ಅಥಣಿ ಉಪಚುನಾವಣೆ: ಎಂ.ಬಿ ಪಾಟೀಲ್​​ ಸಂಧಾನ ಯಶಸ್ಸು; ಕಾಂಗ್ರೆಸ್​ ಬಂಡಾಯ ಅಭ್ಯರ್ಥಿಗಳ ನಾಮಪತ್ರ ವಾಪಸ್​

ನಾಮಪತ್ರ ವಾಪಸ್ಸು ಪಡೆದ ಮಾಜಿ ಶಾಸಕ ಶಹಜಹಾನ್‌ ಡೊಂಗರಗಾಂವ, ಮುಖಂಡರಾದ ಎಸ್‌.ಕೆ. ಬುಟಾಳಿ ಹಾಗೂ ಸುರೇಶ ಪಾಟೀಲರು, ಕಾಂಗ್ರೆಸ್​​ ಪಕ್ಷದ ಅಧಿಕೃತ ಅಭ್ಯರ್ಥಿ ಪರ ಕೆಲಸ ಮಾಡುವುದಾಗಿ ಘೋಷಿಸಿದರು. ಈಗ ಜೆಡಿಎಸ್​​ಗೆ ಅಭ್ಯರ್ಥಿಯೇ ಇಲ್ಲದೇ ಹೋಗಿದ್ದು, ಕಾಂಗ್ರೆಸ್​​ ಮತ್ತು ಬಿಜೆಪಿ ನಡುವೇ ನೇರ ಹಣಾಹಣಿ ಏರ್ಪಟ್ಟಿದೆ.

news18-kannada
Updated:November 22, 2019, 8:52 AM IST
ಅಥಣಿ ಉಪಚುನಾವಣೆ: ಎಂ.ಬಿ ಪಾಟೀಲ್​​ ಸಂಧಾನ ಯಶಸ್ಸು; ಕಾಂಗ್ರೆಸ್​ ಬಂಡಾಯ ಅಭ್ಯರ್ಥಿಗಳ ನಾಮಪತ್ರ ವಾಪಸ್​
ಎಂ.ಬಿ. ಪಾಟೀಲ್
  • Share this:
ಬೆಳಗಾವಿ(ನ.22): ಕರ್ನಾಟಕ ಉಪಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯಲು ಗುರುವಾರ(ನ.21) ಕೊನೆಯ ದಿನವಾಗಿತ್ತು. ನಿನ್ನೆ ನಾಮಪತ್ರ ವಾಪಸ್ಸಿಗೆ ಕೊನೆಯ ದಿನವಾದ್ದರಿಂದ ಬೆಳಗಾವಿ ರಾಜಕೀಯದಲ್ಲಿ ದೊಡ್ಡ ಹೈಡ್ರಾಮವೇ ನಡೆದೋಯ್ತು. ಒಂದೆಡೆ ಬಿಜೆಪಿ ಬಂಡಾಯದ ನಂತರ ಅಥಣಿಯ ಜೆಡಿಎಸ್​​ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಗುರು ದಾಶ್ಯಾಳ ಕೊನೆಗೂ ನಾಮಪತ್ರ ಹಿಂಪಡೆದು ಜನತಾ ದಳಕ್ಕೆ ಕೈಕೊಟ್ಟರು. ಈ ಮೂಲಕ ಬಿಜೆಪಿ ತಲೆನೋವು ಕಡಿಮೆ ಮಾಡಿದರು. ಆದರೆ, ಜೆಡಿಎಸ್​​ಗೆ ಕೈಕೊಡುವ ಮೂಲಕ ಅಥಣಿಯಲ್ಲಿ ಜನತಾ ದಳದ ಅಭ್ಯರ್ಥಿಯೇ ಇಲ್ಲದಂತೆ ಮಾಡಿದರು.  

ಇನ್ನೊಂದೆಡೆ ಅಥಣಿ ಕಾಂಗ್ರೆಸ್ ಪಾಲಿಗೆ ಆಪತ್ಭಾಂದವನಾಗಿದ್ದ ಮಾಜಿ ಸಚಿವ ಎಂಬಿ ಪಾಟೀಲ್​​​​ ಬಂಡಾಯ ಅಭ್ಯರ್ಥಿಗಳ ಸಂಧಾನ ಮಾಡಿಯೇಬಿಟ್ಟರು. ಎಂಬಿ ಪಾಟೀಲರ ಸಂಧಾನಕ್ಕೆ ಒಪ್ಪಿದ ಮಾಜಿ ಶಾಸಕ ಶಹಜಹಾನ್‌ ಡೊಂಗರಗಾಂವ್‌, ಸದಾಶಿವ ಬುಟಾಳಿ, ಸುರೇಶ್‌ ಪಾಟೀಲ್‌, ಸಿದ್ರಾಮಗೌಡ ಪಾಟೀಲ, ಗುರುಪುತ್ತ ಕುಳ್ಳೂರ, ರಸೂಲಸಾಬ ನದಾಪ, ಬಾಹುಬಲಿ ಅಜ್ಜಪ್ಪಗೋಳ ಮತ್ತು ದಾವಲಸಾಬ ಅಲಿಸಾಬ ನದಾಬ(ರಾಷ್ಟ್ರೀಯ ಮಹಿಳಾ ಪಕ್ಷ) ಉಮೇದುವಾರಿಕೆ ವಾಪಸ್ ಪಡೆದರು.

ಮಾಜಿ ಸಚಿವ ಎಂ.ಬಿ ಪಾಟೀಲ್​​​​ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ಮೂಲಕ ದೂರವಾಣಿ ಮೂಲಕ ಬಂಡಾಯ ಅಭ್ಯರ್ಥಿಗಳೊಂದಿಗೆ ಮಾತಾಡಿಸಿದ್ಧಾರೆ. ಎಲ್ಲರಿಗೂ ಮುಂದೆ ಕಾಂಗ್ರೆಸ್​​ನಲ್ಲಿ ಸಮಾನ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಹಾಗಾಗಿ ಅಥಣಿಯಲ್ಲಿ ಕಾಂಗ್ರೆಸ್​​ನ ಬಂಡಾಯ ಅಭ್ಯರ್ಥಿಗಳು ನಾಮಪತ್ರ ವಾಪಸ್ಸು ಪಡೆದರು. ಮಾಜಿ ಎಂ.ಬಿ ಪಾಟೀಲರ ಸಂಧಾನ ಮಾಡಿದ ರೀತಿ ಬೆಳಗಾವಿ ಕಾಂಗ್ರೆಸ್ ಘಟಾನುಘಟಿಗಳನ್ನೇ ಬೆಚ್ಚಿ ಬೀಳಿಸಿತ್ತು.

ಇದನ್ನೂ ಓದಿ: ಉಪಚುನಾವಣೆ-19 ವಾಸ್ತವ ವರದಿ | ಜೆಡಿಎಸ್​ ಪ್ರಬಲ ಕೋಟೆಯಾಗಿರುವ ಕೆ.ಆರ್.ಪೇಟೆಯಲ್ಲಿ ಜನರು ಮತ್ತೆ ಪಕ್ಷ ನಿಷ್ಠೆ ತೋರಲಿದ್ದಾರಾ?

ಕಾಂಗ್ರೆಸ್​​ ಹಿರಿಯ ನಾಯಕ ಎಂ.ಬಿ ಪಾಟೀಲ್​​ ಅಥಣಿ ಕಾಂಗ್ರೆಸ್​​ ಉಸ್ತುವಾರಿ. ಕಳೆದ ಬಾರಿ ಮಹೇಶ ಕುಮಠಳ್ಳಿ(ಕಾಂಗ್ರೆಸ್) ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಬಾರಿಯೂ ಎಲ್ಲಾ ಸಮುದಾಯ ನಾಯಕರೊಂದಿಗೆ ಅಥಣಿಯಲ್ಲೇ ಠಿಕಾಣಿ ಹೂಡಿರುವ ಎಂ.ಬಿ ಪಾಟೀಲರು, ಶತಾಯಗತಾಯ ಕಾಂಗ್ರೆಸ್​ ಗೆಲ್ಲಿಸಬೇಕೆಂದು ಹೊರಟಿದ್ದಾರೆ.

ನಾಮಪತ್ರ ವಾಪಸ್ಸು ಪಡೆದ ಮಾಜಿ ಶಾಸಕ ಶಹಜಹಾನ್‌ ಡೊಂಗರಗಾಂವ, ಮುಖಂಡರಾದ ಎಸ್‌.ಕೆ. ಬುಟಾಳಿ ಹಾಗೂ ಸುರೇಶ ಪಾಟೀಲರು, ಕಾಂಗ್ರೆಸ್​​ ಪಕ್ಷದ ಅಧಿಕೃತ ಅಭ್ಯರ್ಥಿ ಪರ ಕೆಲಸ ಮಾಡುವುದಾಗಿ ಘೋಷಿಸಿದರು. ಈಗ ಜೆಡಿಎಸ್​​ಗೆ ಅಭ್ಯರ್ಥಿಯೇ ಇಲ್ಲದೇ ಹೋಗಿದ್ದು, ಕಾಂಗ್ರೆಸ್​​ ಮತ್ತು ಬಿಜೆಪಿ ನಡುವೇ ನೇರ ಹಣಾಹಣಿ ಏರ್ಪಟ್ಟಿದೆ.
First published:November 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading