• Home
  • »
  • News
  • »
  • state
  • »
  • Yoga Day: ಕೋಲಾರದ ಪ್ರಸಿದ್ಧ ಅಂತರಗಂಗೆ ಬೆಟ್ಟದಲ್ಲಿ ಯೋಗ ದಿನಕ್ಕೆ ಸಲಕ ಸಿದ್ಧತೆ, ಫಿಟ್ನೆಸ್ ಇರುವ ವಾಹನಕ್ಕಷ್ಟೇ ಅನುಮತಿ

Yoga Day: ಕೋಲಾರದ ಪ್ರಸಿದ್ಧ ಅಂತರಗಂಗೆ ಬೆಟ್ಟದಲ್ಲಿ ಯೋಗ ದಿನಕ್ಕೆ ಸಲಕ ಸಿದ್ಧತೆ, ಫಿಟ್ನೆಸ್ ಇರುವ ವಾಹನಕ್ಕಷ್ಟೇ ಅನುಮತಿ

ಅಂತರಗಂಗೆ ಬೆಟ್ಟದಲ್ಲಿ ಯೋಗ ದಿನಕ್ಕೆ ಸಿದ್ಧತೆ

ಅಂತರಗಂಗೆ ಬೆಟ್ಟದಲ್ಲಿ ಯೋಗ ದಿನಕ್ಕೆ ಸಿದ್ಧತೆ

ಈ ಬಾರಿ ಅಂತರಗಂಗೆ ಬೆಟ್ಟದಲ್ಲಿ ವಿಶ್ವ ಯೋಗದಿನ ಆಚರಿಸಲು ಸಿದ್ದತೆ ಪೂರ್ಣಗೊಂಡಿದೆ.  ಶತಶೃಂಗ ಪರ್ವತ ಅಂತರಗಂಗೆ ಬೆಟ್ಟದ ಹಸಿರ ಮಡಿಲಲ್ಲಿ, ಸುಂದರವಾದ ಪರಿಸರದ ಒಡಲಲ್ಲಿ ಯೋಗ ದಿನವನ್ನ ಆಚರಿಸಲು, 40 ಎಕರೆ ಪ್ರದೇಶವನ್ನ ಸಮತಟ್ಟು ಮಾಡಲಾಗಿದೆ.

  • Share this:

ಕೋಲಾರ: ಜೂನ್ 21 ರಂದು ವಿಶ್ವಯೋಗ ದಿನಾಚರಣೆ (International Yoga Day) ಹಿನ್ನಲೆ, ಕೋಲಾರ (Kolar) ಜಿಲ್ಲಾಡಳಿತ ವತಿಯಿಂದ ಈ ಬಾರಿ ಅಂತರಗಂಗೆ ಬೆಟ್ಟದಲ್ಲಿ (Antaragange Hill) ವಿಶ್ವ ಯೋಗದಿನ ಆಚರಿಸಲು ಸಿದ್ದತೆ ಪೂರ್ಣಗೊಂಡಿದೆ.  ಶತಶೃಂಗ ಪರ್ವತ ಅಂತರಗಂಗೆ ಬೆಟ್ಟದ, ಬೆಟ್ಟ ಗುಡ್ಡಗಳ ಮಧ್ಯೆ, ಹಸಿರ ಮಡಿಲಲ್ಲಿ, ಸುಂದರವಾದ ಪರಿಸರದ ಒಡಲಲ್ಲಿ ಯೋಗ ದಿನವನ್ನ ಆಚರಿಸಲು, 40 ಎಕರೆ ಪ್ರದೇಶವನ್ನ (40 Acre Area) ಸಮತಟ್ಟು ಮಾಡಲಾಗಿದೆ. ಕಳೆದ 20 ದಿನಗಳ ಹಿಂದೆ ಗಿಡಗಂಟೆಗಳಿಂದ ತುಂಬಿದ್ದ ಸ್ಥಳದಲ್ಲಿ, ಸತತವಾಗಿ 20 ದಿನಗಳಿಂದ ತೆರವು ಕಾರ್ಯಾಚರಣೆ ನಡೆಸುವ ಮೂಲಕ, ಅಂಕು ಡೊಂಕಾಗಿದ್ದ ಸ್ಥಳವನ್ನ ಜೆಸಿಬಿ (JCB) ಮತ್ತು ಬುಲ್ಡೋಜರ್ (Bulldozer) ವಾಹನಗಳನ್ನ ಬಳಸಿ ಸಮತಟ್ಟು ಮಾಡಲಾಗಿದೆ. ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಸ್ಥಳಕ್ಕೆ ಭೇಟಿ ನೀಡುತ್ತಿರುವ ಸಂಸದ (MP) ಮುನಿಸ್ವಾಮಿ (Muniswamy) ಸ್ಥಥಳದಲ್ಲಿ ಪರಿಶೀಲನೆ ನಡೆಸುವುದರ ಜೊತೆಗೆ, ಸ್ಥಳಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು, ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ಜೊತೆಗೂ ಸಮಾಲೋಚನೆ ಮಾಡ್ತಿದ್ದಾರೆ. ಜೂನ್ 21 ರಂದು ಬೆಳಗ್ಗೆ ನಿಗದಿತ ಸಮಯದಲ್ಲಿ ನಡೆಯಲಿರುವ ಯೋಗ ದಿನದಲ್ಲಿ 20 ಸಾವಿರಕ್ಕೂ ಅಧಿಕ ಯೋಗ ಪಟುಗಳು ಭಾಗಿಯಾಗಲಿದ್ದು, ಮೂರು ಸಾವಿರಕ್ಕೂ ಹೆಚ್ಚು ತರಬೇತುದಾರರು ಯೋಗಾಭ್ಯಾಸದಲ್ಲಿ ಭಾಗಿಯಾಗಲಿದ್ದಾರೆ.


ಆಯುಷ್ ಇಲಾಖೆ ಸಚಿವರು ಭಾಗಿ


ಐತಿಹಾಸಿಕ ಕಾರ್ಯಕ್ರಮದಲ್ಲಿ ಕೇಂದ್ರ ಆಯುಷ್ ಇಲಾಖೆಯ ಸಚಿವರು ಭಾಗಿಯಾಗುವ ನಿರೀಕ್ಷೆಯಿದ್ದು, ಹೆಲಿಪ್ಯಾಡ್ ವ್ಯವಸ್ತೆ ಮಾಡಲು ಸಂಸದ ಮುನಿಸ್ವಾಮಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸಂಸದರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ವಿಶ್ವ ಯೋಗ ದಿನ ಅಂಗವಾಗಿ, ಕೋಲಾರದಲ್ಲಿ ನಡೆಯುವ ಕಾರ್ಯಕ್ರಮ ಐತಿಹಾಸಿಕ ದಿನವಾಗಲಿ ಎಂದು ಸಂಸದ ಮುನಿಸ್ವಾಮಿ ಹೇಳಿದ್ದಾರೆ.


ಅನುಮತಿ ಪಡೆದ ವಾಹನಕ್ಕಷ್ಟೇ ಬೆಟ್ಟಕ್ಕೆ ಪ್ರವೇಶ


ಯೋಗದಿನದಲ್ಲಿ ಭಾಗಿಯಾಗುವ ಯೋಗಪಟುಗಳಿಗಾಗಿ ತಿಂಡಿ, ನೀರು, ಮಜ್ಜಿಗೆ, ಬಾಳೆಹಣ್ಣು ವ್ಯವಸ್ಥೆಯನ್ನು ಮಾಡಲಾಗಿದ್ದು, ಅಂತರಗಂಗೆ ಬೆಟ್ಟಕ್ಕೆ ಆಗಮಿಸುವ ಯೋಗಪಟುಗಳಿಗೆ ಬಸ್ ವ್ಯವಸ್ತೆಯನ್ನು ಮಾಡಲಾಗಿದೆ. ಸಾರಿಗೆ ನಿರ್ವಹಣೆಯ ಜವಾಬ್ದಾರಿಯನ್ನ ಆರ್,ಟಿ,ಒ ಹಾಗು ಪೊಲೀಸ್ ಇಲಾಖೆಗೆ ನೀಡಲಾಗಿದ್ದು ಅನುಮತಿ ಪಡೆದ ವಾಹನಗಳಿಗಷ್ಟೇ ಬೆಟ್ಟದ ಮೇಲ್ಭಾಗಕ್ಕೆ ಸಂಚರಿಸಲು ಅನುಮತಿ ನೀಡಲಾಗುತ್ತದೆ ಎಂದು ಸಂಸದ ಮುನಿಸ್ವಾಮಿ ತಿಳಿಸಿದ್ದಾರೆ.


ಇದನ್ನೂ ಓದಿ: Mysore Palace: ನಾಳೆ ಮೈಸೂರು ಅರಮನೆಗೆ ಹೋಗ್ತಿದ್ದೀರಾ? ಜೂನ್ 21ರವರೆಗೂ ಪ್ಯಾಲೇಸ್‌ಗೆ ನೋ ಎಂಟ್ರಿ!


ಯೋಗ ದಿನದಂದು ಸಾಂಸ್ಕೃತಿಕ ಮೆರುಗು


ಇನ್ನು ಕೋಲಾರದಲ್ಲಿ ನಡೆಯುತ್ತಿರುವ ವಿಶ್ವಯೋಗ ದಿನ ಕಾರ್ಯಕ್ರಮ ಪಯುಕ್ತ 15 ಜಿಲ್ಲೆಗಳಿಂದ ವಿವಿದ ಕಲಾ ತಂಡಗಳನ್ನ ಕರೆಸಲಾಗುತ್ತಿದ್ದು ಸಾಂಸ್ಕೃತಿಕ ಮೆರಗು ನೀಡಲಾಗಿದೆ, ಎಲ್ಲರೂ ಯೋಗದಿನದಲ್ಲಿ ಭಾಗಿಯಾಗಿ ಐತಿಹಾಸಿಕ ದಿನವನ್ನ ಯಶಸ್ವಿಯಾಗಿಸಿ ಎಂದು ಸಂಸದ ಮುನಿಸ್ವಾಮಿ ಮನವಿ ಮಾಡಿದ್ದಾರೆ.


ಬೆಟ್ಟ ಹತ್ತುವ ಬಸ್ ಗಳಿಗೆ ಬೇಕಿದೆ ಫಿಟ್ನೆಸ್ ಸರ್ಟಿಫಿಕೇಟ್


ಯೋಗ ದಿನಾಚರಣೆಗೆ ಕೋಲಾರದ ಅಂತರಗಂಗೆ ಬೆಟ್ಟವು ಸಜ್ಜಾಗಿದ್ದರು, ಬೆಟ್ಟದ ಮೇಲ್ಬಾಗಕ್ಕೆ ತೆರಳಲಿರುವ ವಾಹನಗಳು ಪ್ರತ್ಯೇಕವಾಗಿ ಅನುಮತಿ ಪಡೆಯಬೇಕಿದೆ ಎಂದು  ಜಿಲ್ಲಾಧಿಕಾರಿ ಡಾ ವೆಂಕಟ್ ರಾಜಾ ತಿಳಿಸಿದ್ದಾರೆ. ಯೋಗಾಚರಣೆ  ಸಿದ್ದತೆ ಕುರಿತು ಮಾತನಾಡಿದ ಅವರು, ಐತಿಹಾಸಿಕ ಸ್ಥಳದಲ್ಲಿ ಯೋಗದಿನಾಚರಣೆಗೆ ಸೂಕ್ತವಾದ ಸ್ಥಳದಲ್ಲಿ ಯೋಗಾಭ್ಯಾಸ ನಡೆಯಲಿದೆ.  ಜಿಲ್ಲಾಡಳಿತ ಹಾಗು ಜಿಲ್ಲಾ ಪಂಚಾಯಿತಿ ವತಿಯಿಂದ ಎಲ್ಲಾ ಸಿದ್ದತೆಗಳನ್ನ ಮಾಡಲಾಗಿದೆ ಎಂದಿದ್ದಾರೆ.


ಇದನ್ನೂ ಓದಿ: Bengaluru: ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬರುವವರಿಗೆಲ್ಲಾ ಕೋವಿಡ್ ಟೆಸ್ಟ್​ ಕಡ್ಡಾಯ: ಸಿಎಂ ಬೊಮ್ಮಾಯಿ


ಅಂತರಗಂಗೆ ಬೆಟ್ಟದ ಮೇಲ್ಭಾಗದಲ್ಲಿ ಯೋಗಾಭ್ಯಾಸ ನಡೆಯುವ ಕಾರಣ, ಉಚಿತವಾಗಿ ಎಲ್ಲರಿಗು ಬಸ್ ವ್ಯವಸ್ಥೆ ಮಾಡಲಾಗಿದೆ, ಆದರೆ ಎತ್ತರದ ಪ್ರದೇಶ ಮತ್ತು ಇಳಿಜಾರು ಪ್ರದೇಶ ಆದ್ದರಿಂದ ಸಾರಿಗೆ ಇಲಾಖೆಯ ಅನುಮತಿಯನ್ನು ವಾಹನಗಳು ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.

Published by:Annappa Achari
First published: