• Home
  • »
  • News
  • »
  • state
  • »
  • B C Nagesh: ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ; ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ

B C Nagesh: ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ; ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ

ಬಿ ಸಿ ನಾಗೇಶ್

ಬಿ ಸಿ ನಾಗೇಶ್

1:1 ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸಂಜೆ 6 ಗಂಟೆಗೆ ಬಿಡುಗಡೆ ಮಾಡಲಾಗಿದೆ. ಇಲಾಖೆಯ‌ ಅಧಿಕೃತ ವೆಬ್ ಸೈಟ್ ನಲ್ಲಿ ಆಯ್ಕೆ ಪಟ್ಟಿ ಬಿಡುಗಡೆಯಾಗಿದೆ.

  • News18 Kannada
  • Last Updated :
  • Karnataka, India
  • Share this:

15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ (Recruitment Of School Teachers) ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್​ ಸುದ್ದಿಗೋಷ್ಠಿ ನಡೆಸಿದ್ದಾರೆ. ಇಂದು ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ (List Released) ಮಾಡಿರುವುದಾಗಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ. 1:1 ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸಂಜೆ 6 ಗಂಟೆಗೆ ಬಿಡುಗಡೆ ಮಾಡಲಾಗಿದೆ. ಇಲಾಖೆಯ‌ ಅಧಿಕೃತ ವೆಬ್ ಸೈಟ್ ನಲ್ಲಿ (Web site) ಆಯ್ಕೆ ಪಟ್ಟಿ ಬಿಡುಗಡೆಯಾಗಿದೆ.


ತಾತ್ಕಾಲಿಕ ಪಟ್ಟಿ ನೋಡಲು ಇಲ್ಲಿ ಕ್ಲಿಕ್​ ಮಾಡಿ 


https://schooleducation.kar.nic.in/


ಒಟ್ಟು- 15000 ಶಿಕ್ಷಕರ ನೇಮಕದಲ್ಲಿ 13363 1.1 ಪಟ್ಟಿಯಲ್ಲಿ ಆಯ್ಕೆ
13364 ಆಯ್ಕೆರಾದ ಶಿಕ್ಷಕರನ್ನ ಸರ್ಟಿಫಿಕೇಟ್ ವೆರಿಫಿಕೇಶನ್ ಆದ ನಂತ್ರ ಅಂತಿಮ ಪಟ್ಟಿ ಬಿಡುಗಡೆ.


No board exams for 5 and 8 classes said minister B C Nagesh mrq
5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ವಿಚಾರದ ಬಗ್ಗೆ ಭಾನುವಾರ ಸ್ಪಷ್ಟನೆ ನೀಡಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್, ಮೌಲ್ಯಮಾಪನದಂತೆಯೇ ಇರಲಿದೆ ಎಂದು ಹೇಳಿದ್ದಾರೆ.


ಸಚಿವ ಬಿ ಸಿ ನಾಗೇಶ್ ಹೇಳಿಕೆ


ಹೊಸ ತರದ ರಿಸಲ್ಟ್ ಈ ಬಾರಿ ಬಂದಿದ್ದು, 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ 13,363 ತಾತ್ಕಾಲಿಕ ಪಟ್ಟಿಯಲ್ಲಿ ಇದ್ದಾರೆ.
ಕಲ್ಯಾಣ ಕರ್ನಾಟಕದಲ್ಲಿ 5 ಸಾವಿರ ಶಿಕ್ಷಣ ಪೈಕಿ 4,187 ನೇಮಕ
ಉಳಿದ ಕಡೆ 9,176 ಶಿಕ್ಷಕರ ಆಯ್ಕೆ ಆಗಿದೆ. 1:1 ನಲ್ಲಿ 1768 ಶಿಕ್ಷಕರು ಆಂಗ್ಲ ಭಾಷೆಯಲ್ಲಿ ಆಯ್ಕೆಯಾಗಿದ್ದಾರೆ ಎಂದು ಸಚಿವ ಬಿ. ಸಿ ನಾಗೇಶ್​ ಹೇಳಿದ್ರು.


ಸಮಾಜ ವಿಜ್ಞಾನ -4,693 ಪೋಸ್ಟ್​ಗೆ 4,521  ಮಂದಿ ಆಯ್ಕೆ


ಜೀವವಿಜ್ಞಾನ -2000 ಪೋಸ್ಟ್​ಗೆ  1,694 ಮಂದಿ ಆಯ್ಕೆ


ಒಟ್ಟು - 15000 - 13363 ಮಂದಿ ಆಯ್ಕೆ


3 ತೃತೀಯ ಲಿಂಗಿ ಅಭ್ಯರ್ಥಿಗಳು


ಸುರೇಶ್ ಬಾಬು ಹುದ್ದೆ : ಅಂಗ್ಲಭಾಷೆ - ಜಿಲ್ಲೆ ಚಿಕ್ಕಬಳ್ಳಾಪುರ
ರವಿಕುಮಾರ್: ಹುದ್ದೆ : ಸಮಾಜ ವಿಜ್ಞಾನ- ಮಧುಗಿರಿ
ಅಶ್ವತ್ಥಮ : ಹುದ್ದೆ : ಸಮಾಜ ವಿಜ್ಞಾನ ಜಿಲ್ಲೆ - ರಾಯಚೂರು ಸೇರಿದಂತೆ ಮುಂತಾದವರು ಲಿಸ್ಟ್​ ನಲ್ಲಿದ್ದಾರೆ. ಇನ್ನು 1 ತಿಂಗಳ ಒಳಗೆ ಫೈನಲ್ ಲಿಸ್ಟ್ ಪ್ರಕಟವಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷದ ಒಳಗೆ ಶಿಕ್ಷಕರ ನೇಮಕ ಆಗಲಿದೆ ಎಂದು ಸಚಿವ ನಾಗೇಶ್​ ಹೇಳಿದ್ದಾರೆ.


ಮೇ 21, 22 ರಂದು ನಡೆದ ಪರೀಕ್ಷೆ


ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯು 2022 ರ ಮಾರ್ಚ್‌ /ಏಪ್ರಿಲ್‌ ತಿಂಗಳಲ್ಲಿ ಅರ್ಜಿ ಸ್ವೀಕಾರ ಮಾಡಿತ್ತು. ಹಾಗೂ ಮೇ 21, 22 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು. ಸುಮಾರು 1,00683 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.


ಅಕ್ರಮ ತಡೆಗೆ ಸಿಸಿಟಿವಿ ಅಳವಡಿಸಲಾಗಿತ್ತು


2 ದಿನ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿದೆ. ರಾಜ್ಯದ 435 ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಸಿಇಟಿ ಪರೀಕ್ಷೆ ನಡೆಯಿತು. ಯಾವುದೇ ಅಕ್ರಮ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿ ಕ್ಯಾಮರಾ ಕಣ್ಗಾವಲು ವಹಿಸಲಾಗಿತ್ತು.


ಇದನ್ನೂ ಓದಿ: B C Nagesh: 15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ; ಇಂದೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ


ಕಿವಿ ಒಲೆ, ವಾಚ್ ಚೆಕ್​ ಮಾಡಿ ಬಿಡಲಾಗಿತ್ತು


ಹೆಚ್ಚುವರಿ ಭದ್ರತೆಯಲ್ಲಿ ಪರೀಕ್ಷೆ ನಡೆದಿದೆ. ಪ್ರತಿಯೊಬ್ಬರ ಕಿವಿ ಒಲೆ, ವಾಚ್ ಎಲ್ಲವನ್ನು ಚೆಕ್ ಮಾಡಿ ಪರೀಕ್ಷಾ ಕೇಂದ್ರಕ್ಕೆ ಹೋಗಲು ಅನುಮತಿ ನೀಡಲಾಗಿತ್ತು. ಯಾವುದೇ ಅಕ್ರಮ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದ್ದು, ಮೊಬೈಕ್ ಪೋನ್, ಬ್ಲೂಟೂತ್, ಡಿಜಿಟಲ್ ಸಾಮಾಗ್ರಿ, ಕೈಗಡಿಯಾರಕ್ಕೆ ಪರೀಕ್ಷಾ ಕೇಂದ್ರದಲ್ಲಿ ಅನುಮತಿ ಇರಲಿಲ್ಲ.


ಪರೀಕ್ಷಾ ನಿಯಮಗಳ ಉಲ್ಲಂಘನೆ ಮಾಡಿರುವ ಹಾಗೂ ಇನ್ನಿತರ ಕಾರಣಗಳಿಂದ ಒಟ್ಟು 61 ಅಭ್ಯರ್ಥಿಗಳ ಫಲಿತಾಂಶಗಳನ್ನು ತಡೆಯಿಡಿದಿದ್ದು, ಇಬ್ಬರು ಅಭ್ಯರ್ಥಿಗಳನ್ನು ಅನರ್ಹಗೊಳಿಸಲಾಗಿತ್ತು. ಒಟ್ಟು 63 ಅಭ್ಯಥಿಗಳ ಪಟ್ಟಿಯನ್ನು ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗಿತ್ತು.

Published by:ಪಾವನ ಎಚ್ ಎಸ್
First published: