ಕೊಡಗು, ಉಡುಪಿಯಲ್ಲಿ 2 ದಿನ ರೆಡ್​ ಅಲರ್ಟ್​​; ಧಾರವಾಡದಲ್ಲೂ ಭಾರೀ ಮಳೆ ಎಚ್ಚರಿಕೆ

ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಭೀತಿ ಇರುವ ಕಾರಣ, ಜಿಲ್ಲೆಯಾದ್ಯಂತ ಆರೆಂಜ್​ ಅಲರ್ಟ್​​ ಘೋಷಣೆ ಮಾಡಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

Latha CG | news18
Updated:August 14, 2019, 5:47 PM IST
ಕೊಡಗು, ಉಡುಪಿಯಲ್ಲಿ 2 ದಿನ ರೆಡ್​ ಅಲರ್ಟ್​​; ಧಾರವಾಡದಲ್ಲೂ ಭಾರೀ ಮಳೆ ಎಚ್ಚರಿಕೆ
ಪ್ರಾತಿನಿಧಿಕ ಚಿತ್ರ
  • News18
  • Last Updated: August 14, 2019, 5:47 PM IST
  • Share this:
ಕೊಡಗು,(ಆ.14): ರಾಜ್ಯದಲ್ಲಿ ಕಳೆದೆರಡು ದಿನಗಳಿಂದ ಪ್ರವಾಹ ಪರಿಸ್ಥಿತಿ ತಗ್ಗಿದೆ. ಆದರೆ ಮಲೆನಾಡು ಮತ್ತು ಕರಾವಳಿ ತೀರಗಳಲ್ಲಿ ಮಳೆಯ ಅಬ್ಬರ ಇನ್ನೂ ಸಹ ಕಡಿಮೆಯಾಗಿಲ್ಲ. ಕೊಡಗು ಮತ್ತು ಉಡುಪಿ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, 2 ಜಿಲ್ಲೆಗಳಲ್ಲೂ ರೆಡ್​ ಅಲರ್ಟ್​ ಘೋಷಣೆ ಮಾಡಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಇಂದು ರಾತ್ರಿಯಿಂದ ನಾಳೆ ಬೆಳಗ್ಗೆವರೆಗೆ ರೆಡ್​ ಅಲರ್ಟ್​​ ಹಾಗೂ ಆ.15 ರಿಂದ 16 ರವರೆಗೆ ಆರೆಂಜ್​ ಅಲರ್ಟ್​​ ಘೋಷಣೆ ಮಾಡಲಾಗಿದೆ. ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗಿರುವ ಹಿನ್ನೆಲೆ, ಭೂಕುಸಿತ ಆಗುವ ಸಾಧ್ಯತೆ ಇದೆ. ಹೀಗಾಗಿ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಧಿಕಾರಿ ಅನೀಸ್​ ಕಣ್ಮಣಿ ಜಾಯ್​ ಸೂಚನೆ ನೀಡಿದ್ಧಾರೆ. ಭಾರತೀಯ ಹವಾಮಾನ ಇಲಾಖೆಯ ವರದಿ ಆಧರಿಸಿ ಡಿಸಿ ಸೂಚನೆ ಹೊರಡಿಸಿದ್ಧಾರೆ.

ಉಡುಪಿ ಜಿಲ್ಲೆಯಲ್ಲಿಯೂ ಮಳೆ ಮುಂದುವರೆದಿದ್ದು, ಅಲ್ಲಿಯೂ ಸಹ ರೆಡ್​​ ಅಲರ್ಟ್​ ಘೋಷಣೆ ಮಾಡಲಾಗಿದೆ. ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದು, ಕಳೆದೆರಡು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ನಾಳೆ ಬೆಳಗ್ಗೆ 8.30ರವರೆಗೆ ರೆಡ್​ ಅಲರ್ಟ್​​​ ಘೋಷಿಸಲಾಗಿದೆ. ಅಲ್ಲದೇ ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಭೀತಿ ಇರುವ ಕಾರಣ, ಜಿಲ್ಲೆಯಾದ್ಯಂತ ಆರೆಂಜ್​ ಅಲರ್ಟ್​​ ಘೋಷಣೆ ಮಾಡಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಪ್ರವಾಹದಲ್ಲೂ ಸೇತುವೆಯ ಮೇಲೆ ನಡೆದು ಆಂಬುಲೆನ್ಸ್​​ಗೆ ದಾರಿ ತೋರಿದ ರಾಯಚೂರು ಪೋರ; ವಿಡಿಯೋ ವೈರಲ್

ಉಡುಪಿಯಲ್ಲಿ 69 ಮಿಲಿ ಮೀಟರ್​ ಸರಾಸರಿ ಮಳೆಯಾಗುತ್ತದೆ. ಆದರೆ ಈ ಬಾರಿ 115 ಮಿಮೀ ಮಳೆಯಾಗುವ ನಿರೀಕ್ಷೆ ಇದೆ. ಕಾರ್ಕಳದಲ್ಲಿ 70 ಮಿಮೀ, ಕುಂದಾಪುರದಲ್ಲಿ 55 ಮಿಮೀ ಮಳೆಯಾಗುವ ಸಾಧ್ಯತೆ ಇದೆ. ಉಡುಪಿ ತಾಲೂಕಿನಲ್ಲಿ 80 ಮಿಮೀ ಮಳೆ ದಾಖಲಾಗಿದೆ. ಜಿಲ್ಲೆಯಲ್ಲಿ ದಿನಪೂರ್ತಿ ಮಳೆ ಮುಂದುವರೆಯುವ ಸಾಧ್ಯತೆ ಇದ್ದು, ಇನ್ನೆರಡು ದಿನ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.

ಇನ್ನು, ಧಾರವಾಡ ಜಿಲ್ಲೆಯಲ್ಲೂ ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜಿಲ್ಲೆಯಲ್ಲಿ 65 ಮಿಮೀ ಮಳೆಯಾಗುವ ಮಾಹಿತಿ ಲಭ್ಯವಾಗಿದೆ. ನಾಳೆ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ರಾಷ್ಟ್ರ ಧ್ವಜಾರೋಹಣ ಹಿನ್ನೆಲೆ, ವಿದ್ಯಾರ್ಥಿಗಳ ಕುರಿತು ಎಚ್ಚರಿಕೆ ವಹಿಸುವಂತೆ ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಇನ್ನೂ 1 ತಿಂಗಳ ಕಾಲ ಚಾರ್ಮಾಡಿ ಘಾಟ್​ ಬಂದ್​ಭಾರೀ ಮಳೆಗೆ ಗುಡ್ಡ ಕುಸಿತವಾಗಿರುವ ಚಾರ್ಮಾಡಿ ರಸ್ತೆಯಲ್ಲಿ ಇನ್ನೂ ಒಂದು ತಿಂಗಳ ಕಾಲ ಸಂಚಾರ ಇಲ್ಲ. ಮಹಾಮಳೆ ಹೊಡೆತಕ್ಕೆ ಚಾರ್ಮಾಡಿ ತತ್ತರಿಸಿದ್ದು, ಸದ್ಯ ಗುಡ್ಡದ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆ ಮಾರ್ಗವಾಗಿ ಸಂಚಾರಕ್ಕೆ ಮುಕ್ತವಾಗಲು ಇನ್ನೂ ಒಂದು ತಿಂಗಳು ಕಾಯಬೇಕಿದೆ. 8 ಕ್ಕೂ ಹೆಚ್ಚು ಜೆಸಿಬಿಗಳು ಮಣ್ಣುತೆರವು ಕಾರ್ಯಾಚರಣೆ ನಡೆಸುತ್ತಿವೆ. ಸದ್ಯ ಮಂಗಳೂರಿಗೆ ಸಂಪಾಜೆ ಮತ್ತು ಶಿರಾಡಿ ಘಾಟ್​ಗಳು ಸಂಚಾರಮುಕ್ತವಾಗಿವೆ. ಆದರೆ ಚಿಕ್ಕಮಗಳೂರು-ದಕ್ಷಿಣ ಕನ್ನಡ, ಧರ್ಮಸ್ಥಳ ಸಂಪರ್ಕ ಸದ್ಯಕ್ಕಿಲ್ಲ.

First published:August 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ