ಫ್ರಿಡ್ಜ್‌ನಲ್ಲಿ ಕೊಳೆತ ಆಹಾರ: ಪರಿಹಾರ ಧನ ನೀಡುವಂತೆ MESCOMಗೆ ಆದೇಶ

ಫ್ರಿಡ್ಜ್‌ನಲ್ಲಿ ಶೇಖರಿಸಿಟ್ಟಿದ್ದ ಎಲ್ಲಾ ಆಹಾರ ಪದಾರ್ಥಗಳ ಒಟ್ಟು ಮೊತ್ತ 6,000 ರೂ. 2018ರ ಜೂನ್ 19 ರಂದು ನಾನು ಮರಳಿದಾಗ ಫ್ರಿಡ್ಜ್‌ನಿಂದ ಕೆಟ್ಟ ವಾಸನೆ ಬರುತಿತ್ತು ಮತ್ತು ಫ್ರಿಡ್ಜ್ ಒಳಗೆ ಇಟ್ಟಿದ್ದ ಎಲ್ಲಾ ಆಹಾರ ಪದಾರ್ಥಗಳು ಕೊಳೆತು ಹೋಗಿದ್ದವು” ಎಂದು ಕಬೀರ್ ತಿಳಿಸಿದ್ದಾರೆ.

ಫ್ರಿಡ್ಜ್

ಫ್ರಿಡ್ಜ್

  • Share this:

ಮೆಸ್ಕಾಂ (MESCOM) ಸಿಬ್ಬಂದಿಯ ಅಚಾತುರ್ಯದಿಂದ, ವಿದ್ಯುತ್ ಕಡಿತದ (Power Cut) ಕಾರಣಕ್ಕೆ , ಗ್ರಾಹಕರೊಬ್ಬರ (Customer) ಫ್ರಿಡ್ಜ್‌ನಲ್ಲಿ (Fridge) ಸಂಗ್ರಹಿಸಿಟ್ಟಿದ್ದ ಆಹಾರ ಪದಾರ್ಥಗಳು (Food) ಹಾಳಾಗಿದ್ದಕ್ಕೆ, ಪರಿಹಾರ ಧನ ನೀಡಬೇಕು ಎಂದು ದಕ್ಷಿಣ ಕನ್ನಡದ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗವು (ಡಿಸಿಡಿಆರ್‌ಸಿ- DCDRC) ಮೆಸ್ಕಾಂ (ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ಲಿಮಿಟೆಡ್)ಗೆ ಸೂಚಿಸಿದೆ. ಸರಿಯಾದ ಸಮಯಕ್ಕೆ ಬಿಲ್ ಪಾವತಿ ಮಾಡಿದರೂ, ಮೆಸ್ಕಾಂ ಸಿಬ್ಬಂದಿ ತಮ್ಮ ಮನೆಯ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಿದ್ದಾರೆ ಎಂದು ಉಲ್ಲಾಳದ (Ullala) ಮಿಲ್ಲತ್ ನಗರದ ನಿವಾಸಿ ಕಬೀರ್ ಉಲ್ಲಾಳ್, ದಕ್ಷಿಣ ಕನ್ನಡ ಜಿಲ್ಲಾ ಗ್ರ್ರಾಹಕರ ವಿವಾದ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.


ಮನೆಯ ಸದಸ್ಯರು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ, ಮೆಸ್ಕಾಂ ಸಿಬ್ಬಂದಿಯು ವಿದ್ಯುತ್ ಕಡಿತ ಮಾಡಿದ್ದರ ಪರಿಣಾಮವಾಗಿ ಮನೆಯ ಫ್ರಿಡ್ಜ್‌ನಲ್ಲಿ ಇಟ್ಟಿದ್ದ ವಸ್ತುಗಳು ಹಾಳಾಗಿ ಹೋಗಿವೆ. ವಿಚಾರಣೆಯ ನಂತರ ಆಯೋಗವು, ದೂರುದಾರರಿಗೆ 4,000 ರೂ.ಗಳ ಪರಿಹಾರ ಧನ ನೀಡುವಂತೆ ಹಾಗೂ ದಾವೆಯ ಶುಲ್ಕವಾದ 5,000 ಕೂಡ ಪಾವತಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿತು.


ಸರಿಯಾದ ಸಮಯದಲ್ಲಿ ಬಿಲ್ ಪಾವತಿ


ತಾನು ಮೆಸ್ಕಾಂಗೆ ಸರಿಯಾದ ಸಮಯದಲ್ಲಿ ಬಿಲ್ ಪಾವತಿ ಮಾಡುತ್ತಿದ್ದೆ ಎಂದು ಕಬೀರ್ ಮಾಧ್ಯಮಕ್ಕೆ ತಿಳಿಸಿದ್ದಾರೆ. “2018ರ ಜೂನ್ 12ರಂದು ನನ್ನ ಮನೆಗೆ 1,787 ರೂ. ಬಿಲ್ ಬಂತು ಮತ್ತು ಅದನ್ನು ಜೂನ್ 27, 2018ರ ಒಳಗೆ ಪಾವತಿ ಮಾಡಬೇಕಿತ್ತು. ನಾನು 2018ರ ಜೂನ್ 14ರಂದು ಬಿಲ್ ಪಾವತಿಸಿದೆ.


ಇದನ್ನೂ ಓದಿ: No Power in Bengaluru: ಬೆಂಗಳೂರಿಗರೇ ಕೇಳಿ.. ನ.15ರಿಂದ 17ರವರೆಗೆ ಈ ಭಾಗಗಳಲ್ಲಿ ವಿದ್ಯುತ್ ಕಡಿತ

ಆ ಬಳಿಕ ನಾನು ಮಡದಿ ಹಾಗೂ ಮಕ್ಕಳ ಜೊತೆ ಜೂನ್ 15ರಂದು ಮಾವನ ಮನೆಗೆ ಹೊರಟೆ. ನಾವು ಅಲ್ಲಿಂದ ಮರಳಿದ ಬಳಿಕ, ಮನೆಗೆ ನೆಂಟರು ಬರುವ ನಿರೀಕ್ಷೆ ಇದ್ದ ಕಾರಣ, ನಾವು ಹೋಗುವ ಮುನ್ನ ಮನೆಯ ಫ್ರಿಡ್ಜ್‌ನಲ್ಲಿ ಮೀನು, ಮಟನ್, ಚಿಕನ್, ತರಕಾರಿ, ಐಸ್‍ಕ್ರೀಂ ಮತ್ತು ಇತರ ಪದಾರ್ಥಗಳನ್ನು ಇಟ್ಟು ಹೋಗಿದ್ದೆವು.


6 ಸಾವಿರ ಮೌಲ್ಯದ ಆಹಾರ ಕೆಟ್ಟಿತ್ತು

ಫ್ರಿಡ್ಜ್‌ನಲ್ಲಿ ಶೇಖರಿಸಿಟ್ಟಿದ್ದ ಎಲ್ಲಾ ಆಹಾರ ಪದಾರ್ಥಗಳ ಒಟ್ಟು ಮೊತ್ತ 6,000 ರೂ. 2018ರ ಜೂನ್ 19 ರಂದು ನಾನು ಮರಳಿದಾಗ ಫ್ರಿಡ್ಜ್‌ನಿಂದ ಕೆಟ್ಟ ವಾಸನೆ ಬರುತಿತ್ತು ಮತ್ತು ಫ್ರಿಡ್ಜ್ ಒಳಗೆ ಇಟ್ಟಿದ್ದ ಎಲ್ಲಾ ಆಹಾರ ಪದಾರ್ಥಗಳು ಕೊಳೆತು ಹೋಗಿದ್ದವು” ಎಂದು ಕಬೀರ್ ತಿಳಿಸಿದ್ದಾರೆ.


ಡಿಸಿಡಿಆರ್‌ಸಿಗೆ ದೂರು

ಕಬೀರ್ ಮನೆಯ ಹೊರಗಿದ್ದ ಮೀಟರ್ ಬೋರ್ಡ್‍ ಪರಿಶೀಲಿಸಿದಾಗ, ಫ್ಯೂಸ್ ತೆಗೆಯಲಾಗಿತ್ತು ಮತ್ತು ವಿದ್ಯುತ್ ಕಡಿತಗೊಳಿಸಲಾಗಿತ್ತು“. ನಾನು ಒಬ್ಬ ಲೈನ್‍ಮ್ಯಾನ್ ಅವರನ್ನು ಸಂಪರ್ಕಿಸಿದೆ ಮತ್ತು ಮೇಲಾಧಿಕಾರಿಗಳ ಸೂಚನೆಯ ಮೇರೆಗೆ ಫ್ಯೂಸ್ ತೆಗೆಯಲಾಗಿರುವುದು ತಿಳಿದು ಬಂತು. ಹಾಗಾಗಿ, ನಾನು ನನ್ನ ವಕೀಲರಾದ ಜಿ ಕೆ ಪರಮೇಶ್ವರ ಜೋಯಿಸ್ ಮತ್ತು ಮೊಹಮದ್ ಅನ್ಸಾರ್ ಮೂಲಕ ಡಿಸಿಡಿಆರ್‌ಸಿಗೆ ದೂರು ಸಲ್ಲಿಸಿದೆ.


ಇದನ್ನೂ ಓದಿ:  ಶ್ರೀ ಕೃಷ್ಣನ ಅಗ್ರಪೂಜೆಗೆ ಶಿಶುಪಾಲನೂ ಹೀಗೆ ವಿರೋಧಿಸಿದ್ದ: Hamsalekha ಹೇಳಿಕೆಗೆ ಪೇಜಾವರ ಶ್ರೀಗಳ ಪ್ರತಿಕ್ರಿಯೆ

ಪರಿಹಾರ ಧನ ಮತ್ತು ದಾವೆಯ ವೆಚ್ಚ ನೀಡುವಂತೆ , ಉಲ್ಲಾಳ ಸಬ್ ಡಿವಿಷನ್‍ನ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಮತ್ತು ಅತ್ತಾವರದ ಮೆಸ್ಕಾಂನ ಡಿವಿಷನ್ 1ರ ಎಕ್ಸಿಕ್ಯೂಟಿವ್ ಎಂಜಿನಿಯರ್‌ಗೆ ಆಯೋಗ ಸೂಚಿಸಿದೆ” ಎಂದು ಕಬೀರ್ ತಿಳಿಸಿದ್ದಾರೆ.


ಪರಿಹಾರ ಧನವನ್ನು ಪಾವತಿಸುವಂತೆ ಆದೇಶ 


ಮೆಸ್ಕಾಂ ಅಧಿಕಾರಿಗಳು ಒಂದು ತಿಂಗಳ ಒಳಗೆ ಜಂಟಿಯಾಗಿ ಈ ಪರಿಹಾರ ಧನವನ್ನು ಪಾವತಿಸಬೇಕು ಎಂದು ದಕ್ಷಿಣ ಕನ್ನಡ ಡಿಸಿಡಿಆರ್‌ಸಿಯ ಅಧ್ಯಕ್ಷ ಪ್ರಕಾಶ್ ಕೆ, ಸದಸ್ಯರಾದ ಲಾವಣ್ಯ ಎಂ ರೈ ಮತ್ತು ಲಿಂಗರಾಜು ಪಿ ವಿ ಅವರ ಸಹಿ ಉಳ್ಳ ಆದೇಶ ತಿಳಿಸಿದೆ.

Published by:Mahmadrafik K
First published: