ಅತ್ತ ದರಿ ಇತ್ತ ಪುಲಿ ಸ್ಥಿತಿಯಲ್ಲಿದ್ದ ಕಾಂಗ್ರೆಸ್​ ಶಾಸಕ ತವರಿಗೆ ವಾಪಸ್​​​: ಬಿಜೆಪಿಗೆ ಕೈ ಕೊಟ್ಟ ಮಹೇಶ್​​ ಕುಮಟಳ್ಳಿ!

ನಾನು ಬಿಜೆಪಿಗೆ ಹೋಗಿದ್ದೇನೆ ಎಂಬ ನಕಲಿ ಸುದ್ದಿಗಳು ಕೇಳಿ ಬರುತ್ತಿವೆ. ಅದೆಲ್ಲವೂ ಅಕ್ಷರಶಃ ಸುಳ್ಳು. ನಾನು ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲು ಮುಂಬೈಗೆ ತೆರಳಿದ್ದೆ. ಇದೀಗ ಕ್ಷೇತ್ರಕ್ಕೆ ಮರಳಿದ್ದೇನೆ. ಜನರ ಜತೆಗೆ ನನ್ನ ಕೆಲಸವನ್ನು ಮುಂದುವರೆಸುತ್ತೇನೆ. ಯಾವುದೇ ಸುಳ್ಳು ವಂದತಿಗಳಿಗೆ ಕಿವಿಗೊಡಬೇಡಿ- ಕುಮಟಳ್ಳಿ

Ganesh Nachikethu | news18
Updated:January 25, 2019, 12:42 PM IST
ಅತ್ತ ದರಿ ಇತ್ತ ಪುಲಿ ಸ್ಥಿತಿಯಲ್ಲಿದ್ದ ಕಾಂಗ್ರೆಸ್​ ಶಾಸಕ ತವರಿಗೆ ವಾಪಸ್​​​: ಬಿಜೆಪಿಗೆ ಕೈ ಕೊಟ್ಟ ಮಹೇಶ್​​ ಕುಮಟಳ್ಳಿ!
ರಮೇಶ್​​ ಜಾರಕಿಹೊಳಿ, ಮಹೇಶ್​​ ಕುಮಟಳ್ಳಿ
  • News18
  • Last Updated: January 25, 2019, 12:42 PM IST
  • Share this:
ಬೆಂಗಳೂರು(ಜ.25): ಬಿಜೆಪಿಗೆ ಮತ್ತೋರ್ವ ಕಾಂಗ್ರೆಸ್​ ಶಾಸಕ ಕೈ ಕೊಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇತ್ತೀಚೆಗೆ ಕಳೆದ 1 ತಿಂಗಳಿನಿಂದ ಬೆಳಗಾವಿ ಅಥಣಿ ಕ್ಷೇತ್ರದ ಶಾಸಕ ಮಹೇಶ್​​ ಕುಮಟಳ್ಳಿ, ಕಾಂಗ್ರೆಸ್​​ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದರು. ಅದಾದ ಬಳಿಕ ಕುಮಟಳ್ಳಿ ಆಪರೇಷನ್​​ ಕಮಲಕ್ಕೊಳಗಾಗಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಇದೀಗ ಕುಮಟಳ್ಳಿ ತಮ್ಮ ಕ್ಷೇತ್ರಕ್ಕೆ ವಾಪಾಸ್ಸಾಗಿದ್ದಾರೆ. ಈ ಮೂಲಕ ತಾವು ಕಾಂಗ್ರೆಸ್​ನಲ್ಲಿಯೇ ಇರುವುದಾಗಿ ಸಂದೇಶ ರವಾನಿಸಿದ್ದು, ಕೇಸರಿ ಪಾಳಯಕ್ಕೆ ಕೈ ಕೊಟ್ಟಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ಕಾಂಗ್ರೆಸ್​​-ಜೆಡಿಎಸ್​​ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸಿತ್ತು. ಮಲ್ಲೇಶ್ವರಂ ಶಾಸಕ ಡಾ. ಅಶ್ವತ್ ನಾರಾಯಣ ಅವರ ಮೂಲಕವೇ ಆಪರೇಷನ್​​ ಕಮಲಕ್ಕೆ ಮುಂದಾಗಿತ್ತು. ಈ ವೇಳೆ ಆಪರೇಷನ್​​ ಕಮಲಕ್ಕೆ ಒಳಗಾಗಿದ್ದಾರೆ ಎಂಬುವವರ ಸಾಲಿನಲ್ಲಿ ಮಹೇಶ್​​ ಕುಮಟಳ್ಳಿ ಹೆಸರು ಕೂಡ ಚಾಲ್ತಿಯಲ್ಲಿತ್ತು. ಮಾಜಿ ಸಚಿವ ಮತ್ತು ಅತೃಪ್ತ ಶಾಸಕ ರಮೇಶ್​​ ಜಾರಕಿಹೊಳಿ ಜತೆಗೆ ಕೈ ಜೋಡಿಸಿದ್ದಾರೆಂದು; ಅಲ್ಲದೇ ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿತ್ತು.

ನಂತರ ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್​ ಶಾಸಕರ ಸಭೆಯನ್ನು ಕರೆದಿದ್ದರು. ಈ ಸಂದರ್ಭದಲ್ಲಿ ಮುಂಬೈನ ಪಂಚತಾರಾ ಹೊಟೇಲ್​​ನಲ್ಲಿಯೇ ಬಿಜೆಪಿ ನಾಯಕರೊಂದಿಗೆ ಮಹೇಶ್ ಕುಮಟಳ್ಳಿ ಇದ್ದರೆಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ತಾವು ಹಿಂದೆಯಿಂದಲೂ ಕಾಂಗ್ರೆಸ್ ಪಕ್ಷದಲ್ಲಿದ್ದು, ಯಾವುದೇ ಆಸೆ ಆಮಿಷಗಳಿಗೆ ಒಳಗಾಗಿಲ್ಲ. ನಾನು ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿರುವ ಕಾರಣ ಸಭೆಗೆ ಹಾಜರಾಗುತ್ತಿಲ್ಲ. ಕಾಂಗ್ರೆಸ್​ ಪಕ್ಷವನ್ನು ಬಿಡುವ ಯಾವುದೇ ಆಲೋಚನೆ ಇಲ್ಲ ಎಂದು ಕುಮಟಳ್ಳಿ ಪತ್ರ ಬರೆದಿದ್ದರು.

ಇದನ್ನೂ ಓದಿ: ವರ್ಷಕ್ಕೆ 8 ಲಕ್ಷ ಆದಾಯ ಪಡೆಯುವವರು ಹೇಗೆ ಬಡವರಾಗುತ್ತಾರೆ?; ಮೋದಿಗೆ ತೇಜಸ್ವಿ ಯಾದವ್​ ಪ್ರಶ್ನೆ

ಸದ್ಯ ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಮಹೇಶ್​​ ಕುಮಟಳ್ಳಿ, ನಾನು ಯಾವುದೇ ಆಮಿಷಕ್ಕೆ ಒಳಗಾಗಿಲ್ಲ. ನಾನು ಬಿಜೆಪಿಗೆ ಹೋಗಿದ್ದೇನೆ ಎಂಬ ನಕಲಿ ಸುದ್ದಿಗಳು ಕೇಳಿ ಬರುತ್ತಿವೆ. ಅದೆಲ್ಲವೂ ಅಕ್ಷರಶಃ ಸುಳ್ಳು. ನಾನು ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲು ಮುಂಬೈಗೆ ತೆರಳಿದ್ದೆ. ಇದೀಗ ಕ್ಷೇತ್ರಕ್ಕೆ ಮರಳಿದ್ದೇನೆ. ಜನರ ಜತೆಗೆ ನನ್ನ ಕೆಲಸವನ್ನು ಮುಂದುವರೆಸುತ್ತೇನೆ. ಯಾವುದೇ ಸುಳ್ಳು ವಂದತಿಗಳಿಗೆ ಕಿವಿಗೊಡಬೇಡಿ ಎಂದು ತಿಳಿಸಿದ್ದಾರೆ.

ಇನ್ನು ಆಪರೇಷನ್ ಕಮಲಕ್ಕೆ ಮುನ್ನುಡಿ ಬರೆದು ಮುಂಬೈ ಸೇರಿದ್ದ ಕಾಂಗ್ರೆಸ್ ಶಾಸಕರು ಗೊಂದಲದಲ್ಲಿದ್ದರು. ಮುಂದೆ ಏನು ಮಾಡಬೇಕು ಅನ್ನುವ ಚಿಂತೆಯಲ್ಲಿ ಮುಳುಗಿದ್ದರು. ಆಪರೇಷನ್ ಕಮಲ ಸದ್ಯ ಬಹುತೇಕ ವಿಫಲವಾಗಿದೆ. ಕಾಂಗ್ರೆಸ್ ಶಾಸಕರು ರೆಸಾರ್ಟ್ ಸೇರಿದ್ದಾರೆ. ಶಾಸಕಾಂಗ ಸಭೆಗೂ ನಾವು ಗೈರಾಗಿರುವ ಕಾರಣ ಪಕ್ಷ ನೋಟಿಸ್ ಜಾರಿ ಮಾಡಿದೆ. ಮುಂಬೈನಲ್ಲಿ ಉಳಿದುಕೊಂಡಿರುವ ನಾವು ನೋಟಿಸ್​ಗೆ ಉತ್ತರ ನೀಡಲೇಬೇಕಿದೆ ಎಂದು ಚಿಂತೆಯಲ್ಲಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಸಿಬಿಐ ಹೊಸ ನಿರ್ದೇಶಕರ ಆಯ್ಕೆಗೆ ಸಭೆ ಸೇರಿದ ಪ್ರಧಾನಿ ಮೋದಿ; ಹೆಚ್ಚಿನ ಮಾಹಿತಿ ಅಗತ್ಯತೆ ಇದೆ ಎಂದ ಖರ್ಗೆಅಲ್ಲದೇ ಪಕ್ಷೇತರ ಶಾಸಕರಿಬ್ಬರು ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದಾರೆ. ಬಿಜೆಪಿಯ ಸಂಖ್ಯಾಬಲ 104 ರಿಂದ 106ಕ್ಕೆ ಏರಿಕೆಯಾಗಿದೆ. ಆದರೆ, ಬಿಜೆಪಿ ಆಪರೇಷನ್​​ ಕಮಲವಾಗಿದ್ದು, ನಾವು ಮುಂಬೈ ಬಿಡಲೇಬೇಕು. ಇತ್ತ ಬೆಂಗಳೂರಿಗೂ ಬರುವಂತಿಲ್ಲ. ಮತ್ತೊಂದೆಡೆ ಬಿಜೆಪಿಗೆ ಹೋಗುವಂತಿಲ್ಲ. ಹೀಗಾಗಿ ಎಲ್ಲವೂ ಸರಿ ಹೋದಮೇಲೆ ಕಾಂಗ್ರೆಸ್ ಕಡೆಯೇ  ಹೋಗುವ ಎಂದು ಅತೃಪ್ತ ಶಾಸಕರು ನಿರ್ಧರಿಸಿದ್ದಾರೆ. ಆದರಿಂದಲೇ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಉಮೇಶ್ ಜಾಧವ್ ಮತ್ತು ನಾಗೇಂದ್ರ ತಮ್ಮ ಪಕ್ಷಕ್ಕೆ ವಾಪಾಸ್ಸಾಗಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ.
-------------
ಜಾರಕಿಹೊಳಿ ಬ್ರದರ್ಸ್​ಗೆ ನಮ್ಮ ಬೆಂಬಲ ಎಂದ ಮಹೇಶ್​ ಕುಮಟಳ್ಳಿ
First published: January 25, 2019, 8:38 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading