ಮಹಾರಾಷ್ಟ್ರಕ್ಕೆ 4 ಟಿಎಂಸಿ ನೀರು ಬಿಡುವುದು ರಾಜಕೀಯವಲ್ಲ: ಸಿಎಂ ಬಿ.ಎಸ್​​ ಯಡಿಯೂರಪ್ಪ ಸಮರ್ಥನೆ

ಮಹಾರಾಷ್ಟ್ರ ಚುನಾವಣೆ ಪ್ರಚಾರ ತುಂಬಾ ಚೆನ್ನಾಗಿ ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಪರ ಅಲೆಯಿದೆ. ನಾವೇ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ ಎಂದು ತಿಳಿಸಿದರು.

news18-kannada
Updated:October 28, 2019, 3:27 PM IST
ಮಹಾರಾಷ್ಟ್ರಕ್ಕೆ 4 ಟಿಎಂಸಿ ನೀರು ಬಿಡುವುದು ರಾಜಕೀಯವಲ್ಲ: ಸಿಎಂ ಬಿ.ಎಸ್​​ ಯಡಿಯೂರಪ್ಪ ಸಮರ್ಥನೆ
ಸಿಎಂ ಬಿ.ಎಸ್.ಯಡಿಯೂರಪ್ಪ
  • Share this:
ಬೆಂಗಳೂರು(ಅ.17): ಮಹಾರಾಷ್ಟ್ರ ಚುನಾವಣಾ ಪ್ರಚಾರದ ವೇಳೆ ತುಬ್ಸಿ ಏತ ನೀರಾವರಿ ಯೋಜನೆ ಮೂಲಕ ಬೋರ್ಚಿ ನದಿಗೆ ನೀರು ಬಿಡುವುದಾಗಿ ನೀಡಿರುವ ಹೇಳಿಕೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದಾರೆ.

ಇಂದು ಮಹಾರಾಷ್ಟ್ರ ಚುನಾವಣಾ ಪ್ರಚಾರ ಮುಗಿಸಿಕೊಂಡು ಕಲಬುರ್ಗಿಗೆ ಆಗಮಿಸಿದ ಬಿ.ಎಸ್​​ ಯಡಿಯೂರಪ್ಪ, ಮಧ್ಯಮಗಳೊಂದಿಗೆ ಮಾತಾಡಿದರು. ಮಹಾರಾಷ್ಟ್ರಕ್ಕೆ ನೀರು ಬಿಡುವುದು ರಾಜಕೀಯ ಗಿಮಿಕ್​​ ಅಲ್ಲ. ಬೇಸಿಗೆಯಲ್ಲಿ ಕೃಷ್ಣಾ ಮತ್ತು ಭೀಮಾ ನದಿಗೆ 4 ಟಿಎಂಸಿ ನೀರು ಬಿಡುಗಡೆ ಮಾಡಬೇಕು. ಅದಕ್ಕೆ ಪ್ರತಿಯಾಗಿ ತುಬ್ಸಿ ಏತ ನೀರಾವರಿ ಮೂಲಕ ಬೋರ್ಚಿ ನದಿಗೆ 4 ಟಿಎಂಸಿ ನೀರು ಬಿಡೋ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.

ನೀರು ಬಿಡುಗಡೆ ಮಾಡುವ ಬಗ್ಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಜೊತೆಗೆ ಮಾತುಕತೆ ನಡೆಸಲಾಗಿದೆ. ಆದರೂ, ಈ ವಿಚಾರ ಚರ್ಚೆಯ ಹಂತದಲ್ಲಿದೆ. ನಾನು ಅಲ್ಲಿನ ಚುನಾವಣಾ ಪ್ರಚಾರದ ವೇಳೆ ನೀಡಿದ ಹೇಳಿಕೆ ರಾಜಕೀಯವಲ್ಲ. ಇದು ಚುನಾವಣಾ ಗಿಮಿಕ್ ಅಲ್ಲ. ನನ್ನ ಜೀವನದಲ್ಲೇ ಚುನಾವಣಾ ಗಿಮಿಕ್ ಮಾಡಿ ಅಭ್ಯಾಸವಿಲ್ಲ ಎಂದು ಪ್ರತಿಪಕ್ಷಗಳ ವಿರುದ್ಧ ಯಡಿಯೂರಪ್ಪ ಹರಿಹಾಯ್ದರು.

ಮಹಾರಾಷ್ಟ್ರದವರು, ನಾವು ದಾಯಾದಿಗಳಲ್ಲ. ಏನೇ ಇರಲಿ ಪರಸ್ಪರ ಮಾತುಕತೆ ಮೂಲಕ ಇತ್ಯರ್ಥ ಮಾಡಿಕೊಳ್ಳಬೇಕು. ನನ್ನ ಹೇಳಿಕೆಗೆ ಅಪಾರ್ಥ ಕಲ್ಪಿಸೋದು ಬೇಡ. ಬಿಜೆಪಿ ಸರ್ಕಾರಕ್ಕೆ ಯಾವುದೆ ಕಷ್ಟ ಇಲ್ಲ, ಸಮಸ್ಯೆ ಇಲ್ಲ. ಎಲ್ಲರ ಸಹಕಾರವೂ ಇದೆ. ಹಾಗಾಗಿ ನಮ್ಮ ಅವಧಿ ಪೂರ್ಣ ಮಾಡುತ್ತೇವೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮಹಾರಾಷ್ಟ್ರದ ಜತ್ ಭಾಗಕ್ಕೆ ನೀರು ಬಿಟ್ಟರೆ ತಪ್ಪೇನಿಲ್ಲ- ಮಹಾರಾಷ್ಟ್ರ ಕನ್ನಡಿಗರ ಪರ ಶಾಸಕ ಯತ್ನಾಳ್ ಬ್ಯಾಟಿಂಗ್

ರಾಜ್ಯದ ಅಭಿವೃದ್ದಿಗಾಗಿ ಏನು ಮಾಡಬೇಕೋ ಮಾಡಿಯೇ ತೀರುತ್ತೇವೆ. ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕೊಟ್ಟಿದ್ದೇವೆ, ಮುಂದೆನೂ ಕೊಡುತ್ತೇವೆ. ಇಷ್ಟೆಲ್ಲಾ ಕಷ್ಟಗಳ ಮಧ್ಯೆಯೂ ಗಾಣಗಾಪುರಕ್ಕೆ ಹತ್ತು ಕೋಟಿ ಕೊಟ್ಟಿದ್ದೇವೆ.  ಸದ್ಯಕ್ಕೆ ನಮ್ಮ ಮುಂದೆ ಯಾವ ಹೊಸ ತಾಲ್ಲೂಕು ಅಥವಾ ಜಿಲ್ಲೆ ಮಾಡುವ ಯೋಚನೆ ಇಲ್ಲ. ಸಾರಾ ಮಹೇಶ್ ವಿಶ್ವನಾಥ್ ಆಣೆ ಪ್ರಮಾಣ ವಿಚಾರ ನನಗೆ ಗೊತ್ತಿಲ್ಲ. ಅದರ ಬಗ್ಗೆ ನಾನ್ಯಾಕೆ ಮಾತಾಡಲ್ಲ ಎಂದರು.

ಮಹಾರಾಷ್ಟ್ರ ಚುನಾವಣೆ ಪ್ರಚಾರ ತುಂಬಾ ಚೆನ್ನಾಗಿ ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಪರ ಅಲೆಯಿದೆ. ನಾವೇ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ ಎಂದು ತಿಳಿಸಿದರು.(ವರದಿ: ಶಿವರಾಮ ಅಸುಂಡಿ:
---------
First published:October 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ