ಕೆಂಪೇಗೌಡರು ಕಟ್ಟಿದ ಬೆಂಗಳೂರು (Bengaluru) ಒಂದು ಕಾಲದಲ್ಲಿ ಕೆರೆಗಳ ನಗರ (City Of Lake) ಎಂದು ಕರೆಸಿಕೊಳ್ಳುತ್ತಿತ್ತು. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ನಗರೀಕರಣದಿಂದಾಗಿ ಬೆಂಗಳೂರಿನಲ್ಲಿರುವ ಕೆರೆಗಳು (Bengaluru Lakes) ಒಂದೊಂದಾಗಿ ಮಾಯವಾಗುತ್ತಿವೆ. ಇತ್ತ ಉಳಿದ ಕೆರೆಗಳು ಕೊಳಚೆ ನೀರಿನಿಂದ (Sewage Water) ತುಂಬಿಕೊಂಡು ಮಲೀನಗೊಂಡಿವೆ. ಈ ಕೆರೆಗಳ ನೀರು (Lake Water) ಬಳಕೆಗೆ ಯೋಗ್ಯವಾಗಿಲ್ಲ ಎಂಬ ಅಂಶ ಕೆಲ ದಿನಗಳ ಹಿಂದೆ ಬೆಳಕಿಗೆ ಬಂದಿದೆ. ಕೆರೆಗಳ ಮಲೀನತೆ ಮತ್ತು ಅದರ ನೀರು ಬಳಕೆ ಬಗ್ಗೆ ನ್ಯೂಸ್ 18 ಕನ್ನಡ ಡಿಜಿಟಲ್ ವಿವರವಾದ ವರದಿಯನ್ನು ಪ್ರಕಟಿಸಿತ್ತು. ಇದೀಗ ಬರಿದಾಗುತ್ತಿರುವ ಕೆರೆಗಳ ಪುನರ್ಜೀವನಕ್ಕೆ (Lake) ಸರ್ಕಾರ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ನಗರದ ಕೊಳಚೆ ನೀರನ್ನು ಸಂಸ್ಕರಿಸಿ ಕೆರೆಗಳಿಗೆ (Recycle Water) ತುಂಬಿಸಲು ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚುವುದರ ಜೊತೆ ಜಲಚರ ಜೀವಿಗಳ ನಿರ್ವಹಣೆ ಆಗಲಿದೆ.
ಕೆರೆಗಳ ಪುನರ್ಜೀವನದ ಎರಡನೇ ಹಂತದ ಯೋಜನೆಗೆ ಸರ್ಕಾರ 540 ಕೋಟಿ ರೂ. ಮೀಸಲಿರಿಸಿದೆ. ಈ ಯೋಜನೆಯಡಿಯಲ್ಲಿ ಬೆಂಗಳೂರು ಪೂರ್ವ ಮತ್ತು ಹೊಸಕೋಟೆ ತಾಲೂಕಿನ 22 ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ಪೂರೈಸಲು ಸರ್ಕಾರ ಮುಂದಾಗಿದೆ. ಈ ಬಾರಿ ಕೆಆರ್ ಪುರಂ ಕೆರೆಯಿಂದಲೂ ಲಿಫ್ಟ್ ನೀರಾವರಿ(ಏತ ನೀರಾವರಿ) ಯೋಜನೆ ಕೈಗೆತ್ತಿಕೊಳ್ಳುವ ಚಿಂತನೆಯನ್ನು ಸರ್ಕಾರ ಹೊಂದಿದೆ.
ಕೊಳಚೆ ನೀರು ಸಂಸ್ಕರಣೆ
ಬೆಂಗಳೂರು ನೆರೆಯ ಜಿಲ್ಲೆಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜೊತೆಗೆ ನಗರದ ಹೊರವಲದಲ್ಲಿರುವ ಅನೇಕ ಕರೆಗಳು ನೀರಿಲ್ಲದೇ ಬರಡಾಗಿವೆ. ಈ ಹಿನ್ನೆಲೆ ಕೆರೆಗಳಿಗೆ ನೀರು ಹರಿಸುವ ನಿಟ್ಟಿನಲ್ಲಿ ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಿಸಿ ಪಂಪ್ ಮಾಡಲಾಗುತ್ತಿತ್ತು.
ಇದನ್ನೂ ಓದಿ: Bengaluru Lake: ಬೆಂಗಳೂರಿನಲ್ಲಿ ಒಂದೇ ಒಂದು ಕೆರೆ ನೀರು ಶುದ್ಧೀಕರಣ ಬಳಿಕ ಬಳಕೆಗೆ ಯೋಗ್ಯ
ಮೊದಲ ಹಂತದಲ್ಲಿ 1,342 ಕೋಟಿ
ಈ ಯೋಜನೆಯ ಮೊದಲ ಹಂತದಲ್ಲಿ 1,342 ಕೋಟಿ ಬಜೆಟ್ ನಲ್ಲಿ ಕೋರಮಂಗಲ ಚಲ್ಲಘಟ್ಟ ವ್ಯಾಲಿಯಿಂದ ಕೋಲಾರದ 270 ಕೆರೆಗಳಿಗೆ ಬೃಹತ್ ಪೈಪ್ ಲೈನ್ ಗಳ ಮೂಲಕ ನೀರು ಪಂಪ್ ಮಾಡಲಾಗಿದೆ. ಇನ್ನೂ ಹೆಬ್ಬಾಳ-ನಾಗವಾರ ವ್ಯಾಲಿಯಿಂದ 24 ಕೆರೆಗಳಿಗೆ ಸಂಸ್ಕರಿಸಿದ ನೀರು ಹರಿಸಲಾಗುತ್ತದೆ.
ಅಧಿಕಾರಿಗಳ ಪ್ರಕಾರ, ನೀರಿನ ಮಟ್ಟವು 1,400 ಅಡಿಗಳಿಂದ 400-600 ಅಡಿಗಳಿಗೆ ವೇಗವಾಗಿ ಏರಿಕೆಯಾಗಿದೆ. ಸಂಸ್ಕರಿಸಿದ ನೀರು ಸರಬರಾಜು ಬರಡುಭೂಮಿಯಲ್ಲಿ ಹಲವು ಅದ್ಭುತ ಸೃಷ್ಟಿಸಿದೆ ಎಂದು ಹೇಳುತ್ತಾರೆ.
234 ಕೆರೆಗಳಿಗೆ ವೃಷಭಾವತಿ ವ್ಯಾಲಿ ನೀರು
ಶುಕ್ರವಾರ ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬೊಮ್ಮಾಯಿ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ 234 ಕೆರೆಗಳಿಗೆ ಬೆಂಗಳೂರು ನಗರ ವೃಷಭಾವತಿ ವ್ಯಾಲಿಯಿಂದ ಸಂಸ್ಕರಿಸಿದ 308 ಎಂಎಲ್‌ಡಿ ನೀರನ್ನು ತುಂಬಿಸುವುದು ಮೊದಲ ಕಾರ್ಯವಾಗಿದೆ.
ಪ್ರಸ್ತುತ, ಬೆಳ್ಳಂದೂರು ಮತ್ತು ವರ್ತೂರಿನ ಒಳಚರಂಡಿ ಸಂಸ್ಕರಣಾ ಘಟಕಗಳಿಂದ ಸುಮಾರು ಎಂಟು ಟಿಎಂಸಿ ಸಂಸ್ಕರಿಸಿದ ನೀರನ್ನು ಪಂಪ್ ಮಾಡಲಾಗುತ್ತಿದೆ. ಕೋಲಾರಕ್ಕೆ 85 ಕಿಮೀ ಉದ್ದದ ಪೈಪ್ ಲೈನ್ ಮೂಲಕ ದಿನಕ್ಕೆ ಸುಮಾರು 400 ಮಿಲಿಯನ್ ಲೀಟರ್ ಪ್ರಾಥಮಿಕ ಮತ್ತು ಮಾಧ್ಯಮಿಕ ಸಂಸ್ಕರಿಸಿದ ನೀರನ್ನು ಪಂಪ್ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: Lake Revival: ಬೆಂಗಳೂರಿನ ಮತ್ತೊಂದು ಕೆರೆಗೆ ಪುನರ್ಜನ್ಮ, ಒಂದು ಕೆರೆಯಿಂದ ಸುತ್ತಲಿನ ಎಲ್ಲಾ ಕೊಳವೆ ಬಾವಿಗಳಲ್ಲಿ ಭರ್ತಿ ನೀರು!
ಸಂಸ್ಕರಿಸಿದ ನೀರಿನಲ್ಲಿ ಅರ್ಸೆನಿಕ್ ಅಂಶ ಪತ್ತೆ
ಆದರೆ ಈ ಯೋಜನೆಯು ವಿವಾದಗಳಿಂದ ಕೂಡಿದೆ. ಸಂಸ್ಕರಿಸಿದ ನೀರಿನಲ್ಲಿ ಆರ್ಸೆನಿಕ್ ಅಂಶವಿರುವುದರಿಂದ ಜನ ಮತ್ತು ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಆರೋಪಿಸಿ ಹಲವು ಸಂಘಟನೆಗಳು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದವು. ನೊರೆಯಾಗುವುದು ಮತ್ತೊಂದು ದೂರು. ಅವರಲ್ಲಿ ಕೆಲವರು ಸಂಸ್ಕರಿಸಿದ ನೀರಿನಲ್ಲಿ ಭಾರವಾದ ಲೋಹಗಳು ಮತ್ತು ಮಾಲಿನ್ಯಕಾರಕಗಳ ಉಪಸ್ಥಿತಿಯಿಂದ ಅಪಾಯಕಾರಿ ಎಂದು ಆರೋಪಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ