ಚಿತ್ರದುರ್ಗ: ಜಿಲ್ಲೆಯ ಶಾಸಕರ ಮಾತಿಗೆ ಬೆಲೆಯೇ ಇಲ್ಲ - ಶಾಸಕ ಗೂಳಿಹಟ್ಟಿ ಶೇಖರ್​ ವಿಷಾದ

ನಾವು ನಾಲ್ಕು ಜನ ಶಾಸಕರು ಹಾಗೂ ಸಚಿವ ಶ್ರೀರಾಮುಲು ಸೇರಿದಂತೆ ನಾವುಗಳು ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳನ್ನು ಭೇಟಿ ಮಾಡಿ ಬೇಡಿಕೆ ಇಟ್ಟು ಬಂದಿದ್ದೆವು . ಅಧಿಕಾರಿಗಳನ್ನು ಬದಲು ಮಾಡುವ ಭರವಸೆ ನೀಡಿದ್ದರು. ಅದರೆ ಮಾಡಿಲ್ಲ

ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್​

ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್​

  • Share this:
ಚಿತ್ರದುರ್ಗ(ಫೆ. 01) : ನಾವು ಹೇಳಿದ ಅಧಿಕಾರಿಗಳನ್ನು ಸರ್ಕಾರ ಹಾಕಿಕೊಟ್ಟಿಲ್ಲ. ನಾವು ಹೇಗೆ ಕೆಲಸ ಮಾಡುವುದು? ಜಿಲ್ಲೆಯ ಪ್ರಮುಖ ಮೂರು ಅಧಿಕಾರಿಗಳನ್ನು ಬದಲಾಯಿಸಿ ಕೊಡುವಂತೆ ಕೇಳಿದ್ದು, ನಮ್ಮ ಕೂಗಿಗೆ ಬೆಲೆಯೇ ಇಲ್ಲದಂತಾಗಿದೆ ಎಂದು ಶಾಸಕ ಗೂಳಿಹಟ್ಟಿ ಶೇಖರ್ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ನಾವು ನಾಲ್ಕು ಜನ ಶಾಸಕರು ಹಾಗೂ ಸಚಿವ ಶ್ರೀರಾಮುಲು ಸೇರಿದಂತೆ ನಾವುಗಳು ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳನ್ನು ಭೇಟಿ ಮಾಡಿ ಬೇಡಿಕೆ ಇಟ್ಟು ಬಂದಿದ್ದೆವು . ಅಧಿಕಾರಿಗಳನ್ನು ಬದಲು ಮಾಡುವ ಭರವಸೆ ನೀಡಿದ್ದರು. ಅದರೆ, ಮಾಡಿಲ್ಲ ಎಂದರು.

ಈ ಬಗ್ಗೆ ಮಾತನಾಡಲು ಗೃಹ ಮಂತ್ರಿಗಳಿಗೆ ದೂರವಾಣಿ ಕರೆ ಮಾಡುತ್ತಿದ್ದೇನೆ. ಆದರೆ ಅವರು ಸಿಗುತ್ತಿಲ್ಲ. ಚಿತ್ರದುರ್ಗ ಜಿಲ್ಲೆಗೆ ಎಸ್ಪಿ ಇಂತಹವರೇ ಬೇಕು ಎಂದು ಸೂಚಿಸಿದ್ದೆವು. ಅದನ್ನು ಗಣನೆಗೆ ತೆಗೆದುಕೊಂಡಿಲ್ಲ. ಕಾಂಗ್ರೆಸ್ ಮುಖಂಡರ ಸಂಬಂಧಿಯಾಗಿರುವ ಅಧಿಕಾರಿಯನ್ನು ಹಾಕಿದ್ದಾರೆ. ಅವರಿಂದ ನಾವೇನು ನಿರೀಕ್ಷೆ ಮಾಡಲು ಸಾಧ್ಯ ಎಂದು ತಿಳಿಸಿದರು.

ಇನ್ನು, ಜಿಲ್ಲೆಯ ಶಾಸಕರ ಮಾತಿಗೆ ಬೆಲೆಯೇ ಇಲ್ಲದಂತಾಗಿದೆ. ನಮ್ಮನ್ನು ಹೇಳೋರು ಕೇಳೋರು ಯಾರೂ ಇಲ್ಲದಂತಾಗಿದೆ. ಇಲ್ಲಿ ಯಾರೂ ಕೇಳುವುದಿಲ್ಲ. ಆದರೆ, ಪಕ್ಕದ ದಾವಣಗೆರೆ ಜಿಲ್ಲೆಯಲ್ಲಿ ಶಾಸಕರು ಹೇಳಿದ ಅಧಿಕಾರಿಯನ್ನು ಸರ್ಕಾರ ಹಾಕಿ ಕೊಡುತ್ತದೆ. ಇದೊಂದು‌ ದೌರ್ಭಾಗ್ಯ ಜಿಲ್ಲೆ. ನಾವು ದೌರ್ಭಾಗ್ಯ ಶಾಸಕರು ಎಂದು ಅಸಮಾಧಾನ ಹೊರಹಾಕಿದರು.

ಇದನ್ನೂ ಓದಿ :  ಶಿವಮೊಗ್ಗದಲ್ಲೊಂದು ಚಿಣ್ಣರ ಸಂತೆ; ತರಕಾರಿ ಮಾರಿದ ಶಾಲಾ ಮಕ್ಕಳು

ಹಿಂದೆಯೂ ನಾನು ಅಸಹಾಯಕನಾಗಿ ಅಧಿಕಾರಿಗಳ ಬದಲಾವಣೆ ವಿಚಾರದಲ್ಲಿ ಅತ್ಮಹತ್ಯೆಗೆ ಯತ್ನಿಸಿದ್ದೆ. ಅದರೆ ಆಗಲೂ ಈಗಲೂ ಏನೇನು ವ್ಯತ್ಯಾಸವಾಗಿಲ್ಲ. ನಾನು ಅಸಹಾಯಕನಾಗಿ ಅಸಮಾಧಾನವನ್ನು ಹೊರ ಹಾಕಿದ್ದೇನೆ. ಉಳಿದವರು ಮಾತನಾಡುವುದಿಲ್ಲ ಎಂದಿದ್ದಾರೆ. ಇನ್ನು, ಸಚಿವ ಸಂಪುಟ ವಿಸ್ತರಣೆಯಲ್ಲಿ ಪಕ್ಷ ಬಿಟ್ಟು ಬಂದವರನ್ನ ಪರಿಗಣಿಸಬೇಕು. ಅವರಿಂದ ಸರ್ಕಾರ ಬಂದಿದೆ. ಹತ್ತಿದ ಏಣಿಯನ್ನ ಕಾಲಲ್ಲಿ ತಳ್ಳಬಾರದು ಎಂದೂ ಸಲಹೆ ನೀಡಿದ್ದಾರೆ.
First published: