ಡಿಕೆಶಿ ಪ್ರಕರಣ: ಇಡಿ ಮಾಡಿದ ಯಡವಟ್ಟೇನು? ಸುಪ್ರೀಂ ಕೈಲಿ ಛೀಮಾರಿ ಹಾಕಿಸಿಕೊಂಡಿದ್ದೇಕೆ?

ಚಿದಂಬರಮ್ ಪ್ರಕರಣಕ್ಕೂ ಡಿಕೆಶಿ ಪ್ರಕರಣಕ್ಕೂ ವ್ಯತ್ಯಾಸವಿದೆ. ಸುಮ್ಮನೆ ಕಾಪಿ ಪೇಸ್ಟ್ ಮಾಡಬೇಡಿ ಎಂದು ನ್ಯಾ| ನಾರಿಮನ್ ನೇತೃತ್ವದ ಸುಪ್ರೀಂ ನ್ಯಾಯಪೀಠವು ಜಾರಿ ನಿರ್ದೇಶನಾಲಯದ ಬೇಜವಾಬ್ದಾರಿತನಕ್ಕೆ ಗದರಿತು.

news18
Updated:November 15, 2019, 2:53 PM IST
ಡಿಕೆಶಿ ಪ್ರಕರಣ: ಇಡಿ ಮಾಡಿದ ಯಡವಟ್ಟೇನು? ಸುಪ್ರೀಂ ಕೈಲಿ ಛೀಮಾರಿ ಹಾಕಿಸಿಕೊಂಡಿದ್ದೇಕೆ?
ಚಿದಂಬರಮ್ ಪ್ರಕರಣಕ್ಕೂ ಡಿಕೆಶಿ ಪ್ರಕರಣಕ್ಕೂ ವ್ಯತ್ಯಾಸವಿದೆ. ಸುಮ್ಮನೆ ಕಾಪಿ ಪೇಸ್ಟ್ ಮಾಡಬೇಡಿ ಎಂದು ನ್ಯಾ| ನಾರಿಮನ್ ನೇತೃತ್ವದ ಸುಪ್ರೀಂ ನ್ಯಾಯಪೀಠವು ಜಾರಿ ನಿರ್ದೇಶನಾಲಯದ ಬೇಜವಾಬ್ದಾರಿತನಕ್ಕೆ ಗದರಿತು.
  • News18
  • Last Updated: November 15, 2019, 2:53 PM IST
  • Share this:
ನವದೆಹಲಿ(ನ. 15): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿಕೆ ಶಿವಕುಮಾರ್​ಗೆ ಜಾಮೀನು ನೀಡಿ ದೆಹಲಿ ಹೈಕೋರ್ಟ್ ಕೊಟ್ಟಿದ್ದ ತೀರ್ಪನ್ನು ಸುಪ್ರೀ ನ್ಯಾಯಪೀಠ ಎತ್ತಿಹಿಡಿದಿದೆ. ಹೈಕೋರ್ಟ್ ಆದೇಶ ರದ್ದುಕೋರಿ ಇಡಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಇವತ್ತಿನ ವಿಚಾರಣೆಯಲ್ಲಿ ಇಡಿಗೆ ಸುಪ್ರೀಂ ಕೋರ್ಟ್ ಬೆವರಿಳಿಸಿದೆ. ತನ್ನ ಅರ್ಜಿ ತಿರಸ್ಕಾರ ಆಗುವುದರ ಜೊತೆಗೆ ಅರ್ಜಿಯಲ್ಲಿ ತಾನು ಮಾಡಿದ ಯಡವಟ್ಟಿನಿಂದಾಗಿ ಇಡಿ ಪೇಚಿಗೆ ಸಿಲುಕಿತು.

ಮತ್ತೊಂದು ಪ್ರಕರಣದಲ್ಲಿ ಇಡಿ ಬಂಧನದಲ್ಲಿರುವ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಮ್ ಅವರ ಚಾರ್ಜ್ ಶೀಟ್​ನಲ್ಲಿರುವ ಅಂಶಗಳನ್ನೇ ಯಥಾವತ್ತಾಗಿ ಡಿಕೆಶಿ ಪ್ರಕರಣದ ಅರ್ಜಿಯಲ್ಲಿ ಇಡಿ ಸೇರಿಸಿತ್ತು. ಅದಕ್ಕೆ ಇವತ್ತು ತೀರ್ಪು ನೀಡುವಾಗ ಜಾರಿ ನಿರ್ದೇಶನಾಲಯಕ್ಕೆ ಕೋರ್ಟ್ ಛಳಿ ಬಿಡಿಸಿತ್ತು. ಚಿದಂಬರಮ್ ಪ್ರಕರಣಕ್ಕೂ ಡಿಕೆಶಿ ಪ್ರಕರಣಕ್ಕೂ ವ್ಯತ್ಯಾಸವಿದೆ. ಸುಮ್ಮನೆ ಕಾಪಿ ಪೇಸ್ಟ್ ಮಾಡಬೇಡಿ ಎಂದು ಇಡಿಯನ್ನು ಕೋರ್ಟ್ ಕುಟುಕಿತ್ತು.

ಇದನ್ನೂ ಓದಿ: ಡಿಕೆಶಿ ಮತ್ತಿತರರು ನಿರಾಳ; ಸುಪ್ರೀಂ ಕೋರ್ಟ್​​ನಲ್ಲಿ ಇಡಿ ಅರ್ಜಿ ವಜಾ; ಕೇಂದ್ರಕ್ಕೂ ತರಾಟೆ

ಚಾರ್ಜ್ ಶೀಟ್ ನಕಲು ಮಾಡಿದ್ದಷ್ಟೇ ಅಲ್ಲ, ಡಿಕೆಶಿಯನ್ನು ಮಾಜಿ ಹಣಕಾಸು ಸಚಿವ ಎಂದೂ ಇಡಿ ಉಲ್ಲೇಖಿಸಿತ್ತು. ಅಂದರೆ, ಚಿದಂಬರಮ್ ಅವರ ಹುದ್ದೆಯ ಹೆಸರನ್ನೂ ಯಥಾವತ್ತಾಗಿ ಡಿಕೆಶಿಗೆ ಭಟ್ಟಿ ಇಳಿಸಲಾಗಿತ್ತು. ಜಾರಿ ನಿರ್ದೇಶನಾಲಯದ ಈ ಅಪ್ಪಟ ಬೇಜವಾಬ್ದಾರಿತನವು ನ್ಯಾ| ನಾರಿಮನ್ ನೇತೃತ್ವದ ಸುಪ್ರೀಂ ನ್ಯಾಯಪೀಠಕ್ಕೆ ಕೋಪ ತರಿಸಿತ್ತು.

ಇವತ್ತು ಸುಪ್ರೀಂ ಕೋರ್ಟ್​ನಲ್ಲಿ ಜಾರಿ ನಿರ್ದೇಶನಾಲಯವಷ್ಟೇ ಅಲ್ಲ, ಸಿಬಿಐ ಮತ್ತು ಕೇಂದ್ರ ಸರ್ಕಾರ ಕೂಡ ಛೀಮಾರಿ ಹಾಕಿಸಿಕೊಂಡವು. ತೀರ್ಪು ನೀಡಿದ ನಂತರವೂ ವಾದ ಮಂಡಿಸಲು ಹೋದ ಸಿಬಿಐ ಪರ ವಕೀಲರಿಗೆ ನ್ಯಾಯಮೂರ್ತಿಗಳು ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ: ಆರ್. ಶಂಕರ್​ಗೂ ಇಲ್ಲ, ಈಶ್ವರಪ್ಪ ಮಗನಿಗೂ ಇಲ್ಲ: ರಾಣೆಬೆನ್ನೂರು ಬಿಜೆಪಿ ಟಿಕೆಟ್ ಅರುಣ್ ಕುಮಾರ್ ಪಾಲು

ಜಾಮೀನು ರದ್ದು ಕೋರಿ ಇಡಿ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿರುವುದರಿಂದ ಡಿಕೆಶಿ ಬಂಧನ ಭೀತಿಯಿಂದ ಪಾರಾಗಿದ್ಧಾರೆ. ಬೆಂಗಳೂರಿನಲ್ಲಿರುವ ಡಿಕೆ ಶಿವಕುಮಾರ್ ಅವರು ಇವತ್ತಿನ ವಿಚಾರಣೆಯಲ್ಲಿ ಇಡಿ ಮಾಡಿದ್ದ ಯಡವಟ್ಟುಗಳ ಬಗ್ಗೆ ಹೆಚ್ಚೇನು ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಲಿಲ್ಲ. ಜಾರಿ ನಿರ್ದೇಶನಾಲಯದವರು ಅವರದ್ದೇ ಪ್ರಯತ್ನಗಳನ್ನ ಮಾಡುತ್ತಿದ್ದಾರೆ. ಅದನ್ನು ತಪ್ಪು ಎಂದು ಹೇಳಲ್ಲ. ಆದರೆ, ಅವರು ಅನೇಕ ಸುಳ್ಳುಗಳನ್ನು ಹೇಳುತ್ತಾ ಬಂದಿದ್ದಾರೆ. ನಮ್ಮ ಕುಟುಂಬದ ಐದಾರು ಖಾತೆಗಳು ಇವೆ ಅಷ್ಟೇ. ನ್ಯಾಯಾಲಯ ನಮ್ಮ ಮನವಿಗೆ ಮನ್ನಣೆ ನೀಡಿದೆ. ನ್ಯಾಯಬದ್ಧವಾಗಿ ವ್ಯವಹಾರ ಮಾಡಿದ್ದೇವೆ. ಹಾಗಾಗಿ ಪ್ರತೀ ಹಂತದಲ್ಲೂ ಆತ್ಮಸ್ಥೈರ್ಯ ಮಾಡಿ ಹೋರಾಡಿದ್ದೇವೆ. ಇಡೀ ರಾಜ್ಯದ ಜನತೆ ನನ್ನ ಪರವಾಗಿ ನಿಂತಿರುವುದು ಧೈರ್ಯ ಹೆಚ್ಚಿಸಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ಧಾರೆ.ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 15, 2019, 2:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading