#RejectDisqualifiedMLAs: ಟ್ವಿಟರ್​ನಲ್ಲಿ ಟ್ರೆಂಡ್​ ಆಯ್ತು ಅನರ್ಹ ಶಾಸಕರ ಸೋಲಿಸಿ ಎಂಬ ಹ್ಯಾಷ್​ಟ್ಯಾಗ್​

ತಮ್ಮ ಲಾಭಾಕ್ಕಾಗಿ ತಮ್ಮನ್ನೇ ಮಾರಿಕೊಂಡ ಅವರು, ಮತದಾರರ ಅಭಿವೃದ್ಧಿ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಮಾಡಿ ಅನರ್ಹ ಶಾಸಕರಿಗೆ ಯಾವುದೇ ಕಾರಣಕ್ಕೂ ಮತಹಾಕದಂತೆ ಫೇಸ್​ಬುಕ್​, ಟ್ವಿಟರ್​ಗಳಲ್ಲಿ ಫೋಸ್ಟ್​ ಮಾಡುತ್ತಿದ್ದಾರೆ.

Seema.R | news18-kannada
Updated:December 4, 2019, 11:38 AM IST
#RejectDisqualifiedMLAs: ಟ್ವಿಟರ್​ನಲ್ಲಿ ಟ್ರೆಂಡ್​ ಆಯ್ತು ಅನರ್ಹ ಶಾಸಕರ ಸೋಲಿಸಿ ಎಂಬ ಹ್ಯಾಷ್​ಟ್ಯಾಗ್​
ಅನರ್ಹ ಶಾಸಕರು
  • Share this:
ಬೆಂಗಳೂರು (ಡಿ. 04): 15 ವಿಧಾನಸಭಾ ಉಪಚುನಾವಣಾ ಕಣಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಈಗಾಗಲೇ ಭರ್ಜರಿ ಬಹಿರಂಗ ಪ್ರಚಾರ ನಡೆಸಿದ ಚುನಾವಣಾ ಅಭ್ಯರ್ಥಿಗಳು ಇಂದು ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ.

ಒಂದೂವರೆ ವರ್ಷದ ಹಿಂದಷ್ಟೇ ಸಾರ್ವತ್ರಿಕ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದ,  ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ  ಅನರ್ಹಗೊಂಡು ಮತ್ತೊಮ್ಮೆ ಚುನಾವಣೆಗೆ ನಿಂತಿದ್ದು, ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಹಣ, ಅಧಿಕಾರದ ಆಸೆಗೆ ಜನರ ತೆರಿಗೆಯನ್ನು ದುಂದುವೆಚ್ಚ ಮಾಡಿ ಮತ್ತೊಮ್ಮೆ ಚುನಾವಣೆ ಎದುರಾಗುವಂತೆ ಮಾಡಿದ ಅನರ್ಹ ಶಾಸಕರ ನಡೆಗೆ ಈಗಾಗಲೇ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇದೇ ಅಸ್ತ್ರವನ್ನು ಕಾಂಗ್ರೆಸ್​-ಜೆಡಿಎಸ್​ ನಾಯಕರು ಬಳಸಿಕೊಂಡು ಚುನಾವಣಾ ಪ್ರಚಾರ ನಡೆಸಿ, ಪ್ರಜ್ಞಾವಂತ ಮತದಾರರು ಅನರ್ಹಶಾಸಕರನ್ನು ಸೋಲಿಸುವಂತೆ ಮನವಿ ಮಾಡಿದ್ದರು.

ಇನ್ನು ಜನರ ಮೇಲೆ ಅತಿಹೆಚ್ಚು ಪ್ರಭಾವ ಬೀರುವ ಸಾಮಾಜಿಕ ಜಾಲತಾಣದಲ್ಲಿ ಕೂಡ ಅನರ್ಹ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ಅವರನ್ನು ಮತದಾರರು ತಿರಸ್ಕರಿಸಿ ಎಂಬ ಹ್ಯಾಷ್​ಟ್ಯಾಗ್​ ಟ್ರೆಂಡ್​ ಸೃಷ್ಟಿಸಿದೆ.
ಅನರ್ಹಶಾಸಕರು ಏಕೆ ಮೈತ್ರಿ ಸರ್ಕಾರ ಕೆಡವಿ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದರು. ತಮ್ಮ ಲಾಭಕ್ಕಾಗಿ ತಮ್ಮನ್ನೇ ಮಾರಿಕೊಂಡ ಅವರು, ಮತದಾರರ ಅಭಿವೃದ್ಧಿ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಮಾಡಿ ಅನರ್ಹ ಶಾಸಕರಿಗೆ ಯಾವುದೇ ಕಾರಣಕ್ಕೂ ಮತಹಾಕದಂತೆ ಫೇಸ್​ಬುಕ್​, ಟ್ವಿಟರ್​ಗಳಲ್ಲಿ ಫೋಸ್ಟ್​ ಮಾಡುತ್ತಿದ್ದಾರೆ.

ನಿವೃತ್ತಿ ನ್ಯಾಯಾಮೂರ್ತಿ ಸಂತೋಷ್​ ಹೆಗ್ಡೆ, ದೊರೆಸ್ವಾಮಿ ಸೇರಿದಂತೆ ಮೊದಲಾದವರು ನೀಡಿದ ಹೇಳಿಕೆಗಳನ್ನು ಉಲ್ಲೇಖಿಸಿ ಮತದಾರರು ಪ್ರಚಾರದ ವೇಳೆ ಅನರ್ಹ ಶಾಸಕರಿಗೆ ಕ್ಷೇತ್ರಗಳಿಂದ ಘೇರಾವ್​ ಕೂಡ ಹಾಕಿದ್ದರು. ಅಂತಹ ಅನರ್ಹಶಾಸಕರ ನಡೆ, ಪ್ರಸ್ತುತ ರಾಜಕೀಯ ಬೆಳವಣಿಗೆಗಳನ್ನು  ರಾಜ್ಯದ ಜನರು ಅರ್ಥ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜನರು ಬದ್ಧತೆಯುಳ್ಳ ಕಾರ್ಯಕರ್ತರನ್ನು ಗೆಲ್ಲಿಸಿ, ಅನರ್ಹರಿಗೆ ತಕ್ಕಪಾಠ ಕಲಿಸಬೇಕು ಎಂದು ಕೋರಿಕೊಂಡಿದ್ದಾರೆ.ನಮ್ಮನ್ನು ಪ್ರತಿನಿಧಿಸುವ ನಾಯಕರಾಗಿ ತಮ್ಮನ್ನೇ ಮಾರಿಕೊಂಡ ಅವರಿಗೆ ನಾಚಿಕೆಯಾಗಬೇಕು. ಇವರನ್ನು ಯಾವುದೇ ಕಾರಣಕ್ಕೂ ಬೆಂಬಲಿಸಬಾರದು ಎಂದೊಬ್ಬರು ಟ್ವೀಟ್ ಮಾಡಿದ್ಧಾರೆ.

ಅನರ್ಹಗೊಂಡ 15 ಶಾಸಕರು ಹಣ, ಜಾತಿಬಲದಿಂದ ಸುಲಭವಾಗಿ ಮತ್ತೆ ಟಿಕೆಟ್​ ಪಡೆದು ಚುನಾವಣೆಗೆ ನಿಂತಿದ್ದಾರೆ. ನಾವು ಸುಮ್ಮನಿದ್ದರೆ, ಅವರು ಮಂತ್ರಿಗಳಾಗುವಲ್ಲಿ ಕೂಡ ಅಚ್ಚರಿಯಿಲ್ಲ ಎಂಬ ಟ್ವೀಟ್​ಗಳು ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿದೆ.
First published: December 4, 2019, 11:38 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading