• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Kalaburagi: ತೊಡೆಗೆ ಗೋಧಿ ಹಿಟ್ಟು ಕಟ್ಟಿಕೊಂಡು ದೈಹಿಕ ಪರೀಕ್ಷೆಗೆ ಹಾಜರಾದ ಅಭ್ಯರ್ಥಿ; ತಗ್ಲಾಕೊಂಡಿದ್ದು ಹೇಗೆ?

Kalaburagi: ತೊಡೆಗೆ ಗೋಧಿ ಹಿಟ್ಟು ಕಟ್ಟಿಕೊಂಡು ದೈಹಿಕ ಪರೀಕ್ಷೆಗೆ ಹಾಜರಾದ ಅಭ್ಯರ್ಥಿ; ತಗ್ಲಾಕೊಂಡಿದ್ದು ಹೇಗೆ?

ದೈಹಿಕ ಪರೀಕ್ಷೆಯಲ್ಲಿ ಕಳ್ಳಾಟ

ದೈಹಿಕ ಪರೀಕ್ಷೆಯಲ್ಲಿ ಕಳ್ಳಾಟ

ದೈಹಿಕ ಪರೀಕ್ಷೆಯಲ್ಲಿ ಭಾಗಿಯಾಗುವ ಅಭ್ಯರ್ಥಿಗಳು ನಿಯಮಗಳ ಪ್ರಕಾರ 163 ಸೆಂಟಿ ಮೀಟರ್ ಎತ್ತರ ಮತ್ತು 55 KG ತೂಕ ಹೊಂದಿರಬೇಕು. ಕಡಿಮೆ ತೂಕ ಹೊಂದಿರುವ ಅಭ್ಯರ್ಥಿಗಳು, ದೈಹಿಕ ಪರೀಕ್ಷೆ ವೇಳೆ ತೂಕದ ಕಲ್ಲುಗಳನ್ನು ತೊಡೆ ಭಾಗಕ್ಕೆ ಕಟ್ಟಿಕೊಂಡು ಬಂದಿದ್ದಾರೆ.

  • News18 Kannada
  • 5-MIN READ
  • Last Updated :
  • Gulbarga, India
  • Share this:

ಕಲಬುರಗಿ: ಇಂದು ಸರ್ಕಾರಿ ಹುದ್ದೆ (Government Jobs) ಗಿಟ್ಟಿಸಿಕೊಳ್ಳಲು ಜನರು ಲಂಚ (Bribe) ಕೊಡಲು ಸಿದ್ಧರಾಗಿದ್ದಾರೆ. ಕಳೆದ ವರ್ಷ ಕಲಬುರಗಿಯಲ್ಲಿ (Kalaburagi) ಬೆಳಕಿಗೆ ಬಂದ ಪಿಎಸ್​ಐ ನೇಮಕಾತಿ ಹಗರಣ (PSI Recruitment Scam) ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಇದಾದ್ಮೇಲೆ ಕೆಪಿಎಸ್​ಸಿ ಹಗರಣ (KPSC Scam) ಸಹ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಇನ್ನು ಕಲಬುರಗಿಯಲ್ಲಿ ಡ್ರೈವರ್ ಕಂ ಕಂಡಕ್ಟರ್ ಹುದ್ದೆ ದೈಹಿಕ ಪರೀಕ್ಷೆಯಲ್ಲಿ ಸಹ ಅಭ್ಯರ್ಥಿಗಳು ನಾನಾ ಕಸರತ್ತು ಮಾಡಿದ್ದಾರೆ. ಆದ್ರೆ ಸಾರಿಗೆ ಇಲಾಖೆ ಅಧಿಕಾರಿಗಳು (KKRTC Staff) ಆಭ್ಯರ್ಥಿಗಳ ಕಳ್ಳಾಟ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕೆಕೆಆರ್‌ಟಿಸಿ ಡ್ರೈವರ್ ಕಂ ಕಂಡಕ್ಟರ್ ನೇಮಕಾತಿ ಅಕ್ರಮ ಪಿಎಸ್‌ಐ ಪರೀಕ್ಷಾ ಹಗರಣವನ್ನ ಮೀರಿಸುವಂತಿದೆ.


ಕಲಬುರಗಿಯಲ್ಲಿ 1619 ಹುದ್ದೆಗಳಿಗೆ ದೈಹಿಕ ಪರೀಕ್ಷೆ (Physical Examination) ನಡೆಸಲಾಗುತ್ತಿದೆ. ದೈಹಿಕ ಪರೀಕ್ಷೆಯಲ್ಲಿ ಭಾಗಿಯಾಗುವ ಅಭ್ಯರ್ಥಿಗಳು ನಿಯಮಗಳ ಪ್ರಕಾರ 163 ಸೆಂಟಿ ಮೀಟರ್ ಎತ್ತರ ಮತ್ತು 55 KG ತೂಕ ಹೊಂದಿರಬೇಕು. ಕಡಿಮೆ ತೂಕ ಹೊಂದಿರುವ ಅಭ್ಯರ್ಥಿಗಳು, ದೈಹಿಕ ಪರೀಕ್ಷೆ ವೇಳೆ ತೂಕದ ಕಲ್ಲುಗಳನ್ನು ತೊಡೆ ಭಾಗಕ್ಕೆ ಕಟ್ಟಿಕೊಂಡು ಬಂದಿದ್ದಾರೆ.


ಬೆಳಕಿಗೆ ಬಂತು ಮತ್ತೊಂದು ವಿಡಿಯೋ


ಅಧಿಕಾರಿಗಳು ಅನುಮಾನ ಬಂದ ಹಿನ್ನೆಲೆ ಪ್ಯಾಂಟ್​ ಕಳಚಿದಾಗ ಕಳ್ಳಾಟ ಬಯಲಾಗಿತ್ತು. ಇದೀಗ ಅಂತಹುವುದೇ ಮತ್ತೊಂದು ವಿಡಿಯೋ ಬೆಳಕಿಗೆ ಬಂದಿದ್ದು, ಅಭ್ಯರ್ಥಿಯೋರ್ವವ ತೊಡೆ ಭಾಗಕ್ಕೆ ಗೋಧಿಹಿಟ್ಟು ಕಟ್ಟಿಕೊಂಡು ಬಂದು ತಗ್ಲಾಕೊಂಡಿದ್ದಾನೆ.


ಗೋಧಿಹಿಟ್ಟನ್ನು ಚೆನ್ನಾಗಿ ಕಲಸಿ, ಅದನ್ನು ತೊಡೆಯ ಭಾಗಕ್ಕೆ ಸುತ್ತಲೂ ಮೆತ್ತಿಕೊಂಡಿದ್ದಾನೆ. ನಂತರ ಹಿಟ್ಟು ಕೆಳಗೆ ಜಾರದಂತೆ ಅದನ್ನು ಬಟ್ಟೆಯಿಂದ ಸುತ್ತಿದ್ದಾನೆ. ನಂತರ ಬಟ್ಟೆ ಬಿಚ್ಚದಂತೆ ಅದನ್ನು ದಾರದಿಂದ ಬಿಗಿದಿದ್ದಾನೆ.


ಅಭ್ಯರ್ಥಿ ಬ್ಲಾಕ್​ ಲಿಸ್ಟ್​​ಗೆ


ದೈಹಿಕ ಪರೀಕ್ಷೆ ವೇಳೆ ಅನುಮಾನ ಬಂದ ಹಿನ್ನೆಲೆ ಪ್ಯಾಂಟ್ ಬಿಚ್ಚಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೆಕೆಆರ್​ಟಿಸಿ ಎಂಡಿ ರಾಚಪ್ಪ ದೈಹಿಕ ಪರೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸುತ್ತಿದ್ದಾರೆ. ಗೋಧಿಹಿಟ್ಟು ಇರಿಸಿಕೊಂಡು ಬಂದಿದ್ದ ಅಭ್ಯರ್ಥಿಯನ್ನು ನೇಮಕಾತಿಯ ಬ್ಲಾಕ್​ ಲಿಸ್ಟ್​ಗೆ ಹಾಕಿದ್ದಾರೆ. ಅಧಿಕಾರಿಗಳು ಅಭ್ಯರ್ಥಿಗಳ ಹೆಸರನ್ನು ಬಹಿರಂಗಗೊಳಿಸಿಲ್ಲ.


ಇದನ್ನೂ ಓದಿ: BDA, Lokayuktha Ride: ಮತ್ತೆ ಅಖಾಡಕ್ಕೆ ಲೋಕಾಯುಕ್ತ ಎಂಟ್ರಿ; BDA ಕಚೇರಿ ಮೇಲೆ ದಾಳಿ, ಸತತ 3 ಗಂಟೆಗಳಿಂದ ದಾಖಲೆ ಪತ್ರ ಪರಿಶೀಲನೆ!


ಡೆಡ್ಲಿ ಆಕ್ಸಿಡೆಂಟ್​ಗೆ ಇಬ್ಬರು ಬಲಿ!


ಕೆಟ್ಟು ನಿಂತಿದ್ದ ಕ್ಯಾಂಟರ್​ಗೆ ಹಿಂಬಂದಿಯಿಂದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ದೇವನಹಳ್ಳಿಯ ಆವತಿ ಗ್ರಾಮದ ಬಳಿ ದುರ್ಘಟನೆ ನಡೆದಿದೆ. ಬೈಕ್​ ಚಲಾಯಿಸುತ್ತಿದ್ದ 30 ವರ್ಷದ ಭರತ್​ ಮತ್ತು ಯುವತಿ ಮೃತಪಟ್ಟಿದ್ದು, ಯುವತಿ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕ್ತಿದ್ದಾರೆ.




ರಾಯಲ್ ಎನ್ ಫೀಲ್ಡ್​​​ನಲ್ಲಿ ಚಿಕ್ಕಬಳ್ಳಾಪುರದಿಂದ ಬೆಂಗಳೂರಿನ ಕಡೆಗೆ ಹೋಗುತ್ತಿದ್ದಾಗ ಅವಘಡ ಸಂಭವಿಸಿದ್ದು, ಕೆಲ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಘಟನೆ ಸಂಬಂಧ ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.




ಕ್ಷೀರಭಾಗ್ಯ ಬದಲು ಶೀಲಭಾಗ್ಯ ಎಂದ ಜಮೀರ್​


ಕಲಬುರಗಿಯಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ನಡೆಯುತ್ತಿದೆ. ನಗರದ ಶ್ರೀ ಶರಣಬಸವೇಶ್ವರರ ಜಾತ್ರಾ ಮೈದಾನದಲ್ಲಿ ಕಾಂಗ್ರೆಸ್ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಶಾಸಕ ಜಮೀರ್ ಅಹ್ಮದ್ ಖಾನ್ ಮಾತನಾಡುವಾಗ ಎಡವಟ್ಟು ಮಾಡಿಕೊಂಡಿದ್ದಾರೆ.


ಸಿದ್ದರಾಮಯ್ಯರ ಭಾಗ್ಯಗಳನ್ನ ಸ್ಮರಿಸುವಾಗ ಜಮೀರ್ ಅಹ್ಮದ್​ ಕ್ಷೀರಭಾಗ್ಯ ಅನ್ನುವ ಬದಲು ಶೀಲಭಾಗ್ಯ ನೀಡಿದ ಸಿದ್ದರಾಮಯ್ಯ ಎಂದು ಎಡವಟ್ಟು ಮಾಡಿಕೊಂಡಿದ್ದಾರೆ. ಜಮೀರ್ ಎಡವಟ್ಟು ಭಾಷಣಕ್ಕೆ ಮುಖಂಡರು ಹಾಗೂ ಕಾರ್ಯಕರ್ತರ ಕಕ್ಕಾಬಿಕ್ಕಿಯಾಗಿದ್ರು.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು