ಚಿಕ್ಕಮಗಳೂರು: ಬದುಕಿರುವವರು ಸತ್ತಿದ್ದಾರೆ, ಸತ್ತಿದ್ದವರು ಬದುಕಿದ್ದಾರೆ ಅಂತ ಸರ್ಕಾರಿ (Government) ದಾಖಲೆಯಲ್ಲಿ (Documents) ನಮೂದಾಗೋದು ಹಳೆ ವಿಚಾರ. ಕೋರೋನ (Corona) ಟೈಮಿನಲ್ಲಂತೂ ಸತ್ತವರ ಹೆಸರು, ಬದುಕಿರುವವರ ಹೆಸರು ಎಲ್ಲಾ ಮಿಕ್ಸ್ ಆಗಿ, ಯಡವಟ್ಟು ಆಗಿದ್ದು, ಆಗುತ್ತಾ ಇರೋದು ಗೊತ್ತೇ ಇದೆ. ಚಿಕ್ಕಮಗಳೂರಿನಲ್ಲೂ (Chikmagaluru) ಅಂಥದ್ದೇ ಒಂದು ಘಟನೆ ನಡೆದಿದೆ. ಕೋವಿಡ್ ಸಂದರ್ಭದಲ್ಲೇ ಸಂಬಂಧಿಕರ (Relatives) ಕುತಂತ್ರ ಹಾಗೂ ದುಡ್ಡಿನ ಆಸೆಗೆ ಅಥವಾ ತಪ್ಪು ಮಾಹಿತಿಯಿಂದಲೋ ಅಧಿಕಾರಿಗಳು ಮಾಡಿದ ಯಡವಟ್ಟು ಇವುಗಳಿಂದ ಅಜ್ಜಿಯೊಬ್ಬರು ಪರದಾಡುತ್ತಿದ್ದಾರೆ. ಆಸ್ತಿ-ಪಾಸ್ತಿ. ಮನೆ-ಮಠ ಕಳೆದುಕೊಂಡು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಈ ಅಜ್ಜಿಯ (Old Women) ಕಣ್ಣೀರಿನ ಸ್ಟೋರಿ ಇಲ್ಲಿದೆ ಓದಿ…
ಬದುಕಿವಾಗಲೇ ಮರಣ ಪತ್ರ ನೀಡಿದ ಅಧಿಕಾರಿಗಳು!
ವೃದ್ಧೆ ಯೊಬ್ಬರು ಬದುಕಿರುವಾಗಲೇ ಅಧಿಕಾರಿಗಳು ಮರಣ ಪತ್ರ ನೀಡಿ ಯಡವಟ್ಟು ಮಾಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ಪಟ್ಟಣದಲ್ಲಿ ನಡೆದಿದೆ. ಆಸ್ತಿ ಕಬಳಿಕೆಗಾಗಿ ಎನ್.ಆರ್.ಪುರ ಪಟ್ಟಣದ ನಿವಾಸಿ ಸಾರಮ್ಮ ಸಂಬಂಧಿಕರು ವೃದ್ಧೆಯ ಮರಣ ಪತ್ರ ಸೃಷ್ಟಿಸಿ ಆಸ್ತಿ ಕಬಳಿಕೆಸೋಕೆ ಯತ್ನಿಸಿದ್ದು, ಅಧಿಕಾರಿಗಳು ಶಾಮೀಲಾಗಿರೋ ಶಂಕೆ ವ್ಯಕ್ತವಾಗಿದೆ. ಸಾರಮ್ಮ ಬಾಳೆಕೊಪ್ಪ ಗ್ರಾಮದ ಸರ್ವೇ ನಂ 26 ರಲ್ಲಿ ಒಂದು ಎಕರೆ 16 ಗುಂಟೆಯಲ್ಲಿ ರಬ್ಬರ್, ಬಾಳೆ ಸೇರಿದಂತೆ ವಿವಿಧ ಬೆಳೆಗಳನ್ನ ಬೆಳೆದಿದ್ದರು. ಕೊರೋನಾ ಸಮಯದಲ್ಲಿ ಕೊರೋನಾ ಪಾಸಿಟಿವ್ ಬಂದ ಕಾರಣ ಮಗಳ ಮನೆಗೆ ಹೋಗಿದ್ದರು. ಈ ವೇಳೆ ಜಮೀನು ಸಂಬಂಧಿರೊಬ್ಬರಿಗೆ ಉಳುವೆ ಮಾಡಲು ಹೇಳಿ ಹೋಗಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಸಾರಮ್ಮ ಸಂಬಂಧಿ ಇ.ಟಿ.ಬಾಬು ಹಾಗೂ ಶ್ರೀಜಾ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಜ್ಜಿಯ ಜಮೀನು ಕಬಳಿಕೆ ಮಾಡಲು ಯತ್ನಿಸಿದ್ದಾರೆ.
ಅಧಿಕಾರಿಗಳಿಗೆ ಹಣದ ಆಮಿಷ ಒಡ್ಡಿದ ಸಂಬಂಧಿಕರು
ಈ ಸಂಬಂಧ ಅಧಿಕಾರಿಗಳನ್ನ ಬುಕ್ ಮಾಡಿಕೊಂಡು ಮರಣ ಪತ್ರ ಪಡೆದಿದ್ದಾರೆ. ಇಷ್ಟೇ ಅಲ್ಲದೇ ತಾಲೂಕು ಕಚೇರಿಯಲ್ಲಿ ನಮ್ಮ ಅಜ್ಜಿ ಮರಣ ಹೊಂದಿದ್ದಾರೆಂದು ವಂಶವೃಕ್ಷ ಕೂಡ ಪಡೆದಿದ್ದಾರೆ. ಸದ್ಯ ವೃದ್ಧೆ ಸಾರಮ್ಮ ಗ್ರಾಮಕ್ಕೆ ತೆರಳಿ ನ್ಯಾಯಬೆಲೆ ಅಂಗಡಿ ಪಡಿತರ ಪಡೆಯುವ ವೇಳೆ ನಿಮ್ಮ ರೇಷನ್ ಕಾರ್ಡ್ ಸ್ಥಗಿತ ಗೊಂಡಿದೆ ಎಂದು ತಿಳಿಸಿದಾಗ ಸಾರಮ್ಮ ತಾಲೂಕು ಕಚೇರಿಗೆ ತೆರಳಿ ವಿಚಾರಿಸಿದ್ದಾಗ ಪ್ರಕರಣ ಬಯಲಿಗೆ ಬಂದಿದೆ.
ಅಷ್ಟೇ ಅಲ್ಲದೇ ಇ.ಟಿ.ಬಾಬು, ಶ್ರೀಜಾ ನಕಲಿ ದಾಖಲಿಸಿದ್ರು ಸೃಷ್ಟಿಸಿ ಪೌತಿ ಖಾತೆಗೂ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ಅಜ್ಜಿ ಬದುಕಿರುವಾಗಲೇ ನಕಲಿ ದಾಖಲಿ ಸೃಷ್ಟಿ ಮಾಡಿ ಆಸ್ತಿ ಕಬಳಿಗೆ ಯತ್ನ ಮಾಡಿದಲ್ಲದೇ ಸಾರಮ್ಮ ಕುಟುಂಬಸ್ಥರಿಗೆ ಜೀವ ಭಯ ಕೂಡ ಹಾಕಿದ್ದಾರೆ. ನೀವು ಜಮೀನಿನ ಬಗ್ಗೆ ತಲೆಕೆಡಿಸಿಕೊಂಡರೇ ನಿಮ್ಮನ್ನ ಉಳಿಸಿವುದಿಲ್ಲ ಎಂದು ಸಾರಮ್ಮ ಗೆ ಬೆದರಿಕೆ ಹಾಕಿದ್ದಾರೆಂದು ಸಾರಮ್ಮ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: Bengaluru: ಪತ್ನಿ ಇನ್ನೊಬ್ಬನ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದನ್ನ ನೋಡಬೇಕಂತೆ; ಗಂಡನ ವಿಲಕ್ಷಣ ಬಯಕೆಗೆ ಹೆಂಡತಿಯದ್ದೂ ಸಾಥ್!
ಮಾಧ್ಯಮದವರ ಮುಂದೆ ಆಳಲು ತೋಡಿಕೊಂಡ ಸಾರಮ್ಮ
ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಸಾರಮ್ಮ ನಾನು ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದೇನೆ. ನನಗೆ ಬಾಳೆಕೊಪ್ಪ ಗ್ರಾಮದ ಸರ್ವೇ ನಂ 26 ರಲ್ಲಿ ಒಂದು ಎಕರೆ 16 ಗುಂಟೆ ಜಮೀನು ಮಂಜುರಾಗಿತ್ತು. ಕೊರೋನಾ ಬಂದ ಕಾರಣ ನಾನು ಮಗಳ ಮನೆಗೆ ಹೋಗಿದ್ದೆ. ಇದನ್ನ ಇ.ಟಿ.ಬಾಬು ಹಾಗೂ ಶ್ರೀಜಾ ಗೆ ಉಳುಮೆ ಮಾಡಲು ಹೇಳಿ ಹೋಗಿದ್ದೆ. ಇದನ್ನ ಬಂಡವಾಳ ಮಾಡಿಕೊಂಡ ನಾನು ಸತ್ತಿದ್ದೀನಿ ಎಂದು ಮರಣ ಪತ್ರ ಸೃಷ್ಟಿ ಮಾಡಿದ್ದಾರೆ. ದಯಮಾಡಿ ಅಧಿಕಾರಿಗಳು ನನಗೆ ನ್ಯಾಯ ಕೊಡಿಸಬೇಕು, ತಪ್ಪಿಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಕರಣ ಬಯಲಿಗೆ ಬಂದಿದ್ದು ಹೇಗೆ?
ನಕಲಿ ದಾಖಲೆ ಸೃಷ್ಟಿ ಸೋ ಯತ್ನ ದಲ್ಲಿರುವಾಗ ಗ್ರಾಮ ಲೆಕ್ಕಾಧಿಕಾರಿ ಹತ್ತಿರ ಪ್ರಕರಣ ಹೋಗಿತ್ತು. ಗ್ರಾಮ ಲೆಕ್ಕಾಧಿಕಾರಿ ಅಜ್ಜಿ ಬದುಕಿರುವಾಗಲೇ ಯಾಕೆ ಈ ರೀತಿ ದಾಖಲೆ ತಂದಿದ್ದೀರಾ ಎಂದು ಎಚ್ಚರಿಕೆ ನೀಡಿ ಕಳಿಸಿದ್ದಾರೆ. ಅಷ್ಟೇ ಅಲ್ಲದೆ ಸಹಿ ಮಾಡೋಲ್ಲ ಈ ದಾಖಲೆ ಇಲ್ಲಿಗೆ ನಿಲ್ಲಿಸಿ ಎಂದು ವೃದ್ಧೆ ಸಂಬಂಧಿಕರಿಗೆ ಎನ್.ಆರ್.ಪುರ ಗ್ರಾಮ ಲೆಕ್ಕಾಧಿಕಾರಿ ಖಡಕ್ ಸೂಚನೆ ಕೊಟ್ಟು ಕಳುಹಿಸಿದ್ದಾರೆ.
ತನಿಖೆ ಭರವಸೆ ನೀಡಿದ ತಹಶೀಲ್ದಾರ್
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಎನ್.ಆರ್.ಪುರ ತಹಶೀಲ್ದಾರ್ ಗೀತಾ ಈ ಕೇಸ್ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ನಮ್ಮ ಕಚೇರಿಗೆ ಅರ್ಜಿ ಕೂಡ ಬಂದಿದೆ. ಪ್ರಕರಣ ತನಿಖೆ ಮಾಡಿ ಮೇಲ್ನೋಟ ಯಾರ ತಪ್ಪು ಕಾಣಿಸುತ್ತದೆ ಅಂತವರ ವಿರುದ್ಧ ಎಫ್ ಐಆರ್ ದಾಖಲಿಸುತ್ತೇನೆ. ಸಂಬಂಧಿಕರ ಆಗಿರಬಹುದು, ಮರಣ ಪತ್ರ ನೀಡಿರುವವರ ಬಗ್ಗೆ ಕೂಡ ಎಫ್ ಐ ಆರ್ ದಾಖಲಿಸಲಾಗುವುದು. ತಪ್ಪಿಸ್ಥರಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ: Marriage: ಇಲ್ಲಿನ ಜನಕ್ಕೆ ಮನೆಯಿಲ್ಲ, ಯುವಕರಿಗೆ ಮದುವೆಯೂ ಇಲ್ಲ! ಈ ವಿಚಿತ್ರ ಸಮಸ್ಯೆಗೆ ಕಾರಣವೇನು?
ಒಟ್ಟಾರೆ, ವೃದ್ಧೆ ಬದುಕಿರುವಾಗಲೇ ಮರಣ ಪತ್ರ ನೀಡಿದ ಅಧಿಕಾರಿಗಳ ತಪ್ಪು ಎದ್ದು ಕಾಣುತ್ತಿದ್ದು ಅಧಿಕಾರಿಗಳ ವಿರುದ್ಧ ಅಜ್ಜಿ ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೇ ನಕಲಿ ವಂಶವೃಕ್ಷ , ಪೌತಿ ಖಾತೆಗೂ ಯತ್ನ ಮಾಡಿರೋದು ನಿಜಕ್ಕೂ ದುರಂತವೇ ಸರಿ. ರಾಜಕಾರಣಿಗಳ ಬೆಂಬಲದಿಂದ ಇ.ಟಿ.ಬಾಬು ಹಾಗೂ ಶ್ರೀಜಾ ಈ ರೀತಿ ಮೆರೆಯುತ್ತಿದ್ದಾರೆಂಬ ಅನುಮಾನಗಳು ಮೂಡಿದೆ. ನೊಂದ ವೃದ್ಧೆ ಆಳಲು ತೋಡಿಕೊಂಡಿದ್ದು ಸಂಬಂಧಿಪಟ್ಟ ಅಧಿಕಾರಿ ಸಿಕ್ತಿಲ್ಲ ಕ್ರಮ ಕೈಗೊಂಡು ವೃದ್ಧೆಗೆ ಜಮೀನು ಬಿಡಿಸಿಕೊಡಬೇಕು, ಜೊತೆ ಪಡಿತರ ಚೀಟಿ ನೀಡಬೇಕೆಂದು ಎಲ್ಲರ ಆಶಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ