ಎಚ್​ಡಿಕೆ ಕಾರ್ಯವೈಖರಿಗೆ ಬೇಸತ್ತು ಅತೃಪ್ತರಿಂದ ರಾಜೀನಾಮೆ; ಸಿದ್ದರಾಮಯ್ಯ ಪರ ಆರ್​ಬಿ ತಿಮ್ಮಾಪುರ ಬ್ಯಾಟಿಂಗ್​​

ಪಕ್ಷ, ರಾಜ್ಯದ ವಿಷಯ ಬಂದಾಗ ಸಿದ್ದರಾಮಯ್ಯ ಪರಿವಾಗಿಯೇ ಇರುತ್ತಾರೆ. ಸಿದ್ದರಾಮಯ್ಯ ಎಂದಿಗೂ ಯಾರಿಗೂ ಮೋಸ ಮಾಡಿದವರಲ್ಲ. ಮೋಸ ಮಾಡಿ ಹೋದವರು ಯಾರು ಎಂಬುದು ರಾಜ್ಯದ ಜನರಿಗೆ ಗೊತ್ತಿದೆ ಎಂದು ಎಚ್​ಡಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು

Seema.R | news18-kannada
Updated:August 26, 2019, 2:31 PM IST
ಎಚ್​ಡಿಕೆ ಕಾರ್ಯವೈಖರಿಗೆ ಬೇಸತ್ತು ಅತೃಪ್ತರಿಂದ ರಾಜೀನಾಮೆ; ಸಿದ್ದರಾಮಯ್ಯ ಪರ ಆರ್​ಬಿ ತಿಮ್ಮಾಪುರ ಬ್ಯಾಟಿಂಗ್​​
ಆರ್​ಬಿ ತಿಮ್ಮಾಪುರ
 • Share this:
ಬಾಗಲಕೋಟೆ (ಆ.26): 14 ತಿಂಗಳ ಸರ್ಕಾರ ನಡೆಸಿದ ಸಮ್ಮಿಶ್ರ ಸರ್ಕಾರ ಪತನಕ್ಕೆ ಯಾರು ಕಾರಣ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ಸಮ್ಮಿಶ್ರ ಸರ್ಕಾರದಲ್ಲಿ ಎಚ್​ಡಿಕೆ ವರ್ತನೆಗೆ ಬೇಸತ್ತು ಶಾಸಕರು ರಾಜೀನಾಮೆ ನೀಡಿದರು. ಈಗ ಸಿದ್ದರಾಮಯ್ಯನತ್ತ ಬೊಟ್ಟು ಮಾಡುತ್ತಿದ್ದಾರೆ. ದೇವೇಗೌಡರು ಹೇಗೆ ಅವರ ಮಕ್ಕಳು ಹೇಗೆ ಎಂಬುದು ರಾಜ್ಯದ ಜನರು ನೋಡುತ್ತಿದ್ದಾರೆ. ಈಗ ಸಿದ್ದರಾಮಯ್ಯ ಮೇಲೆ ಆರೋಪ ಹಾಕುವುದು ಸರಿಯಲ್ಲ ಎಂದು ಮಾಜಿ ಸಚಿವ ಆರ್​ಬಿ ತಿಮ್ಮಾಪುರ ಜೆಡಿಎಸ್​ ನಾಯಕರ ವಿರುದ್ಧ ಹರಿಹಾಯ್ದರು.

ಮುಧೋಳದಲ್ಲಿ ಮಾಧ್ಯಮದ ಎದುರು ಮಾತನಾಡಿದ ಅವರು,  ಜೆಡಿಎಸ್​ ನಾಯಕರು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಯಾವುದೇ ಮೈತ್ರಿ ಧರ್ಮ ಪಾಲಿಸಲಿಲ್ಲ. ಎಐಸಿಸಿಗೂ ಅವರು ಗೌರವ ಕೊಡಲಿಲ್ಲ, ಎಐಸಿಸಿ ಪಟ್ಟಿಯಲ್ಲಿ ನನಗೆ ಸಕ್ಕರೆ ಹಾಗೂ ಒಳನಾಡು , ಬಂಧರು ಸಾರಿಗೆ ಖಾತೆ ನೀಡಲಾಗಿತ್ತು. ಆದರೆ ಕುಮಾರಸ್ವಾಮಿಯವರೆ, ರೇವಣ್ಣನ ಮೇಲಿನ ಪ್ರೀತಿಯಿಂದ ಒಳನಾಡು , ಬಂದರು ಸಾರಿಗೆ ಖಾತೆ  ಕೊಡುವಂತೆ ಮನವಿ ಮಾಡಿದರು. ಅದರಂತೆ ಸಕ್ಕರೆ ಖಾತೆ ಮಾತ್ರ ನಾನು ಇಟ್ಟುಕೊಂಡೆ ಎಂದರು.

ಪಕ್ಷ, ರಾಜ್ಯದ ವಿಷಯ ಬಂದಾಗ ಸಿದ್ದರಾಮಯ್ಯ ಪರಿವಾಗಿಯೇ ಇರುತ್ತಾರೆ. ಸಿದ್ದರಾಮಯ್ಯ ಎಂದಿಗೂ ಯಾರಿಗೂ ಮೋಸ ಮಾಡಿದವರಲ್ಲ. ಮೋಸ ಮಾಡಿ ಹೋದವರು ಯಾರು ಎಂಬುದು ರಾಜ್ಯದ ಜನರಿಗೆ ಗೊತ್ತಿದೆ ಎಂದು ಎಚ್​ಡಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು

ಬಿಜೆಪಿ ಸರ್ಕಾರ ಸುರಕ್ಷಿತವಲ್ಲ: 

ಬಿಎಸ್​ ಯಡಿಯೂರಪ್ಪ ಸರ್ಕಾರ ಅನೈತಿಕತೆಯಿಂದ ರಚನೆಯಾಗಿದೆ.. ರಾಜ್ಯದ ಜನಾಭಿಪ್ರಾಯ, ಬಹುಮತದಿಂದ ಅಧಿಕಾರಕ್ಕೆ ಬಂದ ಸರ್ಕಾರವಲ್ಲ. ಹಣದ ಹೊಳೆ ಸುರಿಸಿ ಅಧಿಕಾರಕ್ಕೆ  ಬಂದಿದ್ದಾರೆ. ಈಗಲೇ ಬಿಎಸ್ವೈ ಸರ್ಕಾರ ವೆಂಟಿಲೇಟರ್ ಗೆ ಹೋಗಿದೆ. ಯಾವಾಗಲಾದರೂ ಹೋಗಬಹುದು. ಆರು ತಿಂಗಳ ಅವಿಶ್ವಾಸ ಮಂಡಿಸಲು ಬರಲ್ಲ. ಆರು ತಿಂಗಳವರೆಗೆ ವಿಎಸ್​ವೈ ಸರ್ಕಾರ ಸೇಫ್​ ಅಲ್ಲ ಎಂದರು.

ಇದನ್ನು ಓದಿ: ನಮ್ಮ ಪರಿಸ್ಥಿತಿ ಹೇಳತೀರದಾಗಿದೆ; ಕೇಂದ್ರ ಅಧ್ಯಯನ ತಂಡದ ಎದುರು ಪ್ರವಾಹ ಸಂತ್ರಸ್ತ ವೃದ್ಧೆ ಕಣ್ಣೀರು

ಸಿದ್ದರಾಮಯ್ಯ ಅಧಿಕಾರಕ್ಕೆ ಹಂಬಲಿಸಿದವರಲ್ಲಸಿದ್ದರಾಮಯ್ಯ ಅವರಿಗೆ ವಿರೋಧ ಪಕ್ಷದ ನಾಯಕರ ಸ್ಥಾನ ನೀಡದ ಹಿನ್ನೆಲೆ ಅಸಮಾಧಾನಗೊಂಡಿದ್ದಾರೆ ಎಂಬ ವಿಚಾರ ಕುರಿತು ಮಾತನಾಡಿದ ಅವರು, ಸಿದ್ದರಾಮಯ್ಯ ಯಾವತ್ತೂ ಅಧಿಕಾರಕ್ಕಾಗಿ ಅಡ್ಡಾಡಿದವರಲ್ಲ. ಅಧಿಕಾರಕ್ಕಾಗಿ ದುಂಬಾಲು ಬೀಳುವವರಲ್ಲ,ಭಿನ್ನರಾಗ ಎಳೆವವರಲ್ಲ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಆಸ್ತಿ ಎಂದರು.

First published:August 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
 • India
 • World

India

 • Active Cases

  6,039

   
 • Total Confirmed

  6,761

   
 • Cured/Discharged

  515

   
 • Total DEATHS

  206

   
Data Source: Ministry of Health and Family Welfare, India
Hospitals & Testing centres

World

 • Active Cases

  1,205,178

   
 • Total Confirmed

  1,680,527

  +76,875
 • Cured/Discharged

  373,587

   
 • Total DEATHS

  101,762

  +6,070
Data Source: Johns Hopkins University, U.S. (www.jhu.edu)
Hospitals & Testing centres