ನಮಗೆ ನ್ಯಾಯ ಕೊಡಿಸಿ; ಸ್ಪೀಕರ್​​ ವಿರುದ್ಧ ಅತೃಪ್ತ ಶಾಸಕರು ಸುಪ್ರೀಂಕೋರ್ಟ್​​ ಮೊರೆ

ಮುಂಬೈನಲ್ಲಿರುವ ಅತೃಪ್ತ ಶಾಸಕರು ಯಾವುದೇ ಕಾರಣಕ್ಕೂ ನಿರ್ಧಾರ ಬದಲಿಸುವ ಪ್ರಶ್ನೆಯೇ ಇಲ್ಲ ಎನ್ನುತ್ತಿದ್ದಾರೆ. ಇನ್ನೊಂದೆಡೆ, ಜೆಡಿಎಸ್ ಶಾಸಕರು ಕೂಡ ನಿನ್ನೆ ಸಂಜೆ ದೇವನಹಳ್ಳಿ ಸಮೀಪವಿರುವ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್​ಗೆ ತೆರಳಿದ್ದಾರೆ.

Ganesh Nachikethu | news18
Updated:July 10, 2019, 8:57 PM IST
ನಮಗೆ ನ್ಯಾಯ ಕೊಡಿಸಿ; ಸ್ಪೀಕರ್​​ ವಿರುದ್ಧ ಅತೃಪ್ತ ಶಾಸಕರು ಸುಪ್ರೀಂಕೋರ್ಟ್​​ ಮೊರೆ
ರಮೇಶ್​ ಕುಮಾರ್
  • News18
  • Last Updated: July 10, 2019, 8:57 PM IST
  • Share this:
ಬೆಂಗಳೂರು(ಜುಲೈ.10): ಸ್ಪೀಕರ್​​ ರಮೇಶ್​​ ಕುಮಾರ್​​ ವಿರುದ್ಧ ಗರಂ ಆಗಿರುವ ಕಾಂಗ್ರೆಸ್​​ ಮತ್ತು ಜೆಡಿಎಸ್​​ನ ಅತೃಪ್ತ ಶಾಸಕರು, ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಈಗಾಗಲೇ ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇವೆ. ಇದನ್ನು ಅಂಗೀಕಾರ ಮಾಡುವ ವಿಚಾರದಲ್ಲಿ ಸ್ಪೀಕರ್ ಉದ್ದೇಶಪೂರ್ವಕವಾಗಿ ತಡ ಮಾಡುತ್ತಿದ್ದಾರೆ. ಹಾಗಾಗಿ ನೀವು ಮಧ್ಯಪ್ರವೇಶಿಸಿ ನಮಗೆ ನ್ಯಾಯ ಕೊಡಿಸಬೇಕೆಂದು ಅರ್ಜಿ ಸಲ್ಲಿಸಿದ್ದಾರೆ. ಹಿರಿಯ ನ್ಯಾಯವಾದಿ ಮುಕುಲ್ ರೋಹಟಗಿ, ಅತೃಪ್ತ ಶಾಸಕರ ಪರವಾಗಿ ಸುಪ್ರೀಂಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೇ ಸದ್ಯ ಅರ್ಜಿ ತುರ್ತು ವಿಚಾರಣೆ ನಡೆಸುವಂತೆ ಕೋರಿದ್ದು,  ಸುಪ್ರೀಂಕೋರ್ಟ್ ಏನು ತೀರ್ಪು ನೀಡಲಿದೆ ಎಂಬ ಕುತೂಹಲ ಮೂಡಿಸಿದೆ.

ಇತ್ತ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರೆಸಾರ್ಟ್‌ ರಾಜಕೀಯ ಮಾಡುತ್ತಿರುವ ಅತೃಪ್ತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್​​ ಮತ್ತು ಜೆಡಿಎಸ್ ನಾಯಕರು ಸ್ಪೀಕರ್​​​ಗೆ​​ ಒತ್ತಾಯಿಸುತ್ತಿದ್ದಾರೆ. ಅತ್ತ ಅತೃಪ್ತರ ರಾಜೀನಾಮೆ ಅಂಗೀಕಾರಕ್ಕಿರುವ ಕಾನೂನು ತೊಡಕುಗಳೇನು? ಎಂಬುದಕ್ಕೆ ಖುದ್ದು ಸ್ಪೀಕರ್​ ರಮೇಶ್​​​ ಕುಮಾರ್ ಅವರೇ ಹುಡುಕುತ್ತಿದ್ದಾರೆ. ಹಾಗಾಗಿಯೇ ಕಾನೂನು ತಜ್ಞರ ಜೊತೆ ಸ್ಪೀಕರ್ ರಮೇಶ್​​ ಮತ್ತು ಕಾಂಗ್ರೆಸ್​​​ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಮಾಲೋಚನೆ ನಡೆಸುತ್ತಿದ್ದಾರೆ.

ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ವಿಚಾರಕ್ಕೆ ಸಂಬಂಧಿಸಿದಂತೇ ರಮೇಶ್​ ಕುಮಾರ್​​ ಸಂವಿಧಾನ ತಜ್ಞರ ಮೊರೆ ಹೋಗಿದ್ದರು. ಮಾಜಿ ಎಜಿ ಪ್ರೊ.ರವಿವರ್ಮ ಕುಮಾರ್ ಅವರನ್ನು ನಿನ್ನೆಯೇ ಭೇಟಿಯಾಗಿ ಸ್ಪೀಕರ್ ಮಹತ್ವದ ಮಾತುಕತೆ ನಡೆಸಿದ್ದರು. ಇದಕ್ಕೇ ಕಾಂಗ್ರೆಸ್​ ಅಧ್ಯಕ್ಷ ದಿನೇಶ್​ ಗುಂಡೂರಾವ್​​, ಸಚಿವ ಕೃಷ್ಣ ಬೈರೇಗೌಡ ಅವರು ಕೂಡ ಸ್ಪೀಕರ್​​ ಜೊತೆಗೂಡಿದ್ದರು.

ಇದನ್ನೂ ಓದಿ: ಸಿಎಂ ಸ್ಥಾನಕ್ಕೆ ಕುಮಾರಸ್ವಾಮಿ ಶುಕ್ರವಾರ ರಾಜೀನಾಮೆ? ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷದ ಮೇಲೆ ಹೆಚ್​ಡಿಕೆ ಮುನಿಸು

ರಾಜೀನಾಮೆ ಅಂಗೀಕಾರಕ್ಕಿರುವ ಕಾನೂನು ತೊಡಕುಗಳಿಗಾಗಿ ಸದ್ಯ ಹುಟುಕಾಟ ನಡೆಸಲಾಗುತ್ತಿದೆ. ಕಾನುನು ತಜ್ಞರಾದ ಪ್ರೊ.ರವಿವರ್ಮ ಕುಮಾರ್ ಜೊತೆ ಸಮಾಲೋಚನೆ ನಡೆಸುತ್ತಿರುವ ಸ್ವೀಕರ್ ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷರು ಹಾಜರಾಗಿರುವುದು ಭಾರೀ ಕುತೂಹಲ ಮೂಡಿಸಿದೆ. ರೆಬೆಲ್​​ಗಳನ್ನು ಹತ್ತಿಕ್ಕಲು ಕಾನೂನು ಪ್ರಯೋಗ ಕುರಿತು ಚರ್ಚೆ ನಡೆಸಲಾಗುತ್ತಿದೆ. ನಾವು ಹೇಗೆ ಕಾನೂನು ಪರಿಮಿತಿಯೊಳಗೆ ಅವರನ್ನು ಕಟ್ಟಿ ಹಾಕಬಹುದು? ಎಂದು ಸಲಹೆ ಪಡೆಯುತ್ತಿದ್ದಾರೆ.

ರಾಜ್ಯ ರಾಜಕಾರಣ ದೇಶದೆಲ್ಲೆಡೆ ಭಾರೀ ಕುತೂಹಲ ಮೂಡಿಸಿದ್ದು, ಈಗಾಗಲೇ ಸಮ್ಮಿಶ್ರ ಸರ್ಕಾರದ ಕಾಂಗ್ರೆಸ್​- ಜೆಡಿಎಸ್​ ಸಚಿವರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಶೀಘ್ರದಲ್ಲೇ ಹೊಸ ಸಂಪುಟ ರಚಿಸಿ, ಅತೃಪ್ತ ಶಾಸಕರಿಗೆ ಮಂತ್ರಿಗಿರಿ ನೀಡುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ.

ಇದನ್ನೂ ಓದಿ: ಗುಂಡಾಗಿರಿ ಮಾಡುತ್ತಿರುವುದು ಕಾಂಗ್ರೆಸ್​​ ಅಲ್ಲ, ಬಿಜೆಪಿ; ಮಾಜಿ ಸಿಎಂ ಸಿದ್ದರಾಮಯ್ಯಮುಂಬೈನಲ್ಲಿರುವ ಅತೃಪ್ತ ಶಾಸಕರು ಯಾವುದೇ ಕಾರಣಕ್ಕೂ ನಿರ್ಧಾರ ಬದಲಿಸುವ ಪ್ರಶ್ನೆಯೇ ಇಲ್ಲ ಎನ್ನುತ್ತಿದ್ದಾರೆ. ಇನ್ನೊಂದೆಡೆ, ಜೆಡಿಎಸ್ ಶಾಸಕರು ಕೂಡ ನಿನ್ನೆ ಸಂಜೆ ದೇವನಹಳ್ಳಿ ಸಮೀಪವಿರುವ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್​ಗೆ ತೆರಳಿದ್ದಾರೆ.

ಮುಂಬೈಯ ರೆನೈಸಾನ್ಸ್ ಹೊಟೇಲ್ ನಲ್ಲಿ ತಂಗಿರುವ ಅತೃಪ್ತ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ವಾಪಸ್ ಕರೆತರುವ ಸಲುವಾಗಿ ಡಿಕೆ ಶಿವಕುಮಾರ್ ಅವರು ಮುಂಬೈಗೆ ತೆರಳಿದ್ದರು. ಆದರೆ ಹೊಟೇಲ್ ಒಳಗೆ ಅವರಿಗೆ ಪ್ರವೇಶಿಸಲು ಪೊಲೀಸರು ಬಿಟ್ಟಿರಲಿಲ್ಲ. ಪಟ್ತು ಬಿಡದೆ ಅಲ್ಲಿಯೇ ಇದ್ದ ಡಿಕೆ ಶಿವಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದೀಗ ಅವರನ್ನು ಪೊಲೀಸರು ಬಿಡುಗಡೆ ಮಾಡಿದ್ದು, ಅವರು ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾರೆ ಎನ್ನಲಾಗಿದೆ.
-------------
First published:July 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ