ಸ್ಪೀಕರ್ ಆದೇಶ ಉಲ್ಲಂಘಿಸಿದ ರೆಬೆಲ್ಸ್; ವಿಚಾರಣೆಗೆ ಹಾಜರಾಗಲು ಒಂದು ತಿಂಗಳ ಕಾಲಾವಕಾಶ ಕೋರಿಕೆ; ಮುಂದೇನಾಗಬಹುದು?

ಅತೃಪ್ತ ಶಾಸಕರು ವಿಪ್ ಉಲ್ಲಂಘಿಸಿರುವ ಕುರಿತು ಸಿದ್ದರಾಮಯ್ಯ ನೀಡಿದ ದೂರಿನ ಮೇಲೆ ಆದೇಶ ಹೊರಡಿಸಿದ್ದ ಸ್ಪೀಕರ್ ರಮೇಶ್ ಕುಮಾರ್, ಮಂಗಳವಾರ 11 ಗಂಟೆಗೆ ಅತೃಪ್ತರು ತಮ್ಮ ಎದುರು ಖುದ್ದು ಹಾಜರಾಗಬೇಕು ಎಂದು ನಿರ್ದೇಶನ ನೀಡಿದ್ದರು. ಆದರೆ, ಅತೃಪ್ತರು ಸ್ಪೀಕರ್ ಆದೇಶವನ್ನು ಉಲ್ಲಂಘಿಸಿದ್ದಾರೆ.

MAshok Kumar | news18
Updated:July 23, 2019, 11:20 AM IST
ಸ್ಪೀಕರ್ ಆದೇಶ ಉಲ್ಲಂಘಿಸಿದ ರೆಬೆಲ್ಸ್; ವಿಚಾರಣೆಗೆ ಹಾಜರಾಗಲು ಒಂದು ತಿಂಗಳ ಕಾಲಾವಕಾಶ ಕೋರಿಕೆ; ಮುಂದೇನಾಗಬಹುದು?
ಅನರ್ಹ ಶಾಸಕರು ಮತ್ತು ರಮೇಶ್ ಕುಮಾರ್.
  • News18
  • Last Updated: July 23, 2019, 11:20 AM IST
  • Share this:
ಬೆಂಗಳೂರೂ (ಜುಲೈ.23); ಕಾಂಗ್ರೆಸ್-ಜೆಡಿಎಸ್ ಪಕ್ಷದ ರೆಬೆಲ್ ಶಾಸಕರು ಮಂಗಳವಾರ ಖುದ್ದು ತನ್ನ ಎದುರು ಹಾಜರಾಗಬೇಕು ಎಂದು ಸ್ಪೀಕರ್ ರಮೇಶ್ ಕುಮಾರ್ ಸೋಮವಾರ ನೋಟೀಸ್ ಜಾರಿ ಮಾಡಿದ್ದರು. ಆದರೆ, ರೆಬೆಲ್ಗಳು ಮಾತ್ರ ತಮಗೆ ಇನ್ನೂ ಒಂದು ತಿಂಗಳ ಕಾಲ ಸಮಯ ಬೇಕು ಎಂದು ಸ್ಪೀಕರ್ ಬಳಿ ಮನವಿ ಮಾಡಿದ್ದಾರೆ.

ಸೋಮವಾರದ ಅಧಿವೇಶನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ನಾಯಕರ ವಿಪ್ ಅಧಿಕಾರಿದ ಕುರಿತು ಪ್ರಶ್ನೆ ಮಾಡಿದ್ದರು. ಈ ವೇಳೆ ಸ್ಪಷ್ಟ ಉತ್ತರ ನೀಡಿದ್ದ ಸ್ಪೀಕರ್ ರಮೇಶ್ ಕುಮಾರ್, “ಸುಪ್ರೀಂ ಕೋರ್ಟ್ ಯಾವುದೇ ಕಾರಣಕ್ಕೂ ಸ್ಫೀಕರ್ ಪರಮಾಧಿಕಾರದಲ್ಲಿ ಹಸ್ತಕ್ಷೇಪ ಮಾಡಲ್ಲ ಎಂದು ಸ್ಪಷ್ಟಪಡಿಸಿದೆ. ಈ ನಡುವೆ 10ನೇ ಶೆಡ್ಯೂಲ್ ಪಕ್ಷಾಂತರ ಕಾಯ್ದೆಯ ಅನ್ವಯ ಶಾಸಕರು ವಿಪ್ ಉಲ್ಲಂಘಿಸಿದರೆ ನನಗೆ ದೂರು ನೀಡಿ, ನಾನು ವಿಚಾರಣೆ ನಡೆಸುತ್ತೇನೆ” ಎಂದು ಹೇಳಿದ್ದರು.

ಹೀಗಾಗಿ ಅತೃಪ್ತ ಶಾಸಕರು ವಿಪ್ ಉಲ್ಲಂಘಿಸಿರುವ ಕುರಿತು ಸಿದ್ದರಾಮಯ್ಯ ನೀಡಿದ ದೂರಿನ ಮೇಲೆ ಆದೇಶ ಹೊರಡಿಸಿದ್ದ ಸ್ಪೀಕರ್ ರಮೇಶ್ ಕುಮಾರ್, “ಮಂಗಳವಾರ 11 ಗಂಟೆಗೆ ಅತೃಪ್ತರು ತಮ್ಮ ಎದುರು ಖುದ್ದು ಹಾಜರಾಗಬೇಕು” ಎಂದು ನಿರ್ದೇಶನ ನೀಡಿದ್ದರು.

ಆದರೆ, ಇಂದು ಸ್ಪೀಕರ್ ಕಚೇರಿಗೆ ಆಗಮಿಸಿರುವ ರಬೆಲ್ ಶಾಸಕರ ಪರ ವಕೀಲರು ಅತೃಪ್ತರು ಹಾಜರಾಗಲು 4 ವಾರಗಳ ಕಾಲಾವಕಾಶ ಕೋರಿದ್ದಾರೆ. ಸದನದಲ್ಲಿ ಬಹುಮತದದ ಮೇಲಿನ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಸ್ಪೀಕರ್ ನೀಡಿರುವ ಆದೇಶವನ್ನು ಉಲ್ಲಂಘಿಸಿದ ಕಾರಣಕ್ಕೆ ಶೆಡ್ಯೂಲ್ 10 ಪ್ರಕಾರ ಅತೃಪ್ತರನ್ನು ತಕ್ಷಣ ಅನೂರ್ಜಿತಗೊಳಿಸುತ್ತಾರ? ಅಥವಾ ಅವರಿಗೆ ಕಾಲಾವಕಾಶ ನೀಡಲಾಗುತ್ತಾ? ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ : ಗಂಟೆ ಹನ್ನೊಂದಾದರೂ ಸದನಕ್ಕೆ ಹಾಜರಾಗದ ಮೈತ್ರಿ ನಾಯಕರು; ಕೆಂಡಾಮಂಡಲವಾದ ಕೆ.ಎಸ್. ಈಶ್ವರಪ್ಪ!

First published:July 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading