News18 India World Cup 2019

ಡೈರಿಯಿಂದ ಹಾಲು ಖರೀದಿಸಲು ನಿರಾಕರಣೆ ; ರಸ್ತೆಗೆ ಹಾಲು ಸುರಿದು ರೈತರಿಂದ ಪ್ರತಿಭಟನೆ

news18
Updated:June 11, 2018, 1:04 PM IST
ಡೈರಿಯಿಂದ ಹಾಲು ಖರೀದಿಸಲು ನಿರಾಕರಣೆ ;  ರಸ್ತೆಗೆ ಹಾಲು ಸುರಿದು ರೈತರಿಂದ ಪ್ರತಿಭಟನೆ
news18
Updated: June 11, 2018, 1:04 PM IST
- ಲೋಹಿತ್ ಶಿರೋಳ, ನ್ಯೂಸ್18 ಕನ್ನಡ

ಚಿಕ್ಕೋಡಿ ( ಜೂನ್ 11) :  ರಸ್ತೆಗೆ ಹಾಲು ಸಿರಿದು ರೈತರು ಪ್ರತಿಭಟನೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮುಗಳಿ ಗ್ರಾಮದಲ್ಲಿ ನಡೆದಿದೆ.

ಮಹಾರಾಷ್ಟ್ರ ದ ಗೋಕುಲ್ ಡೈರಿಯಿಂದ ಹಾಲು ಖರೀದಿಸಲು ನಿರಾಕರಣೆ ಹಿನ್ನಲೆ ರೈತರು ಪ್ರತಿಭಟನೆ ನಡೆಸಿದ್ದಾರೆ. ಕಳೆದ 10 ವರ್ಷಗಳಿಂದ ಗೋಕುಲ ಡೈರಿಯವರಿ ಕರ್ನಾಟಕ್ಕಿಂತ ಜಾಸ್ತಿ ಬೆಲೆ ನೀಡಿ ಮನೆ ಮನೆಗೆ ಬಂದು ಹಾಲು ಖರೀದಿಸುತ್ತಾ ಬಂದಿದ್ದ ಡೈರಿಯವರು ಈಗ ಎಕಾಏಕಿಕ ಹಾಲು ಖರಿದಿ ಮಾಡಲು ನಿರಾಕರಣೆ ಮಾಡುತ್ತಿದ್ದಾರೆ.

ನಿತ್ಯ ಒಂದೆ ಗ್ರಾಮದಲ್ಲಿ 10 ಸಾವಿರ ಲೀಟರ್ ಹಾಲು ಉತ್ಪಾದನೆ ಮಾಡುತ್ತಿರುವ ರೈತರು ಈಗ ಕಂಗೆಟ್ಟಿದ್ದಾರೆ.  ಇನ್ನು ಇದೆ ಹಾಲನ್ನ ಬೇರೆ ಡೈರಿಗಳಿ ನೀಡಲು ಮುಂದಾದರೆ ಬೇರೆ ಡೈರಿಯ ಮಾಲಿಕರು ಇಷ್ಟು ದಿನ ನೀವು ನಮಗೆ ಹಾಲು ನೀಡಿಲ್ಲ.

ಈಗೆಕೆ ನೀಡುತ್ತಿರಿ ನಾವು ನಿಮ್ಮ ಹಾಲನ್ನ ಖರಿದಿ ಮಾಡಲ್ಲ ಎನ್ನುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
First published:June 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...