ಗೋಕಾಕ್ ಜನ ಹಿಂದೆ ಸರಿದರೆ ಚಿಕ್ಕೋಡಿ ಜಿಲ್ಲೆ ಮಾಡಬಹುದು; ಸಚಿವ ರಮೇಶ್ ಜಾರಕಿಹೊಳಿ

ಬೆಳಗಾವಿಯ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ಕೂಡ ನಡೆಯುತ್ತಿದೆ. ವಿಜಯನಗರದ ವಿಚಾರವೇ ಬೇರೆ ನಮ್ಮ ಜಿಲ್ಲೆಯ ವಿಚಾರವೇ ಬೇರೆ ಹಾಗಾಗಿ ಜಿಲ್ಲೆ ಮಾಡುವುದು ಅಷ್ಟು ಸುಲಭವಲ್ಲ ಎಂದಿದ್ದಾರೆ

ಸಚಿವ ರಮೇಶ್ ಜಾರಕಿಹೋಳಿ

ಸಚಿವ ರಮೇಶ್ ಜಾರಕಿಹೋಳಿ

  • Share this:
ಬೆಳಗಾವಿ(ಡಿಸೆಂಬರ್​.04): ಚಿಕ್ಕೋಡಿ ಜಿಲ್ಲೆ ಕುರಿತು ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಬೆಳಗಾವಿ ಬಿಜೆಪಿ ನಾಯಕರು ಇಂದು ಜಿಲ್ಲೆ ರಚನೆ ಕುರಿತು ಹೊಸ ವರಸೆ ಶುರು ಮಾಡಿಕೊಂಡಿದ್ದಾರೆ. ಇಷ್ಟು ದಿನ ಗೋಕಾಕ್, ಚಿಕ್ಕೋಡಿ ಎರಡು ಜಿಲ್ಲೆ ಆಗಬೇಕು ಇದಕ್ಕೆ ಸಮಸ್ಯೆ ಇದೆ ಎಂದು ಹೇಳುತ್ತ ಬಂದಿದ್ದ ಸಚಿವ ರಮೇಶ್ ಜಾರಕಿಹೋಳಿ ಇಂದು ಗೋಕಾಕ್ ಜನ ಬಿಟ್ಟು ಕೊಟ್ಟರೆ ಚಿಕ್ಕೋಡಿ ಜಿಲ್ಲೆ ಆಗುತ್ತದೆ ಎಂದು ಹೊಸ ವರಸೆ ಶುರು ಮಾಡಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ಚಿಕ್ಕೋಡಿ ಜಿಲ್ಲೆ ಮಾಡುವಂತೆ ಒತ್ತಾಯಿಸಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಇಂದು ಪ್ರತಿಭಟನೆ ನಡೆಸಿದೆ. ಬಳ್ಳಾರಿ ವಿಭಜನೆ ಮಾಡಿದಂತೆ ಬೆಳಗಾವಿಯನ್ನು ಒಡೆಯಬೇಕು ಎಂದು ಹೋರಾಟ ಸಮಿತಿ ಒತ್ತಾಯಿಸಿದೆ. ಇಂದು ಜಿಲ್ಲಾ ಹೋರಾಟ ಸಮೀತಿ ಜೊತೆಗೆ ಮಾತುಕತೆ ನಡೆಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೋಳಿ, ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡುವುದು ಅತ್ಯಂತ ಅವಶ್ಯಕವಾಗಿದ್ದು, ಚಿಕ್ಕೋಡಿ ಅಥವಾ ಗೋಕಾಕ್ ತಾಲೂಕಿನವರು ಯಾರಾದರೂ ಒಬ್ಬರು ಹಿಂದಕ್ಕೆ ಸರಿದರೆ ಚಿಕ್ಕೋಡಿ ಅಥವಾ ಗೋಕಾಕ್ ಜಿಲ್ಲೆಯನ್ನು ಮಾಡಬಹುದು ಎಂದಿದ್ದಾರೆ.

ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯವರ ಚಿಕ್ಕೋಡಿ ಪ್ರತ್ಯೇಕ ಜೀಲ್ಲೆಯ ಮನವಿಯನ್ನು ಸ್ವಿಕರಿಸಿ ಮಾತನಾಡಿದ ಸಚಿವರು, ಕಳೆದ ಹಲವು ದಿನಗಳಿಂದ ಬೆಳಗಾವಿ ಜಿಲ್ಲೆಯನ್ನು ವಿಭಜನೆಯನ್ನು ಮಾಡಿ ಚಿಕ್ಕೋಡಿ ಅಥವಾ ಗೋಕಾಕ್ ಜಿಲ್ಲೆಯನ್ನಾಗಿ ಮಾಡಬೇಕು ಎನ್ನುವ ಕೂಗು ಇದೆ. ಕಳೆದ ಕಾಂಗ್ರೆಸ್ ಸರ್ಕಾರದಲ್ಲಿ ಚಿಕ್ಕೋಡಿ ಗೋಕಾಕ್ ಜಿಲ್ಲೆಯನ್ನಾಗಿ ಮಾಡಲು ನಿರ್ಧರಿಸಿದ್ದರು. ತಾಂತ್ರಿಕ ಕಾರಣದಿಂದ ಕೈಬಿಡಲಾಯಿತು. ಚಿಕ್ಕೋಡಿ ಅಥವಾ ಗೋಕಾಕ್  ಪ್ರತ್ಯೆಕ ಜಿಲ್ಲೆ ಮಾಡುವ ಕುರಿತು ಇವತ್ತು ಯಡಿಯೂರಪ್ಪನವರಿಗೆ  ಮನವಿಯನ್ನು ಮಾಡುತ್ತೇವೆ ಎಂದು ಸಚಿವರು ತಿಳಿಸಿದರು.

ಮಾತು ಬದಲಿಸಿದ ಸಚಿವರು

ಇನ್ನು ಕಳೆದ ಎರಡು ದಿನಗಳ ಹಿಂದಷ್ಟೇ ಮಾತನಾಡಿದ್ದ ಸಚಿವ ಜಾರಕಿಹೋಳಿ  ಗೋಕಾಕ್ ಹಾಗೂ ಚಿಕ್ಕೋಡಿ ಜಿಲ್ಲೆ ಮಾಡಲು ನಮ್ಮದು ಸಹ ಸಹಮತಿ ಇದೆ. ಆದರೆ, ಕೆಲವು ತೊಡಕುಗಳು ಸಮಸ್ಯೆ ಆಗಿವೆ ಜಿಲ್ಲೆಯನ್ನ ವಿಭಜನೆ ಮಾಡುವು ಅಷ್ಟು ಸುಲಭವಲ್ಲ ಮಹಾಜನ ವರದಿಯನ್ನ ನೋಡಬೇಕು ಜೊತೆಗೆ ಕನ್ನಡಪರ ಸಂಘಟನೆಗಳನ್ನ ವಿಶ್ವಾಸಕ್ಕೆ ಪಡೆಯಬೇಕು. ಬೆಳಗಾವಿಯ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ಕೂಡ ನಡೆಯುತ್ತಿದೆ. ವಿಜಯನಗರದ ವಿಚಾರವೇ ಬೇರೆ ನಮ್ಮ ಜಿಲ್ಲೆಯ ವಿಚಾರವೇ ಬೇರೆ ಹಾಗಾಗಿ ಜಿಲ್ಲೆ ಮಾಡುವುದು ಅಷ್ಟು ಸುಲಭವಲ್ಲ ಎಂದಿದ್ದಾರೆ.

ಇದನ್ನೂ ಓದಿ : ಉದ್ಯೋಗ ಮಾರುಕಟ್ಟೆಗೆ ತಕ್ಕಂತೆ ಡಿಪ್ಲೊಮಾ ಪಠ್ಯ ಬದಲಾವಣೆ ; ಡಿಸಿಎಂ ಅಶ್ವತ್ಥನಾರಾಯಣ

ಇನ್ನು ಚುನಾವಣೆ ವೇಳೆ ನೀಡಿಸ ಭರವಸೆ ಬಗ್ಗೆ ಕೇಳಿದ್ರೆ ನಾನು ಆವಾಗ ಬಿಜೆಪಿಯಲ್ಲಿ ಇರಲಿಲ್ಲಾ ಯಾರು ಭರವಸೆ ಕೊಟ್ಟಿದ್ದಾರೊ ಅವರನ್ನೆ ಕೇಳಿ ಎನ್ನುವ ಹೇಳಿಕೆ ನೀಡಿದ್ದರು. ಸಚಿವರ ಹೇಳಿಕೆ ಬೆನ್ನಲೆ ಪ್ರತಿಭಟನೆಯ ಕಾವು ಹೆಚ್ಚಾದ ಹಿನ್ನಲೆ ಈಗ ಸಚಿವರು ತಮ್ಮ ಮಾತಿ ಬದಲಿಸಿ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ.

ಒಟ್ಟಿನಲ್ಲಿ ಜಿಲ್ಲೆಯ ನಾಯಕರು ಮನಸ್ಸು ಮಾಡಿದ್ರೆ ಯಾವುದು ಅಸಾಧ್ಯವಲ್ಲ ಹೀಗಾಗಿ ಬಿಜೆಪಿಯ ನಾಯಕರು ತಮ್ಮ ಮಾತು ಉಳಿಕೊಳ್ಳಬೇಕು ಎಂದು ಹೋರಾಟ ಸಮೀತಿ ಅಧ್ಯಕ್ಷ ಬಿ.ಆರ್.ಸಂಗಪ್ಪಗೋಳ ಒತ್ತಾಯಿಸಿದ್ದಾರೆ.
Published by:G Hareeshkumar
First published: