HOME » NEWS » State » RED STONE MINING IN BIDAR DISTRICT SESR SSBDR

ಬೀದರ್​ ಜಿಲ್ಲೆಯಲ್ಲಿ ಅವ್ಯಾಹತವಾಗಿದೆ ಕೆಂಪು ಕಲ್ಲು ಗಣಿಗಾರಿಕೆ; ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಸರಕಾರದ ನೀತಿ ನಿಯಮಗಳನ್ನ ಗಾಳಿಗೆ ತೂರಿ ಅಕ್ರಮವಾಗಿ ಕಲ್ಲು ಕೊರೆಯುವ ದಂಧೆ ನಡೆಸಲಾಗುತ್ತಿದೆ

news18-kannada
Updated:November 7, 2020, 7:58 AM IST
ಬೀದರ್​ ಜಿಲ್ಲೆಯಲ್ಲಿ ಅವ್ಯಾಹತವಾಗಿದೆ ಕೆಂಪು ಕಲ್ಲು ಗಣಿಗಾರಿಕೆ; ಕಣ್ಮುಚ್ಚಿ ಕುಳಿತ ಅಧಿಕಾರಿಗಳು
ಕೆಂಪು ಕಲ್ಲು ಗಣಿಗಾರಿಕೆ
  • Share this:
ಬೀದರ್​ (ನ.6): ಜಿಲ್ಲೆಯಲ್ಲಿ ಹಾಡು ಹಗಲೇ  ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು ಸಂಬಂಧಪಟ್ಟ ಇಲಾಖೆಗಳು ಕಣ್ಮುಚ್ಚಿ ಕುಳಿತಿದ್ದಾರೆ. ತಾಲೂಕಿನ ಚಟ್ನಳ್ಳಿ, ಅಣದೂರು ವಾಡಿ, ಸಗೋಳ್ಳಗಿ ತಾಂಡಾ ಹಾಗೂ ಭಾಲ್ಕಿ ತಾಲೂಕಿನ ಖಾನಾಪುರ ಸುತ್ತಮುತ್ತಲೂ ಬಾರೀ ಪ್ರಮಾಣದಲ್ಲಿ ಕೆಂಪು ಕಲ್ಲು ಕೊರೆಯುವ ಕೆಲಸ ನಡೆಯುತ್ತಿದೆ. ದೊಡ್ಡ ದೊಡ್ಡ ಮಶೀನ್ ಗಳನ್ನ ಬಳಸಿ ಭೂಮಿಯ ಒಡಲಿಗೆ ಕನ್ನ ಹಾಕಲಾಗುತ್ತಿದೆ. ಸರಕಾರದ ನೀತಿ ನಿಯಮಗಳನ್ನ ಗಾಳಿಗೆ ತೂರಿ ಅಕ್ರಮವಾಗಿ ಕಲ್ಲು ಕೊರೆಯುವ ದಂಧೆ ನಡೆಸಲಾಗುತ್ತಿದ್ದರೂ ಪೋಲೀಸರು, ಗಣಿ ಮತ್ತು ಭೂ ವಿಜ್ಜಾನ ಇಲಾಖೆಯ ಅಧಿಕಾರಿಗಳು ಕಂಡು ಕಾಣದವರಂತೆ ಕುಳಿತಿದ್ದಾರೆ. 

ಈ ಕಲ್ಲು ಕೊರೆಯುವ ದಂಧೆಯನ್ನ ಪ್ರಭಾವಿ ವ್ಯಕ್ತಿಗಳು ನಡೆಸುತ್ತಿದ್ದಾರೆ. ಅಧಿಕಾರಿಗಳು ಗಣಿಗಾರಿಕೆ ಬಂದ್ ಮಾಡಲು ಮುಂದಾದರೆ, ಒಂದೆರಡು ದಿನ ಬಂದ್ ಮಾಡಿ ಮತ್ತೆ ಗಣಿಗಾರಿಕೆಯನ್ನ ಆರಂಭಿಸುತ್ತಿದ್ದಾರೆ.  ಹೀಗಾಗಿ ಪೊಲೀಸರು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯವರು  ಸುಮ್ಮನಿದ್ದಾರೆ  ಅನುಮಾನವೂ ಕೇಳಿ ಬರುತ್ತಿದೆ. ಫಲವತ್ತಾದ ಜಮೀನಿನಲ್ಲಿ ಯಾವುದೇ ರೀತಿಯ ಗಣೀಗಾರಿಕೆ ಮಾಡಬಾರದು, ಯಾವುದೆ ಊರು ಪ್ರವಾಸಿ ಸ್ಥಳ ಹಾಗೂ ರಸ್ತೆಯ ಅಕ್ಕ ಪಕ್ಕದಲ್ಲಿ ಗಣಿಗಾರಿಕೆ ನಡೆಸಬಾರದು ಎನ್ನುವ ನಿಯಮ ಕಾನೂನಿನಲ್ಲಿದೆ. ಆದರೂ ಈ ಗಣಿಗಳನ್ನ ಬಂದ್ ಮಾಡಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ.

ಇದನ್ನು ಓದಿ: ಕ್ರೂಸರ್​ನಲ್ಲಿ ರಾಕಿಂಗ್​ ಮಗನ ಹುಟ್ಟುಹಬ್ಬ ; ರಾಧಿಕಾ ಹಂಚಿಕೊಂಡ ವಿಡಿಯೋ ಇಲ್ಲಿದೆ

ಈ ವಿಚಾರದ ಕುರಿತು ಹೆಚ್ಚು ಗಣಿಗಾರಿಕೆ ನಡೆವ ಅಣದೂರ ಗ್ರಾಮದ ಪಿಡಿಓ ಅವರನ್ನ ಕೇಳಿದರೇ ಇದರ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇವೆ ಎನ್ನುತ್ತಾರೆ. ಇನ್ನು ಗಣಿಗಾರಿಕೆಯಿಂದ ಗ್ರಾಮದ ರೈತರ ಹೊಲಗಳ ಮೇಲೆಯೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಗಣಿಗಾರಿಕೆಯಿಂದ ಏಳುವ ಧೂಳು ಫಸಲಿನ ಮೇಲೆ ಕೂರುತ್ತಿದ್ದು, ಇದು ಕಿಲೋಮೀಟರ್ ಗಟ್ಟಲೇ ವ್ಯಾಪಿಸುತ್ತಿರುವುದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ.

ಇನ್ನು ಗಣಿಗಾರಿಕೆಯಿಂದ ಉಳುವ ಜಮೀನುಗಳ ನಡುವೆ ದೊಡ್ಡ ದೊಡ್ಡ ಹೊಂಡಗಳು ಅಣದೂರ ಗ್ರಾಮದ ಹೊರವಲಯದಲ್ಲಿ ನಿರ್ಮಾಣವಾಗಿದ್ದು, ಇದು ಸಹ ರೈತರ ಆತಂಕ ಹೆಚ್ಚಿಸಿದೆ. ಇನ್ನು ಗ್ರಾಮಸ್ಥರು ಕಲ್ಲು ಗಣಿಗಾರಿಕೆ ನಿಲ್ಲಿಸುವಂತೆ ಅನೇಕ ಬಾರಿ ಮನವಿ ಮಾಡಿಕೊಂಡರೂ ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸಿಲ್ಲ. ಜೊತೆಗೆ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳು ಸಹ ಇಷ್ಟೊಂದು ಅಕ್ರಮ ನಡೆಯುತ್ತಿದ್ದರೂ ತಮಗೆ ಗೊತ್ತೇ ಇಲ್ಲ ಎಂಬಂತೆ ಇದ್ದಾರೆ.
Published by: Seema R
First published: November 7, 2020, 7:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading