ಗೋವಾ ಸಚಿವರ ಹರಾಮಿ ಕ್ಯಾತೆ: ಕೆಂಡಾಮಂಡಲಗೊಂಡ ಕನ್ನಡಿಗರ ರಿಯಾಕ್ಷನ್ಸ್

ಕನ್ನಡಿಗರನ್ನು ‘ಹರಾಮಿ’ಗಳೆಂದು ದೂರಿದ ಪಾಲ್ಯೇಕರ್ ಹೇಳಿಕೆಗೆ ಕರ್ನಾಟಕದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ನ್ಯೂಸ್18 ಕನ್ನಡದ ಜೊತೆ ಮಾತನಾಡಿದ ಕೆಲ ಮುಖಂಡರ ರಿಯಾಕ್ಷನ್ಸ್ ಇಲ್ಲಿವೆ.


Updated:January 14, 2018, 2:55 PM IST
ಗೋವಾ ಸಚಿವರ ಹರಾಮಿ ಕ್ಯಾತೆ: ಕೆಂಡಾಮಂಡಲಗೊಂಡ ಕನ್ನಡಿಗರ ರಿಯಾಕ್ಷನ್ಸ್
ಗೋವಾದ ಜಲಸಂಪನ್ಮೂಲ ಸಚಿವ ವಿನೋದ್ ಪಾಲ್ಯೇಕರ್. (ಅವರ ಟ್ವಿಟ್ಟರ್ ಅಕೌಂಟ್​ನಿಂದ ಪಡೆದ ಫೋಟೋ)

Updated: January 14, 2018, 2:55 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಜ. 14): ಕನ್ನಡಿಗರನ್ನು ಹರಾಮಿಗಳೆಂದು ಜರಿದ ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲ್ಯೇಕರ್ ವಿರುದ್ಧ ರಾಜ್ಯದ ವಿವಿಧ ಮುಖಂಡರು ಕಟುಶಬ್ದಗಳಲ್ಲಿ ಖಂಡನೆ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಗಡಿಭಾಗದೊಳಗೆ ಕದ್ದುಮುಚ್ಚಿ ಬಂದಿರುವ ಗೋವಾ ಮಂತ್ರಿಯೇ ದೊಡ್ಡ ಕಳ್ಳ. ಇವರ ವಿರುದ್ಧವೇ ಪ್​ರಕರಣ ದಾಖಲಿಸಿ ಬಂಧಿಸಬೇಕು ಎಂದು ಹಲವು ಆಗ್ರಹಿಸಿದ್ದಾರೆ.

ನಿನ್ನೆ ಗೋವಾ ಸಚಿವ ವಿನೋದ್ ಪಾಲ್ಯೇಕರ್ ಅವರು ಮಹದಾಯಿ ತಿರುವು ಯೋಜನೆಯ ಸ್ಥಳವಾದ ಕಣಕುಂಬಿಗೆ ಅನಿರೀಕ್ಷಿತ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಆ ನಂತರ ಪಣಜಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುವಾಗ ಕನ್ನಡಿಗರನ್ನು ಹರಾಮಿಗಳೆಂದು ಅವರು ದೂಷಿಸಿರುವುದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಮಹದಾಯಿ ಯೋಜನೆ ವಿಚಾರದಲ್ಲಿ ಕರ್ನಾಟಕವು ನ್ಯಾಯಾಧಿಕರಣದ ಆದೇಶದ ಉಲ್ಲಂಘನೆ ಮಾಡುತ್ತಿರುವುದಕ್ಕೆ ತಾನು ಕಣಕುಂಬಿಯಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದೇನೆ. ಕರ್ನಾಟಕದವರು ಹರಾಮಿಗಳಾಗಿದ್ದು ಏನು ಮಾಡುವುದಕ್ಕೂ ಸಿದ್ಧ ಎಂಬರ್ಥದಲ್ಲಿ ಪಾಲ್ಯೇಕರ್ ಅವರು ವಾಗ್ದಾಳಿ ನಡೆಸಿದ್ದರು. ಅವರ ಈ ‘ಹರಾಮಿ’ ಹೇಳಿಕೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆಯೇ ಅವರು ಯಾವುದೋ ಉದ್ವೇಗದಲ್ಲಿ ತಾನು ಆ ಪದ ಬಳಕೆ ಮಾಡಿದೆ ಎಂದು ಗೋವಾ ಸಚಿವರು ಸ್ಪಷ್ಟನೆ ನೀಡಿದ್ದರು. ನಂತರ, ಆ ಪದವನ್ನು ವರದಿಯಿಂದ ತೆಗೆದುಹಾಕುವಂತೆಯೂ ಮಾಧ್ಯಮಗಳಿಗೆ ಮನವಿ ಮಾಡಿಕೊಂಡರು.

ಆದರೆ, ಕನ್ನಡಿಗರನ್ನು ‘ಹರಾಮಿ’ಗಳೆಂದು ದೂರಿದ ಪಾಲ್ಯೇಕರ್ ಹೇಳಿಕೆಗೆ ಕರ್ನಾಟಕದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ನ್ಯೂಸ್18 ಕನ್ನಡದ ಜೊತೆ ಮಾತನಾಡಿದ ಕೆಲ ಮುಖಂಡರ ರಿಯಾಕ್ಷನ್ಸ್ ಇಲ್ಲಿವೆ.

ಕದ್ದು ಮುಚ್ಚಿ ಬಂದವರಿಗೆ ನಾಚಿಕೆಯಾಗಬೇಕು:
ಗೋವಾ ಅಸ್ತಿತ್ವದಲ್ಲಿರುವುದೇ ಕರ್ನಾಟಕದಿಂದ. ಒಕ್ಕೂಟದ ವ್ಯವಸ್ಥೆಯಲ್ಲಿ ಹೇಗೆ ಇರಬೇಕು, ವರ್ತಿಸಬೇಕು ಎಂದು ಗೊತ್ತಿಲ್ಲದ ಗೋವಾ ಸಚಿವರಿಗೆ ಅರ್ಹತೆ ಇಲ್ಲ. ಕರ್ನಾಟಕದ ಗಡಿಭಾಗಕ್ಕೆ ಕದ್ದುಮುಚ್ಚಿ ಬಂದು ಹೋಗುತ್ತಾರಲ್ಲ ಇವರಿಗೆ ನಾಚಿಕೆಯಾಗಬೇಕು. ಇಲ್ಲಿಗೆ ಬಂದು ಈ ರೀತಿ ಹೇಳಿಕೆ ನೀಡಲು ಯಾರು ಇವರಿಗೆ ಅಧಿಕಾರ ಕೊಟ್ಟಿದ್ದು?
ನಾರಾಯಣಗೌಡ, ಕರವೇ ರಾಜ್ಯಾಧ್ಯಕ್ಷ


ಕನ್ನಡಿಗರ ತಾಳ್ಮೆಗೆಡಿಸಬೇಡಿ:
Loading...

ಕನ್ನಡಿಗರು ಸಹಭಾಳ್ವೆಯವರು, ಸ್ನೇಹತ್ವ ಸ್ವಭಾವದವರು. ಕರ್ನಾಟಕದಿಂದಲೇ ಗೋವಾ ಉಳಿದುಕೊಂಡಿರುವುದು ಎಂಬುದನ್ನು ಮರೆಯಬಾರದು. ಕರ್ನಾಟಕದವರನ್ನು ಎದುರುಹಾಕಿಕೊಂಡು ಗೋವಾ ಇರಲು ಸಾಧ್ಯವಾಗದು.
ಎನ್.ಎಚ್.ಕೋನರೆಡ್ಡಿ, ಜೆಡಿಎಸ್ ಶಾಸಕ


ಆತನೇ ಚೋರ, ನಂ.1 ಕಳ್ಳ:
ಕರ್ನಾಟಕದ ಗಡಿಭಾಗಕ್ಕೆ ಕದ್ದುಮುಚ್ಚಿ ಬಂದ ಆ ಪಾಲ್ಯೇಕರನೇ ಚೋರ. ನಂಬರ್ ಒನ್ ಕಳ್ಳ. ಇಲ್ಲಿಗೆ ಬಂದಾಗ ಆತನನ್ನು ಅರೆಸ್ಟ್ ಮಾಡಬೇಕಿತ್ತು. ಆತ ಕಣಕುಂಬಿಗೆ ಯಾಕೆ ಬರಬೇಕು? ಯಾವ ನ್ಯಾಯಾಧಿಕರಣವೂ ಇವರಿಗೆ ಮಾಹಿತಿ ಕಲೆಹಾಕಲು ಹೇಳಿಲ್ಲ. ಈತನಿಗೆ ಇಲ್ಲಿಗೆ ಬರಲು ಅವಕಾಶ ಕೊಟ್ಟ ಜಿಲ್ಲಾಧಿಕಾರಿಯಾಗಲಿ, ಯಾರೇ ಅಧಿಕಾರಿಯಾಗಲೀ ಅವರನ್ನು ಸಸ್ಪೆಂಡ್ ಮಾಡಬೇಕು.
ವಾಟಾಳ್ ನಾಗರಾಜ್, ಕನ್ನಡ ಹೋರಾಟಗಾರರು


ಬಿಜೆಪಿಯವರಿಗೆ ಸ್ವಾಭಿಮಾನ ಇಲ್ಲ:
ತಮ್ಮ ಪಕ್ಷದ ಸರಕಾರದ ಸಚಿವರೊಬ್ಬರು ಕನ್ನಡಿಗರನ್ನು ಹರಾಮಿಗಳೆಂದು ಹೇಳಿದ್ದಾರೆ. ಬಿಜೆಪಿಯವರೇ ನಿಮಗೆ ಸ್ವಾಭಿಮಾನವಿಲ್ಲವಾ?
ಕರ್ನಾಟಕ ಕಾಂಗ್ರೆಸ್ಸಿನ ಟ್ವೀಟ್
ನಾವೇನು ಜಿದ್ದು ಸಾಧಿಸುವುದಿಲ್ಲ:
ಗೋವಾದ ನೀರಾವರಿ ಸಚಿವರು ಕರ್ನಾಟಕದವರ ವಿರುದ್ಧ ನಿಂದನಾತ್ಮಕ ಪದ ಬಳಸಿರುವುದು ನಿಜಕ್ಕೂ ಖೇದಕರ. ಗೋವಾದ ಜನರ ಬಗ್ಗೆ ನಮಗೇನೂ ಧ್ವೇಷವಿಲ್ಲ. ನಮ್ಮ ಜನರಿಗೆ ಮಹದಾಯಿ ನೀರು ತರಲು ಯತ್ನಿಸುವುದನ್ನು ಮುಂದುವರಿಸುತ್ತೇವೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ
ಬಿಜೆಪಿಯವರೇ ಹರಾಮಿಗಳು:
ಪರ್ರಿಕರ್, ಪಾಲ್ಯೇಕರ್​ರಂಥವರ ಜೊತೆ ಸಂಬಂಧ ಇಟ್ಟುಕೊಂಡ ಕರ್ನಾಟಕದ ಬಿಜೆಪಿ ಜನರೂ ಹರಾಮಿಗಳೇ. ಕರ್ನಾಟಕಕ್ಕೆ ಬಂದು ಹರಾಮಿಗಳೆಂದ ಪಾಲ್ಯೇಕರ್ ವಿರುದ್ಧ ಪ್ರಕರಣ ದಾಖಲಿಸಬೇಕು. ಕನ್ನಡಿಗರು ಸಭ್ಯ ಜನರು ಎಂದು ಹೇಳುತ್ತಾರೆ. ಆದರೆ ಈಗ ಇಂತಹ ಹೇಳಿಕೆ ನೀಡಿದ ಇವರ ವಿರುದ್ಧ ಅಟ್ಯಾಕ್ ಮಾಡಬೇಕಾಗುತ್ತದೆ. ಕರ್ನಾಟಕದಿಂದ ಗೋವಾಕ್ಕೆ ಹೋಗುವ ತರಕಾರಿ, ಕರೆಂಟ್ ಎಲ್ಲವನ್ನೂ ನಿಲ್ಲಿಸಬೇಕಾಗುತ್ತದೆ.
ಬಸವರಾಜ್ ದೇವರು ಸ್ವಾಮೀಜಿ, ರೇವಣ ಸಿದ್ದೇಶ್ವರ ಮಠ
First published:January 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ