್ದತೆಯಿಂದ ಬದುಕೋಣ ಎಂದು ಮೌಲನಾ ಮನವಿ ಮಾಡಿದ್ದಾರೆ.

ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಸದಸ್ಯ ಹಾಗೂ ಖ್ವಾಜಾ ಬಂದೇನವಾಜ್ ದರ್ಗಾದ ಪೀಠಾಧಿಪತಿ ಸೈಯದ್ ಖುಸ್ರೋ ಹುಸ್ಸೇನಿ ಅವರು ಕಲಬುರ್ಗಿಯಲ್ಲಿ ಮಾತನಾಡಿ, ಸುಪ್ರೀಂ ಕೋರ್ಟ್ ಏನೇ ತೀರ್ಪು ಕೊಟ್ಟರೂ ಅದನ್ನು ಗೌರವದಿಂದ ಕಾಣಬೇಕು. ಯಾವುದೇ ಅಹಿತಕರ ಘಟನೆಗೆ ಇಳಿಯಬಾರದು ಎಂದು ಕರೆ ನೀಡಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ವಿವಾದದ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಸಂಪೂರ್ಣ ಇತಿಹಾಸಹಿಂದೂ ಧರ್ಮಗುರುಗಳ ಮನವಿ:

ಸುಪ್ರೀಂ ಕೋರ್ಟ್ ಯಾವುದೇ ತೀರ್ಪು ನೀಡಿದರೂ ಎರಡೂ ಸಮುದಾಯಗಳು ಗೌರವದಿಂದ ಸ್ವೀಕರಿಸಿ. ಯಾವುದೇ ವಿಜಯೋತ್ಸವ ಆಚರಿಸದಿರಿ. ಪ್ರಚೋದನಕಾರಿ ಹೇಳಿಕೆ, ಸಂದೇಶ ರವಾನಿಸದಿರಿ. ಎರಡೂ ಸಮುದಾಯಗಳು ಪ್ರೀತಿ, ಸೌಹಾರ್ದತೆ ಕಾಪಾಡಿ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಶಾಂತಿ ಸಂದೇಶ ರವಾನಿಸಿದ್ದಾರೆ.

ರಾಜಕೀಯ ಮುಖಂಡರ ಮನವಿ:

ಸುಪ್ರೀಂ ಕೋರ್ಟ್ ನೀಡುವ ತೀರ್ಪು ಯಾರೊಬ್ಬರ ಸೋಲು ಗೆಲುವಿನ ಪ್ರಶ್ನೆಯಲ್ಲ. ದೇಶಾದ್ಯಂತ ಜನರು ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಕರ್ನಾಟಕ ಶಾಂತಿ ಪ್ರಿಯ ರಾಜ್ಯವಾಗಿದ್ದು ಜನರು ಅತಿರೇಕ ಆಚರಣೆಗಳಿಗೆ ಮುಂದಾಗಬಾರದು ಎಂದು ಸಿಎಂ ಯಡಿಯೂರಪ್ಪ,, ಸಚಿವರಾದ ಆರ್ ಅಶೋಕ್, ಶ್ರೀರಾಮುಲು ಮೊದಲಾದವರು ಮನವಿ ಮಾಡಿಕೊಂಡಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:November 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading