HOME » NEWS » State » READY FOR VACCINE COLLECTION IN BENGALURU RHHSN

ಎರಡು ದಿನದಲ್ಲಿ ರಾಜ್ಯಕ್ಕೆ ಕೊರೋನಾ ಲಸಿಕೆ; ಬೆಂಗಳೂರಿನಲ್ಲಿ ವ್ಯಾಕ್ಸಿನ್ ಸಂಗ್ರಹಣಗೆ ಸಕಲ ಸಿದ್ಧತೆ!

ಒಟ್ಟಾರೆಯಾಗಿ ವ್ಯಾಕ್ಸಿನ್ ಸ್ಟೋರ್ ಮಾಡೋಕೆ ಕಂಪ್ಲೀಟ್ ಸೆಟ್ ಅಪ್ ಆಗಿದೆ.‌ ಇನ್ನೇನಿದ್ದರೂ ಸಚಿವರು ಹೇಳಿದ ಹಾಗೆ ವ್ಯಾಕ್ಸಿನ್ ಬರೋದು ಮಾತ್ರ ಬಾಕಿ. ಮೊದಲ ಹಂತದಲ್ಲಿ ಕೊರೋನಾ ಫ್ರಂಟ್ ಲೈನ್ ಕಾರ್ಯಕರ್ತರಿಗೆ ಲಸಿಕೆ ಸಿಗಲಿದೆ. ಅದಾದ ಬಳಿಕ‌ ಹಂತ ಹಂತವಾಗಿ ಜನರಿಗೆ ಲಸಿಕೆ ಲಭ್ಯವಾಗಲಿದೆ.

news18-kannada
Updated:January 8, 2021, 8:01 PM IST
ಎರಡು ದಿನದಲ್ಲಿ ರಾಜ್ಯಕ್ಕೆ ಕೊರೋನಾ ಲಸಿಕೆ; ಬೆಂಗಳೂರಿನಲ್ಲಿ ವ್ಯಾಕ್ಸಿನ್ ಸಂಗ್ರಹಣಗೆ ಸಕಲ ಸಿದ್ಧತೆ!
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು; ಇನ್ನೇನು ಎರಡ್ಮೂರು ದಿನಗಳಲ್ಲಿ ಕೊರೋನಾ ವ್ಯಾಕ್ಸಿನ್ ಜನರಿಗೆ ದೊರಕಲಿದೆ. ಈಗಾಗಲೇ ಎರಡು ಸುತ್ತಿನ ಡ್ರೈ ರನ್ ಕೂಡ ಯಶಸ್ವಿಯಾಗಿ ನಡೆದಿದೆ. ಹೀಗಾಗಿ ಲಸಿಕೆ ಬಂದ್ರೆ ಅದನ್ನು ಶೇಖರಣೆ ಮಾಡೋಕೆ‌ ಬಿಬಿಎಂಪಿ ಸಕಲ‌ ಸಿದ್ಧತೆಗಳನ್ನು ಮಾಡಿಕೊಂಡಿದೆ. ಆರೋಗ್ಯ ಸಚಿವ ಸುಧಾಕರ್ ಸೋಮವಾರದೊತ್ತಿಗೆ ವ್ಯಾಕ್ಸಿನ್ ಬರುತ್ತೆ ಅಂತ ಹೇಳಿದ್ದಾರೆ. ಈಗಾಗಲೇ ಎರಡು ಸುತ್ತಿನ ತಾಲೀಮು ಪ್ರಕ್ರಿಯೆ ಕೂಡ ಯಶಸ್ವಿಯಾಗಿ ನೆರವೇರಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಕ್ಸಿನ್ ಸ್ಟೋರ್ ಮಾಡಿ ಇಡಲು ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ಸದ್ಯಕ್ಕೆ ನಗರದ ಕಾರ್ಪೋರೇಷನ್ ವೃತ್ತದ ಬಳಿಯ ಬಿಬಿಎಂಪಿ ದಾಸಪ್ಪ ಹೆರಿಗೆ ಆಸ್ಪತ್ರೆಯಲ್ಲಿ ಇದಕ್ಕೆ ಬೇಕಾಗಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಈ ದಾಸಪ್ಪ ಹೆರಿಗೆ ಆಸ್ಪತ್ರೆಯಲ್ಲಿ ಸುಮಾರು 2 ಲಕ್ಷ ವ್ಯಾಕ್ಸಿನ್ ಶೇಖರಣೆ ಮಾಡಿ ಇಡಬಹುದು. ಇದಕ್ಕಂತಲೇ ಪಾಲಿಕೆ 12 ಐಸ್‌ ಲೇನ್ ರೆಫ್ರಿಜಿರೇಟರ್ ಗಳನ್ನು ರೆಡಿ ಮಾಡಿದೆ. ಈ ರೆಫ್ರಿಜಿರೇಟರ್ ಗಳಲ್ಲಿ ಟೆಂಪ್ರೇಚರ್ ಚೆಕ್ ಮಾಡುವ ವ್ಯವಸ್ಥೆ ಕೂಡ ಇದ್ದು,ಸದ್ಯಕ್ಕೆ ಬರ್ತಿರುವ ವ್ಯಾಕ್ಸಿನ್ ಅನ್ನು 2 ರಿಂದ 8 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಶೇಖರಣೆ ಮಾಡಬೇಕಿದೆ. ಜೊತೆಗೆ ಫಲಾನುಭವಿಗಳ ಅಗತ್ಯತೆ ಅನುಸಾರ ವ್ಯಾಕ್ಸಿನ್ ಕ್ಯಾರಿಯರ್ ಮೂಲಕ ಆರೋಗ್ಯ ಕೇಂದ್ರಗಳಿಗೆ ಮುಟ್ಟಿಸಲೂ ಇಲ್ಲಿ ವ್ಯವಸ್ಥೆ ಮಾಡಲಾಗಿದೆ.

ಇನ್ನು ರಾಜ್ಯಕ್ಕೆ ಬರುತ್ತಿರುವ ಕೋವಿಡ್ ಲಸಿಕೆಗೆ ಎಷ್ಟು ಸೌಕರ್ಯ ಸಿದ್ಧವಿದೆ ಅನ್ನೋದನ್ನು ನೊಡುವುದಾದರೆ, ಸದ್ಯ ರಾಜ್ಯದ ಬಳಿ ಒಟ್ಟು 2855 ಕೋಲ್ಡ್ ಚೇನ್ ಪಾಯಿಂಟ್ ಗಳಿವೆ. ಇವುಗಳ ಮೂಲಕ 29,451 ಲಸಿಕಾ ಕೇಂದ್ರಗಳಿಗೆ ಲಸಿಕೆ ರವಾನೆ ಮಾಡಬಹುದು. 10,008 ವ್ಯಾಕ್ಸಿನೇಟರ್ ಗಳು ಇದ್ದಾರೆ. ರಾಜ್ಯದ ಬಳಿ 10 ವಾಕ್ ಇನ್ ಕೂಲರ್ಸ್ ಮತ್ತು 4 ವಾಕ್ ಇನ್ ಫ್ರೀಜರ್ ಗಳಿವೆ. 24 ಲಕ್ಷ ಸಿರಿಂಜ್ ಗಳು ಈಗಾಗಲೇ ಕೇಂದ್ರದಿಂದ ರಾಜ್ಯಕ್ಕೆ ತಲುಪಿವೆ.

ಇದನ್ನು ಓದಿ: ಹೊತ್ತಲ್ಲದ ಹೊತ್ತಲ್ಲಿ ಮಳೆ; ಮಲೆನಾಡಿಗರು ಹೈರಾಣು, ಮಳೆಯ ಹೊಡೆತಕ್ಕೆ ಮೂರಾಬಟ್ಟೆಯಾದ ರೈತರ ಬದುಕು!

ಮೊದಲ ಹಂತದಲ್ಲಿ ರಾಜ್ಯಕ್ಕೆ 20 ರಿಂದ 24 ಲಕ್ಷ ವ್ಯಾಕ್ಸಿನ್ ಸಿಗುವ ಸಾಧ್ಯತೆ ಇದೆ.‌ 3201 ಐಸ್ ಲೈನ್ಡ್ ರೆಫ್ರಿಜರೇಟರ್ ಗಳಿವೆ, 3312 ಕೋಲ್ಡ್ ಬಾಕ್ಸ್ ಗಳಿವೆ.‌46,591 ವ್ಯಾಕ್ಸಿನ್ ಕ್ಯಾರಿಯರ್ ಗಳಿವೆ ಮತ್ತು 2.2 ಲಕ್ಷಕ್ಕೂ ಅಧಿಕ ಐಸ್ ಪ್ಯಾಕ್ ಗಳು ಬಳಕೆಗೆ ಲಭ್ಯವಿದೆ.‌ ಇದುವರೆಗೆ 6.3 ಲಕ್ಷ ಫ್ರಂಟ್ ಲೈನ್ ವಾರಿಯರ್ಸ್ ಮೊದಲ ಹಂತದ ಲಸಿಕೆಗೆ ನೋಂದಣಿ ಮಾಡಿಸಿದ್ದಾರೆ. ಸದ್ಯ ರಾಜ್ಯಕ್ಕೆ ಬರುವ ವ್ಯಾಕ್ಸಿನ್ ಅನ್ನು 2 ರಿಂದ 8 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಶೇಖರಣೆ ಮಾಡಬೇಕಿದೆ. ಈಗಿರುವ ಒಟ್ಟಾರೆ ಸೌಲಭ್ಯದಲ್ಲಿ 19,98,41,280 ಲಸಿಕೆಗಳನ್ನು ಶೇಖರಣೆ ಮಾಡಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಾರೆಯಾಗಿ ವ್ಯಾಕ್ಸಿನ್ ಸ್ಟೋರ್ ಮಾಡೋಕೆ ಕಂಪ್ಲೀಟ್ ಸೆಟ್ ಅಪ್ ಆಗಿದೆ.‌ ಇನ್ನೇನಿದ್ದರೂ ಸಚಿವರು ಹೇಳಿದ ಹಾಗೆ ವ್ಯಾಕ್ಸಿನ್ ಬರೋದು ಮಾತ್ರ ಬಾಕಿ. ಮೊದಲ ಹಂತದಲ್ಲಿ ಕೊರೋನಾ ಫ್ರಂಟ್ ಲೈನ್ ಕಾರ್ಯಕರ್ತರಿಗೆ ಲಸಿಕೆ ಸಿಗಲಿದೆ. ಅದಾದ ಬಳಿಕ‌ ಹಂತ ಹಂತವಾಗಿ ಜನರಿಗೆ ಲಸಿಕೆ ಲಭ್ಯವಾಗಲಿದೆ.ವರದಿ- ಆಶಿಕ್ ಮುಲ್ಕಿ
Published by: HR Ramesh
First published: January 8, 2021, 8:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories