ದಾಖಲೆಯೊಂದಿಗೆ ಬನ್ನಿ ಚರ್ಚಿಸಲು ಸಿದ್ದ; ಕಾಂಗ್ರೆಸ್​ ನಾಯಕರಿಗೆ ಶಾ ಆಹ್ವಾನ

news18
Updated:September 8, 2018, 9:23 PM IST
ದಾಖಲೆಯೊಂದಿಗೆ ಬನ್ನಿ ಚರ್ಚಿಸಲು ಸಿದ್ದ; ಕಾಂಗ್ರೆಸ್​ ನಾಯಕರಿಗೆ ಶಾ ಆಹ್ವಾನ
news18
Updated: September 8, 2018, 9:23 PM IST
ನ್ಯೂಸ್​ 18 ಕನ್ನಡ

ನವದೆಹಲಿ (ಸೆ.8): ತೈಲ ದರ ಏರಿಕೆ ಸೇರಿದಂತೆ ಯಾವುದೇ ವಿಷಯದ ಕುರಿತು ಮಾತನಾಡಲು ಸಿದ್ಧ. ಆದರೆ ಈ ಕುರಿತು ಮಾತನಾಡಲು ಕಾಂಗ್ರೆಸ್​ ನಾಯಕರು ಸರಿಯಾದ ಮಾಹಿತಿ ಅಂಕಿ ಅಂಶಗಳೊಂದಿಗೆ ಬನ್ನಿ ಎಂದು ಅಮಿತ್​ ಶಾ ಕಾಂಗ್ರೆಸ್​ ನಾಯಕರಿಗೆ ಆಹ್ವಾನ ನೀಡಿದ್ದಾರೆ.

ಪಿ ಚಿದಂಬರಂ ಮತ್ತು ಕಂಪನಿ , ಜಿಎಸ್​ಟಿ ಸೇರಿದಂತೆ ಬಿಜೆಪಿ ಪ್ರತಿಯೊಂದು ವಿಷಯದ ಬಗ್ಗೆ ಚರ್ಚಿಸಲು ನಾವು ಸಿದ್ಧ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​  ಸವಾಲು ಹಾಕಿದ್ದಾರೆ.,

ಇಂಧನ ಬೆಲೆ ಏರಿಕೆ, ಡಾಲರ್​ ಎದುರು ರೂಪಾಯಿ ಮೌಲ್ಯ ಕುಸಿತ, ನಿರುದ್ಯೋಗ ಸೇರಿದಂತೆ ಅನೇಕ ಭರವಸೆಗಳನ್ನು ಈಡೇರಿಸಲು ಬಿಜೆಪಿ ವಿಫಲವಾಗಿದೆ ಎಂದು ಬಿಜೆಪಿಯೇತರ ಪಕ್ಷಗಳು ಸೋಮವಾರ ಬಂದ್​ಗೆ ಕರೆ ನೀಡಿದೆ.

ಕಾರ್ಯಕಾರಿಣಿ  ಸಭೆ ಬಳಿಕ ಮತನಾಡಿದ ಸೀತಾರಾಮನ್, ನಮ್ಮ ಸರ್ಕಾರದ ಯಶಸ್ಸಿನ ಕುರಿತು ಜನರಿಗೆ ತಿಳಿಸಲು ಪಕ್ಷ ಶೀಘ್ರದಲ್ಲೇ ಪ್ರಚಾರ ನಡೆಸಲಿದೆ. ​ ರೈತರಿಗೆ ಪಕ್ಷ ಯಾವ ಕಾರ್ಯಕ್ರಮ ರೂಪಿಸಿದೆ ಎಂದು ರೈತರಿಗೆ ತಿಳಿಸುತ್ತೇವೆ, ನಿವೃತ್ತ ನೌಕರರ ಕಲ್ಯಾಣ, ಒಬಿಸಿ ಆಯೋಯ, ಜಿಎಸ್​ಟಿ ಜಾರಿ, ಸೇರಿದಂತೆ ಅನೇಕ ಪಕ್ಷದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕಾರ್ಯ ನಡೆಯಲಿದೆ ಎಂದರು.

ಆಯುಷ್ಮಾನ್​ ಭಾರತ್​ , ಯುರಿಯಾ ಯೋಜನೆ, ಹಿಂದುಳಿದ ವರ್ಗಗಳ ಆಯೋಗ ಕುರಿತು ಎಲ್ಲ ಜನರಿಗೆ ತಿಳಿಸಲಾಗುವುದು ಎಂದರು.

ಭಾರತದ ಆರ್ಧಿಕತೆ ಪ್ರಪಂಚದಲ್ಲಿ ಆರನೇ ಸ್ಥಾನದಲ್ಲಿದ್ದು, ಶೀಘ್ರದಲ್ಲಿಯೇ ಬ್ರಿಟನ್​ ಆರ್ಥಿಕತೆಯನ್ನು ಹಿಂದಿಕ್ಕಲಿದೆ ಎಂದು ಶಾ ತಿಳಿಸಿದರು.
First published:September 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ