BS Yediyurappa: ಪುತ್ರನಿಗೆ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟಿದ್ಯಾಕೆ? ಇಲ್ಲಿವೆ ಯಡಿಯೂರಪ್ಪ ನಿರ್ಧಾರದ ಹಿಂದಿನ 8 ರಹಸ್ಯಗಳು

ಈಗ ಮಗನಿಗೆ ಶಿಕಾರಿಪುರ ಕ್ಷೇತ್ರವನ್ನು ಬಿ.ಎಸ್.ಯಡಿಯೂರಪ್ಪ ಬಿಟ್ಟುಕೊಡ್ತಿರೋದ್ಯಾಕೆ ಎಂಬ ಚರ್ಚೆಗಳು ರಾಜಕೀಯ ಅಂಗಳದಲ್ಲಿ ಆರಂಭಗೊಂಡಿವೆ. ಯಡಿಯೂರಪ್ಪ ಅವರ ನಿರ್ಧಾರದ ಹಿಂದಿನ ರಾಜಕೀಯ ಲೆಕ್ಕಾಚಾರಗಳು ಹೀಗಿವೆ.

ಬಿ ಎಸ್ ಯಡಿಯುರಪ್ಪ ಮತ್ತು ವಿಜಯೇಂದ್ರ

ಬಿ ಎಸ್ ಯಡಿಯುರಪ್ಪ ಮತ್ತು ವಿಜಯೇಂದ್ರ

  • Share this:
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ರಾಜಕೀಯ ಚಟುವಟಿಕೆಗಳಿಂದ ಯಡಿಯೂರಪ್ಪ (Former CM BS Yediyurappa) ಅವರು ಒಂದು ಹೆಜ್ಜೆಯನ್ನು ಇರಿಸಿದ್ದಾರೆ. ಇಂಗ್ಲೆಂಡ್ ಪ್ರವಾಸದ ಬಳಿಕ ಮತ್ತೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪಕ್ಷದ ಪ್ರಮುಖ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಯಡಿಯೂರಪ್ಪ ಅವರು, ನಿನ್ನೆ ಚುನಾವಣಾ ರಾಜಕೀಯದಿಂದ (Election Retirement) ನಿವೃತ್ತಿ ಘೋಷಿಸಿದರು. ಇನ್ನು ತಮ್ಮ ವಿಧಾನಸಭಾ ಕ್ಷೇತ್ರ ಶಿಕಾರಿಪುರವನ್ನು (Shikaripura Constituency) ಕಿರಿಯ ಪುತ್ರ, ಕರ್ನಾಟಕ ಬಿಜೆಪಿಯ ಉಪಾಧ್ಯಕ್ಷ ಆಗಿರುವ ಬಿ.ವೈ.ವಿಜಯೇಂದ್ರಗೆ (BY Vijayendra) ಬಿಟ್ಟು ಕೊಡುವ ಸುಳಿವು ನೀಡಿದ್ದಾರೆ. ಉಪ ಚುನಾವಣೆಯ ಎಕ್ಸಪರ್ಟ್ (By Election Experts) ಅಂತಾನೇ ಬಿಂಬಿತರಾಗಿರುವ ವಿಜಯೇಂದ್ರ, ವರುಣಾ ಕ್ಷೇತ್ರದಿಂದಲೇ (Varuna Constituency) ಚುನಾವಣೆ ರಾಜಕೀಯ ಪ್ರವೇಶ ಮಾಡ್ತಾರೆ ಅನ್ನೋ ಮಾತುಗಳು 2018ರಿಂದಲೇ ಕೇಳಿ ಬಂದಿದ್ವು. ಇದಕ್ಕೆ ಕಾರಣ ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ (MLA Yathindra Siddaramaiah). ಆದರೆ ಕೊನೆ ಕ್ಷಣದಲ್ಲಿ 2018ರ ಚುನಾವಣೆಯ ಟಿಕೆಟ್ ವಿಜಯೇಂದ್ರ ಅವರಿಗೆ ಮಿಸ್ ಆಗಿತ್ತು. ಯತೀಂದ್ರ ಸಿದ್ದರಾಮಯ್ಯ ಸದ್ಯ ವರುಣಾ ಕ್ಷೇತ್ರದ ಶಾಸಕರು.

ಈಗ ಮಗನಿಗೆ ಶಿಕಾರಿಪುರ ಕ್ಷೇತ್ರವನ್ನು ಬಿ.ಎಸ್.ಯಡಿಯೂರಪ್ಪ ಬಿಟ್ಟುಕೊಡ್ತಿರೋದ್ಯಾಕೆ ಎಂಬ ಚರ್ಚೆಗಳು ರಾಜಕೀಯ ಅಂಗಳದಲ್ಲಿ ಆರಂಭಗೊಂಡಿವೆ. ಯಡಿಯೂರಪ್ಪ ಅವರ ನಿರ್ಧಾರದ ಹಿಂದಿನ ರಾಜಕೀಯ ಲೆಕ್ಕಾಚಾರಗಳು ಹೀಗಿವೆ.

1.ಶಿಕಾರಿಪುರ ಬಿಜೆಪಿಯ ಭದ್ರಕೋಟೆ. 1983ರಿಂದ ಈ ಕ್ಷೇತ್ರದಿಂದ ಯಡಿಯೂರಪ್ಪ ಅವರು ಎಂಟು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಒಮ್ಮೆ ಹಿರಿಯ ಪುತ್ರ ಬಿವೈ ರಾಘವೇಂದ್ರ ಸಹ ಈ ಕ್ಷೇತ್ರದಿಂದ ಶಾಸಕರಾಗಿದ್ದಾರೆ. ಹಾಗಾಗಿ ವಿಜಯೇಂದ್ರ ಗೆಲುವು ಸುಲಭವಾಗಲಿದೆ.

2.2018ರ ಚುನಾವಣೆಯಲ್ಲಿ ವರುಣಾ ಕ್ಷೇತ್ರಕ್ಕೆ ಯತೀಂದ್ರ ಸಿದ್ದರಾಮಯ್ಯ ಮತ್ತು ವಿಜಯೇಂದ್ರ ಇಬ್ಬರು ಹೊಸಬರು ಮತ್ತು ಇಬ್ಬರಿಗೂ ಮೊದಲ ಚುನಾವಣೆ ಆಗಿತ್ತು. ಆದ್ರೆ ಈ ಪರಿಸ್ಥಿತಿ ಬದಲಾಗಿದ್ದು, ಯತೀಂದ್ರ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಬಲಿಷ್ಠರಾಗಿದ್ದಾರೆ. ವರುಣಾದಿಂದ ಸ್ಪರ್ಧೆ ಮಾಡಿದ್ರೆ ಗೆಲುವು ಕಷ್ಟವಾಗುವ ಸಾಧ್ಯೆತೆಗಳಿವೆ.

ಇದನ್ನೂ ಓದಿ:  BS Yediyurappa ಚುನಾವಣಾ ನಿವೃತ್ತಿ ಬಗ್ಗೆ ಪುತ್ರನ ಎಕ್ಸ್‌ಕ್ಲೂಸಿವ್ ಮಾತು; ನನ್ನ ತಂದೆ ಮತ್ತು ಪಕ್ಷ ಎರಡು ಕಣ್ಣಿದ್ದಂತೆ ಎಂದ ವಿಜಯೇಂದ್ರ

3.ವರುಣಾದಲ್ಲಿ ಹೆಚ್ಚು ಲಿಂಗಾಯತ ಮತಗಳಿರೋದು ಬಿಜೆಪಿಗೆ ಪ್ಲಸ್ ಪಾಯಿಂಟ್. ವಿಜಯೇಂದ್ರ ಸ್ಪರ್ಧೆ ಮಾಡಿದ್ರೆ ಮಗ ಯತೀಂದ್ರ ಗೆಲುವಿಗೆ ಕಷ್ಟವಾಗಲಿದೆ ಅನ್ನೋದು ಸಿದ್ದರಾಮಯ್ಯರನ್ನ ಚಿಂತೆಗೆ ದೂಡಿತ್ತು.

ಜೂನ್ ನಲ್ಲಿ ಆಕಸ್ಮಿಕವಾಗಿ ವಿಮಾನ ನಿಲ್ದಾಣದಲ್ಲಿ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಭೇಟಿಯಾಗಿದ್ದರು. ಈ ವೇಳೆ ವಿಜಯೇಂದ್ರ ವರುಣಾದಿಂದ ಸ್ಪರ್ಧೆ ಮಾಡೋದು ಬೇಡ ಅಂತ ಸಿದ್ದರಾಮಯ್ಯನವರು ಮನವಿ ಮಾಡಿಕೊಂಡಿದ್ದರಂತೆ.

4.ಒಂದು ವೇಳೆ ಯಡಿಯೂರಪ್ಪ ಚುನಾವಣೆಗೆ ಸ್ಪರ್ಧೆ ಮಾಡಿದ್ರೆ, ವಿಜಯೇಂದ್ರಗೆ ಟಿಕೆಟ್ ತಪ್ಪುವ ಸಾಧ್ಯತೆ ಇತ್ತು. ಕಾರಣ ಒಂದೇ ಕುಟುಂಬದ ಎರಡು ಟಿಕೆಟ್ ನೀಡಲಾಗಿದೆ ಎಂಬ ಚರ್ಚೆಗಳು ಆರಂಭವಾಗುತ್ತಿತ್ತು.

ಈಗಾಗಲೇ ಹಿರಿಯ ಪುತ್ರ ರಾಘವೇಂದ್ರ ಸಂಸದರಾಗಿದ್ದಾರೆ. ಒಂದೇ ಕುಟುಂಬದ ಮೂವರಿಗೆ ಟಿಕೆಟ್ ಅಂತ ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆ ಇತ್ತು.

5.ಶಿಕಾರಿಪುರದಿಂದಲೇ ವಿಜಯೇಂದ್ರ ಸ್ಪರ್ಧೆ ಮಾಡಿದ್ರೆ ಯಡಿಯೂರಪ್ಪ ಅವರ ಉತ್ತರಾಧಿಕಾರಿ ಎಂದು ಬಿಂಬಿತವಾಗುತ್ತದೆ. ವೀರಶೈವ ಲಿಂಗಾಯತ ಸಮುದಾಯದಲ್ಲೂ ಈ ಸಂದೇಶನ್ನು ರವಾನಿಸಬಹುದು.

6.ತಾವು ಸ್ಪರ್ಧೆ ಮಾಡುತ್ತಿಲ್ಲ. ಆದರೂ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದೇನೆ. ಹಾಗಾಗಿ ಶಿಕಾರಿಪುರದಿಂದ ಮಗನಿಗೆ ಟಿಕೆಟ್ ನೀಡಿ ಎಂದು ಯಡಿಯೂರಪ್ಪ ಕೇಳಬಹುದು. ಈ ಕಾರಣದಿಂದ ವಿಜಯೇಂದ್ರ ಅವರಿಗೆ ಸುಲಭವಾಗಿ ಟಿಕೆಟ್ ಸಿಗಬಹುದು.

7.ಇನ್ನೂ ಗುಬ್ಬಿ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧೆ ಮಾಡ್ತಾರೆ ಅನ್ನೋ ಮಾತುಗಳು ಸಹ ಕೇಳಿ ಬಂದಿದ್ದವು. ಆದ್ರೆ ಇದು ಸ್ಥಳೀಯ ನಾಯಕರ ಭಿನ್ನಮತಕ್ಕೆ ಕಾರಣವಾಗಬಹುದು ಎಂಬ ವರದಿ ಸಿಕ್ಕ ಬೆನ್ನಲ್ಲೇ ಬಿಎಸ್ವೈ ಈ ನಿರ್ಧಾರ ತೆಗೆದುಕೊಂಡಿರುವ ಸಾಧ್ಯತೆಗಳಿವೆ.

ಇದನ್ನೂ ಓದಿ:  BS Yediyurappa: ಪುತ್ರನಿಗೆ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟ ಯಡಿಯೂರಪ್ಪ; ರಾಜಾಹುಲಿ ಚುನಾವಣಾ ರಾಜಕೀಯಕ್ಕೆ ನಿವೃತ್ತಿ

8.ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ವಿಜಯೇಂದ್ರ  ಅವರಿಗೆ ಟಿಕೆಟ್ ಕೊಡಿಸುವ ಕುರಿತು ಪ್ರಯತ್ನಗಳು ನಡೆದಿದ್ದವು. ಆದರೆ ಹೈಕಮಾಂಡ್ ವಿಜಯೇಂದ್ರಗೆ ಟಿಕೆಟ್ ನೀಡಲು ನಿರಾಕರಿಸಿತ್ತು.
Published by:Mahmadrafik K
First published: