ಬಿಎಸ್​ವೈ ಸಿಎಂ ಆಗೋವರೆಗೂ ಅತೃಪ್ತರು ಬೆಂಗಳೂರಿಗೆ ಬರಲ್ಲ; ಬಿಜೆಪಿ ನಾಯಕ ಶ್ರೀರಾಮುಲು

ಡಿಕೆಶಿ ಮತ್ತು ಸಿದ್ದರಾಮಯ್ಯ ಹತಾಶೆಯಿಂದ ಕೆಲವು ವಿಚಾರಗಳನ್ನು ಹರಿಬಿಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ನಡೆಯಲ್ಲ-ಶ್ರೀರಾಮುಲು

Latha CG | news18
Updated:July 25, 2019, 4:32 PM IST
ಬಿಎಸ್​ವೈ ಸಿಎಂ ಆಗೋವರೆಗೂ ಅತೃಪ್ತರು ಬೆಂಗಳೂರಿಗೆ ಬರಲ್ಲ; ಬಿಜೆಪಿ ನಾಯಕ ಶ್ರೀರಾಮುಲು
ಶ್ರೀರಾಮುಲು
  • News18
  • Last Updated: July 25, 2019, 4:32 PM IST
  • Share this:
ಬೆಂಗಳೂರು,(ಜು.25): ಬಿ.ಎಸ್​.ಯಡಿಯೂರಪ್ಪ ಸಿಎಂ ಆಗುವವರೆಗೆ ಅತೃಪ್ತ ಶಾಸಕರು ಮುಂಬೈನಲ್ಲಿಯೇ ಇರುತ್ತಾರೆ. ಅವರು ಬೆಂಗಳೂರಿಗೆ ಬರಲ್ಲ ಎಂದು ಬಿಜೆಪಿ ನಾಯಕ ಶ್ರೀರಾಮುಲು ಹೇಳಿದ್ಧಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್​ವೈ ಸಿಎಂ ಆಗುವವರೆಗೆ ರೆಬೆಲ್ ಶಾಸಕರ ಮುಂಬೈ ರೆಸಾರ್ಟ್​​ ವಾಸ್ತವ್ಯ ಮುಂದುವರಿಯಲಿದೆ ಎಂದಿದ್ಧಾರೆ. ಜೊತೆಗೆ ಬಹುಬೇಗ ಯಡಿಯೂರಪ್ಪ ಸಿಎಂ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ದೆಹಲಿಯಲ್ಲಿ ಹೈಕಮಾಂಡ್​ ಜೊತೆ ಬಿಜೆಪಿ ನಿಯೋಗ ಚರ್ಚಿಸುತ್ತಿದೆ. ಶೀಘ್ರದಲ್ಲೇ ಬಿಎಸ್​ವೈ ನೇತೃತ್ವದ ಸರ್ಕಾರ ರಚನೆ ಆಗಲಿದೆ. ಹೈ ಕಮಾಂಡ್​ ಸೂಚನೆ ನಂತರ ಯಡಿಯೂಪ್ಪ ಪ್ರಮಾಣವಚನ ಸ್ವೀಕರಿಸಲಿದ್ದಾರೆ," ಎಂದರು.

ಇನ್ನು, ಬಿಜೆಪಿ ಸರ್ಕಾರ ರಚನೆ ಆಗಲಿದೆ. ಆದರೆ ಇನ್ನೂ ಸಹ ಯಾವ ಹುದ್ದೆ ಯಾರಿಗೆ ಎಂಬ ವಿಷಯ ಪ್ರಸ್ತಾಪ ಆಗಿಲ್ಲ ಎಂದು ಶ್ರೀರಾಮುಲು ಹೇಳಿದರು. ತಮಗೆ ಡಿಸಿಎಂ ಹುದ್ದೆ ನೀಡುತ್ತಾರೆಯೇ ಎಂಬ ಪ್ರಶ್ನೆಗೆ ಹೈಕಮಾಂಡ್​ ನಿರ್ಧಾರಕ್ಕೆ ಬದ್ಧ ಎಂದರು.

30ರೊಳಗೆ ಬಿಜೆಪಿ ಸರ್ಕಾರ ರಚಿಸದಿದ್ದರೆ, ಮಧ್ಯಂತರ ಚುನಾವಣೆ ಬರುವುದು ನಿಶ್ಚಿತ; ಕೈ ಮುಖಂಡರಿಗೆ ಸಿದ್ದರಾಮಯ್ಯ ಸೂಚನೆ

"ನಾನೊಬ್ಬ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ. ರಾಷ್ಟ್ರೀಯ ಅಧ್ಯಕ್ಷರು ಹಾಗೂ ಯಡಿಯೂರಪ್ಪ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧ. ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಈ ವಿಷಯ ಚರ್ಚೆಯಾಗಿದೆ. ಅದಕ್ಕೆ ಕಿವಿ ಕೊಡುವುದು ಬೇಡ," ಎಂದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲ್ಲ. ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಕಾಂಗ್ರೆಸ್​ ನಾಯಕರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಶ್ರೀರಾಮುಲು ಸಚಿವ ಡಿ ಕೆ ಶಿವಕುಮಾರ್​ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ."ಡಿಕೆಶಿ ಮತ್ತು ಸಿದ್ದರಾಮಯ್ಯ ಹತಾಶೆಯಿಂದ ಕೆಲವು ವಿಚಾರಗಳನ್ನು ಹರಿಬಿಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ನಡೆಯಲ್ಲ. ಡಿಕೆಶಿ ಬಗ್ಗೆ ನನಗೆ ಗೌರವ ಇದೆ," ಎಂದು ಹೇಳಿದರು.

First published: July 25, 2019, 4:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading