ಅಧಿವೇಶನ ಮುಗಿದ ಬಳಿಕ ರೆಬಲ್ ಶಾಸಕರು ರಾಜೀನಾಮೆ ಫಿಕ್ಸ್​..?

ಸದನಕ್ಕೆ ಗೈರಾದರೆ  ಕಾನೂನು ಹೋರಾಟಕ್ಕೆ ಹಿನ್ನಡೆಯಾಗುತ್ತದೆ ಇದನ್ನು ಅರಿತು ರೆಬಲ್ ಶಾಸಕರು ಬಂದಿದ್ದರು. ನಾಳೆ ಬಜೆಟ್ ಬಿಲ್ ಗೆ ವೋಟ್ ಮಾಡಿ ಅಧಿವೇಶನ ಮುಗಿದ ಬಳಿಕ ಅತೃಪ್ತ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ

G Hareeshkumar | news18
Updated:February 13, 2019, 5:24 PM IST
ಅಧಿವೇಶನ ಮುಗಿದ ಬಳಿಕ ರೆಬಲ್ ಶಾಸಕರು ರಾಜೀನಾಮೆ ಫಿಕ್ಸ್​..?
ರೆಬಲ್ ಶಾಸಕರು
G Hareeshkumar | news18
Updated: February 13, 2019, 5:24 PM IST
ಬೆಂಗಳೂರು (ಫೆ.13) : ಅನರ್ಹ ಭೀತಿಯಿಂದ ರೆಬಲ್ ಶಾಸಕರಾದ ರಮೇಶ್ ಜಾರಕಿಹೊಳಿ, ಬಿ. ನಾಗೇಂದ್ರ, ಮಹೇಶ್ ಕುಮಟಳ್ಳಿ, ಡಾ ಉಮೇಶ್ ಜಾಧವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದು, ಅಧಿವೇಶನ ಮುಗಿದ ಬಳಿಕ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಪಕ್ಕಾ ಎಂದು ತಿಳಿದು ಬಂದಿದೆ.

ಅನರ್ಹತೆಯಿಂದ ತಪ್ಪಿಸಿಕೊಳ್ಳಲು ಅತೃಪ್ತ ಶಾಸಕರು ಕಾನೂ‌ನು ತಜ್ಞರ ಮೊರೆ ಹೋಗಿದ್ದರು. ಅಪಾಯದ ಮುನ್ಸೂಚನೆ ಅರಿತಿರುವ ಅತೃಪ್ತರ ಆಪ್ತರು ಹಾಗೂ ಕಾನೂನು ತಜ್ಞರು ಮುಂದೆ ಎದುರಾಗಬಹುದಾದ ಅಪಾಯದ ಬಗ್ಗೆ ಎಚ್ಚರಿಕೆಯನ್ನೂ ನೀಡಿದ್ದರು ನಮ್ಮರಾಜಕೀಯ ಜೀವನವನ್ನುಮಂಕಾಗಬಹು ಎಂಬುದನ್ನುರಿತ ರೆಬಲ್ ಶಾಸಕರು  ರಾಜೀನಾಮೆ ನೀಡುವುದು ಉತ್ತಮ ಎಂದು ಭಾವಿಸಿಕೊಂಡಿದ್ದಾರೆ.

ಪಕ್ಷದ ವಿರುದ್ಧ ಬಂಡಾಯ ಎದ್ದಿರುವ ನಾಲ್ವರು ಶಾಸಕರನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಯಮಯ್ಯ ಸ್ಪೀಕರ್​ ರಮೇಶ್​ಕುಮಾರ್​ ಅವರಿಗೆ ದೂರು ಸಲ್ಲಿಸಿರುವುದು ಅತೃಪ್ತ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಇದನ್ನೂ ಓದಿ :  ನಾಲ್ವರು ಅತೃಪ್ತ ಶಾಸಕರ ಅನರ್ಹತೆ; ನಾಲ್ವರು ಸಚಿವರ ರಾಜೀನಾಮೆ; ಹೊಸ ಮುಖಗಳಿಗೆ ಮಣೆ – ಸಿಎಲ್​ಪಿ ಸಭೆಯಲ್ಲಿ ನಿರ್ಧಾರ

ಸದನಕ್ಕೆ ಗೈರಾದರೆ  ಕಾನೂನು ಹೋರಾಟಕ್ಕೆ ಹಿನ್ನಡೆಯಾಗುತ್ತದೆ ಇದನ್ನು ಅರಿತು ರೆಬಲ್ ಶಾಸಕರು ಬಂದಿದ್ದರು. ನಾಳೆ ಬಜೆಟ್ ಬಿಲ್ ಗೆ ವೋಟ್ ಮಾಡಿ ಅಧಿವೇಶನ ಮುಗಿದ ಬಳಿಕ ಅತೃಪ್ತ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

ಇಂದು ಗೃಹ ಸಚಿವ ಎಂ ಬಿ ಪಾಟೀಲ್ ಅವರನ್ನು ಅತೃಪ್ತ ಶಾಸಕ ಬಿ ನಾಗೇಂದ್ರ ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಈ ಸಮಯದಲ್ಲಿ ಸಚಿವರು ಶಾಸಕರನ್ನು ಮನವೋಲಿಸಲು ಮುಂದಾಗಿದ್ದಾರೆ. ಆದರೆ ನಾವು ಇಟ್ಟ ಹೆಜ್ಜೆಯನ್ನು ಯಾವುದೇ ಕಾರಣಕ್ಕೂ ಹಿಂದಕ್ಕೆ ಪಡೆಯುವುದಿಲ್ಲ ಎಂದು ಸಚಿವರಿಗೆ ಶಾಸಕರು ತಿಳಿಸಿದ್ದರು ಎನ್ನಲಾಗಿದೆ. ಇಂದು ಕಲಾಪಕ್ಕೆ ಬಂದ ರೆಬಲ್ ಶಾಸಕರನ್ನು  ಕಾಂಗ್ರೆಸ್​​ ನ ಯಾವ ಶಾಸಕರು ಮಾತನಾಡಿಸಿಲ್ಲ.
Loading...

First published:February 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...