ಬಸನಗೌಡ ಪಾಟೀಲ್ ಯತ್ನಾಳ್​ಗೆ ಸಚಿವ ಸ್ಥಾನ ಕೈತಪ್ಪಲು ಕಾರಣ?

ವಿಧಾನಸಭಾ ಚುನಾವಣೆಯ ವೇಳೆ ಯಡಿಯೂರಪ್ಪ ಮತ್ತು ಬಿಎಲ್ ಸಂತೋಷ್ ಅವರುಗಳು ವಿಜಯಪುರಕ್ಕೆ ಪ್ರಚಾರಕ್ಕೆ ಬಂದಿದ್ದರೂ ಬಸನಗೌಡ ಪಾಟೀಲ್ ಗೈರಾಗಿದ್ದುದು ಅವರಿಬ್ಬರಿಗೆ ಅಸಮಾಧಾನ ತಂದಿತ್ತೆನ್ನಲಾಗಿದೆ.

news18-kannada
Updated:August 20, 2019, 10:54 AM IST
ಬಸನಗೌಡ ಪಾಟೀಲ್ ಯತ್ನಾಳ್​ಗೆ ಸಚಿವ ಸ್ಥಾನ ಕೈತಪ್ಪಲು ಕಾರಣ?
ಬಸನಗೌಡ ಪಾಟೀಲ್​ ಯತ್ನಾಳ್​
  • Share this:
ವಿಜಯಪುರ(ಆ. 20): ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಎಸ್​ವೈ ಅವರ ಮೊದಲ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕಿಲ್ಲ. ಮಾಜಿ ಕೇಂದ್ರ ಸಚಿವರೂ ಆಗಿರುವ ಯತ್ನಾಳ್ ಅವರು ಬಿಜೆಪಿಯ ಅತ್ಯಂತ ಹಿರಿಯ ಮುಖಂಡರಲ್ಲೊಬ್ಬರು. ಇವರಿಗೆ ಮಂತ್ರಿಭಾಗ್ಯ ಸಿಗಬಹುದು ಎಂಬುದು ಬಹುತೇಕರ ನಿರೀಕ್ಷೆಯಾಗಿತ್ತು. ಬಿಎಸ್​ವೈ ಅವರ ಪಟ್ಟಿಯಲ್ಲೂ ಅವರ ಹೆಸರು ಇತ್ತು. ಆದರೆ, ಅಮಿತ್ ಶಾ ಕಳುಹಿಸಿದ ಅಂತಿಮ ಪಟ್ಟಿಯಲ್ಲಿ ಅವರು ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಕಟ್ಟರ್ ಹಿಂದುತ್ವದ ಪ್ರತಿಪಾದಕರಾಗಿರುವ ಯತ್ನಾಳ್ ಅವರಿಗೆ ಸಚಿವ ಸ್ಥಾನ ಕೈತಪ್ಪಲು ಕೆಲ ಪ್ರಮುಖ ಕಾರಣಗಳಿರುವುದು ನಿಜ.

ಇತ್ತೀಚಿನ ದಿನಗಳಲ್ಲಿ ಯತ್ನಾಳ್ ಅವರು ಬಿಎಸ್ ಯಡಿಯೂರಪ್ಪ ಅವರಿಂದ ತುಸು ಅಂತರ ಕಾಯ್ದುಕೊಂಡಿದ್ದರು. ವಿಜಯಪುರಕ್ಕೆ ಯಡಿಯೂರಪ್ಪ ಪ್ರಚಾರಕ್ಕೆ ಬಂದರೂ ಯತ್ನಾಳ್ ಪಾಲ್ಗೊಂಡಿರಲಿಲ್ಲ. ರಮೇಶ್ ಜಿಗಜಿಣಗಿ ಪರವಾಗಿಯೂ ಅವರು ಪ್ರಚಾರ ನಡೆಸಲಿಲ್ಲ. ಬಿಎಲ್ ಸಂತೋಷ್ ಅವರೂ ಪ್ರಚಾರಕ್ಕೆ ಬಂದಾಗಲೂ ಇವರು ಅನುಪಸ್ಥಿತರಿದ್ದರು. ಅಷ್ಟೇ ಅಲ್ಲ, ಪ್ರಚಾರ ಸಭೆಗೆ ತಮ್ಮ ಬೆಂಬಲಿಗರನ್ನು ಕಳುಹಿಸಿ ತಮ್ಮ ಪರ ಲಾಬಿ ನಡೆಸುವ ಪ್ರಯತ್ನ ಕೂಡ ಮಾಡಿದ್ದರು. ಇದು ಸಂತೋಷ್ ಅವರಿಗೆ ಇರಿಸುಮುರುಸು ತಂದಿತ್ತು. ಈ ಮೂಲಕ ಯತ್ನಾಳ್ ಅವರು ಯಡಿಯೂರಪ್ಪ ಮತ್ತು ಬಿಎಲ್ ಸಂತೋಷ್ ಇಬ್ಬರ ಮುನಿಸನ್ನೂ ಕಟ್ಟಿಕೊಂಡಿದ್ದರು.

ಇದನ್ನೂ ಓದಿ: BS Yeddyurappa's Cabinet: ಇಲ್ಲಿದೆ ನೂತನ ಸಚಿವರ ಪ್ರತಿಕ್ರಿಯೆ!

ನಾಗಠಾಣ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕ ಗೋವಿಂದ ಕಾರಜೋಳ ಅವರ ಪುತ್ರ ಡಾ. ಗೋಪಾಲ ಕಾರಜೋಳ ಅವರ ಸೋಲಿಗೆ ಯತ್ನಾಳ್ ಅವರು ಪರೋಕ್ಷ ಪಾತ್ರ ವಹಿಸಿದ್ದರು. ಇಲ್ಲಿ ಜೆಡಿಎಸ್ ಅಭ್ಯರ್ಥಿ ಡಾ. ದೇವಾನಂದ ಎಫ್. ಚವ್ಹಾಣ ಅವರನ್ನು ಯತ್ನಾಳ್ ಬೆಂಬಲಿಸಿರುವ ಆರೋಪ ಇದೆ.

ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಎಂ.ಬಿ. ಪಾಟೀಲ್ ಅವರ ಪರವಾಗಿ ಯತ್ನಾಳ್ ಹೇಳಿಕೆಗಳನ್ನು ನೀಡಿ ಪಕ್ಷಕ್ಕೆ ಮುಜುಗರ ತಂದಿದ್ದು ಅವರಿಗೆ ಮುಳುವಾದ ಮತ್ತೊಂದು ಪ್ರಮುಖ ಅಂಶವಾಗಿದೆ.

ಇದನ್ನೂ ಓದಿ: Karnataka New Ministers: ಸದನದಲ್ಲಿ ನೀಲಿಚಿತ್ರ ವೀಕ್ಷಿಸಿದವರಿಗೂ ಬಿಎಸ್​ವೈ ಸಂಪುಟದಲ್ಲಿ ಸಚಿವ ಸ್ಥಾನ

ಇನ್ನು, ಬಿಜೆಪಿ ಮುಖಂಡರಾದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಎ.ಎಸ್. ಪಾಟೀಲ ನಡಹಳ್ಳಿ, ಸೋಮನಗೌಡ ಬಿ. ಪಾಟೀಲ ಸಾಸನೂರ, ವಿಧಾನಪರಿಷತ್ ಸದಸ್ಯ ಅರುಣ ಶಹಾಪೂರ ಮೊದಲಾದವರು ಬಸನವಗೌಡ ಪಾಟೀಲ್ ಅವರನ್ನು ವಿರೋಧಿಸಿದ್ದರು.ಗಾಯಗಳ ಮೇಲೆ ಬರೆ ಎಳೆದಂತೆ ಯತ್ನಾಳ್ ಅವರಿಗೆ ಆರೆಸ್ಸೆಸ್​ನಿಂದಲೂ ಬೆಂಬಲ ಸಿಗಲಿಲ್ಲ. ಆಗಾಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದುದು ಯತ್ನಾಳ್​ಗೆ ಸಚಿವ ಭಾಗ್ಯ ಕೈತಪ್ಪಲು ಒಂದು ಕಾರಣವಾಗಿರುಬಹುದೆನ್ನಲಾಗಿದೆ.

(ವರದಿ: ಮಹೇಶ ವಿ. ಶಟಗಾರ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:August 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading