Vaccine For Children: ಜ.3ರಿಂದ ಮಕ್ಕಳಿಗೆ ಕೊರೋನಾ ಲಸಿಕೆ, ಇಂದಿನಿಂದ ಕೋ-ವಿನ್​ ವೆಬ್​ಸೈಟ್​ನಲ್ಲಿ ನೋಂದಣಿ ಆರಂಭ!

ಕೇಂದ್ರ ಸರ್ಕಾರವು 15 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಮಾತ್ರ ಲಸಿಕೆ ಡೋಸ್ ನೀಡಲು ನಿರ್ಧರಿಸಿದೆ. ಕೋವಿನ್ ಪೋರ್ಟಲ್‌ನಲ್ಲಿ (COWIN Portal) ಮಕ್ಕಳ ಲಸಿಕೆ ನೋಂದಣಿ ಇಂದಿನಿಂದ ಆರಂಭವಾಗಿದೆ. ನೀವು ಇಂದಿನಿಂದಲೇ ನಿಮ್ಮ ಹೆಸರನ್ನು ಕೊರೋನಾ ಲಸಿಕೆ ಪಡೆಯಲು ನೊಂದಾಯಿಸಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊರೋನಾ (Coronavirus) ರೂಪಾಂತರಿ ತಳಿ ಒಮಿಕ್ರೋನ್‌ (Omicron) ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ(Children) ಕೋವ್ಯಾಕ್ಸಿನ್‌ ಲಸಿಕೆ ನೀಡಲು ತೀರ್ಮಾನಿಸಲಾಗಿದೆ. ಹೀಗಾಗಿ ಜ.3ರಿಂದ ರಾಜ್ಯದ (Karnataka) ಎಲ್ಲ ಜಿಲ್ಲೆಗಳು ಹಾಗೂ ವಿಧಾನಸಭಾ ಕ್ಷೇತ್ರಗಳಲ್ಲಿ ಮಕ್ಕಳ ಲಸಿಕಾಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರಿಗೆ ಸೂಚಿಸಿದ್ದಾರೆ. ಕೊರೋನಾ ನಿಯಂತ್ರಣ ಕಾರ್ಯತಂತ್ರಗಳಲ್ಲಿ ಲಸಿಕಾಕರಣವೂ ಒಂದಾಗಿದ್ದು, ಅತ್ಯಂತ ಯಶಸ್ವಿ ಹಾಗೂ ಪರಿಣಾಮಕಾರಿ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೇಂದ್ರ ಸರ್ಕಾರದ (Central Government) ಮಾರ್ಗಸೂಚಿಯಂತೆ ರಾಜ್ಯದಲ್ಲಿ 2021ರ ಜನವರಿ 16ರಿಂದ ವಿವಿಧ ಗುಂಪಿನ ಫಲಾನುಭವಿಗಳಿಗೆ ವಿವಿಧ ಹಂತಗಳಲ್ಲಿ ಕೊರೋನಾ ಲಸಿಕಾಕರಣ (Vaccination) ನಡೆಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ಈವರೆಗೆ 8.5 ಕೋಟಿಗೂ ಅಧಿಕ ಡೋಸ್‌ ಲಸಿಕೆ ನೀಡಲಾಗಿದೆ. ಈ ಪೈಕಿ 4.7 ಕೋಟಿ (ಶೇ.97) ಮೊದಲ ಡೋಸ್‌ ಹಾಗೂ 3.78 ಕೋಟಿ (ಶೇ.77) ಎರಡನೇ ಡೋಸ್‌ ಲಸಿಕೆ ನೀಡಲಾಗಿದೆ. ಮಕ್ಕಳಿಗೂ ಲಸಿಕೆ ನೀಡಬೇಕು ಎಂಬ ಕೂಗು ಕೇಳಿಬಂದಿತ್ತು. ಇದೀಗ ಮಕ್ಕಳಿಗೂ ಜನವರಿ 3ರಿಂದ ಲಸಿಕೆ ನೀಡಲು ಸರ್ಕಾರ ತೀರ್ಮಾನಿಸಿದೆ. 

ಇಂದಿನಿಂದ ಮಕ್ಕಳಿಗೆ ಕೊರೋನಾ ಲಸಿಕೆ ನೋಂದಣಿ ಆರಂಭ

ಕರೋನಾ ರೂಪಾಂತರ ಒಮಿಕ್ರಾನ್‌ನ  ಭೀತಿಯ ನಡುವೆ, ಇತ್ತೀಚೆಗೆ ಡಿಸಿಜಿಐ (DCGI) ಮಕ್ಕಳಿಗೆ ನೀಡಲು ಕೋವಾಕ್ಸಿನ್ ಲಸಿಕೆಯನ್ನು ಅನುಮೋದಿಸಿದೆ. ತುರ್ತು ಸಂದರ್ಭದಲ್ಲಿ 12 ರಿಂದ 18 ವರ್ಷದ ಮಗುವಿಗೆ ಈ ಲಸಿಕೆಯನ್ನು ನೀಡಬಹುದು. 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡಲು ಡಿಜಿಸಿಐ ಅನುಮೋದನೆ ನೀಡಿದೆಯಾದರೂ, ಕೇಂದ್ರ ಸರ್ಕಾರವು 15 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಮಾತ್ರ ಲಸಿಕೆ ಡೋಸ್ ನೀಡಲು ನಿರ್ಧರಿಸಿದೆ. ಕೋವಿನ್ ಪೋರ್ಟಲ್‌ನಲ್ಲಿ (COWIN Portal) ಮಕ್ಕಳ ಲಸಿಕೆ ನೋಂದಣಿ ಇಂದಿನಿಂದ ಆರಂಭವಾಗಿದೆ. ನೀವು ಇಂದಿನಿಂದಲೇ ನಿಮ್ಮ ಹೆಸರನ್ನು ಕೊರೋನಾ ಲಸಿಕೆ ಪಡೆಯಲು ನೊಂದಾಯಿಸಬಹುದು. ನೋಂದಣಿ ಮಾಡಿಕೊಂಡವರಿಗೆ ಮೊದಲ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತೆ.

ಇದನ್ನು ಓದಿ : ಕರ್ನಾಟಕದಲ್ಲಿ ಹೆಚ್ಚಾಗಲಿರುವ ಚಳಿ, ಈ ರಾಜ್ಯಗಳಲ್ಲಿ ಅಕಾಲಿಕ ಮಳೆ

ಲಸಿಕಾಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡುವಂತೆ ಸಿಎಂ ಸೂಚನೆ!

ನ್ಯಾಷನಲ್‌ ಟೆಕ್ನಿಕಲ್‌ ಅಡ್ವೈಸರಿ ಗ್ರೂಪ್‌ ಆಫ್‌ ಇಮ್ಯೂನಿಜೇಶನ್‌(ಎನ್‌ಟಿಎಜಿಐ) ಶಿಫಾರಸು ಹಾಗೂ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಜ್ಯದ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಅದರಂತೆ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಈ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕೆ ಸಮನ್ವಯ ಸಾಧಿಸಲಿದ್ದಾರೆ. ಹೀಗಾಗಿ 2022 ಜ.3ರಂದು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗಳಲ್ಲಿ ಹಾಗೂ ಶಾಸಕರು ವಿಧಾನಸಭಾ ಕ್ಷೇತ್ರಗಳಲ್ಲಿ ಈ ಮಕ್ಕಳ ಲಸಿಕಾಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡುವಂತೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕೋರಿದ್ದಾರೆ.

ಇದನ್ನು ಓದಿ: Congress ಪಾದಯಾತ್ರೆಗೆ ನಾದಬ್ರಹ್ಮನ ಸಾಥ್ - 2 ಹಾಡು ಬರೆಯಲಿರುವ ಹಂಸಲೇಖ

ಭಾರತದಲ್ಲಿ ಹೇಗಿದೆ ಸಿದ್ಧತೆ?

- ಜನವರಿ 1 ರಿಂದ CoWin ಪೋರ್ಟಲ್‌ನಲ್ಲಿ ಮಕ್ಕಳ ಲಸಿಕೆ ನೋಂದಣಿ ಆರಂಭ.
-ಈ ಸಮಯದಲ್ಲಿ, ವಿದ್ಯಾರ್ಥಿ ಗುರುತಿನ ಚೀಟಿಯಾಗಿ ಹತ್ತನೇ ತರಗತಿಯ ಐಡಿಯನ್ನು ಸೇರಿಸಲಾಗುತ್ತದೆ.
- ಜನವರಿ 3 ರಿಂದ ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯ ಅಧಿಕೃತವಾಗಿ ಆರಂಭ.
- ಪ್ರಸ್ತುತ, ಭಾರತೀಯ ಮಕ್ಕಳಿಗೆ ಕೋವಾಕ್ಸಿನ್ (Covaxin) ಅನ್ನು ಹಾಕಲಾಗುತ್ತದೆ.
- ಇದಕ್ಕಾಗಿ 28 ದಿನಗಳ ಅಂತರವನ್ನು ನಿಗದಿಪಡಿಸಲಾಗಿದೆ.

ವಯಸ್ಸಾದವರಿಗೆ ಬೂಸ್ಟರ್ ಡೋಸ್ ವ್ಯವಸ್ಥೆ :

- ಹೊಸ ವರ್ಷದಲ್ಲಿ ನೋಂದಣಿ ಪ್ರಾರಂಭವಾಗುತ್ತದೆ
- ಈ ಹಿಂದಿನಿಂತೆಯೇ ನಡೆಯಲಿದೆ ಪ್ರಕ್ರಿಯೆ
- ಮೂರನೇ ಡೋಸ್‌ಗೆ, 9 ತಿಂಗಳ ಅಂತರವು ಅಗತ್ಯವಾಗಿರುತ್ತದೆ.
Published by:Vasudeva M
First published: