HOME » NEWS » State » REGARDLESS OF BUFFER ZONE BANGALORE LAKE ARE ILLEGALLY POURED INTO SOIL SAYS MLA ARAGA JNANENDRA HK

ಬಫರ್​ ಜೋನ್​ ಲೆಕ್ಕಿಸದೆ, ಬೆಂಗಳೂರು ಕೆರೆಗಳಿಗೆ ಮಣ್ಣು ಸುರಿದು ಅಕ್ರಮವಾಗಿ ಒತ್ತುವರಿ; ಶಾಸಕ ಆರಗ ಜ್ಞಾನೇಂದ್ರ ಆರೋಪ

ಒಟ್ಟು ನಮ್ಮ ರಾಜ್ಯದಲ್ಲಿ 36,568 ಕೆರೆಗಳು ಇದ್ದು, ಇದರಲ್ಲಿ 211 ಕೆರೆಗಳು ಬೆಂಗಳೂರಿನಲ್ಲಿವೆ. 160 ಕೆರೆಗಳು ಬಿಬಿಎಂಪಿ ವ್ಯಾಪ್ತಿಯಲ್ಲಿವೆ

news18-kannada
Updated:March 16, 2020, 4:34 PM IST
ಬಫರ್​ ಜೋನ್​ ಲೆಕ್ಕಿಸದೆ, ಬೆಂಗಳೂರು ಕೆರೆಗಳಿಗೆ ಮಣ್ಣು ಸುರಿದು ಅಕ್ರಮವಾಗಿ ಒತ್ತುವರಿ; ಶಾಸಕ ಆರಗ ಜ್ಞಾನೇಂದ್ರ ಆರೋಪ
ಶಾಸಕ ಆರಗ ಜ್ಞಾನೇಂದ್ರ
  • Share this:
ಬೆಂಗಳೂರು(ಮಾ.16) : ಬೆಂಗಳೂರು ನಗರ ವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಮತ್ತು ಪುನಶ್ಚೇತನ ಕಾರ್ಯದಲ್ಲಿ ನಗರಾಭಿವೃದ್ಧಿ ಇಲಾಖೆ, ಸಣ್ಣ ನೀರಾವರಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಪರಸ್ಪರ ಸಹಯೋಗದೊಂದಿಗೆ ಕರ್ತವ್ಯ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾಗಿವೆ ಎಂದು ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದರು.

ವಿಧಾನ ಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಮಿತಿ ವರದಿ ಸಿದ್ದಪಡಿಸದೆ. ಬಫರ್ ಜೋನ್ ಲೆಕ್ಕಿಸದೆ ಅಕ್ರಮವಾಗಿ ಕಟ್ಟಡ ನಿರ್ಮಿಸಲಾಗಿದೆ ಕೆರೆಗಳಿಗೆ ಮಣ್ಣನ್ನು ಹಾಕಿ ಅದನ್ನು ಕಬಳಿಕೆ ಮಾಡಲಾಗುತ್ತಿದೆ. ಕೆರೆಗಳ ಒತ್ತುವರಿ ಮಾಡಿಕೊಂಡಿರುವ ಖಾಸಗಿ ಕಂಪನಿಗಳ ಮಾಲೀಕರು ಅಥವಾ ಸಾರ್ವಜನಿಕರ ವಿರುದ್ಧ ತಹಶೀಲ್ದಾರಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದರು.

ಒಟ್ಟು ನಮ್ಮ ರಾಜ್ಯದಲ್ಲಿ 36,568 ಕೆರೆಗಳು ಇದ್ದು, ಇದರಲ್ಲಿ 211 ಕೆರೆಗಳು ಬೆಂಗಳೂರಿನಲ್ಲಿವೆ. 160 ಕೆರೆಗಳು ಬಿಬಿಎಂಪಿ ವ್ಯಾಪ್ತಿಯಲ್ಲಿವೆ. ಕೆರೆಗಳ ಮೇಲೆ ಅನಾಚಾರದ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಲಾಗುವುದು. 2015ರಲ್ಲಿ ಕೊಟ್ಟಿದ್ದ ವರದಿ ಆಧಾರಿಸಿ ಈಗ ಪರಿಶೀಲನೆ ನಡೆಸಲಾಗುತ್ತಿದ್ದು, ಸಾಕಷ್ಟು ವಿಸ್ತೃತವಾಗಿ ಚರ್ಚೆ ನಡೆಸಲಾಗಿದೆ. ಮಾ.13 ರಂದು ಮೇಲ್ಮನೆ ಹಾಗೂ ಕೆಳಮನೆಯಲ್ಲಿ ವರದಿ ಮಂಡನೆ ಮಾಡಲಾಗಿದೆ ಎಂದರು.

ಎರೆಮಲ್ಲಪ್ಪ ಚೆಟ್ಟಿ ಕೆರೆಯನ್ನು ಒಂದು ತಿಂಗಳೊಳಗಾಗಿ ಸರ್ವೆ ಮಾಡಿಸಿ ಒತ್ತುವರಿ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಂಡು ವರದಿ ನೀಡುವುದಾಗಿ ಸಮಿತಿಗೆ ನೀರಾವರಿ ಇಲಾಖೆ ಕಾರ್ಯದರ್ಶಿ ಭರವಸೆ ನೀಡಿದ್ದರು. ಆದರೆ ಯಾವುದೇ ಅಗತ್ಯ ಕ್ರಮ ವಹಿಸಿಲ್ಲ ಎಂದರು.

ಇದನ್ನೂ ಓದಿ : ಚಾಮರಾಜನಗರ ಗಡಿಯಲ್ಲಿ ಕೊರೋನಾ ಕಟ್ಟೆಚ್ಚರ; ಪ್ರವಾಸಿಗರಿಲ್ಲದೆ ಬಣಗುಡುತ್ತಿದೆ ಬಂಡೀಪುರ

ಹುಳಿಮಾವು ಕೆರೆಯ ದಂಡೆಯನ್ನು ಅಧಿಕಾರಿಗಳ ಬೇಜವಾಬ್ದಾರಿಯಿಂದ ಒಡೆದು ಹಾಕಲಾಗುತ್ತದೆ. ಆದರೆ ಇನ್ನೂ ಯಾರ ಮೇಲೂ ಪ್ರಕರಣ ದಾಖಲಾಗಿಲ್ಲ. ತಪ್ಪು ಮಾಡಿದ ಅಧಿಕಾರಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ಆಯುಕ್ತರು ಭರವಸೆ ನೀಡಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಪಾಲಿಕೆ ಕಮಿಷನರ್ ಮೇಲೆನೂ ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಲಾಗಿದೆ ಎಂದು ಹೇಳಿದರು. 
Youtube Video
First published: March 16, 2020, 4:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories