Traffic Rules: ವಾಹನ ಸವಾರರೇ ಗಮನಿಸಿ: ಶೀಘ್ರದಲ್ಲೇ ಬೆಂಗಳೂರಿನಲ್ಲಿ ಶುರುವಾಗಲಿದೆ ಟ್ರಾಫಿಕ್ ನಿಯಮ ಉಲ್ಲಂಘನೆಯ ರೆಕಾರ್ಡಿಂಗ್

ಬೆಂಗಳೂರು ಟ್ರಾಫಿಕ್ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲು ಮುಂದಾಗಿದ್ದು ಈ ಸಂದರ್ಭದಲ್ಲಿ ನಗರದ 50 ಟ್ರಾಫಿಕ್ ಜಂಕ್ಷನ್ ಗಳಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆಯಾಗುವ ಸ್ವಯಂ ಚಿತ್ರೀಕರಣ ಮಾಡುವಂತಹ ಸೌಲಭ್ಯವನ್ನು ಅನುಷ್ಠಾನಗೊಳಿಸಲು ಸಜ್ಜಾಗುತ್ತಿರುವುದಾಗಿ ಟ್ರಾಫಿಕ್ ಪೊಲೀಸ್ ಇಲಾಖೆಯ ಜಂಟಿ ಆಯುಕ್ತರಾಗಿರುವ ರವಿಕಾಂತೇ ಗೌಡ ಅವರು ತಿಳಿಸಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಸದ್ಯ ಬೆಂಗಳೂರಿನಲ್ಲಿ (Bengaluru) ದಿನೇ ದಿನೇ ಟ್ರಾಫಿಕ್ (Traffic) ದಟ್ಟಣೆ ಏರುತ್ತಲೇ ಇದೆ. ಈ ಮಧ್ಯೆ ಟ್ರಾಫಿಕ್ ನಿಯಮಗಳ ಉಲ್ಲಂಘನೆಯ ಪ್ರಮಾಣವು ಏರುತ್ತಲೇ ಇದೆ ಎನ್ನಲಾಗಿದೆ. ಈ ನಿಮಿತ್ತ ಈಗ ಬೆಂಗಳೂರು ಟ್ರಾಫಿಕ್ ಪೊಲೀಸ್ (Bengaluru traffic police) ಇಲಾಖೆ ಕ್ರಮ ಕೈಗೊಳ್ಳಲು ಮುಂದಾಗಿದ್ದು ಈ ಸಂದರ್ಭದಲ್ಲಿ ನಗರದ 50 ಟ್ರಾಫಿಕ್ ಜಂಕ್ಷನ್ ಗಳಲ್ಲಿ (Traffic Junction) ಟ್ರಾಫಿಕ್ ನಿಯಮ ಉಲ್ಲಂಘನೆಯಾಗುವ (Violation of rules) ಸ್ವಯಂ ಚಿತ್ರೀಕರಣ ಮಾಡುವಂತಹ ಸೌಲಭ್ಯವನ್ನು ಅನುಷ್ಠಾನಗೊಳಿಸಲು ಸಜ್ಜಾಗುತ್ತಿರುವುದಾಗಿ ಟ್ರಾಫಿಕ್ ಪೊಲೀಸ್ ಇಲಾಖೆಯ ಜಂಟಿ ಆಯುಕ್ತರಾಗಿರುವ ರವಿಕಾಂತೇ ಗೌಡ ಅವರು ತಿಳಿಸಿದ್ದಾರೆ.

ಕಳೆದ ಭಾನುವಾರದಂದು ಡೆಕ್ಕನ್ ಹೆರಾಲ್ಡ್ ಹಾಗೂ ಅಸೋಸಿಯೇಷನ್ ಆಫ್ ಬೈಕಿಂಗ್ ಕಮ್ಯುನಿಟಿ ಇಂಡಿಯಾ ಇಬ್ಬರೂ ಸೇರಿ ಜಂಟಿಯಾಗಿ ಆಯೋಜಿಸಿದ್ದ ವರ್ಲ್ಡ್ ಮೋಟರ್ ಸೈಕಲ್ ಡೇ ನಿಮಿತ್ತ ನಡೆದ ಚರ್ಚಾಗೋಷ್ಟಿಯಲ್ಲಿ ಭಾಗವಹಿಸಿದ್ದ ರವಿಕಾಂತೇ ಗೌಡ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಸಾವಿನ ಪ್ರಮಾಣವನ್ನು ತಗ್ಗಿಸುವುದೇ ಪ್ರಥಮ ಆದ್ಯತೆ
ರಸ್ತೆಯಲ್ಲಿ ಟ್ರಾಫಿಕ್ ನಿಯಮಗಳಿಗೆ ಸಂಬಂಧಿಸಿದಂತೆ ಚಾಲಕರು ಮೈಗೂಡಿಸಿಕೊಳ್ಳಬೇಕಾದ ಶಿಸ್ತಿನ ಬಗ್ಗೆ ಮಾತನಾಡಿದ ಅವರು ಬೆಂಗಳೂರು ಟ್ರಾಫಿಕ್ ಪೊಲೀಸ್ ಇಲಾಖೆಗೆ ರಸ್ತೆ ಅಪಘಾತಗಳಿಂದ ಉಂಟಾಗುವ ಸಾವಿನ ಪ್ರಮಾಣವನ್ನು ತಗ್ಗಿಸುವುದೇ ಪ್ರಥಮ ಆದ್ಯತೆಯಾಗಿದೆ ಎಂದು ಅವರು ಹೇಳಿದ್ದಾರೆ.

ಜಂಟಿ ಆಯುಕ್ತರು ಹೇಳಿರುವ ಪ್ರಕಾರ, ಪ್ರಸ್ತುತ ಬೆಂಗಳೂರು ನಗರದಲ್ಲಿ ನೋಂದಣಿ ಮಾಡಿಸಲಾಗಿರುವ 1.93 ಕೋಟಿ ವಾಹನಗಳಿವೆ. "ದ್ವಿಚಕ್ರ ವಾಹನಗಳು ಬೆಂಗಳೂರಿನ ಜೀವನದ ಅವಿಭಾಜ್ಯ ಅಂಗವಂತಾಗಿದ್ದು ಅವುಗಳ ಚಿಕ್ಕ ಗಾತ್ರ ಹಾಗೂ ಸರಳವಾಗಿ ಚಲಾಯಿಸಬಹುದಾದ ಸಕ್ಷಮತೆ ಆ ವಾಹನಗಳನ್ನು ಆದರ್ಶಪ್ರಾಯ ಸಂಚಾರ ವಾಹನಗಳನ್ನಾಗಿ ಮಾಡಿವೆ. ಆದರೆ, ಅವುಗಳ ಬಳಕೆಗೆ ಸಂಬಂಧಿಸಿದಂತೆ ಕಾಣಬಹುದಾದ ಶಿಸ್ತಿನ ಕೊರತೆಯಿಂದಾಗಿ ಅವು ರಸ್ತೆಯ ಮೇಲಿನ ಅಪಘಾತಗಳಿಗೆ ಸಂಬಂಧಿಸಿದಂತೆ ಮಾರಕವಾಗಿವೆ" ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಲೇನ್ ಶಿಸ್ತನ್ನು ಉಲ್ಲಂಘಿಸುವವರನ್ನು ಪತ್ತೆ ಹಚ್ಚುವುದು ಸವಾಲಿನ ಕೆಲಸ
ಈ ಸಂದರ್ಭದಲ್ಲಿ ತಮ್ಮ ಮಾತನ್ನು ಮುಂದುವರೆಸಿದ ಗೌಡ ಅವರು, ರಸ್ತೆಗಳ ಮೇಲೆ ಹೆಲ್ಮೆಟ್ ಧರಿಸದೆ ಪ್ರಯಾಣಿಸುವುದು ಅಥವಾ ಸಿಗ್ನಲ್ ಗಳನ್ನು ಜಂಪ್ ಮಾಡುವಂತಹ ಟ್ರಾಫಿಕ್ ಉಲ್ಲಂಘನೆಗಳನ್ನು ಪತ್ತೆ ಹಚ್ಚುವುದು ಸುಲಭವಾಗಿದೆಯಾದರೂ ಲೇನ್ ಶಿಸ್ತನ್ನು ಉಲ್ಲಂಘಿಸುವವರನ್ನು ಪತ್ತೆ ಹಚ್ಚುವುದು ಸಾಕಷ್ಟು ಸವಾಲಿನ ಕೆಲಸವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Street Dogs: ಬೆಂಗಳೂರಿನಲ್ಲಿ ಎಷ್ಟು ಬೀದಿನಾಯಿಗಳಿವೆ? ಲೆಕ್ಕ ಇಲ್ಲಿದೆ

ಸಂಗ್ರಹಿಸಲಾದ ಅಂಕಿ-ಅಂಶಗಳನ್ನು ಗಮನಿಸಿದಾಗ ತಿಳಿದುಬರುವ ವಿಷಯವೆಂದರೆ, ಬೆಂಗಳೂರಿನ ರಸ್ತೆಗಳ ಅಪಘಾತಗಳಲ್ಲಿ ಉಂಟಾಗುವ ಸಾವಿನ ಪ್ರಮಾಣದಲ್ಲಿ ಅಚ್ಚರಿಪಡಿಸುವಂತಹ 90 ಪ್ರತಿಶತದಷ್ಟು ಪ್ರಮಾಣ ದ್ವಿಚಕ್ರವಾಹನಸವಾರರು ಹಾಗೂ ಪಾದಚಾರಿಗಳನ್ನೊಳಗೊಂಡ ಅಪಘಾತಗಳಿಂದಲೇ ಸಂಭವಿಸಿರುವುದಾಗಿ ತಿಳಿದುಬಂದಿದೆ. ಅವುಗಳಲ್ಲೂ ಇನ್ನಷ್ಟು ಮಾಹಿತಿ ಹೆಕ್ಕಿ ತೆಗೆದರೆ ಮೋಟರ್ ಚಾಲಕರ ಸಾವಿನ ಪ್ರಮಾಣ 50 ಪ್ರತಿಶತದಷ್ಟಾಗಿದೆ ಎಂದು ತಿಳಿದುಬಂದಿದೆ.

ಸಂಶೋಧಕರು ತಿಳಿಸಿರುವಂತೆ ಇಂತಹ ಅಪಘಾತಗಳು ಇತರೆ ದ್ವಿಚಕ್ರವಾಹನ ಚಾಲಕರಿಂದಲೇ ಸಂಭವಿಸುತ್ತವೆ ಎನ್ನಲಾಗಿದೆ. ಅದರಲ್ಲೂ ವಿಶೇಷವಾಗಿ ಅತಿ ವೇಗದ ಚಾಲನೆಯೇ ಬಹುತೇಕ ಅಪಘಾತ ಹಾಗೂ ಆನಂತರ ಉಂಟಾಗುವ ಸಾವುಗಳಿಗೆ ಪ್ರಮುಖ ಕಾರಣವಾಗಿದೆ. ಅಸುರಕ್ಷಿತ ರಸ್ತೆಗಳಲ್ಲಿ ಅತಿಯಾಗಿ ವೇಗದ ಚಾಲನೆ ಮಾಡುವಾಗ ಅನಿರೀಕ್ಷಿತವಾಗಿ ಬಂದೊದಗುವ ಅಡಚಣೆಗಳನ್ನು ಎದುರಿಸಲು ಚಾಲಕ ಅಸಮರ್ಥನಾಗುವುದರಿಂದಲೇ ಹೆಚ್ಚಾಗಿ ರಸ್ತೆ ಅಪಘಾತಗಳು ಸಂಭವಿಸುತ್ತವೆ ಎನ್ನಲಾಗಿದೆ.

ಕೇಂದ್ರ ಅಪರಾಧ ವಿಭಾಗದ ಇನ್ಸ್ಪೆಕ್ಟರ್ ಹೇಳಿದ್ದು ಹೀಗೆ
ಅತಿ ವೇಗದ ಚಾಲನೆಯಿಂದ ಉಂಟಾಗುವ ಅಪಘಾತದ ತೀವ್ರತೆ ಹೇಗಿರುತ್ತದೆ ಎಂದರೆ ಒಬ್ಬ ವ್ಯಕ್ತಿಯನ್ನು ಎತ್ತರದ ಕಟ್ಟಡದ ತುದಿಯಿಂದ ಕೆಳಕ್ಕೆ ಕಾಂಕ್ರೀಟ್ ನೆಲೆದ ಮೇಲೆ ದೂಕಿದಾಗ ಆಗುವ ಹಾನಿಯಂತಿರುತ್ತದೆ ಎಂದು ಕೇಂದ್ರ ಅಪರಾಧ ವಿಭಾಗದ ಇನ್ಸ್ಪೆಕ್ಟರ್ ಹಾಗೂ ಈ ಸಂದರ್ಭದಲ್ಲಿ ನಡೆದ ಚರ್ಚಾಗೋಷ್ಟಿಯಲ್ಲಿ ಭಾಗಿಯಾಗಿದ್ದ ಅನಿಲ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: Tumakuru: ವಿದ್ಯಾರ್ಥಿಗಳ ತಾಯಂದಿರಿಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ ಶಿಕ್ಷಕ ಸಸ್ಪೆಂಡ್

ಸುರಕ್ಷತಾ ಪರಿಕರಗಳನ್ನು ಧರಿಸುವಲ್ಲಿ ನಿರ್ಲಕ್ಷ್ಯತೆ, ರಸ್ತೆ ಬಿಟ್ಟು ಪಾದಚಾರಿ ಮಾರ್ಗಗಳ ಮೇಲೆ ನುಸುಳುವಿಕೆ, ವ್ಹೀಲಿಂಗ್ ಮಾಡುವುದು, ಲೇನ್ ಗಳನ್ನು ಸಿಕ್ಕ ಸಿಕ್ಕಂತೆ ಬದಲಾಯಿಸುವುದು ಇವೆಲ್ಲವು ರಸ್ತೆಯ ಉಲ್ಲಂಘನೆಗಳಾಗಿದ್ದರೂ ಸಹ ಇವು ಹೆಚ್ಚಾಗಿ ರಸ್ತೆಯ ಮೇಲೆ ವಾಹನ ಚಲಾಯಿಸುವ ಶಿಸ್ತಿಗೆ ಸಂಬಂಧಿಸಿವೆ. ನಾವು ಎಷ್ಟೇ ಕಾನೂನನ್ನು ಕಠಿಣ ಮಾಡಿ ಉಲ್ಲಂಘನೆಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸಿದರೂ ಕೆಲವು ರಸ್ತೆಯಲ್ಲಿ ವಾಹನ ಓಡಿಸುವ ಶಿಸ್ತು ಜನರಿಗೆ ಅವರ ಮನದಿಂದಲೇ ಮೂಡಬೇಕು ಎಂದು ಈ ಚರ್ಚೆಯಲ್ಲಿ ಭಾಗವಹಿಸಿದ್ದ ಇನ್ನೊಬ್ಬ ವ್ಯಕ್ತಿ ಹಾಗೂ ಡ್ರ್ಯಾಗ್-ರೇಸಿಂಗ್ ಚಾಂಪಿಯನ್ ಆಗಿರುವ ಹೇಮಂತ್ ಮುದ್ದಪ್ಪಾ ಅವರ ಅಭಿಪ್ರಾಯವಾಗಿದೆ.
Published by:Ashwini Prabhu
First published: