• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • V Somanna: ಬಿಜೆಪಿ ಮೇಲೆ ಮುನಿಸಿಕೊಂಡ್ರಾ ಸಚಿವರು? ಕಾಂಗ್ರೆಸ್ ಬಿಗ್ ಆಫರ್ ಒಪ್ಪಿಕೊಳ್ತಾರಾ?

V Somanna: ಬಿಜೆಪಿ ಮೇಲೆ ಮುನಿಸಿಕೊಂಡ್ರಾ ಸಚಿವರು? ಕಾಂಗ್ರೆಸ್ ಬಿಗ್ ಆಫರ್ ಒಪ್ಪಿಕೊಳ್ತಾರಾ?

ವಿ.ಸೋಮಣ್ಣ ಮುನಿಸು?

ವಿ.ಸೋಮಣ್ಣ ಮುನಿಸು?

ಬಿಜೆಪಿ ಮೇಲೆ ಮುನಿಸಿಕೊಂಡಿರುವ ವಿ.ಸೋಮಣ್ಣ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಸೋಮಣ್ಣ ಅವರಿಗೆ ಕಾಂಗ್ರೆಸ್ (Congress) ಬಿಗ್ ಆಫರ್ ಸಹ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

  • News18 Kannada
  • 3-MIN READ
  • Last Updated :
  • Karnataka, India
  • Share this:

ಚಾಮರಾಜನಗರ: ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಬಿಜೆಪಿ ‘ವಿಜಯ ಸಂಕಲ್ಪ ರಥಯಾತ್ರೆ’ಗೆ (Vijaya Sankalpa Yatre) ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (BJP President JP Nadda) ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai), ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (Former CM BS Yediyurappa) ಸಹ ಭಾಗಿಯಾಗಿದ್ದರು. ಆದರೆ ಚಾಮರಾಜನಗರ ಉಸ್ತುವಾರಿ ಸಚಿವ ವಿ.ಸೋಮಣ್ಣ (Minister V Somanna) ಗೈರು ಆಗಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಬಿಜೆಪಿ ಮೇಲೆ ಮುನಿಸಿಕೊಂಡಿರುವ ವಿ.ಸೋಮಣ್ಣ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಸೋಮಣ್ಣ ಅವರಿಗೆ ಕಾಂಗ್ರೆಸ್ (Congress) ಬಿಗ್ ಆಫರ್ ಸಹ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.


ಸೋಮಣ್ಣ ಗೈರು ಬಗ್ಗೆ ಮಾತನಾಡಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಅನಾರೋಗ್ಯ ಹಿನ್ನೆಲೆ ಕಾರ್ಯಕ್ರಮಕ್ಕೆ ಬಂದಿಲ್ಲ. ಇದರ ಹೊರತಾಗಿ ಬೇರೆ ಯಾವ ಕಾರಣವೂ ಇಲ್ಲ. ಈ ಹಿಂದೆ ನಾನೂ ಸಹ ಹಲವು ಬಾರಿ ಬಿ.ಎಸ್.ಯಡಿಯೂರಪ್ಪ ಅವರ ಕಾರ್ಯಕ್ರಮಕ್ಕೆ ಗೈರಾಗಿದ್ದೇನೆ. ಕಾರ್ಯಕ್ರಮಕ್ಕೆ ಬರದೇ ಇದ್ರೆ ಅದನ್ನು ಅಸಮಾಧಾನ ಅಥವಾ ಮುಸಕಿನ ಗುದ್ದಾಟ ಎಂದು ವ್ಯಾಖ್ಯಾನ ಮಾಡಬಾರದು ಎಂದು ಹೇಳಿದರು.


ವಿ.ಸೋಮಣ್ಣ ಮುನಿಸು ಯಾಕೆ?


ಚಾಮರಾಜನಗರ ಉಸ್ತುವಾರಿಯಾಗಿರುವ ವಿ.ಸೋಮಣ್ಣ ಇಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಬೆಂಗಳೂರಿನವರು ಆದ್ರೂ ಸ್ಥಳೀಯವಾಗಿ ತಮ್ಮದೇ ಆದ ಪ್ರಾಬಲ್ಯವನ್ನು ವಿ.ಸೋಮಣ್ಣ ಹೊಂದಿದ್ದಾರೆ. ಚಾಮರಾಜನಗರದಲ್ಲಿ ತಮ್ಮದೇ ಕಾರ್ಯಕರ್ತರನ್ನು ವಿ.ಸೋಮಣ್ಣ ಹೊಂದಿದ್ದಾರೆ.


ಚಾಮರಾಜನಗರ ಜಿಲ್ಲಾ ಬಿಜೆಪಿ ಅಧ್ಯಕ್ಷರು ಮತ್ತು ಪಕ್ಷದ ವಿವಿಧ ಹುದ್ದೆಗಳ ನೇಮಕಾತಿಯನ್ನು ತಮ್ಮನ್ನು ಪರಿಗಣಿಸಿಲ್ಲ ಎಂಬ ಅಸಮಾಧಾನ ವಿ.ಸೋಮಣ್ಣ ಅವರಿಗೆ ಇದೆಯಂತೆ.


reason behind v sommanna s angry on bjp mrq
ಸಚಿವ ವಿ ಸೋಮಣ್ಣ


ರುದ್ರೇಶ್ ಎಂಟ್ರಿ


ಇತ್ತ KRYDL ಅಧ್ಯಕ್ಷ ಎಂ.ರುದ್ರೇಶ್ ಚಾಮರಾಜಗರದಲ್ಲಿ ಸಕ್ರಿಯರಾಗಿದ್ದಾರೆ. ರುದ್ರೇಶ್ ನೇತೃತ್ವದಲ್ಲಿ ಚುನಾವಣಾ ಪ್ರಚಾರಕ್ಕೆ ಮುಂದಾಗಿರೋದಕ್ಕೆ ಸೋಮಣ್ಣ ಮುನಿಸುಕೊಂಡಿದ್ದಾರೆ ಎನ್ನಲಾಗಿದೆ. ಎಂ.ರುದ್ರೇಶ್ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.


ಈ ಬಾರಿ ಚುನಾವಣೆಯನ್ನು ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಸೋಮಣ್ಣ ಪ್ಲಾನ್ ಮಾಡಿಕೊಂಡಿದ್ದರಂತೆ. ಆದ್ರೆ ರುದ್ರೇಶ್ ಪ್ರವೇಶದಿಂದ ಸೋಮಣ್ಣ ಅವರಿಗೆ ಹಿನ್ನಡೆ ಆಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.


ಕ್ಷೇತ್ರ ಬದಲಾವಣೆ ಯಾಕೆ?


ಗೋವಿಂದರಾಜನಗರ ಬಿಜೆಪಿಯ ಭದ್ರಕೋಟೆಯಾಗಿ ಬದಲಾಗಿದೆ. ಹಾಗಾಗಿ ಕ್ಷೇತ್ರವನ್ನು ಪುತ್ರ ಅರುಣ್ ಸೋಮಣ್ಣಗೆ ಬಿಟ್ಟುಕೊಟ್ಟು ತಾವು ಚಾಮರಾಜನಗರಕ್ಕೆ ಹೋಗಲು ಸಚಿವರು ಸಿದ್ಧತೆ ನಡೆಸಿದ್ದರು. ಆದ್ರೆ ರುದ್ರೇಶ್ ಪ್ರವೇಶದಿಂದ ಸೋಮಣ್ಣ ಅವರಿಗೆ ಟಿಕೆಟ್ ಸಿಗುತ್ತಾ ಅನ್ನೋ ಪ್ರಶ್ನೆ ಎದುರಾಗಿದೆ.


ಸೋಮಣ್ಣರನ್ನ ಸೈಡ್​ಲೈನ್ ಮಾಡ್ತಾ ಬಿಜೆಪಿ?


ಇತ್ತ ಮುನಿಸಿಕೊಂಡಿರುವ ಸೋಮಣ್ಣ ಅವರನ್ನು ಸಮಾಧಾನ ಮಾಡುವ ಬದಲು ಬಿಜೆಪಿ ಸೈಡ್​ಲೈನ್ ಮಾಡ್ತಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಚಾಮರಾಜನಗರದಲ್ಲಿ ನಿನ್ನೆ ನಡೆದ ವಿಜಯ ಸಂಕಲ್ಪ ಯಾತ್ರೆಯ ಜವಾಬ್ದಾರಿಯನ್ನ ಕೆ.ಎಸ್.ಈಶ್ವರಪ್ಪ ಅವರಿಗೆ ನೀಡಲಾಗಿತ್ತು. ಬೇರೆ ಜಿಲ್ಲೆಯ ನಾಯಕರಿಗೆ ಉಸ್ತುವಾರಿ ನೀಡಿದ್ದಕ್ಕೆ ಮೊದಲೇ ಮುನಿಸಿಕೊಂಡಿದ್ದ ಸೋಮಣ್ಣ ಅವರ ಅಸಮಾಧಾನ ಮತ್ತಷ್ಟು ಹೆಚ್ಚಾಗಿದೆ ಎನ್ನಲಾಗುತ್ತಿದೆ.




ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಮಲೆಮಹದೇಶ್ವರ ಬಹಳ ದೊಡ್ಡ ಶಕ್ತಿ. ಜನರ ಎಲ್ಲ ಸಂಕಲ್ಪ ಈಡೇರಿಸುತ್ತಾನೆ. ಅದೇ ರೀತಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬರಲಿ ಎಂದು ಬಿಜೆಪಿ ಸಂಕಲ್ಪ ಮಾಡಿದೆ. ಈ ವಿಜಯಸಂಕಲ್ಪ ಯಾತ್ರೆಯಿಂದ ಬಿಜೆಪಿ ದಿಗ್ವಿಜಯ ಸಾಧಿಸುತ್ತೆ ಎಂದರು. ಇದೇ ವೇಳೆ ಮಾತಾಡಿದ  ಬಿಎಸ್‌ವೈ ಮಾತನಾಡಿದ್ದು, ರಾಜ್ಯದಲ್ಲಿ ಬಿಜೆಪಿ 140ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೆ ಎಂದು ಹೇಳಿದರು.


ಇದನ್ನೂ ಓದಿ : V Somanna: ಗುಂಡ್ಲುಪೇಟೆಯಲ್ಲಿ ಸಚಿವ ಸೋಮಣ್ಣ ವಿರುದ್ಧ ದೂರು ದಾಖಲು; ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಆಗ್ರಹ


ಮಲೆಮಹದೇಶ್ವರ ಬೆಟ್ಟದಲ್ಲಿರುವ ಸಾಲೂರು ಮಠಕ್ಕೂ ಜೆ.ಪಿ.ನಡ್ಡಾ, ಸಿಎಂ ಬಸವರಾಜ ಬೊಮ್ಮಾಯಿ, ಬಿಎಸ್​​ವೈ ಹಾಗೂ ಬಿಜೆಪಿ ನಾಯಕರು ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ್ರು.

Published by:Mahmadrafik K
First published: