ಬೆಳಗಾವಿಯಲ್ಲಿ ನಡೆಯಬೇಕಿದ್ದ ಚಳಿಗಾಲದ ಅಧಿವೇಶನ ಬೆಂಗಳೂರಿಗೆ ವರ್ಗವಾಗಿದ್ದು ಯಾಕೆ?

ಕಳೆದ ವರ್ಷದ ಬೆಳಗಾವಿ ಅಧಿವೇಶನಕ್ಕೆ ಆಗಿರೋ ಖರ್ಚು ವೆಚ್ಚ ಗಮನಿಸಿದ್ರೆ ಸರ್ಕಾರ ಹಣ ಉಳಿಸಲು ಅಧಿವೇಶನ ಬೆಂಗಳೂರಿನಲ್ಲಿ ನಡೆಸಿದೆ ಎಂಬ ಅನುಮಾನ ವ್ಯಕ್ತವಾಗುತ್ತದೆ. ಹಾಗಾದ್ರೆ ಕಳೆದ ವರ್ಷದ ಅಧಿವೇಶನಕ್ಕೆ ಆಗಿರೋ ಖರ್ಚು ವೆಚ್ವವನ್ನು ನೀವು ನೋಡಿದ್ರೆ ಗಾಬರಿಯಾಗೋದು ಗ್ಯಾರಂಟಿ..

news18-kannada
Updated:October 10, 2019, 11:00 PM IST
ಬೆಳಗಾವಿಯಲ್ಲಿ ನಡೆಯಬೇಕಿದ್ದ ಚಳಿಗಾಲದ ಅಧಿವೇಶನ ಬೆಂಗಳೂರಿಗೆ ವರ್ಗವಾಗಿದ್ದು ಯಾಕೆ?
ಸುವರ್ಣ ಸೌಧ
news18-kannada
Updated: October 10, 2019, 11:00 PM IST
ಬೆಳಗಾವಿ(ಅ. 10): ಗಡಿ ಜಿಲ್ಲೆ ಬೆಳಗಾವಿಯ ಜನ ಈ ಬಾರಿ ತೀವ್ರ ಪ್ರವಾಹದಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಈ ವರ್ಷದ ಅಧಿವೇಶನ ಸುವರ್ಣ ವಿಧಾನಸೌಧದಲ್ಲಿ ನಡೆದು ಜನರ ಕಷ್ಟಗಳ ಬಗ್ಗೆ ಚರ್ಚೆ ಆಗಲಿ ಎಂದು ಈ ಭಾಗದ ಜನರ ಬೇಡಿಕೆಯಾಗಿತ್ತು. ಆದರೆ ಸರ್ಕಾರ ಈ ವರ್ಷದ ಅಧಿವೇಶನವನ್ನು ಬೆಳಗಾವಿಯಿಂದ ಬೆಂಗಳೂರಿಗೆ ವರ್ಗಾಯಿಸಿದೆ. ಸರ್ಕಾರದ ಈ ನಿರ್ಧಾರದ ಹಿಂದೆ ಹಣ ಉಳಿಸುವ ಉದ್ದೇಶವಿದೆಯಾ ಎಂಬ ಅನುಮಾನ ವ್ಯಕ್ತವಾಗಿದೆ.

ಇದಕ್ಕೆ ಕಾರಣ 2018ರಲ್ಲಿ ನಡೆದ 10 ದಿನಗಳ ಅಧಿವೇಶನದ ಖರ್ಚು ವೆಚ್ಚದ ಲೆಕ್ಕ. ಆ ಅಧಿವೇಶನಕ್ಕೆ ಖರ್ಚಾಗಿದ್ದು ಒಟ್ಟು 13.85 ಕೋಟಿ ರೂಪಾಯಿ.

ಇದನ್ನೂ ಓದಿ: ಗೃಹ ಸಚಿವರ ವೈಮಾನಿಕ ಸಮೀಕ್ಷೆ ಜಾಲಿ ಟ್ರಿಪ್​​ ಎಂದ ಐವನ್​​ ಡಿಸೋಜಾ; ಕಾಂಗ್ರೆಸ್​​ ಸದಸ್ಯನ ಮಾತಿಗೆ ಬಿಜೆಪಿ ಕೆಂಡಾಮಂಡಲ

ಯಾವುದಕ್ಕೆ ಎಷ್ಟು ಖರ್ಚಾಗಿದ್ದು:
ಗಣ್ಯರ ವಸತಿಯಾಗಿ ಮಾಡಿರುವ ವೆಚ್ಚ- 4.42 ಕೋಟಿ ರೂಪಾಯಿ
ಊಟ- ಉಪಹಾರದ ವೆಚ್ಚ- 3 ಕೋಟಿ ರೂಪಾಯಿ
ವಾಹನ ಬಾಡಿಗೆ, ಇಂಧನಕ್ಕಾಗಿ ವೆಚ್ಚು- 3.26 ಲಕ್ಷ ರೂಪಾಯಿ
Loading...

ಪೊಲೀಸ್ ಇಲಾಖೆಯಿಂದ ಭದ್ರತೆಗಾಗಿ ವೆಚ್ಚ- 2.99 ಕೋಟಿ ರೂಪಾಯಿ
ಲೋಕೋಪಯೋಗಿ ಇಲಾಖೆಯಿಂದ ವೆಚ್ಚ 5.77 ಕೋಟಿ ರೂಪಾಯಿ

ಇದನ್ನೂ ಓದಿ: ಎರಡು ದಿನಗಳ ಪ್ರವಾಸಕ್ಕಾಗಿ ಪತ್ನಿಸಮೇತ ಮೈಸೂರಿಗೆ ಆಗಮಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್

ಇದರಲ್ಲಿ ಸುವರ್ಣ ಸೌಧದ ಸ್ವಚ್ಛತೆಗೆ 30 ಲಕ್ಷ, ಸುವರ್ಣ ಸೌಧದಲ್ಲಿ ಅಲಂಕಾರಿಕ ಗಿಡ ನೆಡಲು 10 ಲಕ್ಷ ವೆಚ್ಚವನ್ನು ಮಾಡಲಾಗಿದೆ. ಇನ್ನೂ ಸದಾ ಖಾಲಿ ಇರೋ ಸುವರ್ಣ ಸೌಧದ ವಿದ್ಯುತ್ ಬಿಲ್ ಗಾಗಿ 20 ಲಕ್ಷ ಹಣವನ್ನು ಪಾವತಿ ಮಾಡಲಾಗಿದೆ. ಇಷ್ಟೊಂದು ಜನರ ತೆರಿಗೆ ಹಣವನ್ನು ಖರ್ಚು ಮಾಡಿದ್ದು ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ಹೇಳೋದು ಹೀಗೆ.

ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಲಾಗಿದೆ. ಆದರೆ, ಈ ಸಂದರ್ಭದಲ್ಲಿ ವಿಧಾನಸಭೆಯಲ್ಲಿ 40 ಗಂಟೆ 25 ನಿಮಿಷ ಹಾಗೂ ವಿಧಾನ ಪರಿಷತ್​ನಲ್ಲಿ 47 ಗಂಟೆ 03 ನಿಮಿಷ ಚರ್ಚೆ ನಡೆದಿದೆ. ಸರಾಸರಿ ಗಂಟೆಗೆ ಅಧಿವೇಶನಕ್ಕೆ 3.37 ಲಕ್ಷ ರೂಪಾಯಿ ವೆಚ್ಚವಾಗಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತು ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಅವಶ್ಯಕತೆ ಇದೆ.

(ವರದಿ: ಚಂದ್ರಕಾಂತ ಸುಗಂಧಿ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:October 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...