ಒಬ್ಬರು ಮದುವೆ ಅಂತಾರೆ, ಮತ್ತೊಬ್ಬರು ವ್ಯವಹಾರ ಅಂತಾರೆ… ಕುತೂಹಲ ಮೂಡಿಸಿವೆ ಮುಂಬೈಗೆ ಹೋದವರು ಕೊಟ್ಟ ಉತ್ತರಗಳು

ಅತೃಪ್ತ ಶಾಸಕರು ಇಷ್ಟು ದಿನ ನಾಪತ್ತೆಯಾಗಿದ್ದಕ್ಕೆ ತಮ್ಮದೇ ಕಾರಣಗಳನ್ನ ನೀಡಿದ್ದಾರೆ. ಕೆಲವರು ಮದುವೆ, ವ್ಯವಹಾರದ ಕಾರಣ ಕೊಟ್ಟರೆ, ಕೆಲವರು ವೈಯಕ್ತಿಕ ಕಾರಣವೆಂದಿದ್ದಾರೆ.

Vijayasarthy SN | news18
Updated:February 13, 2019, 3:15 PM IST
ಒಬ್ಬರು ಮದುವೆ ಅಂತಾರೆ, ಮತ್ತೊಬ್ಬರು ವ್ಯವಹಾರ ಅಂತಾರೆ… ಕುತೂಹಲ ಮೂಡಿಸಿವೆ ಮುಂಬೈಗೆ ಹೋದವರು ಕೊಟ್ಟ ಉತ್ತರಗಳು
ಅಶ್ವತ್ಥ್ ನಾರಾಯಣ್
Vijayasarthy SN | news18
Updated: February 13, 2019, 3:15 PM IST
ಬೆಂಗಳೂರು(ಫೆ. 13): ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಮುಂಬೈನಲ್ಲಿ ಬೀಡುಬಿಟ್ಟಿದ್ದರೆನ್ನಲಾದ ನಾಲ್ವರು ಅತೃಪ್ತ ಶಾಸಕರು ಇವತ್ತು ವಿಧಾನಸೌಧಕ್ಕೆ ಬಂದು ಅಧಿವೇಶನದಲ್ಲಿ ಪಾಲ್ಗೊಂಡರು. ಮುಂಬೈನಲ್ಲಿ ಅತೃಪ್ತರನ್ನು ಇಟ್ಟುಕೊಂಡು ಆಪರೇಷನ್ ಕಮಲದ ರೂವಾರಿಗಳೆನಿಸಿದ್ದ ಬಿಜೆಪಿಯ ಅಶ್ವಥ್ ನಾರಾಯಣ್ ಮತ್ತು ವಿಜಯೇಂದ್ರ ಅವರೂ ಕೂಡ ಇವತ್ತು ಮಾಧ್ಯಮಗಳ ಸಂಪರ್ಕಕ್ಕೆ ಸಿಕ್ಕಿದರು. ಹಾಗೆಯೇ, ಆಡಿಯೋದಲ್ಲಿ ಹೆಸರು ಪ್ರಸ್ತಾಪಿತವಾಗಿದ್ದ ಕೊಳ್ಳೇಗಾಲದ ಬಿಎಸ್​ಪಿ ಶಾಸಕ ಎನ್. ಮಹೇಶ್ ಕೂಡ ಮಾಧ್ಯಮಗಳಿಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

ಮಗಳ ಮದುವೆ ಕಾರ್ಯಕ್ಕೆ ಹೋಗಿದ್ದೆ ಎಂದ ಜಾರಕಿಹೊಳಿ:

ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕವಾಗಿ ತನಗೆ ಅಸಮಾಧಾನ ಇರುವುದು ನಿಜ. ಹಾಗಂದ ಮಾತ್ರಕ್ಕೆ ಪಕ್ಷ ಬಿಟ್ಟುಹೋಗುತ್ತೀನೆಂದು ತಾನು ಎಲ್ಲಿಯೂ ಹೇಳಿಲ್ಲ. ಮುಂಬೈನ ಹೋಟೆಲ್​ನಲ್ಲಿ ಇತರ ಅತೃಪ್ತ ಶಾಸಕರ ಜೊತೆ ಇದ್ದೆ ಎಂಬ ಆರೋಪವೂ ಸುಳ್ಳು. ಮಗಳ ಮದುವೆ ಕಾರ್ಯದ ನಿಮಿತ್ತವಾಗಿ ತಾನು ಮುಂಬೈಗೆ ಹೋಗಿದ್ದೆ ಅಷ್ಟೇ. ಈಗ ಬಜೆಟ್ ಅನುಮೋದನೆ ಕೊಡಲು ಸದನಕ್ಕೆ ಹಾಜರಾಗಿದ್ದೇನೆ ಎಂದು ಗೋಕಾಕ್​ನ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಮಾಧ್ಯಮಗಳಿಗೆ ತಿಳಿಸಿದರು.

ವ್ಯವಹಾರದ ಕಾರಣ ಕೊಟ್ಟ ನಾಗೇಂದ್ರ:

ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ. ನಾಗೇಂದ್ರ ಅವರು, ತಾನು ಯಾವುದೇ ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ. ತಾನು ವ್ಯವಹಾರದ ನಿಮಿತ್ತ ಆಗಾಗ್ಗೆ ಮುಂಬೈಗೆ ಹೋಗಿದ್ದೆ. ಈ ಬಾರಿಯೂ ಅದೇ ಕಾರಣಕ್ಕೆ ಮುಂಬೈನಲ್ಲಿದ್ದೆ. ಬೇರೆ ಕೆಲ ಶಾಸಕರೂ ಕೂಡ ಬೇರೆ ಬೇರೆ ಕಾರಣಗಳಿಗೆ ಮುಂಬೈನಲ್ಲಿದ್ದಿರಬಹುದು. ಅಷ್ಟೇ ಹೊರತು ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಸರಿಯಲ್ಲ ಎಂದು ಮಾಧ್ಯಮಗಳಿಗೆ ತಿಳಿಹೇಳಲು ಯತ್ನಿಸಿದರು.

ಇದು ದೊಡ್ಡ ಷಡ್ಯಂತ್ರ ಎಂದ ವಿಜಯೇಂದ್ರ:
Loading...

ಆಪರೇಷನ್ ಕಮಲದ ಆಡಿಯೋದಲ್ಲಿ ತನ್ನ ಹೆಸರು ಪ್ರಸ್ತಾಪವಾಗಿರುವುದಕ್ಕೆ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ಅವರು ಅಚ್ಚರಿ ವ್ಯಕ್ತಪಡಿಸಿದರು. ತನ್ನ ಹೆಸರು ಇದರಲ್ಲಿ ಯಾಕೆ ಬಂತು ಎಂದು ಗೊತ್ತಿಲ್ಲ. ಈ ಆಡಿಯೋವನ್ನು ದುರುದ್ದೇಶಪೂರ್ವಕವಾಗಿ ಸೃಷ್ಟಿಸಿದಂತಿದೆ. ಇದರ ಹಿಂದೆ ದೊಡ್ಡ ರಾಜಕೀಯ ಷಡ್ಯಂತ್ರ ಕೆಲಸ ಮಾಡಿದೆ. ಯಡಿಯೂರಪ್ಪ ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನವಾಗಿದೆ ಎಂದು ಬಿ.ವೈ. ವಿಜಯೇಂದ್ರ ಅವರು ಆರೋಪಿಸಿದರು.

ಕುಮಾರಸ್ವಾಮಿ ಬಿಡುಗಡೆ ಮಾಡಿದ ಆಡಿಯೋದಲ್ಲಿರುವ ಸಂಭಾಷಣೆ ಪ್ರಕಾರ, ಮುಂಬೈನಲ್ಲಿ ಅತೃಪ್ತ ಶಾಸಕರ ಜೊತೆ ಇದ್ದ ವಿಜಯೇಂದ್ರ ಅವರು ಆಪರೇಷನ್ ಕಮಲದ ಹಣಕಾಸು ವ್ಯವಸ್ಥೆಯನ್ನು ನೋಡಿಕೊಳ್ಳುತ್ತಾರೆನ್ನಲಾಗಿದೆ.

ವೈಯಕ್ತಿಕ ಕಾರಣಕ್ಕೆ ಮುಂಬೈಗೆ ಹೋಗಿದ್ದೆ: ಅಶ್ವಥ್ ನಾರಾಯಣ

ಆಪರೇಷನ್ ಕಮಲದ ಉಸ್ತುವಾರಿಗಲ್ಲೊಬ್ಬರೆನ್ನಲಾಗಿರುವ ಬಿಜೆಪಿ ಶಾಸಕ ಅಶ್ವಥ್ ನಾರಾಯಣ ಅವರು ತಾನು ವೈಯಕ್ತಿಕ ಕಾರಣಕ್ಕಾಗಿಯಷ್ಟೇ ಮುಂಬೈಗೆ ಹೋಗಿದ್ದಾಗಿ ತಿಳಿಸಿದರು. ಯಾವುದೇ ಆಪರೇಷನ್ ಕಮಲ ಮಾಡಿಲ್ಲ. ಕಾಂಗ್ರೆಸ್ ಪಕ್ಷ ತನ್ನ ಒಳಜಗಳ ನಿಲ್ಲಿಸಲಾಗದೆ ಬಿಜೆಪಿಯ ಮೇಲೆ ವೃಥಾರೋಪ ಮಾಡುತ್ತಿದೆ ಎಂದು ಮಲ್ಲೇಶ್ವರಂ ಶಾಸಕ ತಿಳಿಸಿದರು.

ತಾನು ಬಿಜೆಪಿ ಸೇರಲ್ಲ: ಎನ್. ಮಹೇಶ್ ಸ್ಪಷ್ಟನೆ

ಆಪರೇಷನ್ ಕಮಲದ ಆಡಿಯೋದಲ್ಲಿ ಕೊಳ್ಳೇಗಾಲದ ಬಿಎಸ್​ಪಿ ಶಾಸಕ ಎನ್. ಮಹೇಶ್ ಅವರ ಹೆಸರೂ ಕೇಳಿಬಂದಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವರು, ತಮ್ಮ ಹೆಸರು ಯಾಕೆ ಬಂತೋ ಗೊತ್ತಿಲ್ಲ. ತಾನು ಬಿಜೆಪಿಗೆ ಹೋಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು. ತನ್ನನ್ನು ಈ ಹಿಂದೆ ಕೆಲ ಬಿಜೆಪಿ ನಾಯಕರು ಸಂಪರ್ಕಿಸಿ ಪಕ್ಷಕ್ಕೆ ಬರಲು ಆಹ್ವಾನಿಸಿದ್ದು ನಿಜ. ಆದರೆ, ಇದನ್ನು ತಾನು ನಿರ್ಧರಿಸಲು ಸಾಧ್ಯವಿಲ್ಲ. ಬೆಹೆನ್​ಜೀ(ಮಾಯಾವತಿ) ಅವರನ್ನು ಕೇಳಿ ಎಂದು ತಾನು ಹೇಳಿ ಕಳುಹಿಸಿದ್ದೆ. ತಾನು ಮನೆಯಲ್ಲಿ ಸುಮ್ಮನೆ ಕೂತಿರುತ್ತೇನೇ ಹೊರತು ಬಿಜೆಪಿ ಪಕ್ಷವನ್ನಂತೂ ಸೇರುವುದಿಲ್ಲ ಎಂದು ಎನ್. ಮಹೇಶ್ ಸ್ಪಷ್ಟಪಡಿಸಿದರು.
First published:February 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626