ಐಎಎಸ್ ಅಧಿಕಾರಿ ವಿಜಯ್ ಶಂಕರ್ ಆತ್ಮಹತ್ಯೆಗೆ ಕಾರಣವಾಯ್ತಾ ಈ ಒಂದು ಕಾರಣ?

ಆತ್ಮಹತ್ಯೆಗೂ ಮುನ್ನ ಒಂದು ವಾರದಿಂದ ಅಧಿಕಾರಿ ವಿಜಯ್ ಶಂಕರ್‌ ತೀವ್ರ ಖಿನ್ನತೆಗೊಳಗಾಗಿದ್ದರು. ಕಳೆದ ಒಂದು ತಿಂಗಳಿಂದ ವಿಜಯ್ ಶಂಕರ್ ಗೆ ಒಂಟಿತನ  ಕಾಡಿತ್ತು. ಇಷ್ಟೆಲ್ಲಾ ಇದ್ರೂ ಪತ್ನಿ ಬಳಿ ಏನನ್ನೂ ಹೇಳಿರಲಿಲ್ಲ ಎನ್ನಲಾಗುತ್ತಿದೆ.

news18-kannada
Updated:June 30, 2020, 5:54 PM IST
ಐಎಎಸ್ ಅಧಿಕಾರಿ ವಿಜಯ್ ಶಂಕರ್ ಆತ್ಮಹತ್ಯೆಗೆ ಕಾರಣವಾಯ್ತಾ ಈ ಒಂದು ಕಾರಣ?
ಆತ್ಮಹತ್ಯೆಗೂ ಮುನ್ನ ಒಂದು ವಾರದಿಂದ ಅಧಿಕಾರಿ ವಿಜಯ್ ಶಂಕರ್‌ ತೀವ್ರ ಖಿನ್ನತೆಗೊಳಗಾಗಿದ್ದರು. ಕಳೆದ ಒಂದು ತಿಂಗಳಿಂದ ವಿಜಯ್ ಶಂಕರ್ ಗೆ ಒಂಟಿತನ  ಕಾಡಿತ್ತು. ಇಷ್ಟೆಲ್ಲಾ ಇದ್ರೂ ಪತ್ನಿ ಬಳಿ ಏನನ್ನೂ ಹೇಳಿರಲಿಲ್ಲ ಎನ್ನಲಾಗುತ್ತಿದೆ.
  • Share this:
ಬೆಂಗಳೂರು (ಜೂನ್‌.30); ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಲಂಚ ಪಡೆದ ಆರೋಪ ಎದುರಿಸುತ್ತಿದ್ದ ಐಎಎಸ್ ಅಧಿಕಾರಿ ವಿಜಯ್‌ ಶಂಕರ್‌ ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗಿದ್ದರು. ಇವರ ಆತ್ಮಹತ್ಯೆಗೆ ನಿಖರ ಕಾರಣ ಏನು? ಎಂಬುದು ತಿಳಿದಿರಲಿಲ್ಲ. ಆದರೆ, ಇದೀಗ ಖಿನ್ನತೆಯ ಕಾರಣಕ್ಕಾಗಿಯೇ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.  

ಐಎಎಸ್ ಅಧಿಕಾರಿ‌ ವಿಜಯ್ ಶಂಕರ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನ ಪೊಲೀಸರು ಚುರುಕುಗೊಳಿಸಿದ್ದಾರೆ‌‌. ಮೈಕೋ ಲೇಔಟ್ ಎಸಿಪಿ ಸುಧೀಂದ್ರ ಹೆಗಡೆರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಸದ್ಯ ಪತ್ನಿ ಮತ್ತು ಇಬ್ಬರು ಮಕ್ಕಳನ್ನ ವಿಚಾರಣೆ ಮಾಡಲಾಗಿದೆ. ವಿಚಾರಣೆ ವೇಳೆ ಆತಂಕಕಾರಿ  ಮಾಹಿತಿಯನ್ನ ಪತ್ನಿ ತಿಳಿಸಿದ್ದಾರೆ ಎನ್ನಲಾಗಿದೆ.

ಆತ್ಮಹತ್ಯೆಗೂ ಮುನ್ನ ಒಂದು ವಾರದಿಂದ ಅಧಿಕಾರಿ ವಿಜಯ್ ಶಂಕರ್‌ ತೀವ್ರ ಖಿನ್ನತೆಗೊಳಗಾಗಿದ್ದರು. ಕಳೆದ ಒಂದು ತಿಂಗಳಿಂದ ವಿಜಯ್ ಶಂಕರ್ ಗೆ ಒಂಟಿತನ  ಕಾಡಿತ್ತು. ಇಷ್ಟೆಲ್ಲಾ ಇದ್ರೂ ಪತ್ನಿ ಬಳಿ ಏನನ್ನೂ ಹೇಳಿರಲಿಲ್ಲ. ಪತ್ನಿಯೇ ಬಾಯ್ಬಿಟ್ಟು ಕೇಳಿದ್ರೂ ,ಏನಿಲ್ಲ ಕೆಲಸವೆಂದು ಹೇಳಿ ಸುಮ್ಮನಾಗಿರ್ತಿದ್ರಂತೆ. ಐಎಂಎ ಹಗರಣ ವಿಜಯ್ ಶಂಕರ್ ಹೆಗಲೇರ್ತಿದ್ದಂತೆ ಐಎಎಸ್ ಅಧಿಕಾರಿಯಿಂದ‌ ಸ್ನೇಹಿತರೆಲ್ಲಾ ದೂರವಾಗಿದ್ದರು. ಅದರಲ್ಲೂ ಸಿಬಿಐ ವಿಚಾರಣೆ ಆರಂಭವಾದ ಬಳಿಕ ಸಂಪೂರ್ಣವಾಗಿ ವಿಜಯ್ ಶಂಕರ್ ರನ್ನ ಮರೆತಿದ್ದರಂತೆ.

ನಮಗ್ಯಾಕೆ ಬೇಕು ಎಂದು ಬ್ಯಾಚ್ ಮೇಟ್ಸ್ ಹಾಗೂ ಆತ್ಮೀಯ ಕೆಲ ಸಿಬ್ಬಂದಿ ವರ್ಗ ಅಂತರ ಕಾಯ್ದುಕೊಂಡಿದ್ದರು. ಸಿಬಿಐ ವಿಚಾರಣೆ ಆರಂಭವಾದ ಬಳಿಕ ಯಾರೂ ವಿಜಯ್ ಶಂಕರ್ ಸಹಾಯಕ್ಕೆ ಬಂದಿರಲಿಲ್ಲ. ಕೆಲ ಅತ್ಮೀಯ ರಾಜಕಾರಣಿಗಳ ಬಳಿ ಸಹಾಯ ಕೇಳಿದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸತ್ತಿದ್ದ ಅಧಿಕಾರಿ ವಿಜಯ್ ಶಂಕರ್ ಕಳೆದೊಂದು ವಾರದಿಂದ ತೀವ್ರವಾಗಿ ಖಿನ್ನತೆಗೊಳಗಾಗಿದ್ದಾರೆ. ಹೀಗಾಗಿ ಆತ್ಮಹತ್ಯೆಗೆ ಇದೇ ಕಾರಣ ಇರಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ : ಐಎಂಎ ಕೇಸ್​ನಲ್ಲಿ ನನ್ನ ಮೇಲೆ ಸುಳ್ಳು ಆರೋಪ ಎಂದು ವಿಜಯ್ ಶಂಕರ್ ಹೇಳಿದ್ದರು: ಮಾಜಿ ಕಾರ್ಪೊರೇಟರ್ ರಾಮಮೂರ್ತಿ ಹೇಳಿಕೆ

ಇನ್ನು ವಿಜಯ್ ಶಂಕರ್ ಕಳೆದುಕೊಂಡಿರೋ  ಕುಟುಂಬಸ್ಥರು ಆತಂಕದಲ್ಲಿದ್ದು, ಐಎಂಎ ಕೇಸ್ ಪ್ರಾರಂಭದಿಂದ ಇದುವರೆಗೂ ಯಾವುದೇ ಮಾಹಿತಿ ತಮ್ಮ ಬಳಿ ಹೇಳಿಲ್ಲವೆಂದು ಪತ್ನಿ ಹೇಳಿಕೆ ನೀಡಿದ್ದಾರೆ. ಸದ್ಯ ವಿಜಯ್ ಶಂಕರ್ ಮಲಗುತ್ತಿದ್ದ ಕೊಠಡಿ ಪೂರ್ತಿ ಪರಿಶೀಲನೆ ನಡೆಸಿದ್ದು, ಮಲಗುವ ಕೋಣೆಯಲ್ಲಿ ಡೈರಿ ಅಥವಾ ಯಾವುದೇ ದಾಖಲೆಗಳು ಪೊಲೀಸರಿಗೆ ಸಿಕ್ಕಿಲ್ಲ. ಸದ್ಯ ಕೆಲ ಆತ್ಮೀಯ ಸ್ನೇಹಿತರನ್ನ ವಿಚಾರಣೆ ನಡೆಸಲು ತನಿಖಾ ತಂಡ ಸಿದ್ದತೆ ನಡೆಸಿದೆ ಎನ್ನಲಾಗುತ್ತಿದೆ.
First published:June 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading