ಬೆಂಗಳೂರು: ಕುಡಿದ ನಶೆಯಲ್ಲಿ ಗೆಳೆಯನನ್ನ (Friend) ಕೊಲೆ ಮಾಡಿದ್ದ ಆರೋಪಿಯನ್ನು ಗೋವಿಂದರಾಜನಗರ (Govindarajanagara, Bengaluru) ಪೊಲೀಸರು 24 ಗಂಟೆಯಲ್ಲಿ ಬಂಧಿಸಿದ್ದಾರೆ. ಮಾರಿಮುತ್ತು ಬಂಧಿತ ಆರೋಪಿ. ನರೇಶ್ ಕೊಲೆಯಾದ ಯುವಕ. ಸದಾ ಒಂಟಿಯಾಗಿರುತ್ತಿದ್ದ ಮಾರಿಮುತ್ತು ಕ್ರಿಮಿನಲ್ ಹಿನ್ನೆಲೆಯುಳ್ಳ (Criminal) ವ್ಯಕ್ತಿಯಾಗಿದ್ದನು. 11 ವರ್ಷದ ಬಾಲಕನಿದ್ದ ವೇಳೆ ಓರ್ವನನ್ನು ಕೊಲೆಗೈದು ಸೆರೆವಾಸ ಅನುಭವಿಸಿ ಜೈಲಿನಿಂದ (Prison) ಹೊರಗೆ ಬಂದಿದ್ದನು. ಜೈಲಿನಿಂದ ಹೊರ ಬಂದಿದ್ದ ಮಾರಿಮುತ್ತು ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಶನಿವಾರ ನಾಗರಬಾವಿ ಮುಖ್ಯರಸ್ತೆಯಲ್ಲಿರುವ ಬಾರ್ಗೆ ನರೇಶ್ ಜೊತೆ ಮಾರಿಮುತ್ತು ಕುಡಿಯಲು ಬಂದಿದ್ದನು. ಈ ವೇಳೆ ಭವಿಷ್ಯ (Predication) ಹೇಳಿದ್ದಕ್ಕೆ ನರೇಶ್ನನ್ನು ಕೊಲೆ ಮಾಡಿದ್ದಾನೆ.
ಬಾರ್ನಲ್ಲಿ ಕುಡಿಯುತ್ತಿದ್ದ ವೇಳೆ ನರೇಶ್ ನಿನ್ನ ಭವಿಷ್ಯ ಹೇಳುತ್ತೇನೆ ಎಂದಿದ್ದಾನೆ. ನಿನಗೆ ದುಶ್ಚಟಗಳಿದ್ದು, ಹುಡುಗಿಯರ ಸಹವಾಸ ಜಾಸ್ತಿಯಾಗಿದೆ. ಕೆಲವೇ ವರ್ಷಗಳಲ್ಲಿ ನೀನು ಸಾಯುತ್ತಿಯಾ ಎಂದು ಹೇಳಿ ವ್ಯಂಗ್ಯವಾಡಿದ್ದಾನೆ.
ಟೈಲ್ಸ್ ಕಲ್ಲಿನಿಂದ ಹೊಡೆದು ಕೊಲೆ
ಇದರಿಂದ ಕೋಪಗೊಂಡ ಮಾರಿಮುತ್ತು ಗೆಳೆಯ ನರೇಶ್ ಜೊತೆ ಜಗಳ ಮಾಡಿಕೊಂಡಿದ್ದಾನೆ. ಜಗಳ ಮಾಡುತ್ತಲೇ ನರೇಶ್ ಮತ್ತು ಮಾರಿಮುತ್ತು ಬಾರ್ನಿಂದ ಹೊರಬಂದಿದ್ದಾರೆ. ಹೊರ ಬಂದಾಗ ರಸ್ತೆಯಲ್ಲಿದ್ದ ಟೈಲ್ಸ್ ಕಲ್ಲಿನಿಂದ ನರೇಶ್ ತಲೆಗೆ ಬಲವಾಗಿ ಹೊಡೆದಿದ್ದಾನೆ.
ಹೊಡೆತದ ತೀವ್ರತೆಗೆ ನರೇಶ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ತೀವ್ರ ರಕ್ತಸ್ರಾವದಿಂದ ನರೇಶ್ ಪ್ರಾಣಪಕ್ಷಿ ಹಾರಿಹೋಗಿದೆ. ಕೊಲೆಯ ಬಳಿಕ ಮಾರಿಮುತ್ತು ಎಸ್ಕೇಪ್ ಆಗಿದ್ದನು.
ಇದನ್ನೂ ಓದಿ: Crime News: ಬೆಂಗಳೂರಿನಲ್ಲಿ ಮನೆಗೆ ಎಂಟ್ರಿ ಕೊಟ್ಟ ಮಕ್ಕಳ ಕಳ್ಳಿ; ತಾಯಿ ಪಕ್ಕ ಮಲಗಿದ್ದ ಮಗುವನ್ನೇ ಕದ್ದೊಯ್ದ ಚಾಲಾಕಿ!
24 ಗಂಟೆಯಲ್ಲಿಯೇ ಆರೋಪಿಯ ಬಂಧನ
ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಗೋವಿಂದರಾಜ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ತನಿಖೆ ಆರಂಭಿಸಿದ 24 ಗಂಟೆಯಲ್ಲಿಯೇ ಆರೋಪಿ ಮಾರಿಮುತ್ತನನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ